ಬರೋಬ್ಬರಿ 455 ಕೋಟಿ ರೂ. ಗೆ ಹರಾಜಾದ ಫೆರಾರಿ ಕಾರು..!

news18
Updated:June 27, 2018, 6:59 PM IST
ಬರೋಬ್ಬರಿ 455 ಕೋಟಿ ರೂ. ಗೆ ಹರಾಜಾದ ಫೆರಾರಿ ಕಾರು..!
news18
Updated: June 27, 2018, 6:59 PM IST
-ನ್ಯೂಸ್ 18 ಕನ್ನಡ

ಕಾರುಗಳೆಂದರೆ ಯಾರಿಗೆ ತಾನೆ ಕ್ರೇಜ್ ಇಲ್ಲ ಹೇಳಿ. ಅದರಲ್ಲೂ ಓಲ್ಡ್ ಮಾಡೆಲ್ ಕಾರುಗಳಿಗೆ ಇತ್ತೀಚೆಗೆ ಸಖತ್ ಡಿಮ್ಯಾಂಡ್ ಕಾಣುತ್ತಿದ್ದು,  ಕಾರುಗಳ ಪ್ರಿಯರು ಹಳೆ ಕಾರುಗಳನ್ನ ದುಬಾರಿ ಮೊತ್ತಕ್ಕೆ ಖರೀದಿಸುತ್ತಿದ್ದಾರೆ. ಹಾಗೆಯೇ ಅಮೆರಿಕದ ಉದ್ಯಮಿಯೊಬ್ಬರು ಬರೋಬ್ಬರಿ 455 ಕೋಟಿ ನೀಡಿ ಫೆರಾರಿ ಕಾರು ಖರೀದಿಸಿ ಅಚ್ಚರಿ ಮೂಡಿಸಿದ್ದಾರೆ.

1962-1964 ರಲ್ಲಿ ಫೆರಾರಿ ವಾಹನ ಸಂಸ್ಥೆ ನಿರ್ಮಿಸಿರುವ ಈ ಕಾರನ್ನು ಇತ್ತೀಚೆಗೆ ಅಮೆರಿಕದಲ್ಲಿ ಹರಾಜಿಗೆ ಇಡಲಾಗಿತ್ತು. ಅಪರೂಪ ಮಾಡೆಲಿನ ಈ ಹಳೆಯ ಫೆರಾರಿ ಕಾರಿಗೆ ಉದ್ಯಮಿಯೊಬ್ಬರು 70 ಮಿಲಿಯನ್ ಡಾಲರ್(455 ಕೋಟಿ)​ ಬೆಲೆ ಕಟ್ಟಿ ತಮ್ಮದಾಗಿಸಿಕೊಂಡಿದ್ದಾರೆ.

1964ರಲ್ಲಿ​ ನಡೆದ ಪ್ರಪಂಚದ ಅತ್ಯಂತ ಪ್ರಸಿದ್ಧ ಮತ್ತು ಐತಿಹಾಸಿಕ ಮೋಟಾರ್ ರೇಸ್​ಗಳಲ್ಲಿ ಒಂದಾಗಿರುವ ಟೂರ್ ಡೆ ಫ್ರಾನ್ಸ್​ನಲ್ಲಿ ಫೆರಾರಿ 250 GTO ಕಾರು ಮೊದಲ ಬಹುಮಾನ ಪಡೆದಿರುವುದು ವಿಶೇಷ. ಸದ್ಯ. 250 GTO ಕಾರು ವಿಶ್ವದ ಅತ್ಯಂತ ದುಬಾರಿ ಕಾರು ಎನಿಸಿಕೊಂಡಿದೆ. ಈ ಹಿಂದೆ ಫೆರಾರಿಯ 250 ಜಿಟಿಒ ಕಾರು ಸುಮಾರು 38 ಮಿಲಿಯನ್ ಡಾಲರ್​ಗೆ ಮಾರಾಟವಾಗಿ ಸಾರ್ವತ್ರಿಕ ದಾಖಲೆ ನಿರ್ಮಿಸಿತ್ತು.

1962-1964 ನಡುವೆ ನಿರ್ಮಿಸಲಾದ ಕೇವಲ 36 ಕಾರುಗಳಲ್ಲಿ ಇದು ಕೂಡ ಒಂದಾಗಿದ್ದು, ಫೆರಾರಿ ನಿರ್ಮಿಸಿದ ಪ್ರಪಂಚದ ಅತ್ಯುತ್ತಮ ನಾಲ್ಕು GTO ಕಾರುಗಳಲ್ಲಿ ಇದು ಸ್ಥಾನ ಪಡೆದಿದೆ.

ಫೆರಾರಿ ಇತಿಹಾಸಕಾರ ಮಾರ್ಸೆಲ್ ಮಾಸಿನಿ ಪ್ರಕಾರ ಫೆರಾರಿಯ ಅಪರೂಪದ GTO 100 ಕಾರು ಕೂಡ ಮುಂದಿನ ವರ್ಷದಲ್ಲಿ ಹರಾಜಿಗೆ ಇಡಲಾಗುತ್ತದೆ. 1990ರ ದಶಕದಲ್ಲಿ ಕೆಟ್ಟು ನಿಂತಿದ್ದ GTO 100 ಕಾರನ್ನು ಬ್ರಿಟನ್ ಮೂಲದ ಡಿ.ಕೆ ಎಂಜಿನಿಯರಿಂಗ್ ಎಂಬ ಸಂಸ್ಥೆ ರಿಪೇರಿ ಮಾಡಿದ್ದು, ಈ ಬ್ಲೂಚಿಪ್ ಸ್ಪೆಷಲಿಸ್ಟ್ ಕಾರು ಕೂಡ ಮಿಲಿಯನ್ ಡಾಲರ್​ಗೆ ಮಾರಾಟವಾಗಲಿದೆಯಂತೆ.

ಗಂಟೆಗೆ 174mph ವೇಗದಲ್ಲಿ ಧೂಳೆಬ್ಬಿಸುವ ಈ ಕಾರು ಮೂರು ಲೀಟರ್ V12 ಇಂಜಿನ್ ಹೊಂದಿದೆ. 300bhp ಪವರ್ ಹೊಂದಿರುವ ಅಪರೂಪದ ಫೆರಾರಿ 250 GTO 6.1 ಸೆಕೆಂಡುಗಳಲ್ಲಿ 0-60 mph ವೇಗದಲ್ಲಿ ಚಲಿಸುತ್ತದೆ ಎಂದು ಡಿಕೆ ಎಂಜಿನಿಯರಿಂಗ್ ಸಂಸ್ಥೆಯ ಮೇಕಾನಿಕ್ ಇಂಜಿನಿಯರ್ ಜೇಮ್ಸ್ ಕಾಟಿಂಗ್ನಮ್ ತಿಳಿಸಿದ್ದಾರೆ.
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ