Photo: ತಾಯಿಯ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿದ 2 ವರ್ಷದ ಮಗಳು!

ಎರಡು ವರ್ಷ ಪ್ರಾಯದ ಹೆಣ್ಣು ಮಗು ತಾಯಿಯ ನಗ್ನ ಫೋಟೋ ಕ್ಲಿಕ್ಕಿಸಿ ಕ್ವಾಂಟ್ಯಾಕ್ಟ್ ಲೀಸ್ಟ್​ನಲ್ಲಿದ್ದ ಎಲ್ಲರಿಗೂ ಕಳುಹಿಸಿದ್ದಾಳೆ.

news18-kannada
Updated:October 17, 2020, 6:58 PM IST
Photo: ತಾಯಿಯ ಬೆತ್ತಲೆ ಫೋಟೋ ಕ್ಲಿಕ್ಕಿಸಿ ಶೇರ್ ಮಾಡಿದ 2 ವರ್ಷದ ಮಗಳು!
ಎಮಿಲಿ ಸ್ಮಿತ್
  • Share this:
ಕೊರೋನಾ ಮಹಾಮಾರಿಯಿಂದಾಗಿ ಮಕ್ಕಳು ಮನೆಯಲ್ಲಿಯೇ ಇದ್ದಾರೆ. ಆನ್​ಲೈನ್​ ತರಗತಿ ಎಂದು ಸ್ಮಾರ್ಟ್​ಫೋನ್​ಗಳನ್ನು ಬಳಸುತ್ತಿದ್ದಾರೆ. ಆದರೆ  ಸ್ಮಾರ್ಟ್​ಫೋನ್​​ ಮಾರಕ ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿ ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಸ್ಮಾರ್ಟ್​ಫೋನ್​ ಕೊಡುವ ಮೊದಲು ಕೊಂಚ ಆಲೋಚನೆ ಮಾಡುವುದು ಒಳಿತು.  ಕೆಲವು ಮಕ್ಕಳು ಆನ್​ಲೈನ್​ ಕ್ಲಾಸ್​ ಆದ ನಂತರವೂ ಸ್ಮಾರ್ಟ್​ಫೋನ್​ ಬಳಸುತ್ತಿದ್ದಾರೆ. ಇನ್ನು ಚಿಕ್ಕ ಮಕ್ಕಳು ಮನೆಯಲ್ಲಿದ್ದಾಗ ಅಮ್ಮನ ಅಥವಾ ಅಪ್ಪನ ಸ್ಮಾರ್ಟ್​ಫೋನನ್ನು ಬಳಸುತ್ತಾರೆ. ಕೆಲವೊಮ್ಮೆ ಪೋಷಕರೆ ಮಕ್ಕಳು ಅಳು ನಿಲ್ಲಿಸಲು, ಆಟವಾಡಲು ಅವರ ಕೈಗೆ ಫೋನ್​ ನೀಡುತ್ತಾರೆ. ಅದರಂತೆ ಇಲ್ಲೊಂದು ಮಗು ಅಮ್ಮನ ಸ್ಮಾರ್ಟ್​ಫೋನ್​ ಹಿಡಿದು ಏನು ಮಾಡಿದೆ ಗೊತ್ತಾ? ತಾಯಿಯ ಬೆತ್ತಲೆ ಫೋಟೋ ತೆಗೆದು ಶೇರ್​ ಮಾಡಿದೆ!.

ಎರಡು ವರ್ಷ ಪ್ರಾಯದ ಹೆಣ್ಣು ಮಗು ತಾಯಿಯ ನಗ್ನ ಫೋಟೋ ಕ್ಲಿಕ್ಕಿಸಿ ಕ್ವಾಂಟ್ಯಾಕ್ಟ್ ಲೀಸ್ಟ್​ನಲ್ಲಿದ್ದ ಎಲ್ಲರಿಗೂ ಕಳುಹಿಸಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ತಾಯಿಗೆ ಈ ವಿಚಾರ ತಿಳಿದಿದ್ದು, ಮುಜುಗರಕ್ಕೆ ಈಡಾಗಿದ್ದಾರೆ.

ಅಮೆರಿಕದ ಓಹಿಯೋದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.  ಎಮಿಲಿ ಸ್ಮಿತ್​ (30) ಎಂಬಾಕೆ ತನ್ನ ಎರಡು ವರ್ಷದ ಹೆಣ್ಣು ಮಗು ಕಾರ್ಸಿನ್​ಗೆ ಆಟವಾಡಲೆಂದು ಸ್ಮಾರ್ಟ್​ಫೋನ್​ ನೀಡಿದ್ದಳು. ನಂತರ ಆಕೆ ಸ್ನಾನಕ್ಕೆ ಹೋಗಿದ್ದಳು. ಸ್ನಾನ ಮುಗಿಸಿ ಬಂದ ಎಮಿಲಿ ಬೆತ್ತಲಾಗಿ ತಲೆ ಬಾಚುತ್ತಿದ್ದಳು. ಆದರೆ ಕಾರ್ಸಿನ್​ ಹಿಂದಿನಿಂದ ಫೋಟೋ ತೆಗೆದಿದ್ದಾಳೆ. ಸ್ನಾಪ್​​ಚಾಟ್​ನಲ್ಲಿರುವ ಕ್ಯಾಂಟ್ಯಾಕ್ಟ್​ಗೆ ಶೇರ್​ ಮಾಡಿದ್ದಾಳೆ.



ಮೊದಲಿಗೆ ಎಮಿಲಿಗೆ ಮಗಳು ಕಾರ್ಸಿನ್​ ತನ್ನ ಬೆತ್ತಲೆ ಫೋಟೋ ತೆಗೆದು ಶೇರ್​ ಮಾಡಿದ್ದಾಳೆ ಎಂಬುದು ಅರಿವಿಗೆ ಬಂದಿರಲಿಲ್ಲ. ನಂತರ ಎಮಿಲಿಯ ಸಹದ್ಯೋಗಿಯೊಬ್ಬರು ‘ಬೆತ್ತಲೆ ಫೋಟೋ ಕಳುಹಿಸಿದ್ದಕ್ಕೆ ಧನ್ಯವಾದ’ ಎಂದು ಸಂದೇಶ ಕಳುಹಿಸಿದ್ದರು. ಇದನ್ನು ಕಂಡು ಗಾಬರಿಗೊಂಡ ಎಮಿಲಿಗೆ ಸ್ಮಾರ್ಟ್​ಫೋನ್​ ಪರಿಶೀಲಿಸಿದಾಗ ಮಗಳು ಮಾಡಿದ ಕೆಲಸ ಗೊತ್ತಾಗಿದೆ.



ಈ ಘಟನೆಯಿಂದ ನೊಂದ ಎಮಿಲಿ ನಂತರ ತನಗೆ ತಾನು ಧೈರ್ಯ ತುಂಬಿಕೊಂಡಿದ್ದಾಳೆ. 2 ವರ್ಷದ ಮಗಳು ಗೊತ್ತಿಲ್ಲದೆ ಫೋಟೋ ಕಳುಹಿಸಿದ್ದಾಳೆ ಎಂದು ತನ್ನನ್ನು ತಾನೇ ಸಮಧಾನ ಮಾಡಿಕೊಂಡಿದ್ದಾಳೆ. ಅಷ್ಟು ಮಾತ್ರವಲ್ಲದೆ, ಸಾಮಾಜಿ ಜಾಲತಾಣದಲ್ಲಿ ವಿಚಾರವನ್ನು ಹೇಳುವ ಮೂಲಕ ಕ್ಷಮೆಯಾಚಿಸಿದ್ದಾಳೆ.
First published: October 17, 2020, 6:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading