Viral Video: ಅಬ್ಬಬ್ಬಾ..ಕೈ ಮುಷ್ಟಿಗಳಿಂದ ಮರವನ್ನೇ ಬೀಳಿಸಿದ ಬಾಲಕಿ.. ವಿಡಿಯೋ ನೋಡಿ..!

12ನೇ ವಯಸ್ಸಿನಲ್ಲಿಯೇ ಅವಳು ಈಗಾಗಲೇ ತನ್ನ ಬಾಕ್ಸಿಂಗ್ ಪರಾಕ್ರಮ ಮತ್ತು ತನ್ನ ಕೌಶಲ್ಯ ಹಾಗೂ ಶಕ್ತಿಯನ್ನು ಪ್ರದರ್ಶಿಸುವ ಅಸಾಧಾರಣ ಸಾಧನೆಗಳಿಗಾಗಿ ವಿಶ್ವದ ಪ್ರಬಲ ಹುಡುಗಿ ಎಂದು ಹೆಸರಿಸಲ್ಪಟ್ಟಿದ್ದಾಳೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಇಂದಿನ ಹುಡುಗಿಯರು ಹುಡುಗರಿಗಿಂತಲೂ ಯಾವುದರಲ್ಲಿಯೂ ಕಮ್ಮಿ ಇಲ್ಲ ಅಂತ ಈಗಾಗಲೇ ತುಂಬಾ ಸಾರಿ ಅನೇಕ ಕ್ಷೇತ್ರಗಳಲ್ಲಿ ಸಾಬೀತು ಪಡಿಸಿದ್ದಾರೆ, ಆದರೆ ಹುಡುಗರಿಗೆ ಇರುವ ದೈಹಿಕ ಶಕ್ತಿ (Physical Strength) ಹುಡುಗಿಯರಿಗೆ ಇರುವುದಿಲ್ಲ ಎಂಬ ಮಾತುಗಳು ಇವತ್ತಿಗೂ ಅಲ್ಲಿ ಇಲ್ಲಿ ಕೇಳಿ ಬರುತ್ತವೆ. ಆದರೆ ಆ ಮಾತುಗಳನ್ನು ಸಹ ಸುಳ್ಳು(Rumors) ಮಾಡಿದ್ದಾಳೆ ಈ 12 ವರ್ಷದ ಹುಡುಗಿ.ಈ ಹುಡುಗಿಯ ಹೆಸರು ಎವ್ನಿಕಾ ಸಾವಕಾಸ್ ಅಂತ, ಈಕೆ ಒಬ್ಬ ವಿಶೇಷ ಪ್ರತಿಭೆಯಾಗಿದ್ದು, ತನ್ನ ಮುಷ್ಟಿಯಿಂದಲೇ ಒಂದು ಮರ ಬೀಳಿಸುವ ಶಕ್ತಿಯನ್ನು ಹೊಂದಿದ್ದಾಳೆ. ಇದನ್ನು ಕೇಳಿ ನೀವು ಸ್ವಲ್ಪ ಶಾಕ್ (Shocked) ಆಗುವುದು ಖಂಡಿತ, ಆದರೆ ಇದು ಸತ್ಯ. ಈಕೆ ಹಿಗ್ಗಾಮುಗ್ಗಾ ಆ ಮರವನ್ನು ತನ್ನ ಎರಡು ಕೈಗಳನ್ನು ಮುಷ್ಟಿ ಮಾಡಿಕೊಂಡು ಹೊಡೆಯುವ ಪರಿ ನೋಡಿದರೆ ನೀವು ದಂಗಾಗುವುದು (Guarantee) ಗ್ಯಾರಂಟಿ.

ವಿಶ್ವದ ಪ್ರಬಲ ಹುಡುಗಿ
12ನೇ ವಯಸ್ಸಿನಲ್ಲಿಯೇ ಅವಳು ಈಗಾಗಲೇ ತನ್ನ ಬಾಕ್ಸಿಂಗ್ ಪರಾಕ್ರಮ ಮತ್ತು ತನ್ನ ಕೌಶಲ್ಯ ಹಾಗೂ ಶಕ್ತಿಯನ್ನು ಪ್ರದರ್ಶಿಸುವ ಅಸಾಧಾರಣ ಸಾಧನೆಗಳಿಗಾಗಿ 'ವಿಶ್ವದ ಪ್ರಬಲ ಹುಡುಗಿ' ಎಂದು ಹೆಸರಿಸಲ್ಪಟ್ಟಿದ್ದಾಳೆ. ರಷ್ಯಾದಲ್ಲಿ ತನ್ನ ತಂದೆ ರಸ್ಟ್ರಾಮ್ ಸಾದ್ವಾಸ್ ಅವರಿಂದ ಬಾಕ್ಸಿಂಗ್‌ನಲ್ಲಿ ತರಬೇತಿ ಪಡೆದ ಎವ್ನಿಕಾ ಐದು ವರ್ಷಗಳ ಹಿಂದೆಯೇ ಎಂದರೆ ಆಗ ಆಕೆಗೆ ಕೇವಲ 8 ವರ್ಷ ಮಾತ್ರ ಇದ್ದಾಗಲೇ ಈ ಖ್ಯಾತಿ ಪಡೆದರು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಅವರು ಸುಮಾರು 100 ಪಂಚ್‌ಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದು, ಬಹುಶಃ ಈ ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ವೇಗವಾಗಿ ಯಾರು ಪಂಚ್‌ಗಳನ್ನು ಹೊಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.

ಇದನ್ನೂ ಓದಿ: Viral Video: ಚಲಿಸುವ ಬಸ್​ನಲ್ಲಿ ಡ್ರೈವರ್​ಗೆ ಹೃದಯಾಘಾತ, ತಾನೇ ಬಸ್ ಚಲಾಯಿಸಿಕೊಂಡು ಬಂದ ಪ್ರಯಾಣಿಕ ಮಹಿಳೆ

ವಿಡಿಯೋ ಸಿಕ್ಕಾಪಟ್ಟೆ ವೈರಲ್
ಎವ್ನಿಕಾ ಪ್ರತಿಭೆಯನ್ನು ಅವರ ತಂದೆ ಚಿಕ್ಕ ವಯಸ್ಸಿನಲ್ಲಿಯೇ ಅರಿತುಕೊಂಡರು. ಈಗ 12ನೇ ವಯಸ್ಸಿನಲ್ಲಿ, ಅವರು ವಾರದಲ್ಲಿ ಐದು ದಿನ ತರಬೇತಿ ಮಾಡುವ ಮೂಲಕ ತುಂಬಾನೇ ಬಲಶಾಲಿಯಾಗಿದ್ದಾರೆ ಮತ್ತು ವೇಗವಾಗಿ ಪಂಚ್‌ಗಳನ್ನು ಹೊಡೆಯಬಲ್ಲರು ಮತ್ತು ಇದರಲ್ಲಿ ಅವರು ಹೆಚ್ಚು ಕೌಶಲ್ಯ ಹೊಂದಿದ್ದಾರೆ ಎಂದು ಹೇಳಬಹುದು.

ವಿಡಿಯೋ ನೋಡಿ:ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಇವರ ಹೊಸ ವಿಡಿಯೋದಲ್ಲಿ ಈ 12 ವರ್ಷದ ಹುಡುಗಿ ತನ್ನ ಎರಡು ಕೈಗಳ ಮುಷ್ಟಿಗಳಿಂದ ಒಂದು ಮರವನ್ನು ಹೇಗೆ ತುಂಡರಿಸಿದ್ದಾರೆ ಎಂಬುದನ್ನು ನೋಡಬಹುದಾಗಿದೆ. ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ಎವ್ನಿಕಾ ಮತ್ತು ಅವಳ ಒಡಹುಟ್ಟಿದವರು ತಮ್ಮ ಮನೆಯ ಸುತ್ತಲಿನ ಕಾಡಿನಲ್ಲಿ ತರಬೇತಿ ಪಡೆಯುತ್ತಾರೆ ಮತ್ತು ಅವರು ಕಾಡಿನಲ್ಲಿರುವ ಮರಗಳನ್ನು ತಮ್ಮ ಪಂಚಿಂಗ್ ಬ್ಯಾಗ್‌ಗಳಾಗಿ ಬಳಸುತ್ತಾರೆ. ಇವರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೇಗವಾಗಿ ಹೊಡೆಯಲು ಪ್ರಯತ್ನಿಸುತ್ತೇನೆ
ಇದಷ್ಟೇ ಅಲ್ಲದೆ ಅವಳ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಮತ್ತೊಂದು ಕ್ಲಿಪ್ ಅನ್ನು 12 ವರ್ಷದ ಹುಡುಗಿ ಹಂಚಿಕೊಂಡಿದ್ದು, ಅದರಲ್ಲಿ ತನ್ನ ಬರಿಗೈ ಮುಷ್ಟಿಯಿಂದ ಒಂದು ಸದೃಡವಾದ ಬಾಗಿಲನ್ನು ಡೆಂಟ್ ಮಾಡುವುದನ್ನು ನೋಡಬಹುದಾಗಿದೆ. ನಾನು ಬಾಕ್ಸಿಂಗ್ ಅನ್ನು ತುಂಬಾನೇ ಇಷ್ಟಪಡುತ್ತೇನೆ, ಏಕೆಂದರೆ ನಾನು ಬಲವಾಗಿ ಹೊಡೆದಾಗ ಅದರಿಂದ ಬರುವ ಆ ಶಬ್ದವನ್ನು ನಾನು ಕೇಳಲು ಇಷ್ಟಪಡುತ್ತೇನೆ" ಎಂದು ಎವ್ನಿಕಾ ಈ ಹಿಂದೆ ತಿಳಿಸಿದ್ದರು. ನಾನು ಪಂಚ್‌ಗಳನ್ನು ಹೊಡೆಯುವಾಗ ನಾನು ವೇಗವಾಗಿ, ಇನ್ನಷ್ಟು ವೇಗವಾಗಿ ಹೊಡೆಯಲು ಪ್ರಯತ್ನಿಸುತ್ತೇನೆ" ಎಂದು ಅವರು ಹೇಳಿದರು.

ಇದನ್ನೂ ಓದಿ: Viral Video: ಭತ್ತದ ಹೊಟ್ಟಿನಿಂದ ತಯಾರಾಯ್ತು ತಟ್ಟೆ, ಲೋಟ, ವಿಡಿಯೋ ಹಂಚಿಕೊಂಡ ಶಶಿ ತರೂರ್

ರಸ್ಟ್ರಾಮ್ ಸಾದ್ವಾಸ್ ಇತರ ಮಕ್ಕಳಿಗೆ ತರಬೇತಿ ನೀಡುವಾಗ ತಮ್ಮ ಮಗಳ ಪ್ರತಿಭೆಯನ್ನು ಗಮನಿಸಿದರು ಎಂದು ಹೇಳಿದರು. ನಾನು ಅವಳ ಪ್ರತಿಭೆಯನ್ನು ಗಮನಿಸಿದೆ, ಆಕೆಗಿಂತಲೂ ದೊಡ್ಡ ಮಕ್ಕಳಿಗೆ ತರಬೇತಿ ನೀಡುತ್ತಿರುವಾಗ ಆಕೆ ಅಲ್ಲೇ ಪಕ್ಕಕ್ಕೆ ನಿಂತಿರುತ್ತಿದ್ದಳು ಮತ್ತು ಆಕೆ ನಾನು ದೊಡ್ಡ ಮಕ್ಕಳಿಗೆ ಹೇಳುತ್ತಿದ್ದ ಟಾಸ್ಕ್‌ಗಳನ್ನು ಮಾಡಲು ಪ್ರಾರಂಭಿಸಿದಳು" ಎಂದು ಆಕೆಯ ತಂದೆ ಹೇಳಿದರು.
Published by:vanithasanjevani vanithasanjevani
First published: