ಗರ್ಭಪಾತ (Abortion) ಮಾಡುವುದು ಕಾನೂನು ದೃಷ್ಟಿಯಲ್ಲಿ ಅಪರಾಧ. ಆದರೆ ಪ್ರಿಯಕರನಿಂದ ಗರ್ಭ ಧರಿಸಿದ ಬಾಲಕಿಯೊಬ್ಬಳು (Girl) ತಾನೇ ಗರ್ಭಪಾತ ಮಾಡಲು ಮುಂದಾಗಿದ್ದಾಳೆ. ಯೂಟ್ಯೂಬ್ (Youtube) ಸಹಾಯ ಪಡೆದುಕೊಂಡು ಗರ್ಭಪಾತಕ್ಕೆ ಯತ್ನಿಸಿದ್ದಾಳೆ. ಸದ್ಯ ಬಾಲಕಿಗೆ ಖಾಸಗಿ ಆಸ್ಪತ್ರೆಗೆ (Hospital) ದಾಖಲಿಸಿದ್ದು, ಚಿಕಿತ್ಸೆ (Treatment) ನೀಡಲಾಗುತ್ತಿದೆ. ಆಕೆಯ ಆರೋಗ್ಯ ಸುಧಾರಿಸಿದ್ದು, ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು (Doctor) ತಿಳಿಸಿದ್ದಾರೆ.
ಮಹಾರಾಷ್ಟ್ರ ನಾರ್ಖೇಡ್ ತಾಲೂಕಿನ ನಾಗಪುರದಲ್ಲಿ ಈ ಘಟನೆ ನಡೆದಿದೆ. ನಾಗ್ಪುರ ನಾರ್ಖೇಡ್ ತಾಲೂಕಿನ 17 ವರ್ಷದ ಯುವತಿಗೆ ಎರಡು ವರ್ಷಗಳ ಹಿಂದೆ ಅದೇ ಪ್ರದೇಶದ 27 ವರ್ಷದ ಯುವಕನ ಪರಿಚಯವಾಗಿತ್ತು. ಇಬ್ಬರ ನಡುವೆ ಪ್ರೀತಿ ಚಿಗುರಿತು. ಕಳೆದ ವರ್ಷ ಯುವಕನಿಗೆ ನಾಗ್ಪುರದ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿತ್ತು. ಈ ಕ್ರಮದಲ್ಲಿ ಅವರು ಐಎಂಡಿಸಿ ಪ್ರದೇಶದ ಕೊಠಡಿಯಲ್ಲಿ ವಾಸವಾಗಿದ್ದರು. ಕೆಲ ದಿನಗಳ ಹಿಂದೆ ಯುವತಿ ನಾರ್ಖೇಡ್ನಿಂದ ನಾಗ್ಪುರಕ್ಕೆ ತೆರಳಿ ಯುವಕನ ಕೊಠಡಿಯಲ್ಲಿ ತಂಗಿದ್ದಳು. ಈ ವೇಳೆ ಇಬ್ಬರು ದೈಹಿಕವಾಗಿ ಒಂದಾಗಿದ್ದಾರೆ.
ಬಾಲಕಿ ಕಳೆದ ಕೆಲವು ದಿನಗಳಿಂದ ವಾಕರಿಕೆ ಮತ್ತು ವಾಂತಿಯಿಂದ ಬಳಲುತ್ತಿದ್ದಳು. ಅದೇ ಸಮಯದಲ್ಲಿ ತಾನು ಗರ್ಭಿಣಿ ಎಂದು ತಿಳಿದು ಗಾಬರಿಯಾದಳು. ಇದನ್ನು ತನ್ನ ಗೆಳೆಯನಿಗೆ ತಿಳಿಸಿದಳು. ಔಷಧ ಸೇವಿಸಿದರೆ ಗರ್ಭಪಾತ ಮಾಡುವುದಾಗಿ ಯುವಕ ಹೇಳಿದ್ದಾನೆ. ಮಾತ್ರವಲ್ಲದೆ, ಮನೆಯವರಿಗೆ ಗೊತ್ತಾಗದಂತಿರಲು ಮುಂದಾದರು.
ಇದನ್ನೂ ಓದಿ: Bumper offer: ಪ್ಲಾಸ್ಟಿಕ್ ತ್ಯಾಜ್ಯ ನೀಡಿದ್ರೆ ಸಾಕು ಇಲ್ಲಿ ಉಚಿತವಾಗಿ ವಡಾ ಪಾವ್ ಕೊಡ್ತಾರೆ!
ಮನೆಯವರಿಗೆ ಒಂದು ವೇಳೆ ಈ ವಿಚಾರ ಗೊತ್ತಾದರೆ ಸಮಸ್ಯೆಯಾಗುತ್ತದೆ ಎಂದು ಹೆದರಿದ ಬಾಲಕಿ ಯೂಟ್ಯೂಬ್ ನಲ್ಲಿ ಗರ್ಭಪಾತ ಮಾಡುವುದು ಹೇಗೆ? ಎಂದು ಹುಡುಕಾಟ ಆರಂಭಿಸಿದ್ದಾಳೆ. ಔಷಧಿ ಸೇವಿಸಿದರೆ ಗರ್ಭಪಾತವಾಗುತ್ತದೆ ಎಂದು ವಿಡಿಯೋದಲ್ಲಿ ಹೇಳಿದನ್ನು ಕೇಳಿ ಅದೇ ರೀತಿಯ ಕ್ರಮಕ್ಕೆ ಬಾಲಕಿ ಮುಂದಾಗಿದ್ದಾಳೆ. ವಿಡಿಯೋದಲ್ಲಿ ಏನು ಹೇಳಿದ್ದಾರೋ ಅದನ್ನೇ ಪಾಲಿಸಿದ್ದಾಳೆ. ಹಾಗಾಗಿ ಒಂದು ದಿನ ತಾಯಿ ಮನೆಯಲ್ಲಿದ್ದ ವೇಳೆ ತನ್ನ ಕೋಣೆಯಲ್ಲಿ ಔಷಧ ತೆಗೆದುಕೊಳ್ಳುತ್ತಾಳೆ.
ಇದನ್ನೂ ಓದಿ: Viral News: ನಗಲು ಸಾಧ್ಯವಾಗದ ಈ ಮಹಿಳೆಯ ಪರಿಸ್ಥಿತಿ ಕೇಳಿದ್ರೆ ಅಳು ಬರುತ್ತದೆ!
ಆದರೆ ಬಾಲಕಿ ಆರಿಸಿಕೊಂಡ ಈ ತಂತ್ರದಿಂದ ವಿಕೋಪಕ್ಕೆ ಹೋಗಿದ್ದಾಳೆ. ಬಾಲಕಿಯ ಆರೋಗ್ಯ ಹದಗೆಟ್ಟಿದೆ. ಆಕೆ ತಾನು ತೆಗೆದುಕೊಂಡ ಔಷಧದಿಂದ ನರಳಾಟವಾಡಿದ್ದಾಳೆ. ಆದರೆ ಆಕೆಯ ಪರಿಸ್ಥಿತಿಯನ್ನು ಕಂಡು ಅನುಮಾನ ಬಂದ ತಾಯಿ ವಿಚಾರಿಸುತ್ತಾರೆ. ಕೊನೆಗೆ ತನಗೂ ಹಾಗೂ ಆಕೆಯ ಪ್ರಿಯಕರ ನಡುವೆ ಸಂಬಂಧವಿದೆ ಎಂಬುದನ್ನು ತಾಯಿಯೊಂದಿಗೆ ಮನಬಿಚ್ಚಿ ಹೇಳುತ್ತಾಳೆ. ಅಷ್ಟು ಮಾತ್ರವಲ್ಲದೆ. ಆತನೊಂದಿಗೆ ದೈಹಿಕ ಸಂಪರ್ಕ ನಡೆದಿದೆ ಎಂಬ ವಿಚಾರವನ್ನು ತಾಯಿಗೆ ತಿಳಿಸುತ್ತಾಳೆ. ಇದರಿಂದಾಗಿ ನಿಮಗೆಲ್ಲ ಬೇಸರವಾಗುತ್ತದೆ ಎಂಬ ಕಾರಣಕ್ಕೆ ಗರ್ಭಪಾತ ಔಷಧ ತೆಗೆದುಕೊಂಡಿರುವ ವಿಚಾರವನ್ನು ತಾಯಿ ಬಳಿ ಹೇಳುತ್ತಾಳೆ.
ಆದರೆ ತಾಯಿ ಇದನ್ನು ತಿಳಿದು ಮಗಳ ಜೀವ ಉಳಿಸಲು ಯತ್ನಿಸುತ್ತಾರೆ. ಕೂಡಲೇ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಲಕಿಯ ಕುಟುಂಬಸ್ಥರ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕಿಯ ಪ್ರಿಯಕರನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗರ್ಭಪಾತ ಕಾನೂನು ದೃಷ್ಟಿಯಲ್ಲಿ ಅಪರಾಧ
ಗರ್ಭಪಾತ ಮಾಡುವಂತಿಲ್ಲ. ಗರ್ಭಪಾತ ಕಾನೂನು ದೃಷ್ಟಿಯಲ್ಲಿ ಅಪರಾಧ. ಆದರೆ ಪ್ರಾಯಕ್ಕೆ ಬಾರದ ಬಾಲಕಿಯರು ಇಂತಹ ಮೋಸಕ್ಕೆ ಸಿಲುಕಿ ಕೊನೆಗೆ ಸಂಕಷ್ಟ ಎದುರಿಸಿವುದು ಕಷ್ಟವೇ ಸರಿ. ಯಾವುದೋ ಆಸೆಗೆ ಬಲಿಯಾಗುವ ಹೆಣ್ಣು ಮಕ್ಕಳು ಈ ಬಗ್ಗೆ ಜಾಗೃತೆ ವಹಿಸುವುದು ಸೂಕ್ತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ