• Home
  • »
  • News
  • »
  • trend
  • »
  • Weight Loss: 7 ತಿಂಗಳ ಬಳಿಕ ಮನೆಗೆ ಬಂದ ಮಗ, ಗುರುತು ಹಿಡಿಯದಾದ ಕುಟುಂಬಸ್ಥರು!

Weight Loss: 7 ತಿಂಗಳ ಬಳಿಕ ಮನೆಗೆ ಬಂದ ಮಗ, ಗುರುತು ಹಿಡಿಯದಾದ ಕುಟುಂಬಸ್ಥರು!

7 ತಿಂಗಳ ಬಳಿಕ ಮನೆಗೆ ಬಂದ ಮಗ, ಗುರುತು ಹಿಡಿಯದಾದ ಕುಟುಂಬಸ್ಥರು!

7 ತಿಂಗಳ ಬಳಿಕ ಮನೆಗೆ ಬಂದ ಮಗ, ಗುರುತು ಹಿಡಿಯದಾದ ಕುಟುಂಬಸ್ಥರು!

ಯುವಕನೊಬ್ಬ 152 ಕೆ.ಜಿ. ತೂಕ ಇಳಿಸಿಕೊಳ್ಳಲು ಮನೆಯಿಂದ ಹೊರಗೆ ಹೋಗಿದ್ದ. ಆದರೆ 7 ತಿಂಗಳ ನಂತರ ಮನೆಗೆ ಬಂದ ಮಗನನ್ನು ಕಂಡು ಕುಟುಂಬಸ್ಥರು ಅಚ್ಚರಿಗೀಡಾಗಿದ್ದಾರೆ. ಒಂದು ಹಂತದಲ್ಲಿ ಅವರು ಅವನ ಗುರುತು ಹಿಡಿಯಲೂ ಪರದಾಡಿದ್ದಾರೆ. ಆತ ಬರೋಬ್ಬರಿ 63 ಕೆಜಿ ತೂಕ ಇಳಿಸಿದ್ದರು. ಈಗ ಅವರು ತುಂಬಾ ಫಿಟ್ ದೇಹದೊಂದಿಗೆ ಜೀವನ ನಡೆಸುತ್ತಿದ್ದಾರೆ.

ಮುಂದೆ ಓದಿ ...
  • Share this:

ಯುವಕನೊಬ್ಬ 7 ತಿಂಗಳು ಮನೆ ಬಿಟ್ಟು ಹೋಗಿದ್ದ. ಮನೆಯ ಹೊರಗೆ ಏನು ಮಾಡುತ್ತಿದ್ದಾನೆ ಎಂದು ಯಾರಿಗೂ ಹೇಳಿರಲಿಲ್ಲ. ಆದರೆ ಅವನು ಹಿಂದಿರುಗಿದಾಗ, ಅವನ ರೂಪಾಂತರವನ್ನು ನೋಡಿದ ಕುಟುಂಬ ಸದಸ್ಯರು ಆಶ್ಚರ್ಯಚಕಿತರಾಗಿದ್ದಾರೆ. ಮೊದಲ ಬಾರಿ, ಕುಟುಂಬ ಸದಸ್ಯರಿಗೆ ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಏಕೆಂದರೆ 152 ಕೆಜಿ ಇದ್ದ ಯುವಕ ಸುಮಾರು 63 ಕೆಜಿ ತೂಕ (Weight Loss) ಇಳಿಸಿಕೊಂಡಿದ್ದ. 34 ವರ್ಷದ ಈ ಯುವಕನ ಹೆಸರು ಬ್ರಿಯಾನ್ ಓಕೀಫ್. ಅವರು ಐರ್ಲೆಂಡ್ (Ireland) ನಿವಾಸಿ. ಒಂದು ಸಮಯದಲ್ಲಿ ಅವನ ತೂಕ (Weight) 152 ಕೆಜಿಗಿಂತ ಹೆಚ್ಚಾಗಿತ್ತು. ಆತ ತನ್ನ ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ ಆದರೆ ಯಶಸ್ವಿಯಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಬ್ರಿಯಾನ್ ವಿಭಿನ್ನ ವಿಧಾನವನ್ನು ಅಳವಡಿಸಿಕೊಂಡ. ಮನೆಯಿಂದ ದೂರವಿರುವ ಮೂಲಕ ತೂಕವನ್ನು ಕಳೆದುಕೊಳ್ಳಲು ನಿರ್ಧರಿಸಿದರು.


ಬ್ರಿಯಾನ್ ತನ್ನ ಮನೆಯಿಂದ ಸ್ಪೇನ್‌ಗೆ ತೆರಳಿದ್ದರು. ಇಲ್ಲಿಗೆ ತಲುಪಿದ ನಂತರ, ಅವನು ಕುಟುಂಬ ಮತ್ತು ಸ್ನೇಹಿತರ ಸಂಪರ್ಕವನ್ನು ಸ್ಥಗಿತಗೊಳಿಸಿದರು. ಈ ಮೂಲಕ ಮುಂದಿನ 6-7 ತಿಂಗಳು ತೂಕವನ್ನು ಕಡಿಮೆ ಮಾಡುವತ್ತ ಮಾತ್ರ ಗಮನಹರಿಸಿದರು. 2021 ರ ಕೊನೆಯಲ್ಲಿ ಬ್ರಿಯಾನ್ ಮನೆಗೆ ಹಿಂದಿರುಗಿದಾಗ, ಅವರ ತೂಕ 63 ಕೆಜಿಗೆ ಇಳಿದಿತ್ತು. ಅವರು ಫಿಟ್ ಆಗಿದ್ದರು. ಅವರ ಕುಟುಂಬ ಸದಸ್ಯರ ಆಘಾತಕಾರಿ ಪ್ರತಿಕ್ರಿಯೆಯನ್ನು ವಿಡಿಯೋದಲ್ಲಿ ಕಾಣಬಹುದು.


ಇದನ್ನೂ ಓದಿ: ಕಣ್ಣುಗಳ ಆರೋಗ್ಯ ಕಾಪಾಡಲು ಈ ಸಲಹೆಗಳನ್ನು ಪಾಲಿಸಿ


ತೂಕ ಇಳಿಸಿಕೊಂಡ ಜರ್ನಿ ಹಂಚಿಕೊಂಡ ಯುವಕ


ವಿಡಿಯೋವೊಂದರಲ್ಲಿ, ಬ್ರಿಯಾನ್ ತನ್ನ ತೂಕ ಇಳಿಸಿಕೊಂಡ ಜರ್ನಿ ಬಗ್ಗೆ ಮಾತನಾಡುತ್ತಾ ನಾನು 6 ತಿಂಗಳವರೆಗೆ ಡಯಟ್ ಯೋಜನೆಯನ್ನು ಮಾಡಿದ್ದೆ. ಆರಂಭಿಕ 5 ತಿಂಗಳುಗಳು 2,200 ಕ್ಯಾಲೊರಿಗಳನ್ನು ತೆಗೆದುಕೊಳ್ಳುತ್ತಿದ್ದು, ಆರನೇ ತಿಂಗಳಲ್ಲಿ ಅದನ್ನು 1,750 ಕ್ಯಾಲೊರಿಗಳಿಗೆ ಇಳಿಸಲಾಯಿತು. ಇದರೊಂದಿಗೆ ತಾನು ದಿನಕ್ಕೆ ಸುಮಾರು 5 ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದೆ, ಇದರಲ್ಲಿ ಓಟವೂ ಇತ್ತು ಎಂದಿದ್ದಾರೆ.ತಮ್ಮ ಕಠಿಣ ಪರಿಶ್ರಮದ ವಿವರಗಳನ್ನು ಹಂಚಿಕೊಂಡ ಬ್ರಿಯಾನ್ 'ನಾನು 7 ತಿಂಗಳಲ್ಲಿ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ. ನನಗೆ ಲೆಕ್ಕವಿಲ್ಲದಷ್ಟು ಗಾಯಗಳಾಗಿವೆ. ಆದರೆ ನಾನು ವ್ಯಾಯಾಮವನ್ನು ನಿಲ್ಲಿಸಲಿಲ್ಲ. ನೋವಿನ ನಡುವೆಯೂ ಅದನ್ನು ಮುಂದುವರಿಸಿದೆ. ಪ್ರತಿದಿನ ನಾನು ಒಂದು ಹಂತವನ್ನು ಸುಧಾರಿಸಲು ಪ್ರಯತ್ನಿಸಿದೆ ಎಂದಿದ್ದಾರೆ. ಅಲ್ಲದೇ ನಾನು ಲಘು ವ್ಯಾಯಾಮದಿಂದ ಪ್ರಾರಂಭಿಸಿದೆ. ಮೊದಲ ಎರಡು ವಾರಗಳಲ್ಲಿ, ಪ್ರತಿದಿನ ಸುಮಾರು 90 ನಿಮಿಷಗಳ ಕಾಲ ನಡೆಯುತ್ತಿದ್ದರು. ಇದು ಶೀಘ್ರದಲ್ಲೇ ದಿನಕ್ಕೆ ಐದು ಗಂಟೆಗಳ ನಡಿಗೆಗೆ ಏರಿತು. ನಂತರ ವೇಟ್‌ಲಿಫ್ಟಿಂಗ್, ಈಜು ಮತ್ತು ಓಟವನ್ನು ಪ್ರಾರಂಭಿಸಿದರು.


ಇದನ್ನೂ ಓದಿ: ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕರಗಿಸಲು ನೀವು ಮಾಡಬೇಕಿರೋದು ಇಷ್ಟುಆರಂಭದಲ್ಲಿ, ನೋವಿನಿಂದಾಗಿ, ಬ್ರಿಯಾನ್ ಬಾತ್​ರೂಂಗೆ ಹೋಗುವುದರಲ್ಲಿಯೂ ಮುಗ್ಗರಿಸುತ್ತಿದ್ದರು. ಆದರೆ ಒಗ್ಗಿಕೊಂಡ ನಂತರ ಎಲ್ಲವೂ ಚೆನ್ನಾಗಿ ಹೋಯಿತು. ಬ್ರಿಯಾನ್ ಮೊದಲ ಮೂರು ತಿಂಗಳು ಊಟ, ನಿದ್ರೆ ಮತ್ತು ವ್ಯಾಯಾಮವನ್ನು ಹೊರತುಪಡಿಸಿ ಏನನ್ನೂ ಮಾಡಲಿಲ್ಲ. ಅವರು ಸಮತೋಲಿತ ಆಹಾರ, ಹುರುಪಿನ ವ್ಯಾಯಾಮ ಮತ್ತು ಸರಿಯಾದ ನಿದ್ರೆಯಿಂದ ತಮ್ಮ ತೂಕವನ್ನು ಕಡಿಮೆ ಮಾಡಿದರು.


ಏಳು ತಿಂಗಳ ಪ್ರಯಾಣದ ಸಮಯದಲ್ಲಿ, ಬ್ರಿಯಾನ್ ತನ್ನ ಸ್ನೇಹಿತ ಕಾಲ್ಮ್ ಕೀನನ್ ಜೊತೆ ಮಾತ್ರ ಮಾತನಾಡಿದರು. ಅವನಿಗಷ್ಟೇ ತನ್ನ ತೂಕ ಇಳಿಸುವ ವಿಚಾರದ ಬಗ್ಗೆ ಹೇಳಿದನು. ಇದಲ್ಲದೇ ಮನೆಯಲ್ಲಿ ತಾಯಿ ಇಲ್ಲದ ಸಮಯದಲ್ಲಿ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ತಂದೆಯೊಂದಿಗೆ ಮಾತನಾಡುತ್ತಿದ್ದರು. ಈ ಸಮಯದಲ್ಲಿ, ಅವನು ತನ್ನ ತೂಕವನ್ನು ಕಳೆದುಕೊಳ್ಳುವ ಬಗ್ಗೆ ತನ್ನ ಸ್ನೇಹಿತನನ್ನು ಹೊರತುಪಡಿಸಿ ಯಾರಿಗೂ ಹೇಳಲಿಲ್ಲ.

Published by:Precilla Olivia Dias
First published: