ತನ್ನದೇ ಧಾಟಿಯಲ್ಲಿ ಜನ... ಗಣ... ಮನ... ಹಾಡಿದ ಮುಗ್ದ ಕಂದಮ್ಮ: ಕೇಳಿದ್ರೆ ಶಹಬ್ಬಾಸ್​ ಅನ್ನೋದು ಖಚಿತ


Updated:August 15, 2018, 6:46 PM IST
ತನ್ನದೇ ಧಾಟಿಯಲ್ಲಿ  ಜನ... ಗಣ... ಮನ... ಹಾಡಿದ ಮುಗ್ದ ಕಂದಮ್ಮ: ಕೇಳಿದ್ರೆ ಶಹಬ್ಬಾಸ್​ ಅನ್ನೋದು ಖಚಿತ

Updated: August 15, 2018, 6:46 PM IST
ಆಗಸ್ಟ್​ 15 ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ಸ್ವಾತಂತ್ರ್ಯ ದಿನವನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಹೀಗಿರುವಾಗ ಈ ದಿನದಂದು ಹಲವಾರು ವಿಡಿಯೋಗಳು ಬಹಳಷ್ಟು ವೈರಲ್​ ಆಗುತ್ತವೆ. ಇವುಗಳು ಕೆಲವು ನಮ್ಮನ್ನು ಭಾವುಕರನ್ನಾಗಿಸಿದರೆ, ಕೆಲವು ನಮ್ಮ ಮುಖದಲ್ಲಿ ನಗು ತರಿಸುತ್ತವೆ. ಇಂತಹುದೇ ವಿಡಿಯೋ ಒಂದು ವೈರಲ್​ ಆಗಿದ್ದು, ಇದರಲ್ಲಿ ಪುಟ್ಟ ಮಗುವೊಂದು ತನ್ನ ತೊದಲು ನುಡಿಯಲ್ಲೇ ಮುದ್ದಾಗಿ ನಮ್ಮ ಹೆಮ್ಮೆಯ ರಾಷ್ಟ್ರಗೀತೆಯನ್ನು ಹಾಡುವುದನ್ನು ನೋಡಬಹುದಾಗಿದೆ. ಎಲ್ಲೆಡೆ ಈ ವಿಡಿಯೋ ಭಾರೀ ವೈರಲ್​ ಆಗಿದೆ. ಬಂಗಾಳಿ ಮಗುವೊಂದು ಉತ್ಸುಕತೆಯಿಂದ ಜನ... ಗಣ... ಮನ.. ಎಂದು ಹಾಡುವುದು ನೋಡುಗರ ಮನಸನ್ನು ಗೆದ್ದಿದೆ.

ಆದರೆ ಈ ವಿಡಿಯೋ ಕಳೆದ ವರ್ಷದ್ದಾಗಿದೆ. ಆದರೆ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ಇದು ಈ ವರ್ಷವೂ ಭಾರೀ ವೈರಲ್​ ಆಗಿದೆ. ಮಗು ತನ್ನ ಪುಟ್ಟ ಕೈಗಳಲ್ಲಿ ತ್ರಿವರ್ಣ ಬಾವುಟ ಹಿಡಿದು ಹಾಡು ಹಾಡುತ್ತಿದ್ದರೆ, ಮಗುವಿನ ತಾಯಿ ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಫೇಸ್​ಬುಕ್​, ಟ್ವಿಟರ್​ ಹಾಗೂ ಇನ್ಸ್ಟಾಗ್ರಾಂನಲ್ಲಿ ವ್ಯಾಪಕವಾಗಿ ಸೇರ್​ ಮಾಡಲಾಗುತ್ತಿದೆ.
First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...