ಇತ್ತೀಚಿಗಿನ ಕಾಲದಲ್ಲಿ ಪ್ರಾಣಿಗಳನ್ನು (Animals) ಸಾಕುವುದು ಕ್ರೇಜ್ ಅಂತಾನೆ ಹೇಳಬಹುದು. ತನಗೆ ಹೊಟ್ಟೆಗೆ ಇಲ್ಲದಿದ್ದರೂ ಪರವಾಗಿಲ್ಲ. ಆ ಪ್ರಾಣಿಗಳನ್ನು, ಪಕ್ಷಿಗಳನ್ನು ನೋಡಿಕೊಳ್ಳುವುದರಲ್ಲಿ ಎತ್ತಿದ ಕೈ. ಆದರೆ ಒಂದು ಕಾಲದಲ್ಲಿ ಪ್ರಾಣಿಗಳು ಅಂದ್ರೆ ಕೇವಲ ಒಂದು ಮನೆಯ ಮೂಲೆಯಲ್ಲಿ ಇರುತ್ತಾ ಇತ್ತು. ಮನೆಗಾವಲನ್ನು ಕಾಯುತ್ತಾ ಮನೆವರು ಏನು ಊಟವನ್ನು ಹಾಕುತ್ತಾರೆಯೋ ಅಷ್ಟನೇ ತಿನ್ನುತ್ತಾ ಇರುತ್ತಾ ಇತ್ತು. ಆದರೆ, ಈಗಿನ ಜಗತ್ತಿನಲ್ಲಿ (World) ಆ ಪ್ರಾಣಿಗಳನ್ನು ಮನುಷ್ಯರಂತೆಯೇ ಕಾಣುತ್ತಾರೆ. ಅದಕ್ಕಾಗಿ ಬಣ್ಣ ಬಣ್ಣದ ಬಟ್ಟೆಗಳು, ಆಟಿಕೆಗಳನ್ನು ಕೊಡುತ್ತಾರೆ. ಒಟ್ಟಿನಲ್ಲಿ ಸಣ್ಣ ಮಕ್ಕಳಂತೆಯೇ ತಮ್ಮ ಪ್ರಾಣಿಗಳನ್ನು ನೋಡಿಕೊಳ್ಳುತ್ತಾರೆ.
ಇದೀಗ ಒಂದು ವಿಷಯ ವೈರಲ್ ಆಗಿದೆ. ಬೆಂಗಳೂರಿನ ನಿವಾಸಿಗೆ ನಾಯಿ ಬೇಕು ಅಂತ ಆಸೆ ಆಗಿದೆ. ಅದಕ್ಕೆ ಎಷ್ಟೇ ದುಡ್ಡು ಇದ್ರೂ ಪರವಾಗಿಲ್ಲ. ನನಗೆ ನಾಯಿ ಬೇಕೇ ಬೇಕು ಅಂತ ಹಠ ಹಿಡಿದು ನಾಯಿಯನ್ನು ತೆಗೆದುಕೊಂಡಿದ್ದಾನೆ. ಅದಕ್ಕಾಗಿ ಕೊಟ್ಟ ಹಣ ಎಷ್ಟು ಅಂತ ಕೇಳಿದ್ರೇ ಶಾಕ್ ಆಗ್ತೀರಾ!
ಕಡಬೊಮ್ ಕೆನ್ನೆಲ್ಸ್ ಸಂಸ್ಥೆ ಮಾಲೀಕರು ಹಾಗೂ ಭಾರತೀಯ ನಾಯಿ ತಳಿಗಳ ಸಂಘದ ಸತೀಶ್ ಅವರು ಅತ್ಯಂತ ದುಬಾರಿ ನಾಯಿಗಳನ್ನು ಖರೀದಿಸುವಲ್ಲಿ ಪ್ರಖ್ಯಾತರು. ಕೇಸಿಯನ್ ಷೆಪರ್ಡ್ ಜಾತಿಯ ನಾಯಿಗಳು, ಬಹಳ ವಿಶ್ವಾಸ, ಧೈರ್ಯ,ಭಯರಹಿತ ಹಾಗೂ ಅತ್ಯಂತ ಬುದ್ಧಿವಂತ ನಾಯಿಗಳು, ಇವು ನೋಡಲು ಬಹಳ ದೊಡ್ಡ ಗಾತ್ರವನ್ನು ಹೊಂದಿರುತ್ತವೆ ಮತ್ತು ಇವುಗಳು 10 ರಿಂದ 12 ವರ್ಷ ಬದುಕುತ್ತದೆ.
ಸತೀಶ್ ಅವರು ಇತ್ತೀಚೆಗೆ ಒಂದು ಶ್ವಾನಕ್ಕೆ ಬರೋಬ್ಬರಿ ರೂ.20 ಕೋಟಿ ರೂ ಕೊಟ್ಟು ಕಾಕೇಸಿಯನ್ ಷೆಪರ್ಡ್ ಜಾತಿಗೆ ಸೇರಿದ ನಾಯಿ ಖರೀದಿಸಿದ್ದಾರೆ. ಅಮೇನಿಯಾ, ರಷ್ಯಾ, ಟರ್ಕಿ, ಸಕಾಸ್ಸಿಯ ಹಾಗೂ ಜಿಯೋರ್ಜಿಯದಂತಹ ದೇಶಗಳಲ್ಲಿ ಮಾತ್ರ ಇದು ಲಭಿಸುತ್ತದೆ. ಆದರೆ ಭಾರತದಲ್ಲಿ ಈ ಜಾತಿಯ ನಾಯಿ ಕಾಣುವುದು ತುಂಬಾ ವಿರಳ.
ಅಮೆರಿಕನ್ ಕೆನ್ನೆಲ್ ಕ್ಲಬ್ ನ ಪ್ರಕಾರ, ಈ ಕಾಕೇಸಿಯನ್ ಷೆಪರ್ಡ್ಸ್ ದನ ಹಾಗೂ ಇತರೆ ಸಾಕುಪ್ರಾಣಿಗಳಂತಹ ನರಿ, ಚಿರತೆಗಳಂತಹ ಇತರೆ ಪ್ರಾಣಿಗಳಿಂದ ರಕ್ಷಣೆ ಮಾಡಲು ಈ ನಾಯಿಯನ್ನು ಬಳಕೆ ಮಾಡುತ್ತಾರೆ ಎಂದು ಸತೀಶ್ ತಿಳಿಸಿದ್ದಾರೆ.
ಇತ್ತೀಚೆಗೆ ಕಡಬೊಮ್ ಹೈದರ್ ತಿರುವನಂತಪುರದಲ್ಲಿ ನಡೆದಂತಹ ಕೆನ್ನೆಲ್ ಕ್ಲಬ್ ನ ಕಾರ್ಯಕ್ರಮ ಹಾಗೂ ಕ್ರೌನ್ ಕ್ಲಾಸ್ಸಿಕ್ ಡಾಗ್ ಶೋನಲ್ಲಿ ಭಾಗವಹಿಸಿದ್ದ ಅವರು, ಅತ್ಯುತ್ತಮ ತಳಿ ವರ್ಗದಡಿ 32 ಪದಕಗಳನ್ನು ಗೆದ್ದಿದೆ ಎನ್ನುವ ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿ: ಒಂದು ತಿಂಗಳಿನಿಂದ ಮುದುಕನ ಮೂಗಿನಲ್ಲಿತ್ತು ಈ ಹುಳ, ಚೆಕ್ ಮಾಡಿದಾಗ ಕಾದಿತ್ತು ಬಿಗ್ ಶಾಕ್!
ಈ ಹಿಂದೆ ಸತೀಶ್ ಅವರು ‘ಕೋರಿಯನ್ ದೋಸ ಮಾಸ್ಟಿಫ್ಸ್’ ಎಂಬ ಮತ್ತೊಂದು ಅಪರೂಪದ ತಳಿಯ ನಾಯಿಯನ್ನು ರೂ.1 ಕೋಟಿ ಕೊಟ್ಟು ಖರೀದಿಸಿದ್ದರಂತೆ. ಅದೇ ರೀತಿ ಅಲಾಶ್ಕನ್ ಮಾಲಾಮುಟೆ ರೂ.8 ಕೋಟಿ, ಟಿಬೇಟನ್ ಮಾಸ್ಟಿಫ್ ರೂ.10 ಕೋಟಿ ಕೊಟ್ಟು ಖರೀದಿಸಿದ್ದರಂತೆ. ಈ ರೂ.20 ಕೋಟಿ ಬೆಲೆಯ ‘ಕಡಬೊಮ್ ಹೈದರ್’ ಈಗ ಸುಮಾರು 1.5 ವರ್ಷ ವಯಸ್ಸಿನದಾಗಿದ್ದು, ಇದನ್ನು ಹೈದ್ರಾಬಾದ್ನಲ್ಲಿರುವ ನಾಯಿಗಳ ಮಾರಾಟ ಮಾಡುವವರಿಂದ ಖರೀಸಿದ್ದಾರೆ.
ಸತೀಶ್ ಅವರು ಇದೇ ಜಾತಿಯ ಎರಡು ಮರಿಗಳನ್ನು ರೂ.5 ಕೋಟಿ ಕೊಟ್ಟು ಖರೀದಿಸಿದ್ದಾರಂತೆ. ನಾನು ಈ ನಾಯಿಗಳನ್ನು ಮಾರುವುದಿಲ್ಲ, ನಾನೇ ಇಟ್ಟುಕೊಳ್ಳುತ್ತೇನೆ. ಇವುಗಳನ್ನು ತುಂಬಾ ನಾಜೂಕಾಗಿ ನೋಡಿಕೊಳ್ಳಬೇಕಾಗುತ್ತದೆ ಹಾಗೂ ಇದರ ಆರೈಕೆ ಬಹಳ ಮುಖ್ಯ ಎಂದಿದ್ದಾರೆ.
ಈ ನಾಯಿಯನ್ನು ನವೆಂಬರ್ ತಿಂಗಳಲ್ಲಿ ಬೆಂಗಳೂರಿಗರಿಗೆ ಪರಿಚಯಿಸಬೇಕೆಂದುಕೊಂಡಿದ್ದೆ, ಆದರೆ ಆ ಸಮಯದಲ್ಲಿ ಈ ನಾಯಿಯ ಮೈಮೇಲಿನ ಕೂದಲು ಉದುರುತಿತ್ತು. ಹಾಗಾಗಿ, ನಾನು ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದೆ. ಈಗ ಫೆಬ್ರವರಿ ತಿಂಗಳಲ್ಲಿ ಒಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ, ಅಲ್ಲಿ ಈ ನಾಯಿಯನ್ನು ಪ್ರದರ್ಶಿಸಬೇಕೆಂದು ಆಲೋಚಿಸಿದ್ದೇನೆ, ಎಂದು ಸತೀಶ್ ಹೇಳಿದ್ದಾರೆ.
ನಾಯಿಯ ಆರೈಕೆಗಾಗಿಯೇ ಜನರನ್ನು ಮೀಸಲಿಡಲಾಗಿದೆ. ಅದಕ್ಕೆ ಆಗಾಗ ಬ್ರಷಿಂಗ್ ಅಂದರೆ ಕ್ಲೀನಿಂಗ್ ಮಾಡಬೇಕಾಗುತ್ತದೆ ಹಾಗೂ ಅದರ ಕಿವಿಗಳನ್ನು ಸ್ವಚ್ಛಗೊಳಿಸುತ್ತಿರಬೇಕು. ಅದರ ಉಗುರಗಳನ್ನು ಕತ್ತರಿಸುತ್ತಿರಬೇಕಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸ್ಟೋರಿ ನೋಡುತ್ತಾ ಇದ್ರೆ ನಮ್ಮನ್ನು ಯಾರದ್ರೂ ಹೀಗೆ ಸಾಕಬೇಕು ಅನಿಸುತ್ತೆ ಅಲ್ವಾ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ