ನೇತ್ರದಾನ (Eye donation) ಮಹಾದಾನ ಎಂಬ ಮಾತಿದೆ. ಸಾಯುವ ಸಮಯದಲ್ಲಿ ಕಣ್ಣು ದಾನ ಮಾಡಿದ್ರೆ ತುಂಬಾ ಒಳಿತು ಎಂಬ ಮಾತುಗಳನ್ನು ಕೇಳಿರುತ್ತೇವೆ. ಅದರಿಂದ ಇಬ್ಬರಿಗಾದ್ರೂ ಹೆಲ್ಪ್ಫುಲ್ ಆಗುತ್ತೆ. ಡಾ. ರಾಜ್ಕುಮಾರ್ರವರು (Dr. Rajkumar) ಸತ್ತಾಗ ಅವರ ಕಣ್ಣುಗಳನ್ನು ದಾನ ಮಾಡಿದ್ರು. ಹೀಗೆ ಅದೆಷ್ಟೋ ಜನರು ಈ ರೀತಿಯಾಗಿ ಮಾಡಿರುತ್ತಾರೆ. ಸತ್ತ ಮೇಲೆ ನೇತ್ರದಾನ ಮಾಡುತ್ತೇವೆ ಅಂತ ಬದುಕಿದ್ದಾಗಲೇ ನಾವು ಆಸ್ಪತ್ರೆಯಲ್ಲಿ ಲೆಟರ್ನ್ನು ಕೊಟ್ಟಿರಬೇಕು. ಅಥವಾ ನಮ್ಮ ಪೋಷಕರ (Parents) ಬಳಿ ಆದ್ರೂ ಹೇಳಿರಬೇಕು. ಕೇವಲ ನೇತ್ರವಲ್ಲದೆ ದೇಹದ ಅಂಗಾಂಗಗಳನ್ನು ಕೂಡ ದಾನ ಮಾಡಬಹುದು.
ಒಂದು ವೇಳೆ ಅಪಾಘಾತದಲ್ಲಿ ಸಡನ್ ಆಗಿ ಸತ್ತರೆ, ದೇಹದ ಅಂಗಾಂಗಗಳನ್ನು ಯಾವ ರೀತಿಯಾಗಿ ದಾನ ಮಾಡಬಹುದು ಅಂತಲೂ ಹಲವಾರು ಬಾರಿ ವೈದ್ಯರು ತಿಳಿಸಿರುತ್ತಾರೆ. ಅಥವಾ ನಮ್ಮ ಪೋಷಕರು ಅದನ್ನು ದಾನ ಮಾಡಬಹುದಾಗಿದೆ. ಸ್ಯಾಂಡಲ್ವುಡ್ ನಟನಾದ ಸಂಚಾರಿ ವಿಜಯ್ ಕೂಡ ತೀರಿದಾಗ ತಮ್ಮ ದೇಹದ ಒಂದಷ್ಟು ಅಂಗಾಂಗಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು.
ಇದೀಗ ಇಂತಹದ್ದೇ ಒಂದು ಸಾಲಿಗ ಒಬ್ಬರ ಉದಾಹರಣೆ ಸೇರ್ಪಡೆಯಾಗ್ತಾ ಇದೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಮೆದುಳು ನಿಷ್ಕ್ರಯಗೊಂಡಿದ್ದ ಬಾಲಕನ ಅಂಗಾಂಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ 5 ಜನರ ಬಾಳಿಗೆ ಬೆಳಕಾಗಿದ್ದಾರೆ.
ಮೈಸೂರಿನ ರಾಜಕುಮಾರ್ ರಸ್ತೆಯಲ್ಲಿ 17 ವರ್ಷದ ಆಕಾಶ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸಿಟಿ ಸ್ಕ್ಯಾನ್ ಮಾಡಿದಾಗ ಮೆದುಳಿಗೆ ಗಂಭೀರವಾಗಿ ಪೆಟ್ಟು ಬಿದ್ದುರುವುದು ತಿಳಿಯಿತು. ನಂತರ ಅವರನ್ನು ಅಪೊಲೋ ಬಿಜಿಎಸ್ ಆಸ್ಪತ್ರಗೆ ಕರೆದುಕೊಂಡು ಹೋಗಲಾಯಿತು.
ಇದನ್ನೂ ಓದಿ: ನಿಮಗೆ ಫ್ರೆಂಡ್ಸ್ ಇದ್ರೆ ಜಾಸ್ತಿ ವರ್ಷ ಬದುಕುತ್ತೀರಂತೆ, ನಿಮಗೆ ಗೊತ್ತಿರದ ಇಂಟ್ರೆಸ್ಟಿಂಗ್ ಫ್ಯಾಕ್ಟ್ ಇಲ್ಲಿದೆ!
ಅಪೊಲೋ ಬಿಜಿಎಸ್ನಲ್ಲಿ ಚಿಕಿತ್ಸೆ ನೀಡುತ್ತಿರುವಾಗಲೇ, ಫೆ. 28 ರಾತ್ರಿ 11:30 ರ ಸುಮಾರಿಗೆ ಮೆದಳು ನಿಷ್ಕ್ರಿಯಗೊಂಡಿದೆ ಎಂದು ಡಾಕ್ಟರ್ ಹೇಳಿದ್ರು. ಇನ್ನು ಆಕಾಶ ಅಪಘಾತಕ್ಕೂ ಮುನ್ನ ಆರೋಗ್ಯವಾಗಿದ್ದ ಹಿನ್ನೆಲೆ ಮತ್ತು ಮಾನವ ಅಂಗಾಗ ಕಸಿ ಕಾಯ್ದೆ ಅನುಸಾರ ಆಕಾಶ ಅವರನ್ನು ಎರಡು ಬಾರಿ ಪರಿಶೀಲಿಸಿದ ಬಳಿಕ ಆಕಾಶ ಅಂಗಾಂಗ ಪಡೆದುಕೊಳ್ಳಬಹುದು ಎಂದು ಸಾಬೀತಾಗಿದೆ. ಅಂಗಾಂಗ ದಾನದ ಬಗ್ಗೆ ಆಕಾಶ ಕುಟುಂಬಕ್ಕೆ ವೈದ್ಯರು ಮನವರಿಕೆ ಮಾಡಿದ ಬಳಿಕ ದಾನ ಮಾಡಲು ಒಪ್ಪಿಕೊಂಡಿದ್ದಾರೆ.
ಬುಧವಾರ (ಮಾರ್ಚ್ 1) ರಂದು ನಸುಕಿನ ಜಾವ 3:45ಕ್ಕೆ ಆಕಾಶ ಅವರ ಲಿವರ್, ಕಿಡ್ನಿ, ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ಆಕಾಶ್ ದಾನ ಮಾಡಿದ್ದಾರೆ. ಆಕಾಶ್ ಅವರ ಲಿವರ್ ಮತ್ತು ಎಡ ಮೂತ್ರಪಿಂಡವನ್ನು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದ್ದು, ಬಲ ಮೂತ್ರಪಿಂಡವನ್ನು ಮೈಸೂರಿನ ಕ್ಲಿಯರ್‌ಮೆಡಿ ರೇಡಿಯಂಟ್ ಆಸ್ಪತ್ರೆಯಲ್ಲಿ ಕಸಿ ಮಾಡಲಾಗಿದೆ.
ಹೃದಯ ಕವಾಟಗಳನ್ನು ಬೆಂಗಳೂರಿನ ಎನ್‌ಎಚ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೈಸೂರಿನ ಕೆಆರ್ ಆಸ್ಪತ್ರೆಗೆ ಕಾರ್ನಿಯಾಗಳನ್ನು ದಾನ ಮಾಡಲಾಗಿದೆ ಎಂದು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಗಳ ಉಪಾಧ್ಯಕ್ಷ ಮತ್ತು ಘಟಕದ ಮುಖ್ಯಸ್ಥ ಎನ್‌ಜಿ ಭರತೀಶ ರೆಡ್ಡಿ ಮಾಹಿತಿ ನೀಡಿದರು.
ಒಟ್ಟಿನಲ್ಲಿ ಸಾವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ. ಸತ್ತ ನಂತರವೂ ನಾವು ಇನ್ನೊಬ್ಬರಿಗೆ ಪ್ರಯೋಜನಕ್ಕೆ ಆಗಬೇಕು ಅಂದ್ರೆ ನಿಜವಾಗಿಯೂ ಇಂತಹ ದಾನಗಳನ್ನು ಮಾಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ