Viral Post: ಮಗನ ಮಹಾನ್ ಕಾರ್ಯ ಹಂಚಿಕೊಂಡ ತಾಯಿ: ಮಕ್ಕಳ ಹಸಿವು ನೀಗಿಸಲು ಮುಂದಾದ ಸಂಸ್ಥೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಮೆರಿಕದ ಪಾಪ್ ಟಾರ್ಟ್ಸ್ ಸಂಸ್ಥೆಯೊಂದು ಸಹಾಯ ಮಾಡಲು ಮುಂದೆ ಬಂದಿದ್ದು ಅವರ ಮಗನ ಶಾಲೆಗೆ ಉಪಾಹಾರದಲ್ಲಿ ಟೋಸ್ಟರ್ ಪಾಸ್ಟ್ರೀಸ್ ಅನ್ನು ಕಳುಹಿಸುವುದಾಗಿ ಎಲಿಸಾ ಅವರಿಗೆ ಭರವಸೆ ನೀಡಿದೆ.

ಆಹಾರ

ಆಹಾರ

  • Share this:
'ಹಂಚಿಕೊಂಡು ತಿಂದರೆ ಅದೇ ಸ್ವರ್ಗ' ಎಂಬುದನ್ನು ಆಗಾಗ ಹಿರಿಯರು ಹೇಳುತ್ತಿದ್ದುದನ್ನು ನಾವು ಕೇಳಿದ್ದೇವೆ. ತಾನು ತಿನ್ನುವುದಲ್ಲದೆ ಇತರರಿಗೂ ತಿನ್ನಲು ನೀಡುವಂತಹ (Sharing is Caring) ಗುಣ ಬಹುಶಃ ಇಂದಿನ ಈ ಸ್ವಾರ್ಥಪರ ಜಗತ್ತಿನಲ್ಲಿ ಬಹು ಶ್ರೇಷ್ಠ ಎಂದೇ ಹೇಳಬಹುದು. ಇನ್ನೊಂದು ವಿಚಾರವೆಂದರೆ ನಾವು ಮಕ್ಕಳಿ(Children)ದ್ದಾಗಲೇ ಅವರಿಗೆ ಪ್ರೀತಿ, ದಯೆ, ದಾನ ಮುಂತಾದ ಗುಣಗಳ ಬಗ್ಗೆ ತಿಳಿಸಿಕೊಟ್ಟರೆ ನಿಜಕ್ಕೂ ಆ ಮಕ್ಕಳು ಆ ಬಗ್ಗೆ ಸಾಕಷ್ಟು ತಿಳಿದುಕೊಳ್ಳುತ್ತಾರೆ ಹಾಗೂ ತಮ್ಮ ಜೀವನದಲ್ಲಿ ಅಂತಹ ನೈತಿಕ ಬೆಲೆ(Moral Values)ಗಳಿಗೆ ಮಾನ್ಯತೆ ನೀಡುತ್ತಾರೆ ಅಂದರೆ ತಪ್ಪಾಗಲಿಕ್ಕಿಲ್ಲ. ಪೆರು (Peru) ಮೂಲದ ಅಮೆರಿಕ ನಿವಾಸಿಯಾದ ಬರಹಗಾರ್ತಿ ಹಾಗೂ ಚಿತ್ರನಿರ್ಮಾಣಕಾರ್ತಿಯಾದ ಎಲಿಸಾ ಸ್ಟೋನ್ ಲೇಹಿ (American Author and filmmaker Elisa Stone Leahy)ಎಂಬುವವರು ತಮ್ಮ ಮಗನು ಮಾಡಿದ ಒಂದು ಮಹಾನ್ ಕಾರ್ಯ ವರ್ಣಿಸುತ್ತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ಆ ಪೋಸ್ಟ್ ಈಗ ಸಾಕಷ್ಟು ವೈರಲ್ ಆಗುತ್ತಿದೆ. 

ಎಲಿಸಾ ಅವರು ತಮ್ಮ 13 ವರ್ಷದ ಮಗ ಯಾವ ರೀತಿ ತನ್ನ ಸ್ನೇಹಿತರಿಗೆ ತಿನಿಸನ್ನು ಹಂಚಲೆಂದು ಶಾಲೆಯಲ್ಲಿ ಒಂದು ಕಾರ್ಯ ಮಾಡಿದ್ದು ಅದಕ್ಕೆ ಮೆಚ್ಚುಗೆ ಬದಲಾಗಿ ಶಿಕ್ಷಕರಿಂದ ಇನ್ನು ಮುಂದೆ ಈ ರೀತಿ ಮಾಡಬಾರದೆಂಬ ಬುದ್ಧಿವಾದ ಸ್ವೀಕರಿಸಿದ ಎಂಬುದರ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

ಪೋಷಕರಿಗೆ ತಿಳಿಸದೇ ಪಾಪ್-ಟಾರ್ಟ್ಸ್ ತೆಗೆದುಕೊಂಡು ಹೋದ

ತಮ್ಮ ಸ್ಟೋರಿಯಲ್ಲಿ ಅವರು ಸದ್ಯ ಕೆಲ ಸಮಯದಿಂದ ತಮ್ಮ ಮನೆ ಮರುನವೀಕರಣಗೊಳ್ಳುತ್ತಿರುವುದರಿಂದ ಹೆಚ್ಚಿನ ತಿಂಡಿ-ತಿನಿಸುಗಳನ್ನು ಹೊರಗಿನಿಂದ ತಂದು ಮೈಕ್ರೋವೇವ್, ಟೋಸ್ಟರ್ ಮೂಲಕವೇ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದು ಆ ಸಂಬಂಧದಲ್ಲಿ ಪಾಪ್-ಟಾರ್ಟ್ಸ್ (ಒಂದು ರೀತಿ ಪಾಪ್ ಕಾರ್ನ್ ಇದ್ದಂತಹ ತಿನಿಸು) ಸಾಕಷ್ಟು ಪ್ರಮಾಣದಲ್ಲಿ ಮನೆಯಲ್ಲಿ ಇರುವುದನ್ನು ತಮ್ಮ ಮಗ ಗಮನಿಸಿದ್ದ. ಹಾಗಾಗಿ, ನಮ್ಮ ಅರಿವಿಗೆ ಬರದಂತೆಯೇ ತಮ್ಮ ಮಗ ಮನೆಯಲ್ಲಿದ್ದ ಟೋಸ್ಟರ್ ಒಂದನ್ನು ಬ್ಯಾಗಿನಲ್ಲಿ ಹಾಕಿಕೊಂಡು ಪಾಪ್ ಟಾರ್ಟ್ಸ್ ಗಳನ್ನು ಶಾಲೆಗೆ ಒಯ್ದಿದ್ದ.



ಊಟದ ಸಮಯದಲ್ಲಿ ಆತ ತರಗತಿಯ ಹೊರಬಂದು ಒಂದು ಸ್ಥಳವನ್ನು ಆಯ್ಕೆ ಮಾಡಿ ತನ್ನ ಬ್ಯಾಗಿನಿಂದ ಟೋಸ್ಟರ್ ತೆಗೆದು ಅದರಿಂದ ಪಾಪ್-ಟಾರ್ಟ್ಸ್ ಅನ್ನು ಹುರಿಯಲಾರಂಭಿಸಿದ. ಈ ಸಂದರ್ಭದಲ್ಲಿ ಅವನು ತನ್ನ ಸ್ನೇಹಿತರಿಗೆಲ್ಲ ಈ ತಿನಿಸನ್ನು ಸಿದ್ಧಪಡಿಸಿ ಉಚಿತವಾಗಿ ತಿನ್ನಲು ಕೊಡಲು ಪ್ರಾರಂಭಿಸಿದೆ.

ಇದನ್ನೂ ಓದಿ:  Viral: ಅಂಬೆಗಾಲಿಡುವ ಮಗು ಬೆಕ್ಕಿನ ಮರಿಯನ್ನು ಚುಂಬಿಸಿದ ರೀತಿ ನೋಡಿ, ಎಷ್ಟೊಂದು ಪ್ರೀತಿ!

ವಿದ್ಯಾರ್ಥಿಗೆ ತಿಳಿ ಹೇಳಿದ ಶಿಕ್ಷಕರು

ಕೊನೆಗೆ ಶಿಕ್ಷಕರು ಇದನ್ನು ಗಮನಿಸಿ ಆ ಹುಡುಗನನ್ನು ಕರೆದು ಇದು ಮುಂದೆ ಚಟವಾಗಿ ಬದಲಾಗಬಹುದು, ಹಾಗೆ ಮಾಡಬೇಡ ಎಂಬ ಬುದ್ಧಿವಾದ ಹೇಳಿರುವುದಾಗಿ ಎಲಿಸಾ ತಮ್ಮ ಪೋಸ್ಟಿನಲ್ಲಿ ಬರೆದುಕೊಂಡಿದ್ದಾರೆ.
ತಾಯಿ ಎಲಿಸಾ ತಮ್ಮ ಮಗನ ಈ ನಡವಳಿಕೆ ತುಂಬಾ ಸಿಹಿಮಯವಾಗಿದ್ದು ಅಷ್ಟೇ ತುಂಟತನದಿಂದಲೂ ಕೂಡಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದು, ವಾಸ್ತವದಲ್ಲಿ ಆಕೆಯ ಮಗ ಕ್ಯಾನ್ಸರ್ ಕಾಯಿಲೆಯನ್ನು ಗೆದ್ದವನೆಂದು ಹೇಳಿದ್ದಾರೆ.

ಈ ಬಗ್ಗೆ ಅವರು ಮತ್ತೊಂದು ಘಟನೆ ನೆನಪಿಸಿಕೊಳ್ಳುತ್ತ ಐದು ವರ್ಷಗಳ ಹಿಂದೆ ತಮ್ಮ ಮಗ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಸಂಬಂಧಿಕರೊಬ್ಬರು ಆತನಿಗೆ ನೂರು ಡಾಲರ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಆಗ ಆ ಹುಡುಗ ತನ್ನ ತಾಯಿ ಎಲಿಸಾ ಬಳಿ ಇದರಿಂದ ಲಿಗೋ ಆಟಿಕೆ ಸೆಟ್ ಖರೀದಿಸಿ ಆ ಆಸ್ಪತ್ರೆಯಲ್ಲಿದ್ದ ಇತರೆ ಮಕ್ಕಳಿಗೆ ಹಂಚೋಣವೆಂದು ಹೇಳಿದ್ದ, ತನ್ನ ಮಗನ ಈ ಗುಣ ತಾಯಿಗೆ ಸಾಕಷ್ಟು ಸಂತಸ ನೀಡಿದ್ದು, ಇಂದಿನವರೆಗೂ ಅವನಲ್ಲಿ ಕ್ಯಾನ್ಸರ್ ಕಾಯಿಲೆಯ ಯಾವುದೇ ಲಕ್ಷಣ ಗೋಚರಿಸದೆ ಇರುವುದಕ್ಕೆ ಸಂತೃಪ್ತಿ ಹೊಂದಿದ್ದಾಳೆ.

ಬಾಲಕನ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ

ಎಲಿಸಾ ಪೋಸ್ಟ್ ಮಾಡಿ ಹಂಚಿಕೊಂಡಿರುವ ಈ ಸ್ಟೋರಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಫಿದಾ ಅಗಿದ್ದು ಆ ಹುಡುಗನನ್ನು ಕೊಂಡಾಡುತ್ತಿದ್ದಾರೆ. ಅಲ್ಲದೆ, ಎಲಿಸಾ ಅವರು ತಮ್ಮ ಪೋಸ್ಟ್ ಮೂಲಕ ಯಾರಾದರೂ ತಿಂಡಿಯನ್ನು ಅವರಿಗೆ ದಾನ ಮಾಡಬಯಸಿದರೆ ಅವರು ಅದನ್ನು ಮಾಡಬಹುದು ಎಂದು ಹೇಳಿದ್ದು, ತಮ್ಮ ಸ್ಥಳೀಯ ಫುಡ್ ಬ್ಯಾಂಕ್ ವಿಳಾಸವನ್ನು ಶೇರ್ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಅವರು ತಾನು ತನ್ನ ಪುಟ್ಟ ಮಕ್ಕಳೊಂದಿಗೆ ಆ ಫುಡ್ ಬ್ಯಾಂಕಿಗೆ ಹೋಗಿ ಅವಶ್ಯಕತೆಗೆ ಬೇಕಾದಷ್ಟು ಆಹಾರ ಪಡೆಯುವುದಾಗಿ ತಿಳಿಸಿದ್ದು ಒಂದು ವೇಳೆ ಯಾರಿಗಾದರೂ ಸಹಾಯ ಮಾಡಲು ಆಗದೆ ಇದ್ದಲ್ಲಿ ಅದಕ್ಕೆ ಯಾವ ಖೇದ ಪಟ್ಟುಕೊಳ್ಳಬೇಡಿ, ಏಕೆಂದರೆ ಅಂತಹ ಸ್ಥಿತಿಯನ್ನು ತಾನೂ ಎದುರಿಸಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ:  Viral Post: ಪ್ರಯಾಣದ ವೇಳೆ ಊಬರ್ ಚಾಲಕನಿಗೆ ನಮಾಜ್ ಮಾಡಲು ಸಮಯ ನೀಡಿದ ಮಹಿಳೆ: ವೈರಲ್ ಆಯ್ತು ಪೋಸ್ಟ್

ಮಗನ ಶಾಲೆಗೆ ಉಪಾಹಾರದಲ್ಲಿ ಟೋಸ್ಟರ್ ಪಾಸ್ಟ್ರೀಸ್

ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಮೆರಿಕದ ಪಾಪ್ ಟಾರ್ಟ್ಸ್ ಸಂಸ್ಥೆಯೊಂದು ಸಹಾಯ ಮಾಡಲು ಮುಂದೆ ಬಂದಿದ್ದು ಅವರ ಮಗನ ಶಾಲೆಗೆ ಉಪಾಹಾರದಲ್ಲಿ ಟೋಸ್ಟರ್ ಪಾಸ್ಟ್ರೀಸ್ ಅನ್ನು ಕಳುಹಿಸುವುದಾಗಿ ಎಲಿಸಾ ಅವರಿಗೆ ಭರವಸೆ ನೀಡಿದೆ. ಹಾಗೂ, ನೋ ಕಿಡ್ ಹಂಗ್ರಿ ಎಂಬ ಮಕ್ಕಳ ಹಸಿವನ್ನು ತಣಿಸುವ ಸಾಮಾಜಿಕ ಚಾರಿಟಿ ಸಂಸ್ಥೆಯೊಂದಕ್ಕೆ ಹಣ ದಾನ ಮಾಡುವುದಾಗಿಯೂ ಘೋಷಿಸಿದೆ. ಈ ಎಲ್ಲ ಬೆಳವಣಿಗೆಗಳಿಂದ ಎಲಿಸಾ ಅವರು ಮಂತ್ರಮುಗ್ಧರಾಗಿದ್ದು ಸಂತೃಪ್ತಿಯ ಭಾಷ್ಪಗಳನ್ನು ಸುರಿಸಿದ್ದಾರೆನ್ನಲಾಗಿದೆ.

ಈಗಾಗಲೇ ಎಲಿಸಾ ಹಾಗೂ ಅವರ ಮಗನ ಕೊಂಡಾಡುತ್ತ ನೆಟ್ಟಿಗರು ಟ್ವೀಟ್‌ ಮಾಡುತ್ತಿದ್ದು ಒಬ್ಬರು "ಎಲಿಸಾ ಅವರೇ ನೀವು ಒಬ್ಬ ಉತ್ತಮ ವ್ಯಕ್ತಿಯನ್ನು ಬೆಳೆಸುತ್ತಿರುವಿರಿ" ಎಂದರೆ ಇನ್ನೊಬ್ಬರು "ಒಬ್ಬ ವಿನಯವಂತ ವ್ಯಕ್ತಿಯನ್ನು ರೂಪಿಸುವಲ್ಲಿ ನಿಮ್ಮ ಪಾತ್ರವಿದೆ" ಎಂದು ಪ್ರಶಂಸೆ ಮಾಡಿದ್ದಾರೆ. ಸಾಕಷ್ಟು ಜನರು ಆ ಹುಡುಗನ ದಯಾಪರ ಬುದ್ಧಿ ಮೆಚ್ಚಿ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
Published by:Mahmadrafik K
First published: