Pataal Lok: ಇದುವೇ ನೋಡಿ ಭಾರತದ ಪಾತಳಲೋಕ: 3 ಸಾವಿರ ಅಡಿಯಲ್ಲಿರುವ 12 ಗ್ರಾಮಗಳನ್ನು ತಲುಪಿಲ್ಲ ಮಹಾಮಾರಿ ಕೋವಿಡ್

ಈ ಪಟಾಲಕೋಟ್​ ಜನರು ಹೊರಗಿನ ಜಗತ್ತಿನ ಜೊತೆ ಸಂಪರ್ಕ ಹೊಂದಿಲ್ಲ. ಉಪ್ಪು ಸೇರಿದಂತೆ ಅತ್ಯವಶ್ಯ ವಸ್ತುಗಳಿಗಾಗಿ ಮಾತ್ರ ಪಟ್ಟಣಕ್ಕೆ ಬರುತ್ತಾರೆ. ಇನ್ನುಳಿದಂತೆ ತರಕಾರಿ ಸೇರಿದಂತೆ ತಮಗೆ ಬೇಕಾದ ಎಲ್ಲ ಆಹಾರ ಪದಾರ್ಥಗಳನ್ನು  ಅವರೇ ಬೆಳೆದುಕೊಳ್ಳುತ್ತಾರೆ

ಪಾತಾಳಲೋಕ

ಪಾತಾಳಲೋಕ

  • Share this:
ಭಾರತ (India) ತನ್ನ ಒಡಲಾಳೊದಳಗೆ ಅದ್ಭುತ ರಹಸ್ಯಗಳನ್ನ ಬಚ್ಚಿಟ್ಟುಕೊಂಡಿದೆ. ಹಿಮಾಲಯ (Himalaya), ಪಶ್ಚಿಮ ಘಟ್ಟ (Western Hills), ನದಿನಗಳು (Rivers), ನೀಲಗಿರಿ ಬೆಟ್ಟಗಳು (Neelagiri hills), ವಿಸ್ತಾರವಾದ ಕಡಲ ಕಿನಾರೆ (Beach) ಅಂತಹ ವೈವಿದ್ಯಮಯ ಪ್ರದೇಶ ಭಾರತದಲ್ಲಿದೆ. ಹಿಮ ಬೀಳುವ ಜಮ್ಮು ಕಾಶ್ಮೀರ, ಮಳೆಯನ್ನೇ ಕಾಣದ ಮರಭೂಮಿಯನ್ನು ಭಾರತ ಒಳಗೊಂಡಿದೆ. 2020 ಮತ್ತು 2021ರಲ್ಲಿ ಕಾಣಿಸಿಕೊಂಡ ಕೋವಿಡ್ ಅಲೆ (COVID Waves) ಇಡೀ ಭಾರತವನ್ನು ತಲುಪಿತ್ತು. ಚೀನಾದಿಂದ ಬಂದ ಮಹಾಮಾರಿ ದೇಶದ ಸಣ್ಣ ಸಣ್ಣ ಹಳ್ಳಿಗಳನ್ನು ತಲುಪಿದೆ ಅಂತಾರೆ. ಆದ್ರೆ ಇದು ನಿಜವಲ್ಲ. ಭಾರತದಲ್ಲಿಯೇ ಮೂರು ಸಾವಿರ ಅಡಿ ಆಳದಲ್ಲಿರುವ 12 ಹಳ್ಳಿಗಳು (12 Villages) ಕೋವಿಡ್ ಮುಕ್ತ ಗ್ರಾಮಗಳಾಗಿವೆ. ಇಲ್ಲಿ ಇದುವರೆಗೂ ಒಂದೇ ಒಂದು ಕೊರೊನಾ ಪ್ರಕರಣಗಳು (Corona Case) ವರದಿಯಾಗಿಲ್ಲ. ದಟ್ಟಾರಣ್ಯದಲ್ಲಿರುವ ಈ ಗ್ರಾಮಗಳಲ್ಲಿ ಸೂರ್ಯನ ಬೆಳಕು ಸಹ ಭೂಮಿಯನ್ನು ತಲುಪಲ್ಲ. ಇಲ್ಲಿಯ ಜನರು ಹೊರ ಜಗತ್ತಿನೊಂದಿಗೆ ಹೆಚ್ಚು ಸಂಪರ್ಕ ಹೊಂದದಿರಲು ಇಷ್ಟಪಡಲ್ಲ.

ದೈತ್ಯವಾದ ಮರಗಳಡಿಯಲ್ಲಿ ಈ 12 ಗ್ರಾಮಗಳಿವೆ. ಈ ಗ್ರಾಮಗಳು ಮಧ್ಯ ಪ್ರದೇಶದ ಚಿಂದ್ವಾಡ ಜಿಲ್ಲೆಯ (Chhindwara district of Madhya Pradesh) ಅರಣ್ಯ ವ್ಯಾಪ್ತಿಯಲ್ಲಿವೆ. ಈ 12 ಗ್ರಾಮಗಳಿರುವ ಸ್ಥಳದ ಹೆಸರನ್ನು ಪಟಾಲಾಕೋಟ್ , ಪಾಟಾಲ್ಕೋಟ್ (Pataalkot) ಎಂದು ಕರೆಯಲಾಗುತ್ತದೆ. ಆಯುರ್ವೇದಕ್ಕೆ ಬೇಕಾಗುವ ಅತ್ಯಮೂಲ್ಯ ಗಿಡ ಮೂಲಿಕೆಗಳು ಔಷಧಿಯ ಸಸ್ಯಗಳು ಇಲ್ಲಿ ಸಿಗುತ್ತವೆ. ಈ ಭಾಗದಲ್ಲಿ ಭೂರಿಯಾ ಬುಡಕಟ್ಟು ಜನರು 21ನೇ ಶತಮಾನದಲ್ಲಿಯೂ ಗುಡಿಸಲುಗಳಲ್ಲಿಯೇ ವಾಸವಾಗಿದ್ದಾರೆ.

ಇದನ್ನೂ ಓದಿ: Viral Story: ಪೋರ್ನ್ ಸಿನಿಮಾ ಚಿತ್ರೀಕರಣಕ್ಕೆ ಈ ಮನೆಯೇ ಬೇಕಂತೆ! ಸಾವಿರಾರು ಚಿತ್ರಗಳು ಇಲ್ಲಿ ಶೂಟ್ ಆಗಿದೆಯಂತೆ!

ಈ ಗ್ರಾಮಗಳಿಗಿದೆ ಪೌರಾಣಿಕ ಹಿನ್ನೆಲೆ

ಪೌರಾಣಿಕ ಕಥೆಗಳ ಪ್ರಕಾರ, ಶ್ರೀರಾಮನ (Lord SriRama) ಪತ್ನಿ ಸೀತಾದೇವಿ (Seetha Devi) ಇಲ್ಲಿಯೇ ಭೂಮಿ ಪ್ರವೇಶಿಸಿರೋದಾಗಿ ಹೇಳುತ್ತಾರೆ. ರಾಕ್ಷಸ ಅಹಿರಾವಣನು ಶ್ರೀರಾಮ ಮತ್ತು ಲಕ್ಷ್ಮಣರನ್ನು ಎತ್ತಿಕೊಂಡು ಹೋದಾಗ ವಾಯಪುತ್ರ ಆಂಜನೇಯ ಇದೇ ಪ್ರದೇಶದಿಂದ ಪಾತಾಳ ಲೋಕ ಪ್ರವೇಶಿದನು ಎಂದು ಇಲ್ಲಿಯ ಜನರು ಹೇಳುತ್ತಾರೆ. ಹಾಗಾಗಿ ಈ 12 ಗ್ರಾಮಗಳಿರುವ ಸ್ಥಳಕ್ಕೆ ಪಾತಳಲೋಕ ಎಂಬ ಹೆಸರು ಬಂದಿದೆಯಂತೆ.

ಅತ್ಯವಶ್ಯ ವಸ್ತುಗಳಿಗೆ ಪಟ್ಟಣಕ್ಕೆ ಬರುವ ಜನರು

ಈ ಪಟಾಲಕೋಟ್​ ಜನರು ಹೊರಗಿನ ಜಗತ್ತಿನ ಜೊತೆ ಸಂಪರ್ಕ ಹೊಂದಿಲ್ಲ. ಉಪ್ಪು ಸೇರಿದಂತೆ ಅತ್ಯವಶ್ಯ ವಸ್ತುಗಳಿಗಾಗಿ ಮಾತ್ರ ಪಟ್ಟಣಕ್ಕೆ ಬರುತ್ತಾರೆ. ಇನ್ನುಳಿದಂತೆ ತರಕಾರಿ ಸೇರಿದಂತೆ ತಮಗೆ ಬೇಕಾದ ಎಲ್ಲ ಆಹಾರ ಪದಾರ್ಥಗಳನ್ನು  ಅವರೇ ಬೆಳೆದುಕೊಳ್ಳುತ್ತಾರೆ. ಕೆಲ ವರ್ಷಗಳ ಹಿಂದೆಯಷ್ಟೇ ಈ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ.

ಇದನ್ನೂ ಓದಿ: Haunted Jobs- ಮನೆಯಲ್ಲಿ ಒಂದು ದಿನ ಇದ್ದು ದೆವ್ವ ಇಲ್ಲವೆಂದು ಖಚಿತಪಡಿಸಿದರೆ 16 ಸಾವಿರ ರೂ

ಮೂಲತಃವಾಗಿ ಈ 12 ಗ್ರಾಮಗಳು ಆಳವಾದ  ಕಣಿವೆಯಲ್ಲಿ ವಾಸವಾಗಿದ್ದರು. ಕೆಲ ವರ್ಷಗಳ ಹಿಂದೆ ಒಂದಿಷ್ಟು ಕುಟುಂಬಗಳು ಮೇಲ್ಭಾಗದಲ್ಲಿ ಬಂದು ವಾಸಿಸತೊಡಗಿವೆ. ಇಡೀ ದೇಶವನ್ನು ವ್ಯಾಪಿಸಿದ್ದ ಕೋವಿಡ್-19 ಈ ಸ್ಥಳವನ್ನು ತಲುಪಿಲ್ಲ ಅಂದ್ರೆ ನೀವು ನಂಬಲೇಬೇಕು.

ಪ್ರವಾಸಿಗರ ಪಾಲಿನ ಸ್ವರ್ಗ ಭಾರತ

ಭಾರತ ಪ್ರವಾಸಿಗರ ಪಾಲಿಗೆ ಸ್ವರ್ಗದಂತೆ.. ಕಾಶ್ಮೀರದಿಂದ(Kashmir) ಹಿಡಿದು ಕನ್ಯಾಕುಮಾರಿವರೆಗೆ( Kanyakumari) ಕಾಣಸಿಗುವ ಅತ್ಯದ್ಭುತ ಪ್ರಾಕೃತಿಕ ತಾಣಗಳು ಮನಸ್ಸನ್ನು ಕದಿಯುತ್ತವೆ. ಪಶ್ಚಿಮ ಘಟ್ಟಗಳ ಸಾಲು,(western Ghats) ನೀಲಗಿರಿ ಪರ್ವತ ಶ್ರೇಣಿ, ಹಿಮಾಲಯ ಪರ್ವತ, (Himalaya) ಮೂರು ಸಮುದ್ರಗಳ ಆರ್ಭಟ ಪ್ರವಾಸವನ್ನು ಇಷ್ಟಪಡುವ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ತಾಣಗಳಾಗಿರುತ್ತವೆ.

ಇಷ್ಟು ಮಾತ್ರವಲ್ಲದೆ ಕಣ್ಮನ ಸೆಳೆಯುವ ನದಿ(River) ತೊರೆ, ಜಲಪಾತ( Waterfalls) ಅಸಂಖ್ಯಾತ ಸರೋವರಗಳು(Lake) ಪ್ರವಾಸಿಗರನ್ನು ಕೈಬೀಸಿ ಸದಾಕಾಲಕ್ಕೂ ಕರೆಯುತ್ತವೆ.. ಈ ರೀತಿಯಾಗಿ ಕಾಣಸಿಗುವ ಜಲಪಾತ ಸರೋವರಗಳು, ಸ್ವರ್ಗವೇನೋ ಎನ್ನುವಂತೆ ವಾಸಮಾಡುತ್ತವೆ.. ವಿದೇಶಗಳಲ್ಲಿ ಈ ರೀತಿಯ ನೂರಾರು ಬಗೆಯ ಸರೋವರಗಳು ಸಾಕಷ್ಟು ಖ್ಯಾತಿ ಪಡೆದಿವೆ
Published by:Mahmadrafik K
First published: