ಸಿಡ್ನಿ: ಟೀಂ ಇಂಡಿಯಾ ಆಟಗಾರರು ಸ್ವದೇಶದಲ್ಲಾಗಲಿ ಅಥವಾ ವಿದೇಶದಲ್ಲಾಗಲಿ ಮೋಸದ ಆಟಕ್ಕೆ ಹೋದವರಲ್ಲ. ಅದರಲ್ಲು ಕ್ರೀಡಾಸ್ಪೂರ್ತಿ ಮೆರೆಯುವುದರಲ್ಲಿ ಭಾರತೀಯ ಆಟಗಾರರು ಮೊದಲಿಗರು. ಇಂಥಹದೆ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಘಟನೆ ಸದ್ಯ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಡೆದಿದೆ.
ಕನ್ನಡಿಗ ಕೆ ಎಲ್ ರಾಹುಲ್ ಅವರು ಆಸೀಸ್ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇವರ ಬ್ಯಾಡ್ ಫಾರ್ಮ್ಗೆ ವ್ಯಾಪಕ ಟೇಕೆಗಳೂ ಕೇಳಿ ಬಂದಿದ್ದವು. ಆದರೆ, ರಾಹುಲ್ ಮಾಡಿರುವ ಆ ಒಂದು ಕೆಲಸ ಎಲ್ಲರನ್ನು ಮೆಚ್ಚುವಂತೆ ಮಾಡಿದೆ.
ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ರವೀಂದ್ರ ಜಡೇಜಾ 14ನೇ ಓವರ್ ಬೌಲಿಂಗ್ ಮಾಡುವ ವೇಳೆ ರಾಹುಲ್ ಡೈ ಹೊಡೆದು ಅದ್ಭುತ ಕ್ಯಾಚೊಂದನ್ನು ಹಿಡಿದಿದ್ದರು. ಈ ವೇಳೆ ಟೀಂ ಇಂಡಿಯಾ ಆಟಗಾರರೆಲ್ಲರು ಔಟ್ ಎಂದು ಸಂಭ್ರಮಪಡುತ್ತಿರುವಾಗ, ರಾಹುಲ್ ಚೆಂಡು ನೆಲಕ್ಕೆ ತಾಗಿರುವುದಾಗಿ ಹೇಳಿದ್ದಾರೆ.
ರಾಹುಲ್ ಹಿಡಿದ ಕ್ಯಾಚ್ ಒಂದು ಕ್ಷಣ ನೋಡಿದಾಗ ಪರ್ಫೆಕ್ಟ್ ಔಟ್ನಂತೆ ಕಾಣುತ್ತಿದ್ದು, ಅಂಪೈರ್ ಕೂಡ ಅದನ್ನೆ ಭಾವಿಸಿದ್ದರು. ಆದರೆ, ರಾಹುಲ್ ಇದು ನಾಟೌಟ್ ಎಂದು ತಿಳಿಸಿದ್ದಾರೆ. ಕನ್ನಡಿಗನ ಈ ಕ್ರೀಡಾಸ್ಪೂರ್ತಿಗೆ ಸ್ವತಃ ಅಂಪೈರ್ಗಳು ಸಹ ಇಂಪ್ರೇಸ್ ಆಗಿದ್ದಾರೆ.
ಇದನ್ನೂ ಓದಿ: ರಿಷಭ್ ಪಂತ್ಗೆ ಹಾಡು ಹೇಳಿ ಕಾಂಗರೂಗಳಿಗೆ ಚಾಟಿ ಬೀಸಿದ ಭಾರತ್ ಆರ್ಮಿ
A good effort from Rahul and he immediately says it bounced. Great stuff. Umpire Gould a big fan of it #CloseMatters#AUSvIND | @GilletteAU pic.twitter.com/7nA0H5Lsc7
— cricket.com.au (@cricketcomau) January 4, 2019
ಸದ್ಯ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿರುವ ಆಸೀಸ್ ಮೂರನೇ ದಿನದಾಟಕ್ಕೆ 6 ವಿಕೆಟ್ ಕಳೆದುಕೊಂಡು 236 ರನ್ ಕಲೆಹಾಕಿದೆ. ಅಂತೆಯೆ ಆಸೀಸ್ ಇನ್ನೂ 386 ರನ್ಗಳ ಹಿನ್ನಡೆಯಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ