HDFC ಕ್ರೆಡಿಟ್, ಡೆಬಿಟ್ ಕಾರ್ಡ್ ಸೇವೆಯಲ್ಲಿ 2 ದಿನಗಳ ಕಾಲ ವ್ಯತ್ಯಯ: ಇಲ್ಲಿದೆ ವಿವರ!
ಕ್ರೆಡಿಟ್ ಕಾರ್ಡ್ ಸಂಬಂಧಿತ ಸೇವೆಗಳು ಫೆಬ್ರವರಿ 4 ರಂದು ನಸುಕಿನ ಜಾವ 2 ರಿಂದ 3 ರವರೆಗೆ ಲಭ್ಯವಿರುವುದಿಲ್ಲ. ಅಂತೆಯೇ, ಡೆಬಿಟ್ ಕಾರ್ಡ್ ಸಂಬಂಧಿತ ಸೇವೆಗಳು ಫೆಬ್ರವರಿ 5 ರಂದು ನಡು ರಾತ್ರಿ 12:30 ರಿಂದ ಬೆಳಗ್ಗೆ 5 ರವರೆಗೆ ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಆ್ಯಪ್ನಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ.
ಹೆಚ್ಡಿಎಫ್ಸಿ ಬ್ಯಾಂಕ್ ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಸೇವೆಗಳಲ್ಲಿ ಎರಡು ದಿನಗಳ ವ್ಯತ್ಯಯವಾಗಲಿದೆ. ನಿಗದಿತ ನಿರ್ವಹಣೆಯಿಂದಾಗಿ ಫೆಬ್ರವರಿ 4 ಮತ್ತು 5 ರಂದು ಆನ್ಲೈನ್ ಡಿಜಿಟಲ್ ವಹಿವಾಟು ಕೆಲ ಗಂಟೆಗಳ ಕಾಲ ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ಈಗಾಗಲೇ ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ. ಖಾಸಗಿ ವಲಯದ ಆಸ್ತಿಗಳಿಂದ ಅತಿದೊಡ್ಡ ಸಾಲ ನೀಡುವ ಎಚ್ಡಿಎಫ್ಸಿ ಬ್ಯಾಂಕ್ ನಿಗದಿತ ನಿರ್ವಹಣಾ ಚಟುವಟಿಕೆಯ ಸಮಯದ ಬಗ್ಗೆ ಮಾಹಿತಿ ನೀಡಿದ್ದು, ಈ ಸಮಯದಲ್ಲಿ ಬ್ಯಾಂಕ್ ಚಟುವಟಿಕೆಗಳ ಸೇವೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.
ಕ್ರೆಡಿಟ್ ಕಾರ್ಡ್ ಸಂಬಂಧಿತ ಸೇವೆಗಳು ಫೆಬ್ರವರಿ 4 ರಂದು ನಸುಕಿನ ಜಾವ 2 ರಿಂದ 3 ರವರೆಗೆ ಲಭ್ಯವಿರುವುದಿಲ್ಲ. ಅಂತೆಯೇ, ಡೆಬಿಟ್ ಕಾರ್ಡ್ ಸಂಬಂಧಿತ ಸೇವೆಗಳು ಫೆಬ್ರವರಿ 5 ರಂದು ನಡು ರಾತ್ರಿ 12:30 ರಿಂದ ಬೆಳಗ್ಗೆ 5 ರವರೆಗೆ ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಆ್ಯಪ್ನಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿದುಬಂದಿದೆ. ಈ ಸಂಬಂಧ ಎಚ್ಡಿಎಫ್ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ನಿಗದಿತ ಚಟುವಟಿಕೆಯ ಬಗ್ಗೆ ತಿಳಿಸಲು ಇಮೇಲ್ ಮತ್ತು ಎಸ್ಎಂಎಸ್ ಕಳುಹಿಸುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ದೇಶದ ಅತಿದೊಡ್ಡ ಖಾಸಗಿ ವಲಯದ ಸಾಲಗಾರರಲ್ಲಿ ಪುನರಾವರ್ತಿತ ಸೇವಾ ನಿಲುಗಡೆಗಳ ನಂತರ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಐಟಿ ಮೂಲಸೌಕರ್ಯದ ವಿಶೇಷ ಲೆಕ್ಕಪರಿಶೋಧನೆ ನಡೆಸಲು ಬಾಹ್ಯ ಐಟಿ ಸಂಸ್ಥೆಯನ್ನು ನೇಮಿಸಿದೆ ಎಂದು ಮಂಗಳವಾರ ಹೆಚ್ಡಿಎಫ್ಸಿ ಬ್ಯಾಂಕ್ ತಿಳಿಸಿದೆ. ವಿಶೇಷ ಐಟಿ ಲೆಕ್ಕಪರಿಶೋಧನೆ ನಡೆಸಲು ಎಚ್ಡಿಎಫ್ಸಿ ಬ್ಯಾಂಕ್ ತನ್ನ ಸಹಕಾರವನ್ನು ಬಾಹ್ಯ ವೃತ್ತಿಪರ ಐಟಿ ಸಂಸ್ಥೆಗೆ ನೀಡುವುದಾಗಿ ಭರವಸೆ ನೀಡಿತು.
ಕಳೆದ ತಿಂಗಳು, ಹೆಚ್ಡಿಎಫ್ಸಿ ಬ್ಯಾಂಕ್ ಸ್ಥಗಿತದಿಂದಾಗಿ ಪುನರಾವರ್ತಿತ ಸೇವಾ ಅಡ್ಡಿ ಸಮಸ್ಯೆಗಳನ್ನು ಪರಿಹರಿಸಲು ಆರ್ಬಿಐಗೆ ವಿವರವಾದ ಕಾರ್ಯಯೋಜನೆಯನ್ನು ಸಲ್ಲಿಸಿತ್ತು. ಈ ಬಗ್ಗೆ ಮೂರು ತಿಂಗಳಲ್ಲಿ ತನ್ನ ತಂತ್ರಜ್ಞಾನ ವೇದಿಕೆಯನ್ನು ಸುಧಾರಿಸುವ ಭರವಸೆ ಇದೆ ಎಂದು ಹೇಳಿದರು. ಆರ್ಬಿಐಗೆ ಒದಗಿಸಲಾದ ಕ್ರಿಯಾ ಯೋಜನೆಯ ಮೇಲೆ ಪ್ರಗತಿ ಸಾಧಿಸಲಾಗುತ್ತಿದೆ ಮತ್ತು ಇದು ಗುಣಮಟ್ಟವನ್ನು ಹೆಚ್ಚಿಸುತ್ತದೆ. ಈ ಹಿನ್ನೆಲೆ ಬ್ಯಾಂಕ್ ಇದನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದೆ ಎಂದು ಹೆಚ್ಡಿಎಫ್ಸಿ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಸಾಲಗಾರನ ಸೇವೆಯ ನಿಲುಗಡೆಗಳ ಬಗ್ಗೆ ಗಂಭೀರವಾದ ದೃಷ್ಟಿಕೋನವನ್ನು ತೆಗೆದುಕೊಂಡ ನಂತರ ಡಿಸೆಂಬರ್ನಲ್ಲಿ, ಹೆಚ್ಡಿಎಫ್ಸಿ ಬ್ಯಾಂಕ್ ಹೊಸ ಡಿಜಿಟಲ್ ಬ್ಯಾಂಕಿಂಗ್ ಉಪಕ್ರಮಗಳನ್ನು ಪ್ರಾರಂಭಿಸುವುದನ್ನು ಮತ್ತು ಹೊಸ ಕ್ರೆಡಿಟ್ ಕಾರ್ಡ್ಗಳನ್ನು ನೀಡುವುದನ್ನು ಆರ್ಬಿಐ ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು. ಅಲ್ಲದೆ, ಈಗಾಗಲೇ ಎರಡು ಬಾರಿ ಬ್ಯಾಂಕ್ಗೆ ದಂಡ ವಿಧಿಸಲಾಗಿದೆ. ನವೆಂಬರ್ 2018 ರಲ್ಲಿ ಒಮ್ಮೆ ಮತ್ತು ಡಿಸೆಂಬರ್ 2019 ರಲ್ಲಿ ಮತ್ತೊಮ್ಮೆ ಆರ್ಬಿಐ ಈ ಕ್ರಮ ಕೈಗೊಂಡಿತ್ತು.
ಎಚ್ಡಿಎಫ್ಸಿ ಬ್ಯಾಂಕ್ ಅನ್ನು ಈ ಹಿಂದೆ ಆರ್ಬಿಐ ವ್ಯವಸ್ಥಿತವಾಗಿ ಪ್ರಮುಖ ಘಟಕವೆಂದು ವರ್ಗೀಕರಿಸಿದೆ. ಇದು ಕ್ರೆಡಿಟ್ ಕಾರ್ಡ್ಗಳ ಅತಿದೊಡ್ಡ ವಿತರಕ ಮತ್ತು ಪಾವತಿ ಪ್ರಕ್ರಿಯೆ ವಿಭಾಗದಲ್ಲಿ ಗಮನಾರ್ಹ ಪಾಲನ್ನು ಹೊಂದಿದೆ. ಕ್ರೆಡಿಟ್ ಕಾರ್ಡ್ಗಳನ್ನು ನೀಡುವ ಅತಿದೊಡ್ಡ ಬ್ಯಾಂಕ್ 2020 ರ ಸೆಪ್ಟೆಂಬರ್ ವೇಳೆಗೆ 1.49 ಕೋಟಿ ಗ್ರಾಹಕರನ್ನು ಹೊಂದಿದೆ. ಇನ್ನು, 3.38 ಕೋಟಿ ಗ್ರಾಹಕರು ಹೆಚ್ಡಿಎಫ್ಸಿ ಡೆಬಿಟ್ ಕಾರ್ಡ್ಗಳನ್ನು ಹೊಂದಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ