Scorpions: ರಜೆ ಮುಗಿಸಿ ಹಿಂದಿರುಗಿದ ಮಹಿಳೆಗೆ ಕಾದಿತ್ತು ಶಾಕ್; ಸೂಟ್ಕೇಸ್​ನಲ್ಲಿ ಇದ್ದಿದ್ದು 18 ಚೇಳುಗಳು!

ನ್ಯಾಟರ್ನ್‌ಬ್ಯಾಚ್ ನ ಮಹಿಳೆ ತನ್ನ ರಜೆಯನ್ನು ಮುಗಿಸಿಕೊಂಡು ಶನಿವಾರ ತಮ್ಮ ಮನೆಗೆ ಹಿಂದಿರುಗಿದ ನಂತರ ತನ್ನ ಸೂಟ್ಕೇಸ್ ಅನ್ನು ಒಮ್ಮೆ ತೆರೆದು ನೋಡಿದ್ದಾಳೆ. ಅದರಲ್ಲಿ 18 ಚೇಳುಗಳ ದೊಡ್ಡ ಕುಟುಂಬವನ್ನು ನೋಡಿ ಆಘಾತವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಲ್ಲಿ ಇದ್ದದ್ದು ಒಂದು ತಾಯಿ ಚೇಳು ಮತ್ತು ಅದರ ಪುಟ್ಟ ಪುಟ್ಟ ಶಿಶು ಚೇಳುಗಳು.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೆಲವೊಮ್ಮೆ ನಾವು ಎಲ್ಲೋ ದೂರದ ಕಡಲತೀರಕ್ಕೆ ಪ್ರವಾಸಕ್ಕೆಂದು (Tour) ಹೋಗಿ ಅಲ್ಲಿಂದ ಹಿಂದಿರುಗಿ ಬಂದಾಗ ಸಮುದ್ರ ತೀರದಲ್ಲಿರುವ ಆ ಮರಳು ಮತ್ತು ಅಲ್ಲಿರುವ ಚಿಕ್ಕ ಪುಟ್ಟ ಹುಳ ಹುಪ್ಪಡಿಗಳು ನಮ್ಮ ಕಾಲಿಗೆ ಮತ್ತು ಬಟ್ಟೆಗಳಿಗೆ (Cloths) ಅಂಟಿಕೊಂಡು ಹಾಗೆಯೇ ಬಂದಿರುತ್ತದೆ. ಮತ್ತೆ ಆ ಎಲ್ಲಾ ಬಟ್ಟೆಗಳನ್ನು ನಾವು ಚೆನ್ನಾಗಿ ಒಗೆಯಬೇಕಾಗುತ್ತದೆ. ರಜೆಯ ದಿನಗಳನ್ನು (Holidays) ಹೀಗೆ ಆನಂದವಾಗಿ ಕಳೆದು ಮನೆಗೆ (Home) ಹಿಂದುರಿಗಿದಾಗ ಈ ರೀತಿಯ ಫಜೀತಿಗಳು ನಮ್ಮ ಕಣ್ಮುಂದೆ ಬರುತ್ತವೆ. ಈ ವಿಷಯ ಈಗೇಕೆ ಇಲ್ಲಿ ಹೇಳುತ್ತಿದ್ದೇವೆ ಅಂತ ನೀವು ಯೋಚನೆ ಮಾಡಬಹುದು ಅಲ್ಲವೇ? ಇಲ್ಲಿ ನಾವು ಹೇಳುವ ಒಂದು ಘಟನೆಯ ಬಗ್ಗೆ ನೀವು ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರೆಂಟಿ.

ಮಹಿಳೆಯ ಬ್ಯಾಗ್​ನಲ್ಲಿ ಬರೋಬ್ಬರಿ 18 ಚೇಳುಗಳು

ಆಸ್ಟ್ರಿಯಾದ ಮಹಿಳೆಯೊಬ್ಬಳು ಕ್ರೊಯೇಷಿಯಾದಲ್ಲಿ ರಜೆ ಮುಗಿಸಿ ಹಿಂದಿರುಗಿದ ನಂತರ ತನ್ನ ಸೂಟ್ಕೇಸ್ ತೆರೆದು ನೋಡಿದರೆ ಒಂದಲ್ಲ, ಎರಡಲ್ಲ ಬರೋಬ್ಬರಿ 18 ಚೇಳುಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾಳೆ.

ನ್ಯೂಸ್ ವೀಕ್ ಪ್ರಕಾರ, ನ್ಯಾಟರ್ನ್‌ಬ್ಯಾಚ್ ನ ಮಹಿಳೆ ತನ್ನ ರಜೆಯನ್ನು ಮುಗಿಸಿಕೊಂಡು ಶನಿವಾರ ತಮ್ಮ ಮನೆಗೆ ಹಿಂದಿರುಗಿದ ನಂತರ ತನ್ನ ಸೂಟ್ಕೇಸ್ ಅನ್ನು ಒಮ್ಮೆ ತೆರೆದು ನೋಡಿದ್ದಾಳೆ. ಅದರಲ್ಲಿ 18 ಚೇಳುಗಳ ದೊಡ್ಡ ಕುಟುಂಬವನ್ನು ನೋಡಿ ಆಘಾತವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಲ್ಲಿ ಇದ್ದದ್ದು ಒಂದು ತಾಯಿ ಚೇಳು ಮತ್ತು ಅದರ ಪುಟ್ಟ ಪುಟ್ಟ ಶಿಶು ಚೇಳುಗಳು.ಪ್ರಾಣಿ ರಕ್ಷಣಾ ಸೇವೆಯಾದ ಟಿಯರ್‌ಲೈಫ್ ಗುಸೆಂಟಲ್ ತನ್ನ ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್ ಖಾತೆಯ ಪುಟದಲ್ಲಿ “ಈ ಮಧ್ಯಾಹ್ನ ನ್ಯಾಟರ್ನ್‌ಬ್ಯಾಚ್ ನ ಮಹಿಳೆಯೊಬ್ಬರು ನಮ್ಮನ್ನು ಸಂಪರ್ಕಿಸಿದರು, ಏಕೆಂದರೆ ಅವರು ತಮ್ಮ ರಜೆಯನ್ನು ಮುಗಿಸಿಕೊಂಡು ಬಂದಿದ್ದು, ಅವರ ಲಗೇಜ್ ನಲ್ಲಿ ಈ ಚೇಳುಗಳು ಇರುವುದನ್ನು ನೋಡಿದರು" ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಮರಿ ಚೇಳುಗಳ ರಕ್ಷಣೆ 

"ನಿಖರವಾಗಿ ಹೇಳಬೇಕೆಂದರೆ ಆ ಮರಿಗಳನ್ನು ಹೊಂದಿರುವ ತಾಯಿ ಚೇಳು ಆಕಾರದಲ್ಲಿ ತುಂಬಾನೇ ದೊಡ್ಡದಾಗಿತ್ತು. ನಾವು ಅಲ್ಲಿಗೆ ಹೋಗಿ ಆ ಎಲ್ಲಾ ಚೇಳುಗಳನ್ನು ರಕ್ಷಿಸಿ ತೆಗೆದುಕೊಂಡು ಬಂದೆವು. ಈಗ ಆ ತಾಯಿ ಚೇಳು ಮತ್ತು ಶಿಶು ಚೇಳುಗಳು ಪ್ರಸ್ತುತವಾಗಿ ಲಿನ್ಜ್ ಎನಿಮಲ್ ಶೆಲ್ಟರ್ ನಲ್ಲಿವೆ" ಎಂದು ಸಂಸ್ಥೆ ಹೇಳಿದೆ.

ಇದನ್ನೂ ಓದಿ: Tattoo: ಟ್ಯಾಟುಗಳಿಂದ ಈತನಿಗೆ ಕೆಲಸವೇ ಸಿಗ್ತಿಲ್ಲ! ಬ್ಲ್ಯಾಕ್ ಏಲಿಯನ್ ಬೇಸರ

ಸ್ಥಳೀಯ ಮಾಧ್ಯಮ ಅಪ್ಪರ್ ಆಸ್ಟ್ರಿಯಾ ನ್ಯೂಸ್ ಅನ್ನು ಉಲ್ಲೇಖಿಸಿ, ನ್ಯೂಯಾರ್ಕ್ ಪೋಸ್ಟ್ ಹೇಳಿದ ಪ್ರಕಾರ, ಈಗ ಆ ಚೇಳುಗಳನ್ನು ಪ್ರಾಣಿ ನಿಯಂತ್ರಣ ಸಂಸ್ಥೆಯು ಸುಪರ್ದಿಗೆ ತೆಗೆದು ಕೊಂಡಿದ್ದು, ಅವುಗಳನ್ನು ತಮ್ಮ ಮೂಲ ಸ್ಥಳ ಕ್ರೊಯೇಷಿಯಾಗೆ ಮರಳಿಸಲು ಯೋಜಿಸಿದೆ ಎಂದು ವರದಿ ಮಾಡಿದೆ.

ಪ್ರಾಣಿ ನಿಯಂತ್ರಣ ಸಂಸ್ಥೆಯ ಸಿಬ್ಬಂದಿಯೊಬ್ಬರು "ಚೇಳುಗಳು ಬಹುಶಃ ಆಸ್ಟ್ರಿಯಾದಲ್ಲಿ ಉತ್ತಮವಾಗಿ ಬದುಕಬಹುದು, ಆದರೆ ಅವುಗಳು ಈ ಪ್ರದೇಶಕ್ಕೆ ಸೇರಿಲ್ಲ" ಎಂದು ಹೇಳಿದರು.

ವರದಿಗಳ ಪ್ರಕಾರ, ಇದು ಆಸ್ಟ್ರಿಯಾದಲ್ಲಿ ಕಾಣಿಸಿಕೊಳ್ಳುತ್ತಿರುವ ಕ್ರೊಯೇಷಿಯಾದ ಚೇಳುಗಳ ಮೂರನೇ ಪ್ರಕರಣವಾಗಿದೆ. ಕಳೆದ ತಿಂಗಳು, ಲಿನ್ಜ್ ನ ಮಹಿಳೆಯೊಬ್ಬರು ಕ್ರೊಯೇಷಿಯಾದಲ್ಲಿ ರಜೆಯ ನಂತರ ತನ್ನ ಅಪಾರ್ಟ್ಮೆಂಟ್ ಗೆ ಹಿಂದಿರುಗಿದಾಗ ಇದೇ ರೀತಿಯ ಚೇಳುಗಳನ್ನು ಕಂಡುಕೊಂಡಿದ್ದರು.

ಕ್ರೊಯೇಷಿಯಾದಲ್ಲಿ ಕಂಡು ಬರುವ ಚೇಳುಗಳು ಸ್ವಲ್ಪ ವಿಭಿನ್ನವೇಕೆ

ಈ ಚೇಳುಗಳು ಅರಾಚ್ನಿಡಾ ವರ್ಗದ ಭಾಗವಾಗಿವೆ ಮತ್ತು ಜೇಡಗಳು, ಹುಳಗಳು ಮತ್ತು ಉಣ್ಣೆಗಳೊಂದಿಗೆ ನಿಕಟ ಸಂಬಂಧ ಹೊಂದಿವೆ. ಚೇಳುಗಳಲ್ಲಿ ಸುಮಾರು 2,000 ಪ್ರಭೇದಗಳಿವೆ, ಆದರೆ ಅವುಗಳಲ್ಲಿ ಕೇವಲ 30 ರಿಂದ 40 ಮಾತ್ರ ಮನುಷ್ಯರನ್ನು ಕೊಲ್ಲುವಷ್ಟು ಬಲವಾದ ವಿಷವನ್ನು ಹೊಂದಿರುತ್ತವೆ ಎಂದು ಹೇಳಲಾಗಿದೆ.

ಇದನ್ನೂ ಓದಿ:  Rs 20 Lakhs Fish Price: 20 ಲಕ್ಷಕ್ಕೆ ಮಾರಾಟವಾದ ಮೀನು! ಏನಿದರ ಮಸಲತ್ತು?

ಕ್ರೊಯೇಷಿಯಾದಲ್ಲಿ ಕಂಡು ಬರುವ ಈ ಚೇಳುಗಳು ಸ್ವಲ್ಪ ವಿಭಿನ್ನವೇ ಅಂತ ಹೇಳಬಹುದು. ಇವುಗಳಲ್ಲಿ ಯಾವುದೂ ಮಾರಣಾಂತಿಕವಲ್ಲ. ಆದಾಗ್ಯೂ, ಇವುಗಳು ಕುಟುಕಿದರೆ ನೋವು, ಊತ, ತುರಿಕೆ, ಕೆಂಪಾಗುವಿಕೆ ಮತ್ತು ಸುಡುವ ಸಂವೇದನೆಯನ್ನು ಉಂಟು ಮಾಡಬಹುದು ಎಂದು ಔಟ್ಲೆಟ್ ವರದಿ ಮಾಡಿದೆ.
Published by:Ashwini Prabhu
First published: