ಇಂದಿನ ದಿನ ಎಲ್ಲವೂ ದುಬಾರಿಯಾಗಿಬಿಟ್ಟಿದೆ ಅಂತಾನೇ ಹೇಳ್ಬಹುದು. ತಿಂಡಿ ಪ್ರಿಯರು ನಮ್ಮ ದೇಶದಲ್ಲಿ ಹೆಚ್ಚಾಗಿದ್ದಾರೆ. ಅದೇ ರೀತಿ ವಿಧ ವಿಧವಾದ ತಿಂಡಿಗಳನ್ನು ತಯಾರಿಸುವ ಮೂಲಕ ನಮ್ಮ ದೇಶ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ. ಇದಕ್ಕೆ ಕಾರಣ ನಮ್ಮಲ್ಲಿರುವಂತಹ ಸಂಸ್ಕೃತಿ (Culture) ಅಂತಾನೇ ಹೇಳ್ಬಹುದು. ಅದೇ ರೀತಿ ದೆಹಲಿಯು ಹಲವಾರು ವರ್ಷಗಳಿಂದ ಆಹಾರ ಪ್ರಿಯರ ಕೇಂದ್ರವಾಗಿಬಿಟ್ಟಿದೆ. ದಕ್ಷಿಣ ಭಾರತದ (South India) ಪಾಕಪದ್ಧತಿಯಿಂದ ಹಿಡಿದು ಸ್ಥಳೀಯ ಚೋಲೆ ಭತುರ್ವರೆಗೆ, ರಾಷ್ಟ್ರೀಯ ರಾಜಧಾನಿಯು ವಿವಿಧ ಆಹಾರಗಳನ್ನು ತಯಾರಿಸುವ ಮೂಲಕ ಬಹಳಷ್ಟು ಜನಪ್ರಿಯತೆಯನ್ನೂ ಪಡೆದಿದೆ. ಇದೀಗ ದೆಹಲಿಯ ಮೋತಿ ಮಹಲ್ (Moti Mahal) ಹೋಟೆಲ್ ಬಿಲ್ ಒಂದು ವೈರಲ್ ಆಗಿದೆ.
ಹೌದು, ದೆಹಲಿ ಆಹಾರ ಪ್ರಿಯರಿಗಾಗಿಯೇ ಇರುವಂತಹ ಒಂದು ಪ್ರಸಿದ್ಧ ಸ್ಥಳ ಎನ್ನಬಹುದು. ಇಲ್ಲಿ ಆಹಾರಕ್ಕೆ ಪ್ರಾಮುಖ್ಯತೆ ನೀಡುವಷ್ಟು ಬೇರೆಲ್ಲೂ ನೀಡಲು ಸಾಧ್ಯವಿಲ್ಲ. ಇದೀಗ ದೆಹಲಿ ಮೋತಿ ಮಹಲ್ನ 1971ರ ಬಿಲ್ ಒಂದು ವೈರಲ್ ಆಗುತ್ತಿದ್ದು ಈ ಬಿಲ್ ಪ್ರಕಾರ ಅಂದಿನ ದಿನದಲ್ಲಿ 2 ಮಸಾಲ ದೋಸೆ ಮತ್ತು 2 ಕಾಫಿಗೆ ಕೇವಲ 2 ರೂಪಾಯಿ ಎಂದು ಬರೆಯಲಾಗಿದೆ.
ಮೋತಿ ಮಹಲ್ ತಿಂಡಿ ಪ್ರಿಯರಿಗೆ ಸ್ವರ್ಗ
ಹಲವಾರು ವರ್ಷಗಳಿಂದ ದೆಹಲಿಯ ಜನಪ್ರಿಯ ಹೋಟೆಲ್ ಆಗಿರುವ ಮೋತಿ ಮಹಲ್ ಎಂದರೆ ಎಲ್ಲರಿಗೂ ಪ್ರೀತಿ. ಅದ್ರಲ್ಲೂ ಈ ರೆಸ್ಟೋರೆಂಟ್ ದಕ್ಷಿಣ ಮತ್ತು ಉತ್ತರ ಭಾರತದ ತಿಂಡಿ ತಿನಿಸುಗಳನ್ನು ತಯಾರಿ ಮಾಡುವ ಮೂಲಕ ಬಹಳಷ್ಟು ಮೆಚ್ಚುಗೆಯನ್ನು ಪಡೆದಿತ್ತು. ತಿಂಡಿಪ್ರಿಯರಿಗಂತೂ ಈ ರೆಸ್ಟೋರೆಂಟ್ ಸ್ವರ್ಗವಿದ್ದಂತೆ.
ಈ ರೆಸ್ಟೋರೆಂಟ್ನಲ್ಲಿ ಕೈಗೆಟಕುವ ಬೆಲೆಯಲ್ಲಿ ತಿಂಡಿಗಳು ಲಭ್ಯವಾಗುತ್ತದೆ. ಇದೀಗ ಈ ರೆಸ್ಟೋರೆಂಟ್ನ 1971 ರ ಬಿಲ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಾಇದೆ.
ಟ್ವಿಟರ್ನಲ್ಲಿ ವೈರಲ್
ಇಂಡಿಯನ್ ಹಿಸ್ಟರಿ ವಿತ್ ವಿಷ್ಣು ಶರ್ಮಾ ಎಂಬವರ ಟ್ವಿಟರ್ ಅಕೌಂಟ್ ಮೂಲಕ ಈ ಬಿಲ್ನ ಫೋಟೋವನ್ನು 2017 ರ ಫೆಬ್ರವರಿಯಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಈಗ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
Moti Mahal restaurant, Delhi's bill receipt of 28.06.1971. 2 Masala Dosa & 2 Coffey, 16 paise tax and Bill is Rs 2.16 only.....! pic.twitter.com/YllnMWQmTD
— indian history with Vishnu Sharma (@indianhistory00) February 1, 2017
ನೋಡುಗರ ಪ್ರತಿಕ್ರಿಯೆ
ಈ ಪೋಸ್ಟ್ ಇದೀಗ ಫುಲ್ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಒಬ್ಬರು ಈ ಮಸಾಲದೋಸೆ ಈಗಲೂ ಸಿಗುತ್ತದೆಯೇ ಎಂದು ಕೇಳಿದ್ದಾರೆ.
ಇನ್ನೊಬ್ಬರು ಪಂಜಾಬಿ ರೆಸ್ಟೋರೆಂಟ್ನಲ್ಲಿ 1971 ರಲ್ಲಿ ಕೇವಲ 2 ರೂಪಾಯಿಗೆ ಇಷ್ಟೆಲ್ಲಾ ತಿಂಡಿಗಳನ್ನು ನೀಡುತ್ತಿತ್ತಾ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: 75 ಸಾವಿರದ ಸ್ಮಾರ್ಟ್ಫೋನ್ ಅನ್ನು ಕೇವಲ 15 ಸಾವಿರ ರೂಪಾಯಿಗೆ ಪಡೆಯಿರಿ! ಯಾವುದು ಆ ಸ್ಮಾರ್ಟ್ಫೋನ್?
ಟ್ವಿಟರ್ ಖಾತೆ
ಇಂಡಿಯನ್ ಹಿಸ್ಟರಿ ವಿತ್ ವಿಷ್ಣು ಶರ್ಮಾ ಟ್ವಿಟರ್ ಖಾತೆ ದೇಶದ ಇತಿಹಾಸದ ಬಗ್ಗೆ ಜನರಿಗೆ ತಿಳಿಸುವಂತಹ ಖಾತೆಯಾಗಿದೆ. ಇದರಲ್ಲಿ ದೇಶದಲ್ಲಾಗುತ್ತಿರುವಂತಹ ಬದಲಾವಣೆಗಳ ಬಗ್ಗೆ, ಅವಶೇಷಗಳ ಬಗ್ಗೆ ಇವುಗಳನ್ನೆಲ್ಲಾ ನೋಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ