ಹಲೋ ಫ್ರೆಂಡ್ಸ್...ಈ ವಿಡಿಯೋ ನೋಡಿದ್ರಾ : ವೈರಲ್ ಆಯಿತು ಮಹಿಳೆ ಹಾಕಿದ ವಿಡಿಯೋ

news18
Updated:June 1, 2018, 10:17 AM IST
ಹಲೋ ಫ್ರೆಂಡ್ಸ್...ಈ ವಿಡಿಯೋ ನೋಡಿದ್ರಾ : ವೈರಲ್ ಆಯಿತು ಮಹಿಳೆ ಹಾಕಿದ ವಿಡಿಯೋ
news18
Updated: June 1, 2018, 10:17 AM IST
ನ್ಯೂಸ್ 18 ಕನ್ನಡ

ಹಲೋ ಫ್ರೆಂಡ್ಸ್​...ಚಾಯ್​ ಪೀಲೊ
ಸಾಮಾಜಿಕ ತಾಣದಲ್ಲಿ ನೀವು ಈ ಶಬ್ದ ಕೇಳಿದ್ದರೆ, ಸದ್ಯದ ಟ್ರೆಂಡ್​ ಅನ್ನು ನೀವು ಫಾಲೋ ಮಾಡುತ್ತಿದ್ದೀರಿ ಎಂದರ್ಥ. ಸೋಮತಿ ಮಹಾವರ್ ಎಂಬ ಮಹಿಳೆ ಸಾಮಾಜಿಕ ತಾಣದಲ್ಲಿ ಹಾಕುತ್ತಿರುವ ಚಾಯ್​ ಪೀಲೊ...ಆಮ್ ಖಾನೆ... ವಿಡಿಯೋಗಳು ಸದ್ಯ ಟ್ರೋಲ್ ಪೇಜ್​ಗಳ ಆಹಾರವಾಗಿದೆ.


ಸೋಮತಿ ಅವರು ಗಂಭೀರವಾಗಿ ಹಾಕುತ್ತಿರುವ ವಿಡಿಯೋಗಳು ಕೂಡ ಇಂಟರ್​ನೆಟ್​ ಬಳಕೆದಾರರ ನಗುವಿಗೆ ಕಾರಣವಾಗಿದೆ. ಇವರನ್ನು ಸಾಮಾಜಿಕ ತಾಣದ ಹೊಸ ಡಿಂಚಕ್ ಪೂಜಾ ಎಂದು ಬಣ್ಣಿಸಲಾಗುತ್ತಿದೆ. ತಮ್ಮ ಫ್ರೆಂಡ್ಸ್​ ಜೊತೆ ಟೀ ಕುಡಿದರಾ, ಮಾವಿನ ಹಣ್ಣು ತಿಂದರಾ ಎಂದು ಕೇಳುವ ವಿಡಿಯೋಗಳಂತೂ ಜನರನ್ನು ನಗೆಗಡಲಲ್ಲಿ ತೇಲಿಸುತ್ತಿದೆ.

ಇವರು ಅಪ್​ಡೇಟ್​ ಮಾಡುತ್ತಿರುವ ವಿಡಿಯೋಗಳನ್ನು ಮೀಮ್ಸ್​ ಪೇಜ್​ಗಳು ಮತ್ತು ಟ್ರೋಲ್ ಪೇಜ್​ಗಳು ಬಳಸಿಕೊಂಡು ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಫ್ರೆಂಡ್ಸ್​ ಜೊತೆ ವಿಡಿಯೋ ಮೂಲಕ ನಿದ್ದೆಯಿಂದ ಎದ್ದೇಳಿ ಎಂಬ ವಿಡಿಯೋ ಸಾವಿರಕ್ಕಿಂತ ಅಧಿಕ ಶೇರ್ ಕಂಡಿದೆ.
Loading...


ಸದ್ಯಕ್ಕಂತು ತಮ್ಮ 15 ಸೆಕೆಂಡ್​ಗಳ ವಿಡಿಯೋದಿಂದ ಸೋಮತಿ ಮಹಾವರ್ ಇಂಟರ್​ನೆಟ್ ಸ್ಟಾರ್ ಆಗಿದ್ದಾರೆ.


First published:June 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ