Making Money: Wardrobe ನೀಟಾಗಿ ಜೋಡಿಸಿಕೊಟ್ಟು ತಿಂಗಳಿಗೆ 50 ಸಾವಿರ ದುಡಿಯುತ್ತಿದ್ದಾಳೆ ಈಕೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂಗ್ಲೆಂಡಿನ ಲೀಸೆಸ್ಟರ್‌ನ ನಿವಾಸಿ ಎಲ್ಲಾ ಮ್ಯಾಕ್‌ಮೋಹನ್ ಎಂಬುವ ಹದಿಹರೆಯದ ಹುಡುಗಿಗೆ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು ಮತ್ತು ಅವುಗಳನ್ನು ಅಲಂಕರಿಸುವುದು ಅಚ್ಚು ಮೆಚ್ಚಿನ ಹವ್ಯಾಸವಾಗಿದೆ

  • Share this:

ಎಲ್ಲಾ ಹೆಸರಿನ 19 ವರ್ಷದ ಬ್ರಿಟಿಷ್ ಹುಡುಗಿ (British Girl) ಅಪರಿಚಿತರ ವಾರ್ಡ್‌ರೋಬ್‌ (Wardrobes) ಗಳನ್ನು ಅಚ್ಚುಕಟ್ಟಾಗಿ ಜೋಡಿಸುವ ಮೂಲಕ ಲಕ್ಷಾಂತರ ಗಳಿಸುತ್ತಿದ್ದಾಳೆ. ಪ್ರತಿ ಎರಡು ವಾರಗಳಿಗೊಮ್ಮೆ ತನ್ನ ಬಳಿ ತಪ್ಪದೆ ಬರುವ 20 ಗ್ರಾಹಕರನ್ನು ಆಕೆ ಹೊಂದಿದ್ದಾಳೆ.ಎಲ್ಲಕ್ಕಿಂತ ಹೆಚ್ಚಾಗಿ ಅಚ್ಚುಕಟ್ಟುತನಕ್ಕೆ ಆದ್ಯತೆ ನೀಡುವ ಅದೆಷ್ಟೋ ಜನರು ನಮ್ಮ ಸುತ್ತಮುತ್ತಲಿದ್ದು, ಗಲೀಜು ಅಥವಾ ಅಸ್ತವ್ಯಸ್ತವಾಗಿರುವ ಪರಿಸರವು ಅವರನ್ನು ಕೂಡಲೇ ಕೆರಳಿಸುತ್ತದೆ. ಆದರೆ ಕ್ಲೋಸೆಟ್‌ಗಳು ಮತ್ತು ವಾರ್ಡ್‌ರೋಬ್‌ಗಳನ್ನು ಜೋಡಿಸುವುದರಿಂದ ಹಣವನ್ನು ಗಳಿಸಬಹುದು ಅನ್ನುವುದನ್ನು ನೀವು ನಂಬುತ್ತೀರಾ? ಹೌದು, ಈಗ ಇಲ್ಲಿ ಬ್ರಿಟೀಷ್ ಹುಡುಗಿಯೊಬ್ಬಳು ಅಪರಿಚಿತರಿಗೆ ತಮ್ಮ(Helping Strangers) ಕ್ಲೋಸೆಟ್‌ಗಳನ್ನು ವ್ಯವಸ್ಥಿತವಾಗಿ ಜೋಡಿಸಲು ಸಹಾಯ ಮಾಡುವ ಮೂಲಕ ಹಣ ಸಂಪಾದಿಸುತ್ತಿದ್ದಾಳೆ . ತನ್ನ ಈ ಕೌಶಲ್ಯದ ಪರಿಣಾಮವಾಗಿ, 19 ವರ್ಷದ ಎಲ್ಲಾ ಮೆಕ್ ಮಹೊನ್ ಪ್ರತಿ ತಿಂಗಳು ಉತ್ತಮ ಆದಾಯವನ್ನು(Good Income) ಗಳಿಸುತ್ತಾಳೆ.


ಅಚ್ಚು ಮೆಚ್ಚಿನ ಹವ್ಯಾಸ
ಇಂಗ್ಲೆಂಡಿನ ಲೀಸೆಸ್ಟರ್‌ನ ನಿವಾಸಿ ಎಲ್ಲಾ ಮ್ಯಾಕ್‌ಮೋಹನ್ ಎಂಬುವ ಹದಿಹರೆಯದ ಹುಡುಗಿಗೆ ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು ಮತ್ತು ಅವುಗಳನ್ನು ಅಲಂಕರಿಸುವುದು ಅಚ್ಚು ಮೆಚ್ಚಿನ ಹವ್ಯಾಸ . ಇದೀಗ ತನ್ನ ದಿನದ 9 ಗಂಟೆಗಳನ್ನು ಬಣ್ಣಗಳನ್ನು ಆಧರಿಸಿ ಬಟ್ಟೆಗಳನ್ನು ಜೋಡಿಸುವುದು ಮತ್ತು ವಾರ್ಡ್‌ರೋಬ್ ಅಲಂಕಾರದಲ್ಲಿ ಕಳೆಯುತ್ತಾಳೆ. ಅಷ್ಟೇ ಅಲ್ಲ, ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವಾಗಲೇ ಮನೆಯ ಡೆಪಾಸಿಟ್‌ಗೆ ಅಗತ್ಯವಿರುವಷ್ಟು ಹಣವನ್ನು ಈ ಕೆಲಸದ ಮೂಲಕವೇ ಸಂಪಾದಿಸಿದ್ದಾಳೆ.


ಪ್ರತಿ ಗಂಟೆಗೆ 200 ರಿಂದ 250 ರೂ
ಫ್ಯಾಷನ್ ಡಿಸೈನರ್ ಆಗಿರುವ ಈಕೆ ತನ್ನ ಮನೆಯನ್ನು ತಾನು ಕಲಿತ ಕೋರ್ಸ್‌ಗೆ ಅನುಗುಣವಾಗಿ ಕಲಾತ್ಮಕ ರೀತಿಯಲ್ಲಿ ಅಲಂಕರಿಸಲು ತುಂಬಾ ಆದ್ಯತೆ ನೀಡುತ್ತಾಳೆ. ಜೀವನದಲ್ಲಿ ವ್ಯವಸ್ಥಿತವಾಗಿರುವುದು ಆಕೆಯ ಗೀಳುಗಳಲ್ಲಿ ಒಂದಾಗಿದ್ದು ಅವಳಿಗೆ ಉತ್ಸಾಹದ ವಿಷಯವಾಗಿದೆ. ಅಚ್ಚುಕಟ್ಟುತನದ ಬಗ್ಗೆ ಅವಳ ವ್ಯಾಮೋಹವನ್ನು ಕಂಡು ಸ್ನೇಹಿತರು ಅವಳನ್ನು ಕೀಟಲೆ ಮಾಡುತ್ತಿದ್ದರು, ಆದರೆ ಈಗವಳು ಅದೇ ಹವ್ಯಾಸದಿಂದಾಗಿ ಲಾಭದಾಯಕ ವ್ಯಾಪಾರವನ್ನು ನಿರ್ಮಿಸಿದ್ದಾಳೆ. ವಾರ್ಡ್‌ರೋಬ್ ಅನ್ನು ಅಂದವಾಗಿ ಜೋಡಿಸಲು ಎಲ್ಲಾ ಸುಮಾರು 3 ಗಂಟೆಗಳನ್ನು ತೆಗೆದುಕೊಳ್ಳುತ್ತಾಳೆ, ಅಲ್ಲದೇ ಪ್ರತಿ ಗಂಟೆಗೆ 200 ರಿಂದ 250 ರೂಪಾಯಿಗಳ ಶುಲ್ಕ ವಿಧಿಸುತ್ತಾಳಂತೆ.


ಇದನ್ನೂ ಓದಿ: Life Hacks: ಪರ್ಫೆಕ್ಟ್ ವಾಡ್ರೋಬ್ ಬೇಕಾ? ಹೀಗೆ ಮಾಡಿ..


ಎಲ್ಲಾಗೆ ಈ ವ್ಯವಹಾರದ ಕಲ್ಪನೆ ಮೂಡಿದ್ದು ಆಕೆ ತನ್ನ ಮತ್ತು ತನ್ನ ಸ್ನೇಹಿತರ ವಾರ್ಡ್‌ರೋಬ್‌ಗಳನ್ನು ಅಲಂಕರಿಸುತ್ತಿದ್ದಾಗ. ಅವಳ ಅಚ್ಚುಕಟ್ಟುತನದ ಕೌಶಲ್ಯವನ್ನು ಗಮನಿಸಿದ ಅವಳ ಪ್ರೀತಿಪಾತ್ರರು ಅವಳ ಈ ಹವ್ಯಾಸವನ್ನು ವ್ಯಾಪಾರವಾಗಿ ಬದಲಾಯಿಸಲು ಒತ್ತಾಯಿಸಿದರು. ಇದರ ಪರಿಣಾಮವೇ ಸಿಂಡ್ರೆಲ್ಲಾ ಕ್ಲೋಸೆಟ್‌ನ ಸ್ಥಾಪನೆ. ಇದರಿಂದಾಗಿ ಎಲ್ಲಾ ಇದೀಗ ವರ್ಷಕ್ಕೆ 6 ಲಕ್ಷಕ್ಕೂ ಹೆಚ್ಚು ಆದಾಯ ಗಳಿಸುತ್ತಿದ್ದಾಳೆ.


ಬೇಡವಾದ ಬಟ್ಟೆ ದಾನ
ಆಕೆ ತನ್ನ ಕೆಲಸದಲ್ಲಿ ಒಂದು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸುತ್ತಾಳೆ . ಇದಕ್ಕಾಗಿ ಅವಳು ಮಾಡುವ ಮೊದಲ ಕೆಲಸವೆಂದರೆ ತನ್ನ ಕ್ಲೈಂಟ್‌ನ ವಾರ್ಡ್‌ರೋಬ್‌ನ್ನು ಅವರ ಜೊತೆಗೂಡಿ ಪರೀಕ್ಷಿಸಿ ಅನಗತ್ಯವಾದದ್ದನ್ನು ಏನಾದರೂ ಅವರು ಸಂಗ್ರಹಿಸುತ್ತಿದ್ದಾರೆಯೇ? ಎಂದು ತಿಳಿದುಕೊಳ್ಳುವುದು . ಅದರ ನಂತರ ಬೇಡವಾದ ಬಟ್ಟೆಗಳನ್ನು ಚೀಲದಲ್ಲಿ ತುಂಬಿ ದಾನ ಮಾಡುವ ಕೆಲಸವನ್ನು ಈಕೆ ಮಾಡುತ್ತಾಳೆ.


ಕೆಲಸದ ನಂತರ ಗ್ರಾಹಕರ ಪ್ರತಿಕ್ರಿಯೆಗಳನ್ನು ನೋಡುವುದು ಆಕೆಗೆ ತುಂಬಾ ಅಚ್ಚು ಮೆಚ್ಚು . ನಾನು ಪ್ರತಿ ಎರಡು ವಾರಗಳಿಗೊಮ್ಮೆ ನನ್ನ 20 ಗ್ರಾಹಕರನ್ನು ನಿಯಮಿತವಾಗಿ ಭೇಟಿ ಮಾಡುತ್ತೇನೆ. ಅಚ್ಚುಕಟ್ಟುತನ ಮನಸ್ಸಿನ ಆರೋಗ್ಯಕ್ಕೆ ಹಿತಕರ. ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿದಾಗ ವಸ್ತುಗಳನ್ನು ಪತ್ತೆ ಮಾಡುವುದು ತುಂಬಾ ಸುಲಭವಾಗಿರುತ್ತದೆ.


ಇದನ್ನೂ ಓದಿ: Money Tips: ನಿಮ್ಮ ಬಳಿ ಹಣ ಹೆಚ್ಚಾಗಬೇಕು ಅಂದ್ರೆ ಬೀರುವಿನಲ್ಲಿ ಈ ವಸ್ತುಗಳು ಇರಬಾರದು


ಅಲ್ಲದೆ ಬಣ್ಣಗಳನ್ನು ವಿಭಾಗಗಳಾಗಿ ವಿಂಗಡಿಸಲಾಗುವುರಿಂದ, ಯಾವುದೇ ಅವ್ಯವಸ್ಥೆ ಇರುವುದಿಲ್ಲ ಎಂದು ಎಲ್ಲಾ ತಿಳಿಸುತ್ತಾಳೆ. ಎಲ್ಲಾ' ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಕೆಲಸಗಳ ವಿಡಿಯೋ ಪೋಸ್ಟ್ ಮಾಡುತ್ತಲೇ ಇರುತ್ತಾಳೆ. ‘ನನಗೆ ಫ್ಯಾಶನ್ ಮತ್ತು ಬಟ್ಟೆಗಳನ್ನು ನೋಡುವುದು ಎರಡೂ ತುಂಬಾ ಇಷ್ಟ , ಹಾಗಾಗಿ ಈ ಕೆಲಸ ನನಗೆ ಖುಷಿಕೊಡುತ್ತದೆ” ಎಂದು ಆಕೆ ಸಂತಸ ವ್ಯಕ್ತ ಪಡಿಸಿದ್ದಾಳೆ

Published by:vanithasanjevani vanithasanjevani
First published: