ಬಿಸಿಲಿನ ಧಗೆ ಎಲ್ಲೆಲ್ಲೂ ದಿನದಿಂದ ದಿನ ಹೆಚ್ಚಾಗುತ್ತಲಿದೆ ಹೊರತು ಕಡಿಮೆಯೇನು ಆಗ್ತಿಲ್ಲ. ವರ್ಷದಿಂದ ವರ್ಷಕ್ಕೆ ಜಾಗತಿಕ ತಾಪಮಾನ (Weather) ಏರಿಕೆ ಆಗುತ್ತಲಿದೆ. ಇದರ ಪರಿಣಾಮವಾಗಿ ನಮ್ಮ ದೇಶದ ಜೀವನದಿಗಳಾದ ಹಿಮ ನದಿಗಳ ಮೇಲೂ ಕೂಡ ಆಗುತ್ತಿದೆ. ಹಿಂದೂ ಕುಶ್-ಹಿಮಾಲಯ (Himalaya) ಪ್ರದೇಶದಿಂದ ಹತ್ತು ಪ್ರಮುಖ ನದಿಗಳು ಹರಿಯುತ್ತವೆ ಮತ್ತು ಈ ನೀರಿನ ನದಿಗಳು ಶತಕೋಟಿಗೂ ಹೆಚ್ಚು ಜನರಿಗೆ ನೀರಿನ ಅಗತ್ಯವನ್ನು ಪೂರೈಕೆ ಮಾಡುವುದಲ್ಲದೇ, ಬಹುತೇಕ ಅಲ್ಲಿರುವ ಎಲ್ಲರಿಗೂ ನೆಲೆಯಾಗಿದೆ. ಹವಾಮಾನ ಬದಲಾವಣೆಯು ಈ ಪ್ರದೇಶದಲ್ಲಿನ ನೀರು ಮತ್ತು ಶಕ್ತಿಯ ಸರಬರಾಜನ್ನು ತೀವ್ರವಾಗಿ ಎದುರಿಸುವುದರಿಂದ ಏಷ್ಯಾದ (Asia) 16 ದೇಶಗಳಲ್ಲಿ ವಾಸಿಸುವ ಜನರು ಗಂಭೀರ ಅಪಾಯದಲ್ಲಿದ್ದಾರೆ. ಹಿಂದೂಕುಶ್-ಹಿಮಾಲಯದ ನೀರಿನ ವ್ಯವಸ್ಥೆಗೆ ಹವಾಮಾನ-ಸಂಬಂಧಿತ ಸಮಸ್ಯೆಗಳು ಏಷ್ಯಾದಲ್ಲಿ ಪ್ರಮುಖವಾಗಿ ತಲೆದೋರುತ್ತಿವೆ.
ಹಿಂದೂಕುಶ್-ಹಿಮಾಲಯ ಜಲಾನಯನ ಪ್ರದೇಶವು ಹವಾಮಾನ ಬದಲಾವಣೆಯಿಂದ ಹಾನಿಗೊಳಗಾಗುವುದರಿಂದ ಭಾರತ ಸೇರಿದಂತೆ ಇನ್ನು ಅನೇಕ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಭೀಕರ ಸ್ಥಿತಿಯನ್ನು ಸೃಷ್ಟಿಸಬಹುದಾದ ಪ್ರಾದೇಶಿಕ ನೀರಿನ ಹರಿವನ್ನು ರಕ್ಷಿಸಲು ಇಲ್ಲಿಗೆ ಒಂದು ಸಂಘಟಿತ ಕ್ರಮದ ಅಗತ್ಯವಿದೆ.
ವಾರ್ಷಿಕ ಜಿಡಿಪಿ ಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹಿಮನದಿಗಳು
ಹಿಂದೂ ಕುಶ್-ಹಿಮಾಲಯ ಪ್ರದೇಶದಿಂದ 10 ಪ್ರಮುಖ ನದಿಗಳು ಹರಿಯುತ್ತವೆ ಮತ್ತು ಇಲ್ಲಿನ ನೀರಿನ ಟವರ್ ಗಳು ಒಂದು ಶತಕೋಟಿ ಜನರಿಗೆ ನೆಲೆಯಾಗಿವೆ. ಇದರೊಂದಿಗೆ ವಾರ್ಷಿಕ GDP ಯಲ್ಲಿ $4.3 ಟ್ರಿಲಿಯನ್ (43 ಲಕ್ಷ ಕೋಟಿ ರೂ. ) ಗಳಷ್ಟು ಉತ್ಪನ್ನಗಳನ್ನು ಉತ್ಪಾದಿಸುತ್ತವೆ.
10 ನದಿಗಳಲ್ಲಿ ಗಂಗಾ ಮತ್ತು ಬ್ರಹ್ಮಪುತ್ರ ಭಾರತ ಮತ್ತು ಬಾಂಗ್ಲಾದೇಶಕ್ಕೆ ಹರಿಯುತ್ತದೆ, ಚೀನಾದ ಯಾಂಗ್ಟ್ಜಿ ಮತ್ತು ಹಳದಿ ನದಿಗಳು, ಹಾಗೆಯೇ ಮೆಕಾಂಗ್ ಮತ್ತು ಸಲ್ವೀನ್‌ನಂತಹ ಗಡಿಯಾಚೆಗಿನ ಜಲಮಾರ್ಗಗಳನ್ನು ಕೂಡ ನಾವಿಲ್ಲಿ ನೋಡಬಹುದು.
ಇದರ ಕುರಿತು ಚೀನಾ ದೇಶದ ವಾಟರ್ ರಿಸ್ಕ್ ಥಿಂಕ್ ಟ್ಯಾಂಕ್ ಸಂಶೋಧನೆ ಏನ್ ಹೇಳ್ತಿದೆ?
ಚೀನಾ ವಾಟರ್ ರಿಸ್ಕ್ ಥಿಂಕ್ ಟ್ಯಾಂಕ್ ನೇತೃತ್ವದ ಸಂಶೋಧನೆಯು ಗ್ಲೇಶಿಯಲ್ ಕರಗುವಿಕೆ ಮತ್ತು ವಿಪರೀತ ಹವಾಮಾನದಂತಹ ಹವಾಮಾನ ಬದಲಾವಣೆಯ ಪರಿಣಾಮಗಳು ಈಗಾಗಲೇ ಈ ಪ್ರದೇಶಕ್ಕೆ "ಗಂಭೀರ ಅಪಾಯಗಳನ್ನು" ತಂದೊಡ್ಡುತ್ತಿವೆ ಎಂದು ಹೇಳಿದೆ.
"ನೀರಿನ-ತೀವ್ರ ಶಕ್ತಿಯ ಮೂಲಸೌಕರ್ಯದ ನಿರ್ಮಾಣವು ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತಿದೆ ಮತ್ತು ಎಲ್ಲಾ ನದಿಗಳು ನೀರಿನ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ನಾವು ಕೂಡಲೇ ಸಮಸ್ಯೆಗೆ ಸ್ಪಂದಿಸದೇ ಇದ್ದರೆ ಈ ಸಮಸ್ಯೆಯು ಮತ್ತಷ್ಟು ಉಲ್ಬಣಗೊಳ್ಳುತ್ತದೆ" ಎಂದು ಥಿಂಕ್ ಟ್ಯಾಂಕ್ ಸಂಸ್ಥೆಯು ಇದನ್ನು ಹೈಲೈಟ್ ಮಾಡಿ ಹೇಳಿದೆ.
ವಿದ್ಯುತ್ ಅವಶ್ಯಕತೆಗಳಿಗಾಗಿ ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬನೆ
ವಿದ್ಯುತ್ ಅವಶ್ಯಕತೆಗಳಿಗಾಗಿ ಪಳೆಯುಳಿಕೆ ಇಂಧನಗಳ ಮೇಲೆ ಇನ್ನೂ ಹೆಚ್ಚು ಅವಲಂಬಿತವಾಗಿರುವ 16 ದೇಶಗಳಲ್ಲಿ ಮುಕ್ಕಾಲು ಭಾಗದಷ್ಟು ಜಲವಿದ್ಯುತ್ ಮತ್ತು 44% ಕಲ್ಲಿದ್ದಲಿನ ಶಕ್ತಿಯ ಬೆಂಬಲ ಮತ್ತು ಸಹಾಯಕ್ಕಾಗಿ ಈ ನದಿಗಳು ಸಾಕಷ್ಟು ಹೆಸರುವಾಸಿಯಾಗಿವೆ.
ಇವು 300 GW ಗಿಂತ ಹೆಚ್ಚು - ಜಪಾನ್ ದೇಶಕ್ಕೆ ವಿದ್ಯುತ್ ಪೂರೈಕೆ ನೀಡಲು ಹೆಚ್ಚಿನ ನೀರಿನ ಅಪಾಯಗಳನ್ನು ಎದುರಿಸುತ್ತಿರುವ ಪ್ರದೇಶಗಳಲ್ಲಿ ನೆಲೆಗೊಂಡಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಮತ್ತೊಂದೆಡೆ, ಚೀನಾದಲ್ಲಿನ ಯಾಂಗ್ಟ್ಜಿ ನದಿಯ ಜಲಾನಯನ ಪ್ರದೇಶವು ದೇಶದ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗವನ್ನು ಮತ್ತು ಅದರ ಶಕ್ತಿ ಸಾಮರ್ಥ್ಯದ ಸುಮಾರು 15% ರಷ್ಟನ್ನು ಬೆಂಬಲಿಸುತ್ತದೆ. ಕಳೆದ ವರ್ಷ ಈ ಪ್ರದೇಶವು ಈಗಾಗಲೇ ದಾಖಲೆಯ ದೀರ್ಘ ಬರವನ್ನು ಅನುಭವಿಸಿದೆ, ಜಲವಿದ್ಯುತ್ ಉತ್ಪಾದನೆಯು ಜಾಗತಿಕ ಪೂರೈಕೆ ಸರಪಳಿಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತಿದೆ.
ದೇಶಗಳು ಒತ್ತಡದಲ್ಲಿವೆ
ಹವಾಮಾನ ಅಪಾಯಗಳು ಹೆಚ್ಚಾದಂತೆ, ವಿದ್ಯುತ್ ಶಕ್ತಿ ಮತ್ತು ನೀರಿನ ಸುರಕ್ಷತೆಯ "ಡವ್‌ಟೇಲಿಂಗ್" ಅನ್ನು ಖಾತ್ರಿಪಡಿಸುವ ನೀತಿಗಳನ್ನು ರೂಪಿಸಲು ದೇಶಗಳು ಒತ್ತಡದಲ್ಲಿವೆ ಎಂದು ಸಂಶೋಧಕರು ಗಮನಿಸಿದ್ದಾರೆ.
ಹಿಮಾಲಯದ ಹಿಮನದಿಗಳ ಕರಗುವಿಕೆಯು ಮುಂದುವರಿದರೆ ಒಂದು ಬಿಲಿಯನ್‌ಗಿಂತಲೂ ಹೆಚ್ಚು ಜನರು ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕಳೆದ ವರ್ಷ ನಡೆಸಿದ ಒಂದು ಅಧ್ಯಯನವು ಇದರ ಬಗ್ಗೆ ಸೂಚಿಸಿದೆ.
IIT-ಇಂದೋರ್‌ನ ತಂಡವೊಂದು ನಡೆಸಿದ ಅಧ್ಯಯನವು ಹಿಮನದಿಗಳು ಮತ್ತು ಹಿಮ ಕರಗುವಿಕೆಯು ಈ ಪ್ರದೇಶದಲ್ಲಿ ಪ್ರಮುಖ ಅಂಶಗಳಾಗಿವೆ ಮತ್ತು ಇದು ಶತಮಾನದುದ್ದಕ್ಕೂ ಮುಂದುವರಿದರೆ, ಮುಂದೊಂದು ದಿನ ನೀರಿನ ಪೂರೈಕೆಯೇ ಕಂಪ್ಲೀಟ್ ಆಗಿ ನಿಲ್ಲಿಸಬಹುದು ಎಂದು ಸೂಚನೆ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ