• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Tigers Killed: ಹುಲಿಗಳ ಮಾರಣಹೋಮ ನಡೆದ ವರ್ಷ ಅದು, ಭಾರತದಲ್ಲಿ1,579 ಹುಲಿಗಳನ್ನು ಬ್ರಿಟಿಷರು ಕೊಂದಿದ್ಯಾಕೆ?

Tigers Killed: ಹುಲಿಗಳ ಮಾರಣಹೋಮ ನಡೆದ ವರ್ಷ ಅದು, ಭಾರತದಲ್ಲಿ1,579 ಹುಲಿಗಳನ್ನು ಬ್ರಿಟಿಷರು ಕೊಂದಿದ್ಯಾಕೆ?

 Tiger

Tiger

ಈ ಪ್ರಾಣಿಗಳನ್ನು ಅಪಾಯಕಾರಿ ಪ್ರಾಣಿಗಳು ಎಂಬುದಾಗಿ ಘೋಷಿಸಿ ಮನರಂಜನೆಗಾಗಿ ನಾಶಗೈದಿದ್ದಾರೆ ಎಂಬುದಾಗಿ ಡಾಕ್ಯುಮೆಂಟ್‌ನಲ್ಲಿ ಉಲ್ಲೇಖಿಸಿದ್ದಾರೆ.

  • Share this:

ಬ್ರಿಟಿಷ್ ಸರಕಾರದ (British Government) ಕಾಲದಲ್ಲೇ ಅತ್ಯಧಿಕವಾಗಿ ಹುಲಿಗಳನ್ನು ಬೇಟೆಯಾಡಲಾಗುತ್ತಿತ್ತು ಎಂಬ ಅಂಕಿ ಅಂಶಗಳ ವಿವರಗಳನ್ನು ಐಎಫ್‌ಎಸ್ (IFS officer) ಅಧಿಕಾರಿ ಪ್ರವೀಣ್ ಕಾಸ್ವಾನ್(Praveen Kaswan ) ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಅಪಾಯಕಾರಿ (Dangerous Animals) ಪ್ರಾಣಿಗಳೆಂದು ತಾವೇ ಘೋಷಿಸಿ ಹುಲಿ ಹತ್ಯೆಗಳನ್ನು ನಡೆಸಿದ್ದು, ಬರೇ ಬೇಟೆಯಾಡುವ ಉದ್ದೇಶಕ್ಕಾಗಿ ಬ್ರಿಟಿಷರು ನಡೆಸಿರುವ ಹುಲಿಗಳ ಮಾರಣ ಹೋಮ ಎಂತಹವರನ್ನೂ ಬೆಚ್ಚಿಬೀಳಿಸುವಂತಹ (Shocked) ವಿವರಗಳನ್ನು ನೀಡಿದೆ.


1879ರ ಸಮಯ
ಅರಣ್ಯ ಹಾಗೂ ಪ್ರಾಣಿ ಸಂಕುಲಗಳ ಮಾಹಿತಿಗಳನ್ನು ಹಂಚಿಕೊಳ್ಳುವಲ್ಲಿ ಹೆಸರುವಾಸಿಯಾಗಿರುವ IFS ಅಧಿಕಾರಿ ಪ್ರವೀಣ್ ಕಾಸ್ವಾನ್ ಇದೀಗ ಅತಿ ಮಹತ್ವದ ಟ್ವೀಟ್ ಒಂದನ್ನು ಮಾಡಿದ್ದಾರೆ. “1879ರ ಸಮಯದಲ್ಲಿ ಭಾರತದಲ್ಲಿ ಬ್ರಿಟಿಷರು ಹತ್ಯೆಗೈದ ಅಪಾಯಕಾರಿ ಪ್ರಾಣಿಗಳು” ಎಂಬ ಪೋಸ್ಟ್ ಒಂದನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು ಬ್ರಿಟಿಷ್ ಸರಕಾರವು 1878ರಲ್ಲಿ ಅಧಿಕೃತವಾಗಿ 1579 ಹುಲಿಗಳನ್ನು ಕೊಂದಿದ್ದು ಇದು ಒಂದು ವರ್ಷದ ಅಂಕಿ ಅಂಶವನ್ನು ತೋರಿಸುತ್ತಿದೆ.


ಮನರಂಜನೆಗಾಗಿ ಹುಲಿಗಳ ಹತ್ಯೆಗೈದ ಬ್ರಿಟಿಷರು:


ಈ ಪ್ರಾಣಿಗಳನ್ನು ಅಪಾಯಕಾರಿ ಪ್ರಾಣಿಗಳು ಎಂಬುದಾಗಿ ಘೋಷಿಸಿ ಮನರಂಜನೆಗಾಗಿ ನಾಶಗೈದಿದ್ದಾರೆ ಎಂಬುದಾಗಿ ಡಾಕ್ಯುಮೆಂಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಂಕಿ ಅಂಶಗಳ ಪ್ರಕಾರ ಬಂಗಾಳದಲ್ಲಿ ಅತಿ ಹೆಚ್ಚಿನ ಹುಲಿಗಳನ್ನು ಹತ್ಯೆಗೈಯ್ಯಲಾಗಿದ್ದು (426) ಅಸ್ಸಾಂನಲ್ಲಿ 375 ಹುಲಿಗಳನ್ನು ಹತ್ಯೆಗೈಯ್ಯಲಾಗಿದೆ ಎಂಬುದಾಗಿ ಪ್ರವೀಣ್ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: ಬಂಡೀಪುರದಲ್ಲಿ Tiger ಗಣತಿ: ಇದೇ ಮೊದಲ ಬಾರಿಗೆ ಎಂಸ್ಟ್ರೈಪ್ಸ್ ಆ್ಯಪ್ ಬಳಕೆ


ಭಾರತದಲ್ಲಿ ಬೇಟೆಯಾಡಲಾದ ಹುಲಿಗಳು:


ಡಾಕ್ಯುಮೆಂಟ್‌ನಲ್ಲಿ ಹತ್ಯೆಗೈದ ಹುಲಿಗಳ ಸಂಖ್ಯೆ ಮಾತ್ರವಲ್ಲದೆ ಆನೆ, ಚಿರತೆ, ತೋಳ ಇತ್ಯಾದಿ ಪ್ರಾಣಿಗಳನ್ನು ಒಳಗೊಂಡಿದೆ. ಪ್ರವೀಣ್ ಟ್ವೀಟ್‌ಗೆ ಪ್ರತ್ಯುತ್ತರವಾಗಿ ರೂಪಕ್ ಚಟ್ಟೋಪಾಧ್ಯಾಯ ಮರುಟ್ವೀಟ್ ಮಾಡಿದ್ದು, ರೆನಾಲ್ಡ್ ತಿಲ್ಸನ್ಸ್ ಅಂಕಿ ಅಂಶದ ಪ್ರಕಾರ 1875 ಹಾಗೂ 1925ರ ನಡುವೆ 80,000 ಹುಲಿಗಳನ್ನು ಭಾರತದಲ್ಲಿ ಬೇಟೆಯಾಡಲಾಗಿದೆ. 1947ರಲ್ಲಿ ಭಾರತದಲ್ಲಿ 40,000 ಹುಲಿಗಳಿದ್ದವು. ಇಂದು 2,900 ಹುಲಿಗಳಿವೆ ಎಂದು ತಿಳಿಸಿದ್ದಾರೆ.


ಹುಲಿ ಸಂಕುಲ ಸಂರಕ್ಷಿಸುವ ಪ್ರಾಜೆಕ್ಟ್ ಟೈಗರ್:


ಕೇಂದ್ರ ಪರಿಸರ ಸಚಿವಾಲಯದ ಪ್ರಕಾರ 2018ರಲ್ಲಿ ದೇಶ-ಮಟ್ಟದ ನಾಲ್ಕನೇ ಸುತ್ತಿನ ವಿಶ್ಲೇಷಣೆಯನ್ನು ನಡೆಸಲಾಗಿದ್ದು ಈ ಸಮಯದಲ್ಲಿ ತೋರಿಸಲಾದ ಅಂದಾಜು ಹುಲಿಗಳ ಜನಸಂಖ್ಯೆಯು 2,967 ಎಂಬುದಾಗಿದೆ. 2014ರ ಹುಲಿಗಳ ಸಂಖ್ಯೆಯು 2,226 ಆಗಿದ್ದು ಈ ಲೆಕ್ಕಾಚಾರವನ್ನು ಜೊತೆಯಾಗಿ ಹೊಂದಿಸಿದಾಗ ಇದು ಕೊಂಚ ಸುಧಾರಣೆಯನ್ನು ತೋರಿಸಿದೆ.ಪ್ರಾಜೆಕ್ಟ್ ಟೈಗರ್ ಮೂಲಕ ಹುಲಿ ಸಂಕುಲಗಳನ್ನು ಸಂರಕ್ಷಿಸುವ ಸುದೀರ್ಘ ಇತಿಹಾಸದಿಂದಾಗಿ ಭಾರತದಲ್ಲಿ ಇದೀಗ ಜಾಗತಿಕ ಹುಲಿಗಳ ಸಂಖ್ಯೆಯು 75%ದಷ್ಟಿದೆ ಎಂದು ಸಚಿವಾಲಯವು ಆಗಸ್ಟ್ 2021ರಲ್ಲಿ ಸಂಸತ್ತಿಗೆ ತಿಳಿಸಿದೆ. 19 ರಾಜ್ಯಗಳು ಹುಲಿ ಸಂರಕ್ಷಣೆಗಾಗಿ ಹಣವನ್ನು ಪಡೆದಿವೆ. 18 ರಾಜ್ಯಗಳಲ್ಲಿ ವ್ಯಾಪಿಸಿರುವ ಹುಲಿ ಸಂರಕ್ಷಿತ ಪ್ರದೇಶಗಳು ಭಾರತದ ಭೌಗೋಳಿಕ ಪ್ರದೇಶದ 2.24% ಹೊಂದಿವೆ.


ಯಾವ ಯಾವ ರಾಜ್ಯಗಳಲ್ಲಿ ಹುಲಿಗಳ ಮರಣ ಪ್ರಮಾಣ ಹೇಗಿದೆ?


ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA), 2012 ರಿಂದ ಹುಲಿ ಹತ್ಯೆಯ ಸಾರ್ವಜನಿಕ ದಾಖಲೆಯನ್ನು ನಿರ್ವಹಿಸುತ್ತಿದೆ, 2021ರಲ್ಲಿ ಒಟ್ಟು 126 ಹುಲಿ ಹತ್ಯೆಗಳನ್ನು ಪಟ್ಟಿ ಮಾಡಿದೆ. 2020ರಲ್ಲಿ ದಾಖಲಿಸಲಾದ 106 ಹುಲಿಗಳ ಸಾವಿನ 20%ಕ್ಕಿಂತ ಸ್ವಲ್ಪ ಹೆಚ್ಚಳವನ್ನು ಸೂಚಿಸುತ್ತದೆ.


ಇದನ್ನೂ ಓದಿ: Tiger Death: ಈ ವರ್ಷ ದೇಶದಲ್ಲಿ 126 ಹುಲಿಗಳ ಸಾವು, ವ್ಯಾಘ್ರ ಸಂತತಿ ರಕ್ಷಣೆಗೆ ಮುಂದೇನು ಕ್ರಮ?


2021ರಲ್ಲಿ, ಹುಲಿಗಳ ಸಾವಿನ ಸಂಖ್ಯೆಯಲ್ಲಿ ಮಧ್ಯಪ್ರದೇಶ ಮುಂದಿದ್ದು 42 ಸಾವುಗಳನ್ನು ದಾಖಲಿಸಿದೆ. ಮಹಾರಾಷ್ಟ್ರದ ನಂತರ 2021ರ ಡಿಸೆಂಬರ್ 29 ರವರೆಗೆ 26 ಹುಲಿ ಸಾವುಗಳನ್ನು ರಾಜ್ಯ ದಾಖಲಿಸಿದೆ. ಕರ್ನಾಟಕದಲ್ಲಿ 15 ಹುಲಿ ಸಾವುಗಳು ದಾಖಲಾಗಿವೆ. ತಜ್ಞರು ಮತ್ತು ಸರ್ಕಾರಿ ಮೂಲಗಳ ತಿಳಿಸಿರುವಂತೆ ಅರಣ್ಯದೊಳಗೆ ಸಂಭವಿಸಿರುವ ಇನ್ನಷ್ಟು ಸಾವುಗಳು ಇನ್ನೂ ವರದಿಯಾಗದೇ ಇರುವುದರಿಂದ ನಿಜವಾದ ಹುಲಿಗಳ ಮರಣ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದಾಗಿದೆ.

Published by:vanithasanjevani vanithasanjevani
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು