HOME » NEWS » Trend » 2 STATES MOVIE FOR REAL ANDHRA PRADESH MAN TELLS PARENTS ABOUT PUNJABI GIRLFRIEND WHAT HAPPENED NEXT STG SCT

ರಿಯಲ್‌ 2 ಸ್ಟೇಟ್ಸ್‌ ಲವ್!; ಪಂಜಾಬಿ ಯುವತಿ ಜೊತೆ ಆಂಧ್ರ ಪ್ರದೇಶದ ಯುವಕನ ಡೇಟಿಂಗ್; ಮುಂದೇನಾಯ್ತು ಗೊತ್ತಾ?

ಚೇತನ್ ಭಗತ್ ಅವರ ಜನಪ್ರಿಯ ಕಾದಂಬರಿ 2 ಸ್ಟೇಟ್ಸ್‌ ಬಗ್ಗೆ ನಿಮಗೆ ಗೊತ್ತಿರಬಹುದು. ಈ ಕತೆ ಈಗ ಯಾಕೆ ಅಂತೀರಾ.. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಇದೇ ರೀತಿಯ ಪ್ರೇಮ ಕತೆಯೊಂದು ಬೆಳಕಿಗೆ ಬಂದಿದೆ.

news18-kannada
Updated:April 12, 2021, 10:27 AM IST
ರಿಯಲ್‌ 2 ಸ್ಟೇಟ್ಸ್‌ ಲವ್!; ಪಂಜಾಬಿ ಯುವತಿ ಜೊತೆ ಆಂಧ್ರ ಪ್ರದೇಶದ ಯುವಕನ ಡೇಟಿಂಗ್; ಮುಂದೇನಾಯ್ತು ಗೊತ್ತಾ?
ಸಾಂದರ್ಭಿಕ ಚಿತ್ರ
  • Share this:
ಪ್ರೀತಿಯ ದೋಣಿಯಲ್ಲಿ ಪ್ರಯಾಣಿಸುವವರಿಗೆ ತಮ್ಮ ಪ್ರೀತಿಯನ್ನು ಇಬ್ಬರೂ ಪರಸ್ಪರ ಒಪ್ಪಿಕೊಳ್ಳುವುದೇ ಆಗಲಿ ಅಥವಾ ಅವರ ಹೆತ್ತವರಿಗೆ ಸುದ್ದಿ ಮುಟ್ಟಿಸುವುದಾಗಲಿ ಇದು ಯಾವಾಗಲೂ ಕ್ಲಿಷ್ಟಕರವಾದ ಸವಾರಿಯಾಗಿದೆ. ವಿಶೇಷವಾಗಿ ಕುಟುಂಬವನ್ನು ತಿಳಿಸಲು ಮತ್ತು ಮನವರಿಕೆ ಮಾಡುವ ಸಮಯ ಬಂದಾಗ ಇಬ್ಬರೂ ಪ್ರೇಮಿಗಳಿಗೆ ದೊಡ್ಡ ಸವಾಲು ಎದುರಾಗಿರುತ್ತದೆ. ಈ ಹಿನ್ನೆಲೆ ಭಾರತದಲ್ಲಿ ಡೇಟಿಂಗ್ ಮತ್ತು ಪ್ರೇಮ ವಿವಾಹಗಳು ಸಾಮಾನ್ಯವಾಗಿ ಸುಲಭವಾದ ಸಂಗತಿಯಾಗಿಲ್ಲ. ಒಂದು ವೇಳೆ ನೀವು ಮತ್ತು ನಿಮ್ಮ ಸಂಗಾತಿ ಬೇರೆ ಜಾತಿ, ಸಮುದಾಯದವರಾದರೆ ಪರಿಸ್ಥಿತಿ ಇನ್ನಷ್ಟು ಕಠಿಣವಾಗುತ್ತದೆ.

ಅರ್ಜುನ್ ಕಪೂರ್ ಮತ್ತು ಆಲಿಯಾ ಭಟ್ ನಟಿಸಿದ ಮತ್ತು ಅದೇ ಹೆಸರಿನ ಚೇತನ್ ಭಗತ್ ಅವರ ಜನಪ್ರಿಯ ಕಾದಂಬರಿ '2 ಸ್ಟೇಟ್ಸ್‌' ಬಗ್ಗೆ ನಿಮಗೆ ಗೊತ್ತಿರಬಹುದು. ಈ ಕತೆ ಈಗ ಯಾಕೆ ಅಂತೀರಾ.. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಇದೇ ರೀತಿಯ ಪ್ರೇಮ ಕತೆಯೊಂದು ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ತನ್ನ ಪಂಜಾಬಿ ಗೆಳತಿಯ ಬಗ್ಗೆ ತನ್ನ ಕುಟುಂಬಕ್ಕೆ ತಿಳಿಸಿದ್ದರಿಂದ ಎಲ್ಲರಿಗೂ ಕುತೂಹಲ ಮೂಡಿಸಿತು ಮತ್ತು ಈ ಘಟನೆಯನ್ನು ಆತ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾನೆ. ಇದು ಮೈಕ್ರೋ ಬ್ಲಾಗಿಂಗ್ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿವೇಕ್ ರಾಜು ಎಂಬ ವ್ಯಕ್ತಿ ಇತ್ತೀಚೆಗೆ ತನ್ನ ಗೆಳತಿಯ ಬಗ್ಗೆ ತನ್ನ ಹೆತ್ತವರಿಗೆ ಸುದ್ದಿ ತಿಳಿಸಿದ ಬಗ್ಗೆ ಪೋಸ್ಟ್ ಮಾಡಿದ್ದ. “ಮನೆಯಲ್ಲಿ ಮೋಜಿನ ಸಮಯಗಳು. ಅಮ್ಮ ಪರವಾಗಿಲ್ಲ. ಅಪ್ಪ ಸಂಪೂರ್ಣವಾಗಿ ಮೌನವಾಗಿದ್ದಾರೆ. ಪೋಷಕರಿಂದ ಜೀವಮಾನದಲ್ಲಿ ಒಮ್ಮೆ ಈ ಪ್ರತಿಕ್ರಿಯೆಯನ್ನು ಆನಂದಿಸಿ (ನನ್ನ ಸಹೋದರ ಕೂಡ ಬಾಂಬ್ ಸಿಡಿಸದ ಹೊರತು)'' ಎಂದು ಟ್ವೀಟ್‌ ಮಾಡಿದ್ದ. ಇನ್ನು, ತನ್ನ ಗರ್ಲ್‌ಫ್ರೆಂಡ್‌ ಕುಟುಂಬವು ಡೇಟಿಂಗ್ ಹಾಗೂ ಎಲ್ಲದರ ಬಗ್ಗೆಯೂ ಒಪ್ಪಿಗೆ ಇದೆ, ಆರಾಮಾಗೇ ಇದ್ದಾರೆ ಎಂದೂ ಹಂಚಿಕೊಂಡಿದ್ದ.



ಸ್ವಲ್ಪ ಸಮಯದವರೆಗೆ ಮಗನ ಪ್ರೀತಿಯ ವಿಚಾರವನ್ನು ತಪ್ಪಿಸಿಕೊಳ್ಳುತ್ತಿದ್ದ ತಂದೆ, ನಂತರ ಪುತ್ರನ ಗೆಳತಿಯನ್ನು ಭೇಟಿಯಾಗಲು ನಿರ್ಧರಿಸಿದರು. ಅದೂ ಕೊರೊನಾ ಸಾಮಕ್ರಾಮಿಕದ ಸಮಯದಲ್ಲಿ. ದೇಶಕ್ಕೆ ಕೊರೊನಾ ಆತಂಕವೊಡ್ಡುತ್ತಿದ್ದರೂ, ಅದನ್ನು ಕಡೆಗಣಿಸಿ ಆ ಹುಡುಗಿಯನ್ನು ಭೇಟಿಯಾಗಬೇಕೆಂದು ಅಪ್ಪ ಒತ್ತಾಯಿಸುತ್ತಾರೆ. ವಿಡಿಯೋ ಕಾಲ್‌ ಸಲಹೆಯನ್ನು ಸಹ ಅಪ್ಪ ತಿರಸ್ಕರಿಸಿದ್ದು, ಮುಖಾಮುಖಿಯಾಗೇ ಭೇಟಿಯಾಗಲು ಬಯಸಿದ್ದಾರೆ ಎಂದೂ ಆಂಧ್ರ ಪ್ರದೇಶದ ವಿವೇಕ್ ರಾಜು ಹೇಳಿಕೊಂಡಿದ್ದಾನೆ.

ತನ್ನ ಗೆಳತಿಯ ಕುಟುಂಬವು ಡೇಟಿಂಗ್ ಬಗ್ಗೆ ಕೂಲಾಗೇ ಇದ್ದಾರೆ. ತನ್ನ ಗೆಳತಿ ಅವರ ಮನೆಯಲ್ಲಿ ಈ ವಿಚಾರ ಮುಟ್ಟಿಸಿದಾಗ ಯಾವುದೇ ಡ್ರಾಮಾ ನಡೆಯಲಿಲ್ಲ ಎಂದು ವಿವೇಕ್‌ ರಾಜು ಪೋಸ್ಟ್‌ ಮಾಡಿದ್ದು, ಆದರೆ ನಮ್ಮ ಮನೆಯಲ್ಲಿ ಅದೇ ರೀತಿ ಆಗಲಿಲ್ಲ ಎಂದು ಆತ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾನೆ.

ಆದರೆ, ಮುಂದೇನಾಯಿತು ಎಂಬ ಬಗ್ಗೆ ಆತ ಇನ್ನೂ ಯಾವುದೇ ಅಪ್‌ಡೇಟ್‌ಗಳನ್ನು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿಲ್ಲ. ಈ ಹಿನ್ನೆಲೆ ಈ ಕುತೂಹಲಕರ ಪ್ರೇಮ ಕತೆಯನ್ನು ಫಾಲೋ ಮಾಡುತ್ತಿರುವ ನೆಟ್ಟಿಗರ ಕುತೂಹಲ ಮತ್ತಷ್ಟು ಕೆರಳಿರುವುದಂತೂ ನಿಜ. ಈ ಹಿನ್ನೆಲೆ ಆಂಧ್ರ ಪ್ರದೇಶದ ಆ ಪ್ರೇಮಿ ಮುಂದೆ ಏನು ಹಂಚಿಕೊಳ್ಳುತ್ತಾನೋ ಎಂದು ಕಾಯುತ್ತಿದ್ದಾರೆ.
Published by: Sushma Chakre
First published: April 12, 2021, 10:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories