ಎಷ್ಟೋ ಬಾರಿ ನಾವು ಈ ಅಮ್ಯೂಸ್ಮೆಂಟ್ ಪಾರ್ಕ್ಗಳಲ್ಲಿರುವಂತಹ (amusement park) ಪ್ರಾಣಿಗಳ ಪ್ರತಿಮೆಗಳನ್ನು ನೋಡಿ ಅದರ ಮುಂದೆ ನಿಂತು ವಿವಿಧ ಭಂಗಿಗಳಲ್ಲಿ ಫೋಟೋ (Photo) ಕ್ಲಿಕ್ಕಿಸಿಕೊಳ್ಳುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿಯು ನಿಜವಾದ ಮೊಸಳೆಯನ್ನು ಪ್ರತಿಮೆ ಎಂದು ತಪ್ಪಾಗಿ ಗ್ರಹಿಸಿ ಅದರ ಹತ್ತಿರ ಫೋಟೋ ತೆಗೆಸಿಕೊಳ್ಳಲು ಹೋಗಿ ಎಂತಹ ಎಡವಟ್ಟು ಮಾಡಿಕೊಂಡಿದ್ದಾನೆ ನೀವೇ ನೋಡಿ. ಸಾಮಾನ್ಯವಾಗಿ ಈ ಮೊಸಳೆಗಳು (Crocodiles) ನಿಜವಾದದ್ದು ಮತ್ತು ಪ್ರತಿಮೆಗಳಲ್ಲಿ ತುಂಬಾ ವ್ಯತ್ಯಾಸ ಇರುವುದಿಲ್ಲ. ಏಕೆಂದರೆ ಮೊಸಳೆಗಳು ಒಂದೇ ಸ್ಥಳದಲ್ಲಿ ಒಂದೇ ಭಂಗಿಯಲ್ಲಿ ತುಂಬಾ ಹೊತ್ತಿನ ವರೆಗೆ ಸ್ವಲ್ಪವೂ ಅಲುಗಾಡದೆಯೇ ನಿಂತಿರುತ್ತವೆ. ಈ ವ್ಯತ್ಯಾಸವೇ ಗುರುತಿಸಲು ವಿಫಲವಾದ ಫಿಲಿಫಿನ್ಸ್ ನ ಪ್ರವಾಸಿಯೊಬ್ಬ ನವೆಂಬರ್ 10 ರಂದು ಕ್ಯಾಗಯಾನ್ ಡಿ ಒರೊ ನಗರದ ಅಮಾಯಾ ವ್ಯೂ ಅಮ್ಯೂಸ್ಮೆಂಟ್ ಪಾರ್ಕ್ ಗೆ ಭೇಟಿ ನೀಡಿದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಮೊಸಳೆಯೊಂದನ್ನು ಪ್ರತಿಮೆ ಎಂದು ತಪ್ಪಾಗಿ ಗ್ರಹಿಸಿ ಥೀಮ್ ಪಾರ್ಕ್ ನಲ್ಲಿ 12 ಅಡಿ ಸರೀಸೃಪದೊಂದಿಗೆ ಕೆಲವು ಫೋಟೋಗಳನ್ನು ತೆಗೆಯಲು ನೆಹೆಮಿಯಾಸ್ ಚಿಪಾಡಾ (Nehemias Chipada) ಕೊಳದಲ್ಲಿ ಇಳಿದರು. ಆ 68 ವರ್ಷದ ವ್ಯಕ್ತಿಯನ್ನು ನಿಜವಾದ ಮೊಸಳೆ ಅವನ ತೋಳಿನ ಮೇಲೆ ಎರಗಿ ಅವನನ್ನು ನೀರಿಗೆ ಎಳೆದುಕೊಂಡಿತು.
ಸುದ್ದಿ ಮಾಧ್ಯಮದ ಪ್ರಕಾರ ಚಿಪಾಡಾ ಅವರು ಮೊಸಳೆಯೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಅವನು ತನ್ನ ಫೋನ್ ಅನ್ನು ಒಂದು ಕೈಯಲ್ಲಿ ಹಿಡಿದು ನಿಂತಾಗ, ಮೊಸಳೆಯು ಅವನ ಎಡತೋಳನ್ನು ಹಿಡಿದು ನೀರಿಗೆ ಎಳೆಯಿತು.
ಅವನ ಸ್ಥಿತಿಯನ್ನು ಕಂಡು ಭಯಭೀತರಾದ ಕುಟುಂಬ ಸದಸ್ಯರು ಮತ್ತು ಪಾರ್ಕ್ ನೋಡಲು ಬಂದಿದ್ದ ಇತರ ಪ್ರೇಕ್ಷಕರು ಸಹಾಯಕ್ಕಾಗಿ ಕೂಗಿ ಕೊಂಡದ್ದನ್ನು ವೀಡಿಯೋದಲ್ಲಿ ನೋಡಬಹುದು. ಈ ಘಟನೆಯನ್ನು ಅಲ್ಲೇ ಇದ್ದಂತಹ ರೊಗೆಲಿಯೊ ಪಮಿಸಾ ಆಂಟಿಗಾ ಎಂಬ ವ್ಯಕ್ತಿಯು ಕೆಮೆರಾದಲ್ಲಿ ಸೆರೆಹಿಡಿದಿದ್ದಾರೆ ಮತ್ತು ಈ ಘಟನೆಯ ವೀಡಿಯೋವನ್ನು ಆನ್ಲೈನ್ ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ವರದಿಗಳ ಪ್ರಕಾರ, ಚಿಪಾಡಾ ಅದೃಷ್ಟವಶಾತ್ ಮೊಸಳೆಯಿಂದ ತಪ್ಪಿಸಿಕೊಂಡು ಮೇಲೆ ಓಡಿ ಬಂದಿದ್ದಾರೆ. ದಾಳಿಯ ನಂತರ ತಕ್ಷಣವೇ ತೆಗೆದ ಫೋಟೋಗಳು ಅವನು ನೆಲದ ಮೇಲೆ ಬಿದ್ದು, ಅವನ ಎಡ ತೋಳು ರಕ್ತಸಿಕ್ತ ಮತ್ತು ಬ್ಯಾಂಡೇಜ್ ಹಾಕಿರುವುದನ್ನು ತೋರಿಸುತ್ತವೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರ ಎಡ ತೋಳಿಗೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಉತ್ತರ ಮಿಂಡನಾವೊ ವೈದ್ಯಕೀಯ ಕೇಂದ್ರದಲ್ಲಿರುವ ಚಿಪಡಾ ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಈ ಘಟನೆಗೆ ಅಮ್ಯೂಸ್ಮೆಂಟ್ ಪಾರ್ಕ್ ನಲ್ಲಿ ಎಚ್ಚರಿಕೆ ನೀಡುವ ಯಾವುದೇ ಸೂಚನೆ ಫಲಕಗಳು ಇರದಿರುವುದೇ ಕಾರಣ ಎಂದು ಚಿಪಡಾ ಕುಟುಂಬವು ದೂಷಿಸಿದೆ. ಚಿಪಾಡಾ ಅವರ ಮಗಳು ಮರ್ಸಿ ಜಾಯ್ "ಆವರಣವನ್ನು ಪ್ರವೇಶಿಸಬಾರದು ಎಂದು ನಮಗೆ ಎಚ್ಚರಿಕೆ ನೀಡುವ ಯಾವುದೇ ಸಲಹೆಗಳು ಇರಲಿಲ್ಲ. ಅದೇನಾದರೂ ಇದ್ದಿದ್ದರೆ, ನಾವು ಅಲ್ಲಿಗೆ ಹೋಗುತ್ತಿರಲಿಲ್ಲ" ಎಂದು ಹೇಳಿದರು.
ಆದಾಗ್ಯೂ, ಅಮಾಯಾ ವ್ಯೂ ಅಮ್ಯೂಸ್ಮೆಂಟ್ ಪಾರ್ಕ್ ಈ ಆರೋಪಗಳನ್ನು ನಿರಾಕರಿಸಿದ್ದು, ಚಿಪಡಾ ಅವರ ಚಿಕಿತ್ಸೆಯ ವೈದ್ಯಕೀಯ ಬಿಲ್ ಗಳಿಗೆ ಆರ್ಥಿಕವಾಗಿ ಸಹಾಯ ಮಾಡುವುದಾಗಿ ಹೇಳಿದೆ.
ಅಮಾಯಾ ವ್ಯೂ ಚೀಫ್ ಆಪರೇಟಿಂಗ್ ಆಫೀಸರ್ ಕ್ಯಾಂಡಿ ಉನಾಬಿಯಾ "ನಾವು ನಿರ್ಲಕ್ಷ್ಯ ತೋರಿದ್ದೇವೆ ಎಂಬ ಆರೋಪವನ್ನು ನಾವು ನಿರಾಕರಿಸುತ್ತೇವೆ. ಮೊಸಳೆಯೂ ಕೃತಕವಾಗಿದೆ ಎಂದು ಅವರು ಭಾವಿಸಿದ್ದಾರೆ, ಆದರೆ ಆ ಪ್ರದೇಶವನ್ನು ನಿಜವಾಗಿಯೂ ನಿರ್ಬಂಧಿಸಲಾಗಿದೆ. ಅಲ್ಲಿ ಸೂಚನಾ ಫಲಕಗಳು ಇವೆ" ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ