ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡೀಯಾದಲ್ಲಿ (Social Media) ವೀಡೀಯೊ (Video) ಒಂದು ತುಂಬಾನೇ ವೈರಲ್ (Viral) ಆಗುತ್ತಿದೆ. ಇದನ್ನು ಕಂಡು ಅನೇಕ ಚಿಪ್ಸ್ (chips) ಪ್ರಿಯರು ದುಖಿ:ತರಾಗಿದ್ದಾರೆ. 20 ಟನ್ ಚಿಪ್ಸ್ ಮತ್ತು ಇತರೆ ತಿಂಡಿಗಳನ್ನು ಹೊತ್ತಿದ್ದ ಟ್ರಕ್ ಗೆ ಬೆಂಕಿ (Fire) ಹತ್ತಿಕೊಂಡ ಘಟನೆ ಅಮೆರಿಕದ (America) ಫ್ಲೋರಿಡಾದಲ್ಲಿ ಜುಲೈ 7ರಂದು ಸರಿಸುಮಾರು ಮಧ್ಯಾಹ್ನ 2 ಗಂಟೆ ಹೊತ್ತಿಗೆ ನಡೆದಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸುತ್ತಿರುವುದನ್ನು ತೋರಿಸುವ ಮತ್ತು ಟ್ರೇಲರ್ ನಿಂದ ಕೆಳಗೆ ಬೀಳುತ್ತಿರುವ ಚಿಪ್ಸ್ ಪ್ಯಾಕೆಟ್ ಗಳ (Chips Packet) ವೀಡಿಯೋ ಕ್ಲಿಪ್ ಆನ್ಲೈನ್ ನಲ್ಲಿ ಕಾಣಿಸಿಕೊಂಡಿದೆ. ಘಟನೆ ನಡೆದ ಸ್ಥಳದಲ್ಲಿ ಬೆಂಕಿಯಿಂದಾಗಿ ಯಾವುದೇ ಹೆಚ್ಚಿನ ಅಪಾಯಗಳು ಸಂಭವಿಸಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ವೀಡಿಯೋಗೆ ಜನರು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅಮೇರಿಕಾದ ಫ್ಲೋರಿಡಾದಲ್ಲಿ ಸಂಭವಿಸಿದ ಘಟನೆ
ಫ್ಲೋರಿಡಾದ ಒಕಲಾದಲ್ಲಿ ಚಿಪ್ಸ್ ಮತ್ತು ಇತರೆ ತಿಂಡಿಗಳನ್ನು ಸಾಗಿಸುತಿದ್ದ ಟ್ರಕ್ ಗೆ ಬೆಂಕಿ ಬಿದ್ದು 40,000 ಫೌಂಡ್ ಅಂದರೆ 20 ಟನ್ ಚಿಪ್ಸ್ ಬೆಂಕಿಗೆ ಆಹುತಿಯಾಗಿದೆ. ಟ್ರಕ್ ನಲ್ಲಿ ಕೇವಲ ಆಲೂಗಡ್ಡೆ ಚಿಪ್ಸ್ ಪ್ಯಾಕೆಟ್ ಗಳು ಮಾತ್ರವಲ್ಲದೆ ಇತರೆ ತಿಂಡಿ ಪ್ಯಾಕೆಟ್ಗಳು ಕೂಡ ಇದ್ದವು. ಇದು ಕೂಡ ಬೆಂಕಿಗೆ ಸುಟ್ಟು ಹೋಗಿದೆ.
ಇದನ್ನೂ ಓದಿ: Naneghat Reverse Fall: ಭಾರತದಲ್ಲಿದೆ ಹಿಮ್ಮುಖವಾಗಿ ಚಲಿಸುವ ಜಲಪಾತ! ವಿಡಿಯೋ ನೋಡಿ
ಹೆಚ್ಚಿನ ಅಪಾಯವನ್ನು ತಪ್ಪಿಸಿದ ಅಗ್ನಿಶಾಮಕ ತಂಡ
ಘಟನೆ ಸಂಭವಿಸಿ ಸ್ಥಳಕ್ಕೆ ಧಾವಿಸಿದ ಒಕಲಾದ ಅಗ್ನಿಶಾಮಕ ತಂಡವು ಬೆಂಕಿ ನಂದಿಸಿತು. ರಕ್ಷಣಾ ತಂಡ, ಪೂರ್ವ ಸಂಪರ್ಕಿತ ಹೋಸ್ ಲೈನ್ ಮತ್ತು ಜೆಟ್ ಸ್ಟ್ರೀಮ್ ಅನ್ನು ಬಳಸಿ, ಅಂತಿಮವಾಗಿ ಬೆಂಕಿಯನ್ನು ನಂದಿಸುವ ಮೂಲಕ ಸಂಭವಿಸುವ ಅತೀ ದೊಡ್ಡ ಅಪಾಯವನ್ನು ತಪ್ಪಿಸಿತು.
A trailer carrying 20 tons of snacks caught on fire in Ocala, FL. Footage shows a cascade of melted potato chips and plastic bags pouring out of the back of the trailer as a fire crew worked to contain the blaze.
No injuries were reported as a result of the incident. pic.twitter.com/EQQ9MFCgKU
— NowThis (@nowthisnews) July 12, 2022
ರಕ್ಷಣಾ ತಂಡ ನೀಡಿದ ವರದಿಯ ಪ್ರಕಾರ ಯಾವುದೇ ರೀತಿಯಾದ ಗಾಯಗಳು ಆಗಿಲ್ಲ. ಆದರೆ ಟ್ರಕ್ನಲ್ಲಿದ್ದ ಚಿಪ್ಸ್ ಮತ್ತು ಇತರೆ ತಿಂಡಿ ತಿನಸುಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ. ವೀಡಿಯೋವನ್ನು ಗಮನಿಸಿದಾಗ ಟ್ರಕ್ ಹುಲ್ಲಿನ ಹಾಸಿಗೆಯ ಮೇಲೆ ಇರುವುದನ್ನು ಕಾಣಬಹುದು ಬಹುಷ: ಇದೇ ಕಾರಣದಿಂದ ಬೆಂಕಿ ಇತರೆ ಜಾಗಗಳಿಗೆ ಹರಡುವುದು ತಪ್ಪಿ ಹೋಗಿದೆ ಎನ್ನಬಹುದು.
ವೈರಲ್ ಆದ ವೀಡಿಯೋ
ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ "ನೌ ದಿಸ್ ನ್ಯೂಸ್" ಒಕಾಲಾದಲ್ಲಿ 20ಟನ್ ತಿಂಡಿಗಳನ್ನು ಹೊತ್ತ ಟ್ರೇಲರ್ ಬೆಂಕಿ ಹತ್ತಿಕೊಂಡಿದ್ದು, ಸುಟ್ಟುಹೋದ ಆಲೂಗಡ್ಡೆ ಚಿಪ್ಸ್ ಮತ್ತು ಪ್ಲಾಸ್ಟಿಕ್ ಚಿಲಗಳು ಟ್ರೇಲರ್ ನ ಹಿಂಭಾಗದಿಂದ ಸುರಿಯುತ್ತಿರುವುದನ್ನು ವೀಡಿಯೋ ಫೂಟೇಜ್ ತೋರಿಸುತ್ತಿದೆ. ಅಗ್ನಿಶಾಮಕ ತಂಡದ ಸಿಬ್ಬಂದಿಗಳು ಬೆಂಕಿಯನ್ನು ಆರಿಸಿದರು. ಮತ್ತು ಈ ಘಟನೆಯಿಂದ ಯಾವುದೇ ರೀತಿಯಾದ ಗಾಯಗಳು ಉಂಟಾಗಿಲ್ಲ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Ice Cream: ಚೀನಾದ ಈ ಐಸ್ಕ್ರೀಂಗೆ 800 ರೂ, ಬೆಂಕಿ ತಾಗಿಸಿದರೂ ಕರಗಲ್ಲ!
ಪೋಸ್ಟ್ ಗ್ ಪ್ರತಿಕ್ರಿಯಿಸಿದ ಜನ
ವೈರಲ್ ಆಗುತ್ತಿದ್ದ ವೀಡಿಯೋವನ್ನು ಕಂಡು ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ. ಚಿಪ್ಸ್ ಪ್ರಿಯರಂತು ಬಹಳಷ್ಟು ದುಖ:ವನ್ನು ವ್ಕಕ್ತಪಡಿಸಿದ್ದಾರೆ. ಇನ್ನೂ ಕೆಲವರು ಅಗ್ನಿಶಾಮಕ ದಳದವರು ತಕ್ಷಣವೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮುಂದೆ ಆಗುವಂತಹ ದೊಡ್ಡ ಅಪಾಯವನ್ನು ತಪ್ಪಿಸಿರುವ ಬಗ್ಗೆ ಶ್ಲಾಘಿಸಿದ್ದಾರೆ. ಅಲ್ಲದೆ ಕೆಲವರು ಸುಟ್ಟು ಹೋದ ಚಿಪ್ಸ್ ಗಳನ್ನು ಗಮನಿಸಿ ಚಿಪ್ಸ್ ತಿಂದವರ ಹೊಟ್ಟೆಯಲ್ಲೂ ಇದೇ ರೀತಿ ಆಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ