Pregnant: ಒಂದೇ ಆಸ್ಪತ್ರೆಯ 14 ನರ್ಸ್‌ಗಳು ಒಂದೇ ಸಮಯಕ್ಕೆ ಪ್ರಗ್ನೆಂಟ್! ವೈರಲ್ ಆಯ್ತು ಬೇಬಿ ಬಂಪ್ ಫೋಟೋಸ್

ಈ ಆಸ್ಪತ್ರೆಯ 14 ಮಂದಿ ನರ್ಸ್‌ಗಳು ಏಕಕಾಲದಲ್ಲಿ ಗರ್ಭಿಣಿಯರಾಗಿದ್ದಾರೆ. ಈ ಪೈಕಿ ಕೆಲವರಿಗೆ ಇದೇ ಮೊದಲ ಹೆರಿಗೆಯಾದರೆ, ಇನ್ನು ಕೆಲವರಿಗೆ ಎರಡು, ಮೂರನೆಯ ಹೆರಿಗೆಯಂತೆ!

ವೈರಲ್ ಆದ ಫೋಟೋ

ವೈರಲ್ ಆದ ಫೋಟೋ

  • Share this:
ವಾಷಿಂಗ್ಟನ್ ಡಿಸಿ, ಅಮೆರಿಕ: ಅದು ಮಹಿಳೆಯರ (Ladies) ಹೆರಿಗೆಯಲ್ಲಿ (Delivery) ಖ್ಯಾತಿ ಪಡೆದ ಅಮೆರಿಕದ ಆಸ್ಪತ್ರೆ (American Hospital) . ಆದರೆ ಆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಬೇಕಾದ ನರ್ಸ್‌ಗಳೇ (Nurse) ಗರ್ಭಿಣಿಯರಾಗಿದ್ದಾರಂತೆ. ಅದೂ ಒಬ್ಬರು, ಇಬ್ಬರಲ್ಲ, ಬದಲಾಗಿ ಬರೋಬ್ಬರಿ 14 ಮಂದಿ ನರ್ಸ್‌ಗಳು ಒಂದೇ ಸಮಯದಲ್ಲಿ ಗರ್ಭಿಣಿಯರಾಗಿದ್ದಾರಂತೆ. ಅಮೆರಿಕದ (America) ಮಿಸ್ಸೋರಿ (Missouri) ಎನ್ನುವ ರಾಜ್ಯದ ಕನ್ಸಾನ್‌ ಸಿಟಿಯಲ್ಲಿರುವ (Kansas City) ಸೇಂಟ್ ಲೂಕರ್ ಈಸ್ಟ್‌ ಆಸ್ಪತ್ರೆಯಲ್ಲಿ (St. Luke's East Hospital) 14 ಮಂದಿ ನರ್ಸ್‌ಗಳು ಏಕಕಾಲದಲ್ಲಿ ಗರ್ಭಿಣಿಯರಾಗಿದ್ದಾರೆ. ಈ ಪೈಕಿ ಕೆಲವರಿಗೆ ಇದೇ ಮೊದಲ ಹೆರಿಗೆಯಾದರೆ, ಇನ್ನು ಕೆಲವರಿಗೆ ಎರಡು, ಮೂರನೆಯ ಹೆರಿಗೆಯಂತೆ! ಇದೀಗ ಈ ದಾದಿಯರ ಬೇಬಿ ಬಂಪ್‌ (Baby Bump) ಫೋಟೋಗಳು (Photos) ಸೋಶಿಯಲ್ ಮೀಡಿಯಾಗಳಲ್ಲಿ (Social Media) ಸಖತ್ ವೈರಲ್ (Viral) ಆಗಿವೆ.

ಹೆಣ್ಣು ಮಗುವಿಗೆ ಜನ್ಮ ನೀಡಿದ ನರ್ಸ್

ವರದಿಗಳ ಪ್ರಕಾರ, ಕಾನ್ಸಾಸ್ ಸಿಟಿಯಲ್ಲಿರುವ ಸೇಂಟ್ ಲ್ಯೂಕ್ಸ್ ಈಸ್ಟ್ ಆಸ್ಪತ್ರೆಯ NICU ಮತ್ತು ಲೇಬರ್ ಮತ್ತು ಡೆಲಿವರಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಹದಿನಾಲ್ಕು ದಾದಿಯರು ಒಂದೇ ಸಮಯದಲ್ಲಿ ಗರ್ಭಿಣಿಯಾಗಿದ್ದಾರೆ. ಈ ಪೈಕಿ ಈ ಆಸ್ಪತ್ರೆಯ ಕಾರ್ಮಿಕ ಮತ್ತು ವಿತರಣಾ ಘಟಕದಲ್ಲಿ ನೋಂದಾಯಿತ ನರ್ಸ್ ಕೈಟ್ಲಿನ್ ಹಾಲ್ ಎಂಬುವರು ಈಗಾಗಲೇ ಜೂನ್ 3ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಇದೇ ನನಗೆ ಮೊದಲ ಹೆರಿಗೆ ಎಂದ ನರ್ಸ್

ಇದೀಗ ಮಗುವಿನ ಜೊತೆ ಆರೋಗ್ಯವಾಗಿರುವ ನರ್ಸ್ ಕೈಟ್ಲಿನ್ ಹಾಲ್, ಇದು ನನಗೆ ಮೊದಲನೇ ಹೆರಿಗೆ. ನಾನು ಮತ್ತು ಮಗು ಇಬ್ಬರೂ ಆರೋಗ್ಯವಾಗಿ ಇದ್ದೇವೆ ಅಂತ ಸಂತಸ ವ್ಯಕ್ತಪಡಿಸಿದ್ದಾರೆ. ಗರ್ಭಿಣಿಯಾದ ವಿಚಾರ ತಿಳಿದಾಗ, ನಾನೊಬ್ಬಳೇ ಹೇಳುವುದು ಸರಿಯಲ್ಲ ಅಂತ ನಾಚಿಕೆಯಿಂದ ಹೇಳಿರಲಿಲ್ಲ. ಹೀಗಾಗಿ ಸುಮಾರು 12 ವಾರಗಳವರೆಗೆ ಯಾರಿಗೂ ವಿಚಾರ ಹೇಳದೇ ಮುಚ್ಚಿಟ್ಟಿದ್ದೆ. ಆಮೇಲೆ ಇತರೇ ನರ್ಸ್‌ಗಳೂ ಗರ್ಭಿಣಿಯರು ಅಂತ ಗೊತ್ತಾದಾಗ ನಾನೂ ಹೇಳಿದೆ ಅಂತ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ನೀವು ಎಂದಾದರೂ ಪ್ಯಾನ್​ನಿಂದ ಕಪಾಳಕ್ಕೆ ಹೊಡೆಯುವ ಸ್ಪರ್ಧೆ ನೋಡಿದ್ದೀರಾ? ಈ ವೈರಲ್ ವಿಡಿಯೋ ನೋಡಿ

 ಕೆಲವರಿಗೆ ಹೆಣ್ಣು, ಕೆಲವರಿಗೆ ಗಂಡು ಮಗು

ಅಮೆರಿಕದಲ್ಲಿ ಜನನ ಪೂರ್ವ ಲಿಂಗ ಪತ್ತೆ ಅಪರಾಧ ಅಲ್ಲ. ಹೀಗಾಗಿ 13 ಮಂದಿಯ ಪೈಕಿ ಕೆಲವರು ಗಂಡು ಹಾಗೂ ಇನ್ನೂ ಕೆಲವರು ಹೆಣ್ಣು ಮಗಿವಿನ ನಿರೀಕ್ಷೆಯಲ್ಲಿದ್ದಾರೆ. ಪ್ರತಿಯೊಬ್ಬರಿಗೆ ಬೇರೆ ಬೇರೆ ಹೆರಿಗೆ ದಿನಾಂಕ ಇದ್ದು, ಡಿಸೆಂಬರ್ ಅಂತ್ಯದವರೆಗೆ ಈ ಸರಣಿ ಮುಂದುವರಿಯಲಿದೆ.

13 ಮಕ್ಕಳ ಜನನಕ್ಕಾಗಿ ಕಾಯುತ್ತಿದೆ ಆಸ್ಪತ್ರೆ

ಸೇಂಟ್ ಲ್ಯೂಕ್ ಆಸ್ಪತ್ರೆಯು ಈಗ ಇನ್ನೂ 13 ಶಿಶುಗಳ ಜನನಕ್ಕಾಗಿ ಕಾಯುತ್ತಿದೆ. ಶುಶ್ರೂಷಕಿಯರಿಗೆ ಡಿಸೆಂಬರ್ ತಿಂಗಳಲ್ಲಿ ಹೆರಿಗೆಯ ಡೇಟ್ ನೀಡಲಾಗಿದ್ಯಂತೆ. "ಸೇಂಟ್ ಲ್ಯೂಕ್ಸ್‌ನಲ್ಲಿ ಪ್ರತಿ ವಿಶೇಷ ಹೆರಿಗೆಯೊಂದಿಗೆ ನಾವು ಮಾಡುವಂತೆಯೇ ಈ ಅಮ್ಮಂದಿರು ಮತ್ತು ಶಿಶುಗಳನ್ನು ನಾವು ಆರೈಕೆ ಮಾಡುತ್ತೇವೆ ಅಂತ ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ.

ಈ ಹಿಂದೆಯೂ ಈ ರೀತಿಯ ಘಟನೆ ಸಂಭವಿಸಿದೆ

ಈ ರೀತಿ ಆಸ್ಪತ್ರೆ ನರ್ಸ್‌ಗಳು ಒಂದೇ ಸಮಯದಲ್ಲಿ ಗರ್ಭಿಣಿಯರಾಗುತ್ತಿರುವುದು ಇದೇ ಮೊದಲೇನಲ್ಲ. ಮಾರ್ಚ್ 2019 ರಲ್ಲಿ, ಕಾರ್ಮಿಕ ಮತ್ತು ವಿತರಣಾ ಘಟಕದ ಒಂಬತ್ತು ದಾದಿಯರು ಒಂದೇ ಸಮಯದಲ್ಲಿ ಗರ್ಭಿಣಿಯಾಗಿದ್ದರು. ಅಮೆರಿಕದ ಪೋರ್ಟ್‌ಲ್ಯಾಂಡ್‌ನಲ್ಲಿರುವ ಮೈನೆ ವೈದ್ಯಕೀಯ ಕೇಂದ್ರವು ಈ ರೀತಿಯ ನರ್ಸ್‌ಗಳ 9 ಮಕ್ಕಳ ಜನನಕ್ಕೆ ಸಾಕ್ಷಿಯಾಗಿತ್ತು.

ಇದನ್ನೂ ಓದಿ: Sardar Harihar Singh: ರೋಗಗಳ ವಿರುದ್ಧ ಹೋರಾಡಿ ಗೆದ್ದ ನಿವೃತ್ತ ಪೊಲೀಸ್ ಅಧಿಕಾರಿ! ಇವರ ಫಿಟ್ನೆಸ್ ಮಂತ್ರ ಎಲ್ಲರಿಗೂ ಪ್ರೇರಣೆ

ತಮ್ಮದೇ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡ ದಾದಿಯರು

2019ರ ಆಗಸ್ಟ್‌ನಲ್ಲಿ 9 ಮಂದಿ ದಾದಿಯರು ತಮ್ಮ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಯಶಸ್ವಿ ಹೆರಿಗೆಯ ನಂತರ, ಎಲ್ಲಾ ಒಂಬತ್ತು ತಾಯಂದಿರು - ಮತ್ತು ಅವರ ಮಕ್ಕಳು - ಮತ್ತೊಂದು ಗುಂಪು ಚಿತ್ರಕ್ಕಾಗಿ ಒಟ್ಟಿಗೆ ಪೋಸ್ ಕೊಟ್ಟಿದ್ದರು.
Published by:Annappa Achari
First published: