Love Story: 77ರ ಅಜ್ಜನ ಪ್ರೀತಿಗೆ ಬಿದ್ದ 20ರ ಹುಡುಗಿ! ಪ್ಯಾರ್​ಗೆ​ ಆಗ್ಬುಟೈತೆ!

Love: ಪ್ರೀತಿಯಲ್ಲಿ ವಯಸ್ಸು ಮುಖ್ಯವಲ್ಲ ಎಂಬ ಮಾತಿದೆ. ಆದರೆ ​ಮಾಯನ್ಮಾರ್ ಮೂಲದ 20ರ ಹರೆಯದ ಈ ವಿದ್ಯಾರ್ಥಿ ಜೋ ಇಂಗ್ಲೆಂಡ್​ ಮೂಲದ 77 ವರ್ಷದ ಅಜ್ಜನ ಪ್ರೀತಿಗೆ ಬಿದ್ದಿದ್ದಾಳೆ. ಮಾತ್ರವಲ್ಲ ತನ್ನ ಪ್ರೀತಿಯನ್ನು ಈಗ ಸಮರ್ಥಿಸಲು ಸಿದ್ಧವಾಗಿದ್ದಾಳೆ.

ಜೋ - ಡೇವಿಡ್

ಜೋ - ಡೇವಿಡ್

 • Share this:
  ಕನ್ನಡದ ‘‘ಗೋವಿಂದಾಯ ನಮಃ’’ ಸಿನಿಮಾದಲ್ಲಿ ಬರುವ ‘‘ಪ್ಯಾರ್​ಗೆ ಆಗ್ಬುಟೈತೆ’’ ಹಾಡು ಕೇಳಿದ್ದೀರಾ?. ನಟಿ ಪಾರುಲ್​ ಯಾದವ್ (parul yadav)​ ನಟ ಕೋಮಲ್​ಗೆ (Komal) ಮನಸೋತು ಈ ಹಾಡಿಗೆ ಇಬ್ಬರು ನೃತ್ಯ ಮಾಡುತ್ತಾರೆ. ಅದರಂತೆ ಇಲ್ಲೊಂದು 20ರ ಹುಡುಗಿಗೆ ಪ್ರೀತಿ (Love) ಚಿಗುರೊಡೆದಿದೆ. ಆದರೆ ಆಕೆಗೆ ಪ್ರೀತಿ ಹುಟ್ಟಿಕೊಂಡಿದ್ದು ಮಾತ್ರ 77ರ ಬಿಳಿ ಕೂದಲಿನ ಅಜ್ಜನ (Old man) ಮೇಲೆ ಎಂಬುದು ವಿಶೇಷ.

  ಪ್ರೀತಿಯಲ್ಲಿ ವಯಸ್ಸು ಮುಖ್ಯವಲ್ಲ ಎಂಬ ಮಾತಿದೆ. ಆದರೆ ​ಮಾಯನ್ಮಾರ್ ಮೂಲದ 20ರ ಹರೆಯದ ಈ ವಿದ್ಯಾರ್ಥಿ ಜೋ ಇಂಗ್ಲೆಂಡ್​ ಮೂಲದ 77 ವರ್ಷದ ಅಜ್ಜನ ಪ್ರೀತಿಗೆ ಬಿದ್ದಿದ್ದಾಳೆ. ಮಾತ್ರವಲ್ಲ ತನ್ನ ಪ್ರೀತಿಯನ್ನು ಈಗ ಸಮರ್ಥಿಸಲು ಸಿದ್ಧವಾಗಿದ್ದಾಳೆ. ಅಂದಹಾಗೆಯೇ ಇಬ್ಬರಿಬ್ಬರ ಭೇಟಿ ಹೇಗೆ? ಮದುವೆ ಯಾವಾಗ? ಎಂಬ ಕುತೂಹಲಕಾರಿ ವಿಷಯ ಬಗ್ಗೆ ತಿಳಿದುಕೊಳ್ಳಲೇ ಬೇಕು.

  ಕಾಲೇಜು ಜೀವನದಲ್ಲಿ ಪ್ರೀತಿ ಯಾಗೋದು ಸಹಜ, ಕೆಲವು ಪ್ರೀತಿ ಕಾಲೇಜು ಪ್ರಾರಂಭವಾದಾಗ ಶುರುವಾಗಿ ಕಾಲೇಜು ಮುಗಿಯುವ ಮೇಲೆ ಅಲ್ಲಿಗೆ ಸಾಯುತ್ತದೆ. ಆದರೆ ಈ ವಿದ್ಯಾರ್ಥಿ ತನ್ನಗಿಂತ 57 ವರ್ಷ ಹಿರಿಯನ ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ. ಇಬ್ಬರು ಮದುವೆಯಾಗಲು ಸಿದ್ಧರಾಗಿದ್ದಾರೆ. ವಿಶೇಷವೆಂದರೆ ಇದುವರೆಗೂ ಇವರಿಬ್ಬರೂ ಒಮ್ಮೆಯೂ ಮುಖಾಮುಖಿಯಾಗಿ ಭೇಟಿಯಾಗಿಲ್ಲ.  ಒಬ್ಬರನ್ನೊಬ್ಬರು ಆನ್‌ಲೈನ್‌ನಲ್ಲಿ ಮಾತ್ರ ನೋಡಿದ್ದಾರೆ.

  'ಡೈಲಿ ಸ್ಟಾರ್' ವರದಿಯ ಪ್ರಕಾರ, ಮಯನ್ಮಾರ್​ನ ಜೋ ಇಂಗ್ಲೆಂಡ್‌ನ ಬಾತ್ ನಗರದಲ್ಲಿ ವಾಸಿಸುವ 77 ವರ್ಷದ ಡೇವಿಡ್‌ಗೆ ಮನಸೋತಿದ್ದು, ಇಬ್ಬರು ದಂಪತಿಯಾಗಲು ಬಯಸಿದ್ದಾರೆ. ಅದಕ್ಕಾಗಿ ಸಾಧ್ಯವಾದಷ್ಟು ಬೇಗ ಮದುವೆಯಾಗಲು ಮುಂದಾಗಿದ್ದಾರೆ. ಜೋ ಸದ್ಯ ಅಧ್ಯಯನ ಮಾಡುತ್ತಿದ್ದು, ಡೇವಿಡ್ ಸಂಗೀತ ನಿರ್ಮಾಪಕರಾಗಿದ್ದಾರೆ.

  ಇದನ್ನು ಓದಿ: ಈಕೆಗೆ ನಾಯಿಗಳ ಭಾಷೆ ಅರ್ಥವಾಗುತ್ತಂತೆ, ಅದರ ಬಗ್ಗೆ ಪುಸ್ತಕ ಬರೆದಿದ್ದಾಳೆ… ನೀವೂ ಕಲಿಯಬಹುದು ಶ್ವಾನ ಭಾಷೆ!

  ಜೋ ಇಂಗ್ಲೆಂಡ್​ಗೆ ತೆರಲಿ ಡೇವಿಡ್​ ಜೊತೆಯಾಗಲು ಕಾಯುತ್ತಿದ್ದಾಳೆ. ಅದಕ್ಕಾಗಿ ಪಾಸ್‌ಪೋರ್ಟ್ ಮತ್ತು ವೀಸಾಕ್ಕಾಗಿ ಅರ್ಜಿ ಹಾಕಿದ್ದಾಳೆ. ಓದಿ ಜೊತೆಗೆ ಎಲ್ಲಾ ಕೆಲಸ ಮುಗಿದ ತಕ್ಷಣ ಅವಳು ಡೇವಿಡ್‌ನನ್ನು ಭೇಟಿಯಾಗಲಿದ್ದಾಳೆ. ನಂತರ ಇವರಿಬ್ಬರ ಮದುವೆ.

  ಡೇಟಿಂಗ್​ ಸೈಟ್​ನಲ್ಲಿ ಭೇಟಿ

  ಜೋ ಮತ್ತು ಡೇವಿಡ್ ಸುಮಾರು 18 ತಿಂಗಳ ಹಿಂದೆ ಡೇಟಿಂಗ್ ಸೈಟ್‌ನಲ್ಲಿ ಭೇಟಿಯಾದರು. ಅಂದಿನಿಂದ ಇಬ್ಬರೂ ನಿರಂತರವಾಗಿ ಪರಸ್ಪರ ಮಾತನಾಡುತ್ತಿದ್ದಾರೆ. ಆದರೆ, ಇಬ್ಬರೂ ಒಮ್ಮೆಯೂ ಮುಖಾಮುಖಿಯಾಗಲಿಲ್ಲ. ಆದರೆ ಜೋ ಡೇಟಿಂಗ್​ ಸೈಟ್​​ನಲ್ಲಿ ಆರ್ಥಿಕವಾಗಿ ಸಹಾಯ ಮಾಡುವವನ್ನು ಹುಡುಕಾಡುತ್ತಿದ್ದಾಳು. ಆದರೆ ಡೇವಿಡ್​ ಫ್ಲರ್ಟ್ ಮಾಡಲು ಹುಡುಕುತ್ತಿದ್ದರು. ಈ ವೇಳೆ ಅನಿರೀಕ್ಷಿತವಾಗಿ ಇಬ್ಬರು ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡಿದ್ದಾರೆ.

  ವಾಸಸ್ಥಳವನ್ನು ತಪ್ಪಾಗಿ ಬರೆದಿದ್ದ ಜೋ

  ಡೇವಿಡ್ ಈ ಬಗ್ಗೆ ಮಾತನಾಡಿದ್ದು, ' ಇಬ್ಬರು ವ್ಯಕ್ತಿಗಳು ಭಾವನೆಗಳನ್ನು ಮತ್ತು ಪ್ರೀತಿಯನ್ನು ಹೊಂದಿರುವಾಗ ಏಕೆ ವಿಶ್ಲೇಷಿಸಬೇಕು? ಈ ಪ್ರಶ್ನೆಯನ್ನು ನಾನು ನನ್ನ ಹೃದಯದ ಬಳಿ ಕೇಳುತ್ತಿರುತ್ತೇನೆ. ನಾನು ಯಾವಾಗಲೂ ಹೃದಯದಲ್ಲಿ ಚಿಕ್ಕವನಾಗಿದ್ದೇನೆ ಮತ್ತು ನಾನು ಅನೇಕ ಯುವ ಪಾಲುದಾರರನ್ನು ಹೊಂದಿದ್ದೇನೆ. ಜೋ ತನ್ನ ಡೇಟಿಂಗ್ ಪ್ರೊಫೈಲ್‌ನಲ್ಲಿ ಬ್ರಿಟನ್‌ನಿಂದ ಜನರನ್ನು ಆಕರ್ಷಿಸುವ ಸಲುವಾಗಿ ಮಯನನ್ಮಾರ್​ ಬದಲಿಗೆ ಯುಕೆ ಎಂದು ಬರೆದುಕೊಂಡಿದ್ದಳು ಎಂದಿದ್ದಾರೆ.

  ಜೋ ಜನರು ಆಕ್ರರ್ಶಿಸುವ ಸಲುವಾಗಿ ಮತ್ತು ಪ್ರೊಫೈಲ್ ಅನ್ನು ನೋಡಬೇಕೆಂದು  ತನ್ನ ವಾಸ್ಥಳವನ್ನು ತಪ್ಪಾಗಿ ನಮೂದಿಸಿದ್ದಳು. ಕೊನೆಗೊಂದು ದಿನ ಜೋ ತನ್ನ ಪ್ರಿಯಕರ ಡೇವಿಡ್​ಗೆ ಸತ್ಯವನ್ನು ಹೇಳಿದಳು.

  ಈ ಬಗ್ಗೆ ಮಾತನಾಡಿದ್ದ ಜೋ, ನನ್ನ ಹೃದಯ ಶುದ್ಧವಾಗಿದೆ. ನಾನು ನನ್ನ ಹೆತ್ತವರೊಂದಿಗೆ ವಾಸಿಸುತ್ತಿಲ್ಲ. ಆದ್ದರಿಂದ ನನ್ನ ಅಧ್ಯಯನದಲ್ಲಿ ಯಾರಾದರೂ ನನಗೆ ಆರ್ಥಿಕವಾಗಿ ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ. ಈ ಉದ್ದೇಶಕ್ಕಾಗಿ ನಾನು ಪ್ರೊಫೈಲ್ ಅನ್ನು ರಚಿಸಿದ್ದೇನೆ. ಆದರೆ, ನಾನು ಡೇವಿಡ್‌ನಲ್ಲಿ ನಿಜವಾದ ಪ್ರೀತಿಯನ್ನು ಕಂಡುಕೊಂಡಿದ್ದೇನೆ ಎಂದು ಹೇಳಿದ್ದಾಳೆ.

  ಇದನ್ನು ಓದಿ: Spider Bite: ಜೇಡ ಕಚ್ಚಿತ್ತೆಂದು ನಿರ್ಲಕ್ಷ್ಯ ಬೇಡ! ಈತ ಕಾಲನ್ನೇ ಕಳೆದುಕೊಂಡಿದ್ದಾನೆ!

  ಡೇವಿಡ್ ಮತ್ತು ಜೋ ವಯಸ್ಸಿನ ಅಂತರವಿದ್ದರು ಇಬ್ಬರ ನಡುವೆ ಬಲವಾದ ಸಂಪರ್ಕವಿದೆ. ಹಾಗಾಗಿ ಅವರು ತಮ್ಮ ಉಳಿದ ಜೀವನವನ್ನು ಒಟ್ಟಿಗೆ ಕಳೆಯಲು ಸಾಧ್ಯವಾಗುತ್ತದೆ. ವೀಸಾ ಸಿಕ್ಕ ಕೂಡಲೇ ಇಂಗ್ಲೆಂಡಿಗೆ ಬರುತ್ತೇನೆ, ಮದುವೆಯಾಗುತ್ತೇವೆ ಎಂದು ಡೇವಿಡ್​ನೊಂದಿಗೆ ಜೋ ಹೇಳಿದ್ದಾಳೆ. ಜಗತ್ತು ನಮ್ಮ ಬಗ್ಗೆ ಏನು ಯೋಚಿಸುತ್ತದೆ ಎಂದು ನಾವು ಹೆದರುವುದಿಲ್ಲ. ನಾವು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ ಮತ್ತು ಈ ಪ್ರೀತಿಯನ್ನು ಮದುವೆಯ ಸಂಬಂಧವಾಗಿ ಪರಿವರ್ತಿಸಲು ಬಯಸುತ್ತೇವೆ ಎಂದು ಹೇಳಿದ್ದಾಳೆ.
  Published by:Harshith AS
  First published: