surprise labour during night out: ಒಡಲಲ್ಲಿ ಪುಟ್ಟ ಜೀವ ರೂಪ ತಳೆಯುವುದು ಪ್ರತಿಯೊಂದು ಹೆಣ್ಣಿಗೂ ಮಹತ್ವದ ಸಮಯ. ಗರ್ಭಿಣಿ ಎಂದು ಗೊತ್ತಾದ ಘಳಿಗೆಯಿಂದ ನವ ಮಾಸಗಳು ಕಳೆದು ಪ್ರಸವದ ನೋವನ್ನು ನುಂಗಿ ಮಗು ಮಡಿಲಿಗೆ ಬರುವವರೆಗೆ ತಾಯಿ ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಳು ಒಂದೆರೆಡಲ್ಲ. ಇಂದಿನ ಕಾಲದಲ್ಲಿ ಗರ್ಭಿಣಿ ಆಗುವ ಮೊದಲಿನಿಂದಲೂ ವೈದ್ಯರ ಸಂಪರ್ಕದಲ್ಲಿರುತ್ತಾರೆ. 9 ತಿಂಗಳುಗಳಲ್ಲಿ ಸಮಯಕ್ಕೆ ತಕ್ಕಂತೆ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳುತ್ತಾರೆ. ಪುಟ್ಟದಾಗಿ ಕಾಣಿಸಿಕೊಳ್ಳುವ ಹೊಟ್ಟೆ ನಂತರ ಮಗುವಿನ ಚಲನೆ ಕಾಣಿಸಿಕೊಳ್ಳುವ ಮಟ್ಟಕ್ಕೆ ಬೆಳೆಯುತ್ತೆ. ಕಂದನ ಚಲನವಲನ ತಾಯಿಯ ಅರಿವಿಗೆ ಬರುತ್ತೆ. ಆದರೆ ಇದೆಲ್ಲದಕ್ಕೂ ಅಪವಾದ ಎಂಬಂತ ಘಟನೆಯೊಂದು ನಡೆದಿದೆ.
23 ವರ್ಷದ ಯುವತಿ ಏಕಾಏಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಗೆ ತಾನು ಗರ್ಭಿಣಿ ಎಂಬ ವಿಷಯವೇ ಗೊತ್ತಿರಲಿಲ್ಲವಂತೆ. 9 ತಿಂಗಳುಗಳ ಕಾಲ ಯುವತಿಯ ಅರಿವಿಗೆ ಬರದೆಯೇ ಮಗು ಬೆಳೆದಿದೆ. ಹೊಟ್ಟೆಯ ಆಕಾರದಿಂದಲೂ ಯುವತಿಗೆ ತಾನು ಗರ್ಭಿಣಿ ಎಂದು ಗೊತ್ತಾಗಿಲ್ಲ ಎಂದರೆ ನೀವು ನಂಬಲೇಬೇಕು.
ಯುಕೆ ಮೂಲದ ಯುವತಿ ತನ್ನ ಸ್ನೇಹಿತರೊಂದಿಗೆ ಕಾಕ್ಟೇಲ್ ಪಾರ್ಟಿ ಮಾಡಲು ರಾತ್ರಿ ಹೊತ್ತು ಹೊರಗೆ ಹೋಗಿದ್ದಾಗ ಅಚ್ಚರಿಯ ಹೆರಿಗೆ ಆಗಿದೆ. ಯುವತಿ ಲಾವಿನಿಯಾ ಸ್ಟಾಂಟನ್ ತನ್ನ ಸ್ನೇಹಿತರೊಂದಿಗೆ ರಾತ್ರಿ 10 ಗಂಟೆಗೆ ಹೊರಬಂದಾಗ ಲಘು ಸೆಳೆತವನ್ನು ಅನುಭವಿಸುತ್ತಿದ್ದಳು. ಸಣ್ಣದಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ನೋವು ತಾಳಲಾರದೆ ಸ್ನೇಹಿತರನ್ನು ತೊರೆದು ತನ್ನ ತಾಯಿಯ ಬಳಿಗೆ ಹೋಗಿದ್ದಾಳೆ. ನೋವು ಸಮಯದೊಂದಿಗೆ ಹೆಚ್ಚಾಗಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಆಸ್ಪತ್ರೆಗೆ ತೆರಳಿದಾಗ, ವೈದ್ಯರು ಇನ್ನೇನು ಹೆರಿಗೆಯಾಗಲಿದೆ ಎಂದು ಹೇಳುತ್ತಿದಂತೆ ಯುವತಿಗೆ ಶಾಕ್ ಆಗಿದೆ.
ಸಿ ಸೆಕ್ಷನ್ ಮೂಲಕ ಹೆರಿಗೆ ಮಾಡಲಾಗಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಅಚ್ಚರಿಯ ವಿಷಯವೆಂದರೆ ತಾಯಿಗೆ ತನ್ನ ಎಂಟೂವರೆ ತಿಂಗಳ ಗರ್ಭಧಾರಣೆಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಗರ್ಭಾವಸ್ಥೆಯಲ್ಲಿಯೂ ಪಿರಿಯಡ್ಸ್ ಹೊಂದಿದ್ದಳು ಎಂದು ತಿಳಿದು ಬಂದಿದೆ. ಮಗು ಹುಟ್ಟುವ ಕೆಲವು ವಾರಗಳ ಮೊದಲು ಎರಡು ಬಾರಿ ಗರ್ಭಧಾರಣೆಯ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಬಂದಿತ್ತು. ಆದರೆ ಇತ್ತೀಚೆಗೆ ದೇಹದ ತೂಕ ಸ್ವಲ್ಪ ಹೆಚ್ಚಾಗಿತ್ತು, ಲಾಕ್ಡೌನ್ನಲ್ಲಿ ತಿಂದಿದ್ದರಿಂದ ದಪ್ಪಗಾಗಿದ್ದೀನಿ ಎಂದು ಯುವತಿ ಭಾವಿಸಿದ್ದಳು.
ನಾನು ಇನ್ನೂ ಶಾಕ್ನಲ್ಲಿಯೇ ಇದ್ದೇನೆ. ನನಗೆ ನಿಜವಾಗಿಯೂ ನಾನು ಗರ್ಭಿಣಿ ಎಂದು ತಿಳಿದಿರಲಿಲ್ಲ. ಬೇರೆ ಯಾರಿಗೂ ತಿಳಿದಿರಲಿಲ್ಲ. ನಾನು ಗರ್ಭಾವಸ್ಥೆಯ ಯಾವುದೇ ಲಕ್ಷಣಗಳನ್ನು ಅನುಭವಿಸಿಲ್ಲ. ಮಾರ್ನಿಂಗ್ ಸಿಕ್ನೆಸ್ ಇರಲಿಲ್ಲ, ಮಗು ಹೊಟ್ಟೆಯಲ್ಲಿ ಒದೆಯಲೂ ಇಲ್ಲ ಎಂದಿದ್ದಾರೆ ಲಾವಿನಿಯಾ.
ಇದನ್ನೂ ಓದಿ: ಮದುವೆಗೆ ತಪ್ಪದೇ ಬರ್ತೀವಿ ಅಂತೇಳಿ, ಬಾರದೆ ಕೈ ಕೊಟ್ಟ ಅತಿಥಿಗಳಿಗೆ ಊಟದ ಬಿಲ್ ಕಳಿಸಿದ ದಂಪತಿ..!
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ