Video: ಅಪ್ಪನ 25 ಕೋಟಿ ಬೆಲೆ ಬಾಳುವ ಕಾರನ್ನು ನಜ್ಜುಗುಜ್ಜಾಗಿಸಿದ 17 ವರ್ಷದ ಮಗ!; ಆಗಿದ್ದೇನು ಗೊತ್ತಾ?
ಕೇಜ್ ಗಿಲಿಯನ್ ತಂದೆ ಟಿಮ್ ಗಿಲಿಯನ್ ಟೆಕ್ಸಾಸ್ನ ಖಾಸಗಿ ಷೇರುದಾರರಾಗಿದ್ದಾರೆ. ಅವರ ಬಳಿ ಸಾಕಷ್ಟು ದುಬಾರಿ ಕಾರುಗಳಿವೆ. ಮೆಕ್ಲಾರೆನ್ ಸೆನ್ನಾ, ಬುಗಾಟ್ಟಿ, ಚಿರೋನ್, ಫೆರಾರಿ ಲಾಫೆರಾರಿ, ರೋಲ್ಸ್ ರಾಯ್ಸ್ ಹಾಗೂ ಲ್ಯಾಂಬೊರ್ಗಿನಿ ಉರುಸ್ ಕಾರುಗಳ ಒಡೆಯರಾಗಿದ್ದಾರೆ.
news18-kannada Updated:November 24, 2020, 2:21 PM IST

ಪಗಾನಿ ಹ್ಯುರಾ ರೋಡ್ಸ್ಟರ್ ಹೈಪರ್
- News18 Kannada
- Last Updated: November 24, 2020, 2:21 PM IST
ದುಬಾರಿ ಕಾರು ರಸ್ತೆ ಮಧ್ಯದಲ್ಲಿ ಓಡಾಡುತ್ತಿರುವುದನ್ನು ಕಂಡರೆ ಕಣ್ಣು ಮಿಟುಕಿಸದೆ ನೋಡುತ್ತೇವೆ. ಇಂತಹ ಕಾರನ್ನು ಯಾವಾಗ ತೆಗೆದುಕೊಳ್ಳುವುದು ಎಂದು ಮನಸಲ್ಲಿ ಅಂದುಕೊಳ್ಳುತ್ತಿರುತ್ತೇವೆ. ಆದರೆ ಇಲ್ಲೊಬ್ಬ 17 ವರ್ಷ ಪ್ರಾಯದ ಹುಡುಗ ತನ್ನ ತಂದೆಯ 25 ಕೋಟಿ ಕಾರನ್ನೇ ನಜ್ಜುಗುಜ್ಜಾಗಿಸಿದ್ದಾನೆ.
ಯ್ಯೂಟೂಬರ್ ಆಗಿರುವ ಕೇಜ್ ಗಿಲಿಯನ್ ತಂದೆಗೆ ಸೇರಿದ ಪಗಾನಿ ಹ್ಯುರಾ ರೋಡ್ಸ್ಟರ್ ಹೈಪರ್ ಕಾರನ್ನು ಚಲಾಯಿಸಿದ್ದಾನೆ. ಆದರೆ ಚಲಾವಣೆ ವೇಳೆ ಎನಾಯಿತೊ ಗೊತ್ತಿಲ್ಲ. ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನ ಮುಂಭಾಗವು ನಜ್ಜುಗುಜ್ಜಾಗಿದ್ದು, ಕಾರಿನ ಡೋರು ರಸ್ತೆಯಲ್ಲಿ ಬಿದ್ದಿದೆ. ವೀಲ್ ಹಾಗೂ ಚಾಸಿಸ್ ಸಂಪೂರ್ಣವಾಗಿ ಹೊರಬಂದಿದೆ. ಕೇಜ್ ಗಿಲಿಯನ್ ತಂದೆ ಟಿಮ್ ಗಿಲಿಯನ್ ಟೆಕ್ಸಾಸ್ನ ಖಾಸಗಿ ಷೇರುದಾರರಾಗಿದ್ದಾರೆ. ಅವರ ಬಳಿ ಸಾಕಷ್ಟು ದುಬಾರಿ ಕಾರುಗಳಿವೆ. ಮೆಕ್ಲಾರೆನ್ ಸೆನ್ನಾ, ಬುಗಾಟ್ಟಿ, ಚಿರೋನ್, ಫೆರಾರಿ ಲಾಫೆರಾರಿ, ರೋಲ್ಸ್ ರಾಯ್ಸ್ ಹಾಗೂ ಲ್ಯಾಂಬೊರ್ಗಿನಿ ಉರುಸ್ ಕಾರುಗಳ ಒಡೆಯರಾಗಿದ್ದಾರೆ.
ಇನ್ನು ಅಪಘಾತದಲ್ಲಿ ಕೇಜ್ ಗಿಲಿಯನ್ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ ಅಪಘಾತ ಹೇಗೆ ಸಂಭವಿಸಿತು ಎಂಬದುದರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಕೇಜ್ ಗಿಲಿಯನ್ ಯ್ಯೂಟೂಬರ್ ಆಗಿದ್ದು, ಕೆಲವು ವಿಡಿಯೋಗಳನ್ನು ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.
ಯ್ಯೂಟೂಬರ್ ಆಗಿರುವ ಕೇಜ್ ಗಿಲಿಯನ್ ತಂದೆಗೆ ಸೇರಿದ ಪಗಾನಿ ಹ್ಯುರಾ ರೋಡ್ಸ್ಟರ್ ಹೈಪರ್ ಕಾರನ್ನು ಚಲಾಯಿಸಿದ್ದಾನೆ. ಆದರೆ ಚಲಾವಣೆ ವೇಳೆ ಎನಾಯಿತೊ ಗೊತ್ತಿಲ್ಲ. ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನ ಮುಂಭಾಗವು ನಜ್ಜುಗುಜ್ಜಾಗಿದ್ದು, ಕಾರಿನ ಡೋರು ರಸ್ತೆಯಲ್ಲಿ ಬಿದ್ದಿದೆ. ವೀಲ್ ಹಾಗೂ ಚಾಸಿಸ್ ಸಂಪೂರ್ಣವಾಗಿ ಹೊರಬಂದಿದೆ.
ಇನ್ನು ಅಪಘಾತದಲ್ಲಿ ಕೇಜ್ ಗಿಲಿಯನ್ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಆದರೆ ಅಪಘಾತ ಹೇಗೆ ಸಂಭವಿಸಿತು ಎಂಬದುದರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಕೇಜ್ ಗಿಲಿಯನ್ ಯ್ಯೂಟೂಬರ್ ಆಗಿದ್ದು, ಕೆಲವು ವಿಡಿಯೋಗಳನ್ನು ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.