16 Feet Oarfish: ಚಿಲಿಯಲ್ಲಿ ಬಲೆಗೆ ಬಿತ್ತು 16 ಅಡಿ ಉದ್ದದ ಮೀನು! ಇದು ಭೂಕಂಪದ ಸೂಚನೆ

ಚಿಲಿಯ ಬಂದರಿನಲ್ಲಿ ಮೀನುಗಾರರಿಗೆ 16 ಅಡಿ ಎತ್ತರದ ಮೀನು ಸಿಕ್ಕಿದ್ದು. ಈ ಮೀನನ್ನು 'ಹೈರಿಂಗ್ಸ್ ರಾಜ' ಎಂದು ಕರೆಯುವರು. ಅಲ್ಲದೆ ದಂತಕಥೆಗಳ ಪ್ರಕಾರ ದೈತ್ಯಾಕಾರದ ಈ ಮೀನನ್ನು ಅಪಾಯದ ಮುನ್ಸೂಚನೆ ಎಂದು ನಂಬಲಾಗಿದೆ.

16 ಅಡಿ ಉದ್ದದ ಓರ್ಫಿಸ್

16 ಅಡಿ ಉದ್ದದ ಓರ್ಫಿಸ್

  • Share this:
ಭೂಮಿಯು ಅನೇಕ ರೀತಿಯಾದ ವಿಸ್ಮಯಕಾರಿ ವಿಚಾರಗಳಿಗೆ ಸಾಕ್ಷಿಯಾಗಿದೆ. ಪ್ರಕೃತಿಯ ಸೊಬಗುಗಳಿಗೆ, ಆಶ್ಚರ್ಯಗಳಿಗೆ ಯಾರೂ ಸರಿಸಾಟಿಯಿಲ್ಲ. ಗಾಳಿಯಲ್ಲಿ, ಆಕಾಶದಲ್ಲಿ, ನೆಲದಲ್ಲಿ ಏನಾದರೂ ಒಂದು ರೀತಿಯಾದ ಅಚ್ಚರಿ ಪ್ರತಿದಿನ ನಡೆಯುತ್ತಲೇ ಇರುತ್ತದೆ. ನೀರಿನೊಳಗೆ ಅಂತು ಇನ್ನೂ ಜನರ ಅರಿವಿಗೆ ಬಾರದಂತಹ ಅನೇಕ ಅದ್ಭುತವಾದ ವಿಚಾರಗಳಿವೆ. ಅಂತಹ ಅಚ್ಚರಿಯ ವಿಚಾರಗಳಲ್ಲಿ ವಿಸ್ಮಯಕಾರಿಯಾದ ಜಲಜೀವಿಗಳು ಕೂಡ ಒಂದಾಗಿದೆ. ಇತ್ತೀಚಿಗೆ ಚಿಲಿಯ (Chile) ಬಂದರಿನಲ್ಲಿ 16 ಅಡಿ (16Feet) ಉದ್ದದ ಮೀನೊಂದು ಸಿಕ್ಕಿರುವ ವಿಡೀಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ವೈರಲ್ (Viral) ಆಗಿದೆ. ಈ ಮೀನನ್ನು ಓರ್ಫಿಸ್ (Oarfish) ಎಂದು ಕರೆಯುತ್ತಾರೆ. ಇದು ಭೂಕಂಪದ (Earthquake) ಸಂಕೇತ ಎಂದು ಕೆಲವು ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಬೆಳ್ಳಿಯ ಬಣ್ಣದ ಮೀನು

ಇತ್ತೀಚಿಗೆ ಚಿಲಿಯ ಬಂದರಿನಲ್ಲಿ ಮೀನುಗಾರರ ಗುಂಪಿಗೆ ದೈತ್ಯಾಕಾರದ ಮೀನೊಂದು ಸಿಕ್ಕಿದೆ. ಈ ಮೀನನ್ನು ಓರ್ಪಿಸ್ ಫಿಸ್ ಎಂದು ಗುರುತಿಸಲಾಗಿದೆ. ಅಲ್ಲದೆ ಈ ಮೀನನ್ನು 'ಹೆರಿಂಗ್ಸ್ ರಾಜ' ಎಂದು ಕರೆಯುತ್ತಾರೆ. ಈ ಮೀನು 16 ಅಡಿ ಉದ್ದವಿದ್ದು ಬೆಳ್ಳಿಯ ಬಣ್ಣವನ್ನು ಹೊಂದಿದೆ. ಅಪರೂಪದ ಜೀವಿಯಾದ ಈ ಮೀನು ಆಳ ಸಮುದ್ರದಲ್ಲಿ ಜೀವಿಸುತ್ತಿದೆ.

ಇದನ್ನೂ ನೋಡಿ: Naneghat Reverse Fall: ಭಾರತದಲ್ಲಿದೆ ಹಿಮ್ಮುಖವಾಗಿ ಚಲಿಸುವ ಜಲಪಾತ! ವಿಡಿಯೋ ನೋಡಿ

ಮೀನು ನೋಡಿ ಭಯಗೊಂಡ ಜನ

ಮೀನನ್ನು ನೋಡಲು ಗುಂಪು ಗುಂಪಾಗಿ ಜನ ಚಿಲಿಯ ಬಂದರಿಗೆ ಧಾವಿಸಿದ್ದು. ಮೀನನ್ನು ನೋಡಿ ಅನೇಕ ಜನ ಅಚ್ಚರಿಗೊಂಡರು ಮತ್ತು ಇನ್ನೂ ಕೆಲವರು ಭಯಭೀತರಾದರು. ಈ ಮೀನನ್ನು ಕ್ರೇನ್ ನ ಮೂಲಕ ಮೇಲಕ್ಕೆ ಎತ್ತಲಾಯಿತು. ಬೆನ್ನಿನ ಮೇಲೆ ಮೂಳೆಗಳನ್ನು ಹೊಂದಿದೆ ಮತ್ತು ಮುಖದ ತುದಿಯು ಚೂಪಾಗಿದ್ದು ಬಾಗಿದೆ.



ಅಪಾಯದ ಸಂಕೇತ

ಮೀನನ್ನು ನೋಡಿ ಭಯಭೀತರಾದ ಜನ. ಇದು ಅಪಾಯದ ಸಂಕೇತ ಎಂದರು. ನಂಬಿಕೆಯ ಪ್ರಕಾರ ಈ ರೀತಿಯಾದ ಜೀವಿಗಳು ಕಾಣಿಸಿಕೊಂಡರೆ ಅದು ಭೂಕಂಪ ಮತ್ತು ಸುನಾಮಿಯಂತಹ ಅಪಾಯಗಳ ಮುನ್ಸೂಚನೆಯಾಗಿದೆ. ಆದರೆ ಇದಕ್ಕೆ ಯಾವುದೇ ರೀತಿಯಾದ ವೈಜ್ಞಾನಿಕವಾದ ಕಾರಣ ಜನರ ಬಳಿಯಿಲ್ಲ.

ಟಿಕ್ ಟಾಕ್ ನಲ್ಲಿ ವೈರಲ್ ಆದ ವೀಡಿಯೋ

ಈ ವೀಡಿಯೋವನ್ನು ಹಲವಾರು ಸೋಶಿಯಲ್ ಮೀಡಿಯಾದ ಫ್ಲಾಟ್ ಫಾರ್ಮ್ ಗಳಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ವೀಡೀಯೋವನ್ನು ಮೊದಲು ಟಿಕ್ ಟಾಕ್ನಲ್ಲಿ ಹಂಚಿಕೊಳ್ಳಲಾಗಿದ್ದು. ಇದು ಟಿಕ್ ಟಾಕ್ನಲ್ಲಿ ಮೊದಲಿಗೆ 10 ಮಿಲಿಯನ್ ಗಳಷ್ಟು ವಿಕ್ಷಣೆಯನ್ನು ಪಡೆದಿದೆ. ನಂತರದಲ್ಲಿ ಬೇರೆ ಬೇರೆ ಸೊಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗಿದೆ. ವೀಡಿಯೋ ನೋಡಿದ ಜನರಲ್ಲಿ ಕೆಲವರು "ಇದೊಂದು ಅದ್ಭುತವಾದ ಜೀವಿಯಾಗಿದೆ" ಎಂದು ಪ್ರತಿಕ್ರಿಯಿಸಿದರೆ ಇನ್ನೂ ಕೆಲವರು " ಇದು ಅಪಾಯದ ಸಂಕೇತ ಎಂದು" ಕಮೆಂಟ್ ಮಾಡಿದ್ದಾರೆ.

ಈ ಮೀನು ಏಕೆ ಮೇಲೆ ಬರುತ್ತದೆ

ಓರ್ಫಿಸ್ ಮೀನು  ಆಳ ಸಮುದ್ರದಲ್ಲಿ ಜೀವಿಸುತ್ತದೆ. ನೀರಿನ ಮೇಲ್ಭಾಗದಲ್ಲಿ ಈ ಮೀನು ಕಾಣಸಿಗುವುದು ಬಹಳ ಕಡಿಮೆ. ಈ ಮೀನು ಸಂತಾನೋತ್ಪತ್ತಿಯ ಸಂದರ್ಭದಲ್ಲಿ, ಅನಾರೋಗ್ಯದ ಸಮಯದಲ್ಲಿ ಮತ್ತು ಆಳಸಮುದ್ರದಲ್ಲಿ ಏನಾದರೂ ಅಪಾಯವಿದ್ದಾಗ ಮೇಲಕ್ಕೆ ಬರುತ್ತದೆ ಎನ್ನಲಾಗುತ್ತದೆ.

ಇದನ್ನೂ ನೋಡಿ: Sports Anchor: ಕ್ರೀಡಾ ಆ್ಯಂಕರ್​​​ಗಳ ಸೌಂದರ್ಯಕ್ಕೆ ಮನಸೋತು ಅವರನ್ನೇ ಮದುವೆಯಾದ 5 ಕ್ರಿಕೆಟಿಗರಿವರು!

ಇಂತಹ ಜೀವಿಗಳು ನೋಡಲು ಸಿಗುವುದೇ ಅಪರೂಪದ ವಿಷಯವಾಗಿದೆ. ಏಪ್ರಿಲ್ ತಿಂಗಳಲ್ಲಿ ಓರ್ಫಿಸ್ ಮೀನು ನ್ಯೂಜಿಲ್ಯಾಂಡ್ ನ ಕಡಲತೀರದಲ್ಲಿ ಕಾಣಸಿಕ್ಕಿತ್ತು. ಆಳ ಸಮುದ್ರದಲ್ಲಿರುವ ಈ ಮೀನುಗಳು ಅಪರೂಪಕ್ಕೆ ನೀರಿನ ಮೇಲ್ಭಾಗಕ್ಕೆ ಬರುತ್ತದೆ.
Published by:Nalini Nalini
First published: