Viral News: 190ನೇ ವಸಂತಕ್ಕೆ ಕಾಲಿಟ್ಟ ವಿಶ್ವದ ದೀರ್ಘಾಯುಷಿ ಆಮೆ!

Jonathan: ಸೇಂಟ್ ಹೆಲೆನಾ ದ್ವೀಪದ ಪ್ರಮುಖ ತಾರಾ ಆಕರ್ಷಣೆಯಾಗಿರುವ ಈ ಅಮೆ ಈಗಲೂ ಇಲ್ಲಿನ ಪ್ಲಾಂಟೇಷನ್ ಹೌಸ್‍ನಲ್ಲಿ ಅತ್ಯಂತ ಚಟುವಟಿಕೆಯಿಂದ ಓಡಾಡುತ್ತಾ ಎಲ್ಲರ ಪ್ರೀತಿಗೆ ಪಾತ್ರವಾಗಿದೆ

ಜೊನಾಥನ್

ಜೊನಾಥನ್

 • Share this:
  ನಮಗೆಲ್ಲಾ ತಿಳಿದಿರುವ ಹಾಗೇ ಈ ಭೂಮಿ(Earth) ಮೇಲೆ ಅತಿ ಹೆಚ್ಚು ಕಾಲ ಜೀವಿಸುವ ಪ್ರಾಣಿ ಎಂದರೆ ಆಮೆ(Turtle). ಕೂರ್ಮಗಳ ಜೀವಿತಾವಧಿ ಸುಮಾರು 120 ವರ್ಷಗಳು. ಆದರೆ ಇಲ್ಲೊಂದು ಆಮೆ ಬರೋಬರಿ 190 ವರ್ಷ ಜೀವಿಸುವ ಮೂಲಕ ವಿಶ್ವದ ಅತ್ಯಂತ ಹಿರಿಯ ಜೀವಿ(Creature) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ..  ಹೌದು ವಿಶ್ವದ ಅತ್ಯಂತ ಹಳೆಯ ಆಮೆ ಎಂದು ಗುರುತಿಸಲಾಗಿರುವ ಜೊನಾಥನ್ 190 ನೇ ಹುಟ್ಟುಹಬ್ಬವನ್ನು(Birthday) ಆಚರಣೆ ಮಾಡಿಕೊಂಡಿದೆ.. ಬ್ರಿಟಿಷ್ ಸಾಗರೋತ್ತರ ಪ್ರದೇಶವಾದ ಸೇಂಟ್ ಹೆಲೆನಾ(St Helena) ದ್ವೀಪದಲ್ಲಿರುವ (Iceland) ಜೊನಾಥನ್ 119 ನೇ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯಿಂದ ವಿಶ್ವದ ಅತೀ ಹಳೆಯ ಜೀವಂತ ಭೂ ಪ್ರಾಣಿ ಎಂದು ಸಹ ಖ್ಯಾತಿ ಪಡೆದುಕೊಂಡಿದೆ.. ಅಲ್ಲದೆ ಎಲ್ಲಾ ಆಮೆಗಳು, ಟೆರಾಪಿನ್‌ಗಳು ಮತ್ತು ಆಮೆಗಳನ್ನು ಒಳಗೊಂಡಿರುವ ವಿಶ್ವದ ಅತ್ಯಂತ ಹಳೆಯ ಆಮೆ ಎಂಬ ಹೆಗ್ಗಳಿಕೆಗೂ ಜೋನಾಥನ್ ಆಮೆ ಪಾತ್ರವಾಗಿದೆ.

  1832 ರಲ್ಲಿ ಜನಿಸಿದ ಜೊನಾಥನ್

  ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್ ಪ್ರಕಾರ, ಜೊನಾಥನ್ 1832 ರಲ್ಲಿ ಜನಿಸಿದೆ ಎಂದು ನಂಬಲಾಗಿದೆ, 2022 ರಲ್ಲಿ ಅದಕ್ಕೆ 190 ವರ್ಷ ವಯಸ್ಸಾಗಿದೆ. 1882 ರಲ್ಲಿ ಸೇಶೆಲ್ಸ್‌ನಿಂದ ಸೇಂಟ್ ಹೆಲೆನಾಗೆ ಬಂದಾಗ ಆಮೆ ಸಂಪೂರ್ಣವಾಗಿ ಪ್ರಬುದ್ಧವಾಗಿತ್ತು ಮತ್ತು ಅದು ಕನಿಷ್ಠ 50 ವರ್ಷ ವಯಸ್ಸಿನದ್ದಾಯಾಗಿತ್ತು ಎಂಬ ಅಂಶದ ಆಧಾರದ ಮೇಲೆ ಜೊನಾಥನ್ ವಿಶ್ವ ದಾಖಲೆ ಬರೆದಿದೆ.

  ಇದನ್ನೂ ಓದಿ: ಇದಪ್ಪಾ ಮಾನವೀಯತೆ ಅಂದ್ರೆ.. ತಾನೇ ಕಷ್ಟದಲ್ಲಿ ಇದ್ರೂ ಮತ್ತೊಬ್ಬರಿಗೆ ಸಹಾಯ ಮಾಡಿ ಮಾದರಿಯಾದ ಬಾಲಕ

  ಚಳಿಗಾಲದಲ್ಲಿ ಕೊಂಚ ಬಳಲಿರುವ ಜೋನಾಥನ್ ಆಮೆ

  ಸೇಂಟ್ ಹೆಲೆನಾ ದ್ವೀಪದ ಪ್ರಮುಖ ತಾರಾ ಆಕರ್ಷಣೆಯಾಗಿರುವ ಈ ಅಮೆ ಈಗಲೂ ಇಲ್ಲಿನ ಪ್ಲಾಂಟೇಷನ್ ಹೌಸ್‍ನಲ್ಲಿ ಅತ್ಯಂತ ಚಟುವಟಿಕೆಯಿಂದ ಓಡಾಡುತ್ತಾ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಆದ್ರೆ ಸೇಂಟ್ ಹೆಲೆನಾ ಸರ್ಕಾರದ ಪ್ರಕಾರ ಜೊನಾಥನ್ ಚಳಿಗಾಲದ ಕಾರಣ ಬಳಲಿದ್ದು, ಚೆನ್ನಾಗಿ ತಿನ್ನುತ್ತದೆ. ಜೊನಾಥ್ ಜೀವನದ ಬಹುಪಾಲು ಸಮಯವನ್ನು ಸೇಂಟ್ ಹೆಲೆನಾದ ಗವರ್ನರ್ ಅವರ ಮನೆಯಲ್ಲಿ ಕಳೆದಿದ್ದು, ಅಲ್ಲಿ ಅದು ಡೇವಿಡ್, ಎಮ್ಮಾ ಫ್ರೆಡ್ ಎನ್ನುವ ದೈತ್ಯಾಕಾರದ ಆಮೆಗಳೊಮದಿಗೆ ವಾಸಿಸುತ್ತದೆ.


  ವಯಸ್ಸಾದರೂ ಕುಂದದ ಆಸಕ್ತಿ..

  ಇನ್ನು ಜೊನಾಥನ್ ಆಮೇಲೆ 190 ವರ್ಷ ವಯಸ್ಸಾಗಿದ್ದರೂ ಅದರ ಆಸಕ್ತಿಗಳು ಇಂದಿಗೂ ಕುಂದಿಲ್ಲ .ವಯಸ್ಸಾದಂತೆ, ವಾಸನೆ ಗ್ರಹಿಸುವಿಕೆ ಇಲ್ಲ ಮತ್ತು ಕಣ್ಣು ಕಾಣುವುದಿಲ್ಲ. ಆದರೆ ಶ್ರವಣ ಶಕ್ತಿಯು ಅತ್ಯುತ್ತಮವಾಗಿದೆ ಮತ್ತು ಮನುಷ್ಯರೊಟ್ಟಿಗೆ ಒಡನಾಡುವುದಕ್ಕೆ ಇಷ್ಟಪಡುತ್ತದೆ. ಕ್ಯಾಲೋರಿಗಳು, ಜೀವಸತ್ವಗಳು, ಖನಿಜ ಅಂಶಗಳನ್ನು ಹೆಚ್ಚಿಸಲು ಪಶುವೈದ್ಯ ವಿಭಾಗವು ವಾರಕ್ಕೊಮ್ಮೆ ಆಹಾರವನ್ನು ನೀಡುತ್ತಿದೆ ಎಂದು ದಾಖಲೆಗಳ ಸೈಟ್ ಸೂಚಿಸಿದೆ.
  ಎಲೆಕೋಸು, ಸೌತೆಕಾಯಿ, ಕ್ಯಾರೆಟ್, ಸೇಬು, ಬಾಳೆಹಣ್ಣು, ಲೆಟಿಸ್ ಹಾರ್ಟ್ಸ್ ಮತ್ತು ಇತರ ಋತುಮಾನದ ಹಣ್ಣುಗಳು ಅವನ ಮೆಚ್ಚಿನ ಆಹಾರಗಳಲ್ಲಿ ಸೇರಿವೆ.

  ಇದನ್ನೂ ಓದಿ: ಒಡನಾಡಿಯನ್ನು ಕಳೆದುಕೊಂಡ ನವಿಲಿನ ಆಕ್ರಂದನ

  ಹಲವು ಮಹತ್ತರ ಘಟನೆಗಳಿಗೆ ಸಾಕ್ಷಿಯಾಗಿರುವ ಜೋನಾಥನ್ ಆಮೆ

  ಎರಡು ವಿಶ್ವ ಯುದ್ಧಗಳು, ರಷ್ಯಾದ ಕ್ರಾಂತಿ, ಬ್ರಿಟಿಷ್‌ ಸಿಂಹಾಸದ ಏಳು ದೊರೆಗಳು ಮತ್ತು ಯುನೈಟೆಡ್ ಸ್ಟೇಟ್ಸ್‌ನ 39 ಅಧ್ಯಕ್ಷರ ಕಾಲಾವಧಿ. . .  ಎಲ್ಲದಕ್ಕೂ ಜೋನಾಥನ್ ಎಂಬ ಆಮೆ ಸಾಕ್ಷಿಯಾಗಿದೆ .ಮತ್ತೊಂದು ಆಚ್ಚರಿಯ ಸಂಗತಿ ಎಂದರೆ ಕೊಲ್ಕತಾದ ಅಲಿಪೋರ್ ವನ್ಯಧಾಮದಲ್ಲಿ 2006ರಲ್ಲಿ ಅಸುನೀಗಿದ ಅದ್ವೈತ ಎಂಬ ಹೆಸರಿನ ಅಲ್ಡಾಬ್ರಾ ಪ್ರಬೇಧದ ದೈತ್ಯ ಆಮೆಯು ಸಹ ಅತ್ಯಂತ ದೀರ್ಘಾಯುಷಿ ಆಮೆ ಎಂದು ಹೇಳಲಾಗುತ್ತಿದೆ.ಇದು 255 ವರ್ಷಗಳ ಕಾಲ ಬದುಕಿತ್ತು ಎನ್ನಲಾಗಿದೆ. ಆದರೆ, ಇದನ್ನು ದೃಢಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೀಗಾಗಿ ಸದ್ಯಕ್ಕೆ ಜೋನಾಥನ್ ವಿಶ್ವದ ಅತ್ಯಂತ ಪ್ರಾಚೀನ ಜೀವಿ.
  Published by:ranjumbkgowda1 ranjumbkgowda1
  First published: