ಚೀನಾದಲ್ಲಿ (China) 13 ವರ್ಷದ ಬಾಲಕನೊಬ್ಬ (Boy) ತನ್ನ ಶಿಕ್ಷಕರಿಗೆ (Teachers) ತಾನು ಟೆಕ್ ಕಂಪನಿಯೊಂದನ್ನು ಸಂಬಳ ಪಡೆಯುವ ಉದ್ಯೋಗಿಗಳ ಸಣ್ಣ ಗುಂಪಿನೊಂದಿಗೆ ನಡೆಸುತ್ತಿದ್ದೇನೆ ಎಂದು ಹೇಳುವ ವಿಡಿಯೋ (Video) ದೇಶದಲ್ಲಿ ವೈರಲ್ ಆಗಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಇತ್ತೀಚೆಗೆ ವಿಡಿಯೋ ಒಂದು ವೈರಲ್ ಆಗಿದೆ. ಇದು ಚೀನಾ ದೇಶಕ್ಕೆ ಸೇರಿದ ವಿಡಿಯೋ ಆಗಿದೆ. ಈ ವಿಡಿಯೋ ಈಗಾಗಲೇ ಲಕ್ಷಾಂತರ ವೀಕ್ಷಣೆಗಳನ್ನು ಕಂಡಿದೆ. ಇದರಲ್ಲಿ ಹದಿಮೂರು ವರ್ಷದ ಅಪ್ರಾಪ್ತ ಬಾಲಕನೊಬ್ಬ ತಾನೊಬ್ಬ ಟೆಕ್ ಕಂಪನಿ ಮಾಲೀಕ ಮತ್ತು ಆರು ಜನರು ನನ್ನ ಬಳಿ ಕೆಲಸ ಮಾಡುತ್ತಿದ್ದಾರೆ. ನಾನು ಅವರಿಗೆ ವೇತನವನ್ನು ನೀಡುತ್ತಿದ್ದೇನೆ ಎಂದು ಹೇಳಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. ಮತ್ತು ಹದಿಮೂರು ವರ್ಷದ ಬಾಲಕ ಹೇಗೆ ಒಂದು ಟೆಕ್ ಕಂಪನಿಯ ಮಾಲೀಕನಾಗಲು ಸಾಧ್ಯ ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ.
ಶಿಕ್ಷಕಿ ಆಶ್ಚರ್ಯ ತಂದ ವಿದ್ಯಾರ್ಥಿಯ ಬರವಣಿಗೆ
ಚೀನಾದ ಶಾಲೆಯ ಶಿಕ್ಷಕಿಯೊಬ್ಬರು ತನ್ನ ವಿದ್ಯಾರ್ಥಿಗಳಿಗೆ ಹೋಮ್‌ವರ್ಕ್ ಅನ್ನು ಕೊಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವರು ಈ ವಿಡಿಯೋದಲ್ಲಿ ತಮ್ಮ ವಿದ್ಯಾರ್ಥಿಗಳಿಗೆ ನೀವು ಯಶಸ್ವಿಯಾಗಿರುವ ಅವರ ಯಾವುದೇ ಸಹಪಾಠಿಗಳ ಬಗ್ಗೆ ಲೇಖನವನ್ನು ಬರೆಯಲು ಹೇಳಿದ್ದಾರೆ. ಆಗ ಆ ವಿದ್ಯಾರ್ಥಿಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ತನ್ನ ಸ್ವಂತ ಕಂಪನಿಯನ್ನು ನಡೆಸುತ್ತಿರುವ ತಮ್ಮ ಸಹಪಾಠಿಯನ್ನು ತಮ್ಮ ಲೇಖನವನ್ನು ಬರೆಯಲು ಆರಿಸಿಕೊಂಡಾಗ ಆ ಶಿಕ್ಷಕಿಗೆ ಸಹಜವಾಗಿಯೇ ಆಶ್ಚರ್ಯವಾಗಿದೆ ಎಂದು ರೆಡ್ ಸ್ಟಾರ್ ನ್ಯೂಸ್ ಅನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ನಂತರ ಆ ಶಿಕ್ಷಕಿಯು ಆ ವಿದ್ಯಾರ್ಥಿಗಳಿಗೆ ಆ ಸಹಪಾಠಿಯ ಹೆಸರನ್ನು ಹೇಳಲು ಕೇಳಿದಾಗ, ಆ ಎಲ್ಲ ವಿದ್ಯಾರ್ಥಿಗಳು ತಮ್ಮ ನಡುವೆ ಕುಳಿತಿದ್ದ ಕನ್ನಡಕ ಧರಿಸಿದ ತಮ್ಮ ಸಹಪಾಠಿ ಒಬ್ಬನನ್ನುತೋರಿಸಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ಶಿಕ್ಷಕಿಯ ಮೆಚ್ಚುಗೆ
ಶಿಕ್ಷಕರು ಆ ವಿದ್ಯಾರ್ಥಿಯನ್ನು ಚೆನ್ ಎಂದು ಗುರುತಿಸಿದ್ದಾರೆ. ನಂತರ ಶಿಕ್ಷಕಿಯು ಅವನು ನಡೆಸುತ್ತಿರುವ ಕಂಪನಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಕೇಳಿದಾಗ, ಅವನು ಇದೆಲ್ಲವೂ "ಇಂಟರ್ನೆಟ್ ತಂತ್ರಜ್ಞಾನ" ಎಂದು ಉತ್ತರಿಸಿದ್ದಾನೆ. ಅಷ್ಟೇ ಅಲ್ಲ ನನ್ನ ಸಹಪಾಠಿಗಳು ಹೇಳುತ್ತಿರುವುದು ನಿಜ ಎಂದಿದ್ದಾನೆ. ಜೊತೆಗೆ ನನ್ನ ಬಳಿ ಆರು ಜನ ಕೆಲಸ ಮಾಡುತ್ತಿದ್ದಾರೆ. ನಾನು ಅವರಿಗೆ ವೇತನವನ್ನು ನೀಡುತ್ತೇನೆ ಎಂದು ಸಹ ಹೇಳುತ್ತಾನೆ. ನಂತರ ಶಿಕ್ಷಕಿಯು ತನ್ನ ವಿದ್ಯಾರ್ಥಿಯ ಸಾಧನೆಗಾಗಿ ಅವನನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ: Viral Video: ಹೆಲ್ಮೆಟ್ ಧರಿಸದ ಮಗ, ಸೊಸೆಯನ್ನು ರಸ್ತೆಯಲ್ಲೇ ಥಳಿಸಿದ ತಾಯಿ; ವಿಡಿಯೋ ವೈರಲ್
ವೈರಲ್ ಆದ ವಿಡಿಯೋ
ಈಗಾಗಲೇ ಈ ವಿಡಿಯೋ ವೀಬೊದಲ್ಲಿ 26 ಮಿಲಿಯನ್ ವೀಕ್ಷಣೆಗಳನ್ನು ಮತ್ತು ಡೌಯಿನ್‌ನಲ್ಲಿ 10 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ, ಚೀನಾದಲ್ಲಿ ಅಲ್ಲಿನ ಸರಕಾರಿ ನಿಯಮಗಳ ಪ್ರಕಾರ ಅಪ್ರಾಪ್ತ ವಯಸ್ಕನು ವ್ಯಾಪಾರವನ್ನು ಹೊಂದಲು ಸಾಧ್ಯವಿಲ್ಲ. ಆದರೆ ಈ ಅಪ್ರಾಪ್ತ ವಯಸ್ಕನು ಹೇಗೆ ಚೀನಾದಲ್ಲಿ ವ್ಯಾಪಾರವನ್ನು ಹೊಂದಬಹುದು ಎಂದು ಜನರು ಆಶ್ಚರ್ಯ ಪಡುವಂತೆ ಮಾಡಿದೆ, ಚೀನಾದಲ್ಲಿ ಒಬ್ಬ ವ್ಯಕ್ತಿಯು ವ್ಯಾಪಾರವನ್ನು ಹೊಂದಲು 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.
"ಅವರು ಖಂಡಿತವಾಗಿಯೂ ಕಂಪನಿಯ ಕಾನೂನು ಮುಖ್ಯಸ್ಥರಲ್ಲ, ಮತ್ತು ಹಾಗೆ ಮಾಡುವುದು ಅಸಾಧ್ಯ. ಇದರ ಹಿಂದೆ ಬೇರೆ ಏನೂ ಇರಬಹುದು. ನಾವು ಈ ಕುರಿತು ಇನ್ನೂ ಹೆಚ್ಚಿನ ವಿವರಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ ”ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಶಾಲೆಯ ವಕ್ತಾರರನ್ನು ಉಲ್ಲೇಖಿಸಿ ಹೇಳಿದೆ. ವೀಡಿಯೋ ವೈರಲ್ ಆದ ನಂತರ ಶಾಲೆಯು ಬಾಲಕನ ಹೇಳಿಕೆಯ ಕುರಿತು ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಲಕ್ಷಾಂತರ ವೀಕ್ಷಣೆಗಳನ್ನು , ಲೈಕ್‍ಗಳನ್ನು ಮತ್ತು ಕಮೆಂಟ್‍ಗಳನ್ನು ಪಡೆದಿದೆ.
ಚೀನಾದ ಬಾಲಕನ ಈ ಸಾಧನೆ ನಿಜವಾಗಿದ್ದರೇ ಇದು ಒಂದು ಅದ್ಭುತ ಸಾಧನೆಯೇ ಸರಿ. ಈ ಇಂಟರ್ನೆಟ್ ಯುಗದಲ್ಲಿ ಏನೆಲ್ಲಾ ಸಾಧ್ಯವಾಗುತ್ತಿದೆ ಅಲ್ಲವೇ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ