• Home
  • »
  • News
  • »
  • trend
  • »
  • Mayan City: ಮಳೆಕಾಡಿನಲ್ಲಿ 2 ಸಾವಿರ ವರ್ಷಗಳಷ್ಟು ಹಳೆಯ ನಗರ ಪತ್ತೆ!

Mayan City: ಮಳೆಕಾಡಿನಲ್ಲಿ 2 ಸಾವಿರ ವರ್ಷಗಳಷ್ಟು ಹಳೆಯ ನಗರ ಪತ್ತೆ!

ಮಾಯನ್ ಪಟ್ಟಣ

ಮಾಯನ್ ಪಟ್ಟಣ

ವರದಿಗಳ ಪ್ರಕಾರ, 650 ಚದರ ಮೈಲುಗಳಷ್ಟು ವಿಸ್ತಾರವಾದ ಪ್ರದೇಶವು ಮೆಕ್ಸಿಕನ್ ಗಡಿಯ ಸಮೀಪದಲ್ಲಿದೆ ಮತ್ತು ಇದನ್ನು ಮಿರಾಡೋರ್-ಕಲಕ್ಮುಲ್ ಕಾರ್ಸ್ಟ್ ಬೇಸಿನ್ ಎಂದು ಕರೆಯಲಾಗುತ್ತದೆ.

  • Trending Desk
  • 2-MIN READ
  • Last Updated :
  • New Delhi, India
  • Share this:

ಉತ್ತರ ಗ್ವಾಟೆಮಾಲಾದಲ್ಲಿ(Guatemala) ಸಂಶೋಧಕರ(Researchers) ತಂಡವೊಂದು ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾಗ ಆಶ್ಚರ್ಯಕರವಾದ ಒಂದು ಆವಿಷ್ಕಾರವನ್ನು ಪತ್ತೆ ಮಾಡಿದ್ದಾರೆ. ಪುರಾತತ್ವಶಾಸ್ತ್ರಜ್ಞರು ಆವಿಷ್ಕಾರದಲ್ಲಿ ದಟ್ಟ ಮಳೆಕಾಡಿನ (Rainforest) ಕೆಳಗೆ ಹೂತು ಹೋಗಿದ್ದ ಬರೋಬ್ಬರಿ 2,000 ವರ್ಷಗಳಷ್ಟು ಪುರಾತನವಾದ ದೊಡ್ಡ ಮಾಯನ್ ಪಟ್ಟಣದ(Mayan town) ಅವಶೇಷಗಳನ್ನು ಕಂಡುಕೊಂಡಿದ್ದಾರೆ.


2,000 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ನಗರ


ವರದಿಗಳ ಪ್ರಕಾರ, 650 ಚದರ ಮೈಲುಗಳಷ್ಟು ವಿಸ್ತಾರವಾದ ಪ್ರದೇಶವು ಮೆಕ್ಸಿಕನ್ ಗಡಿಯ ಸಮೀಪದಲ್ಲಿದೆ ಮತ್ತು ಇದನ್ನು ಮಿರಾಡೋರ್-ಕಲಕ್ಮುಲ್ ಕಾರ್ಸ್ಟ್ ಬೇಸಿನ್ ಎಂದು ಕರೆಯಲಾಗುತ್ತದೆ.


ಸುಮಾರು 2,000 ವರ್ಷಗಳ ಹಿಂದೆ ಅಸ್ತಿತ್ವದಲ್ಲಿದ್ದ ಈ ನಗರವು, 110 ಮೈಲುಗಳ ಕಾಸ್‌ವೇಗಳಿಂದ ಸಂಪರ್ಕ ಹೊಂದಿದ 1,000 ವಸಾಹತುಗಳ ಒಟ್ಟು ಸಂಗ್ರಹವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.


ನೌಕಾಯಾನ ಮಾಡಬಹುದಾದ ಕಾಸ್‌ವೇಗಳು 110 ಮೈಲುಗಳಷ್ಟು ಉದ್ದವಿದ್ದು, ಮಾಯನ್ ನಾಗರಿಕತೆಯ ನಿವಾಸಿಗಳು ಹತ್ತಿರದ ವಸಾಹತುಗಳಿಗೆ ಪ್ರಯಾಣಿಸಲು‌ ಸಹಾಯವಾಗಲೆಂದು ನ್ಯಾವಿಗೇಬಲ್ ಕಾಸ್‌ವೇಗಳನ್ನು ತೆರವುಗೊಳಿಸಲಾಗಿತ್ತು, ಇದರಿಂದಾಗಿ ನಾಗರಿಕತೆಯ ನಿವಾಸಿಗಳು ಹತ್ತಿರದ ವಸಾಹತುಗಳಿಗೆ ಪ್ರಯಾಣಿಸಲು ಸುಲಭದ ಹಾದಿಯಾಯಿತು ಎಂದು ಪುರಾತತ್ವಶಾಸ್ತ್ರಜ್ಞರು ತಿಳಿಸಿದ್ದಾರೆ.


ಇದನ್ನೂ ಓದಿ: Money Heist ಮಾಸ್ಕ್ ಹಿಂದಿರುವ ಮುಖ ಇವ್ರದ್ದೇ, ಕಥೆಗೂ ಇವ್ರಿಗೂ ಇರೋ ಲಿಂಕ್ ಕೇಳಿದ್ರೆ ಆಶ್ಚರ್ಯ ಪಡ್ತೀರಾ!


LiDAR ತಂತ್ರಜ್ಞಾನದಿಂದ ಪತ್ತೆ


ವರದಿಯ ಪ್ರಕಾರ, ಈ ಆವಿಷ್ಕಾರವನ್ನು ಫ್ರಾನ್ಸ್ ಮತ್ತು ಗ್ವಾಟೆಮಾಲಾದ ಸಂಶೋಧಕರ ತಂಡವು, LiDAR ತಂತ್ರಜ್ಞಾನವನ್ನು ಬಳಸಿಕೊಂಡು ಈ ಪುರಾತನ ನಗರವನ್ನು ಕಂಡುಹಿಡಿದಿದ್ದಾರೆ ಎನ್ನಲಾಗಿದೆ.


LiDAR ತಂತ್ರಜ್ಞಾನದಿಂದ ಹೇಗೆ ಕೆಲಸ ಮಾಡುತ್ತದೆ?


ರೇಡಿಯೊ ತರಂಗಗಳಿಗಿಂತ ಲೇಸರ್ ಬೆಳಕನ್ನು ಆಧರಿಸಿ ವಸ್ತುಗಳನ್ನು ಮತ್ತು ಸ್ಥಳಗಳನ್ನು ಪತ್ತೆ ಹೆಚ್ಚುವ ವ್ಯವಸ್ಥೆಯನ್ನು LiDAR ತಂತ್ರಜ್ಞಾನ ಎಂದು ಕರೆಯಲಾಗುತ್ತದೆ.


LiDAR ಮಳೆಕಾಡುಗಳನ್ನು ಭೇದಿಸಬಲ್ಲದು ಮತ್ತು ಅವುಗಳ ಅಡಿಯಲ್ಲಿ ಏನಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ಹೀಗಾಗಿಯೇ ಸಂಶೋಧಕರ ತಂಡವು ಈ ತಂತ್ರಜ್ಞಾನದ ಮೊರೆ ಹೋಗಿದೆ.


ಪುರಾತತ್ವಶಾಸ್ತ್ರಜ್ಞರು ಏನೆಲ್ಲಾ ಕಂಡುಕೊಂಡಿದ್ದಾರೆ?


ಆವಿಷ್ಕಾರದ ಬಗ್ಗೆ ಹೆಚ್ಚಿನ ವಿವರ ನೀಡಿದ ಸಂಶೋಧಕರು, ಕೆಲವು ವಸಾಹತುಗಳಲ್ಲಿ ದೊಡ್ಡ ವೇದಿಕೆಗಳು ಮತ್ತು ಪಿರಮಿಡ್‌ಗಳ ಪುರಾವೆಗಳನ್ನು ಕಂಡುಕೊಂಡಿದ್ದಾಗಿ ಹೇಳಿದ್ದಾರೆ.


ಈ ದೊಡ್ಡ ವೇದಿಕೆಗಳನ್ನು ಮಾಯನ್‌ ನಾಗರೀಕತೆಯಲ್ಲಿ ರಾಜಕೀಯ ಮತ್ತು ಮನರಂಜನೆಗಾಗಿ ಕೇಂದ್ರೀಕೃತ ಕೇಂದ್ರಗಳಾಗಿ ಬಳಸಲಾಗುತ್ತಿತ್ತು.


ಕೆಲವು ವಸಾಹತುಗಳು ಅಂಕಣಗಳನ್ನು ಹೊಂದಿದ್ದು, ಇದು ಆ ಕಾಲದಲ್ಲಿ ಜನರ ಸ್ಥಳೀಯವಾಗಿ ವಿವಿಧ ಕ್ರೀಡೆಗಳನ್ನು ಆಡಲು ಬಳಸುತ್ತಿದ್ದರು ಎಂದು ಸೂಚಿಸುತ್ತದೆ ಎಂದಿದ್ದಾರೆ.


ಕಾಲುವೆಗಳು ಹಾಗೂ ಜಲಾಶಯ ಪತ್ತೆ


ವಿಶಾಲ ಕ್ರೀಡಾಂಗಣಗಳು, ವೇದಿಕೆಗಳು, ಪಿರಮಿಡ್‌ ಜೊತೆಗೆ ಕಾಲುವೆಗಳು ಹಾಗೂ ಜಲಾಶಯ ಕೂಡ ಪತ್ತೆಯಾಗಿದೆ. ಆ ಕಾಲದಲ್ಲಿಯೇ ಈ ಎಲ್ಲಾ ಕಲ್ಪನೆಯೂ ಜಾರಿಯಲ್ಲಿತ್ತು, ಈ ನಗರ ನಿರ್ಮಾಣ ಯೋಜನೆಯೇ ಅದ್ಭುತವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.


ಈ ಪುರಾತನ ಪಟ್ಟಣ ಮಾಯನ್‌ ನಾಗರಿಕತೆಯ ಬಗ್ಗೆ ಮತ್ತಷ್ಟು ಮಾಹಿತಿ ನೀಡಲಿದೆ ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಮಾಯನ್‌ ನಾಗರೀಕತೆ


ಮಾಯನ್‌ ನಾಗರೀಕತೆ ಅತ್ಯಂತ ಪುರಾತನ ಮತ್ತು ಮಹತ್ವದ ನಾಗರಿಕತೆಗಳಲ್ಲಿ ಒಂದು. ಈ ಮಾಯನ್ ಎನ್ನುವುದು ಮೆಸೊ ಅಮೆರಿಕಾದ ನಾಗರಿಕತೆಯಾಗಿದೆ.‌



ಆಗಿನ ಕಾಲದಲ್ಲಿ ಇದೊಂದೇ ಲಿಖಿತ ಭಾಷಾಭಿವೃದ್ಧಿ ಪಡೆದ ಪೂರ್ವದ ಕೊಲಂಬಿಯನ್ ಅಮೆರಿಕನ್ ಸಂಸ್ಕೃತಿಯಾಗಿತ್ತೆನ್ನಲಾಗಿದೆ. ಹೀಗಾಗಿ ಅದು ತನ್ನ ಕಲೆ, ವಾಸ್ತುಶಿಲ್ಪ ಮತ್ತು ಗಣಿತ ಹಾಗು ಖಗೋಳ ವಿಜ್ಞಾನದ ಪದ್ದತಿಗಳಿಗೆ ಹೆಸರಾಗಿತ್ತು.


ಈ ಮಾಯನ್ ನಾಗರಿಕತೆಯು ಇನ್ನಿತರ ಮೆಸೊ-ಅಮೆರಿಕನ್ ಸಂಸ್ಕೃತಿಗಳ ಪಾಲನ್ನೂ ಹೊಂದಿತ್ತು. ಉನ್ನತ ಮಟ್ಟದ ಪರಸ್ಪರ ವಿಚಾರ ವಿನಿಮಯ ಮತ್ತು ಆಯಾ ಪ್ರಾದೇಶಿಕತೆಯಲ್ಲಿ ತಕ್ಕ ಮಟ್ಟಿಗಿನ ಸಾಂಸ್ಕೃತಿಕ ಪ್ರಸರಣವೂ ನಡೆದಿತ್ತು. ಶಾಸನ ರಚನೆ ಮತ್ತು ಕ್ಯಾಲಂಡರ್ ಗಳ ಬರಹಗಳು ಈ ಕಾಲದಲ್ಲಿ ಇತ್ತು.


ಒಟ್ಟಾರೆ ಮಾಯನ್‌ ನಾಗರಿಕತೆಯ ಕುರುಹುಗಳ ಕುರಿತು ಅಧ್ಯಯನ ನಡೆಸಿದಷ್ಟೂ, ರೋಚಕ ಸಂಗತಿಗಳು ಹೊರ ಬೀಳುತ್ತವೆ.

Published by:Latha CG
First published: