ಬೇರೆ ಬೇರೆ ರಾಷ್ಟ್ರಗಳಲ್ಲಿ ದೊಡ್ಡ ದೊಡ್ಡ ಹೆಬ್ಬಾವುಗಳು (Pythons) ಮನೆಯಲ್ಲಿ ಬಂದು ಸುತ್ತಾಡಿರುವ ಅನೇಕ ವೀಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ(Social Media) ನೋಡಿದ್ದೇವೆ. ಅಲ್ಲಿನ ಜನಕ್ಕೆ ಭಯವಾಗುವುದಿಲ್ಲವೇ ಅಂತ ನೀವು ನಮ್ಮನ್ನು ಕೇಳಬಹುದು. ಇದಕ್ಕೆ ಉತ್ತರ ಎಂದರೆ ಅಲ್ಲಿನವರು ಸಹ ಹೆದರುತ್ತಾರೆ, ಆದರೆ ನಂತರ ಅದರಿಂದ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ಆಲೋಚಿಸುತ್ತಾರೆ. ಕೆಲವು ದಿನಗಳ ಹಿಂದೆ ನಾವು ಒಬ್ಬರ ಮನೆಯಲ್ಲಿ (Home) ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕೈದು ಉದ್ದನೆಯ ಹಾವುಗಳು ಸುತ್ತಾಡುತ್ತಿರುವ ವಿಡಿಯೋ (Video) ನೋಡಿದ್ದೆವು. ಈಗ ಮತ್ತೊಂದು ವಿಡಿಯೋ ವೈರಲ್ (Viral) ಆಗಿದೆ ನೋಡಿ
ಹೀಗೆ ಇನ್ನೊಂದು ವಿಡಿಯೋದಲ್ಲಿ ಒಂದು ಉದ್ದನೆಯ ಹೆಬ್ಬಾವು ಮನೆಯ ಹಿಂಬದಿಯಲ್ಲಿರುವ ಸ್ನಾನಗೃಹಕ್ಕೆ ನುಗ್ಗಿತ್ತು. ಇಲ್ಲೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ, ಆದರೆ ಇದು ನಡೆದಿದ್ದು ನಮ್ಮ ಭಾರತ ದೇಶದಲ್ಲಿ ಅಲ್ಲ, ಥಾಯ್ಲೆಂಡ್ ನಲ್ಲಿ ಅಂತ ಹೇಳಲಾಗುತ್ತಿದೆ ನೋಡಿ.
ಮಹಿಳೆಯ ಬಾತ್‌ರೂಮ್ ಗೆ ನುಸುಳಿ ಬಂದ ಹೆಬ್ಬಾವು
ಹೌದು.. ಮಹಿಳೆಯೊಬ್ಬಳ ಬಾತ್‌ರೂಮ್ ನಲ್ಲಿ ದೊಡ್ಡ ಹೆಬ್ಬಾವು ನುಸುಳಿ ಬಂದಿರುವ ಮತ್ತು ನಂತರ ಅಲ್ಲಿಯೇ ಸುತ್ತಮುತ್ತಲೂ ತೆವಳುತ್ತಿರುವ ಆಘಾತಕಾರಿ ವಿಡಿಯೋ ನೆಟ್ಟಿಗರನ್ನು ಭಯಭೀತರನ್ನಾಗಿಸಿದೆ. ಉದ್ದನೆಯ ಹೆಬ್ಬಾವು ಬಂದಿರುವ ವಿಡಿಯೋ ಅನ್ನು ಬ್ಯಾಂಕಾಕ್ ನ ಮಹಿಳೆಯ ಸ್ನಾನಗೃಹದಲ್ಲಿ ಚಿತ್ರೀಕರಿಸಲಾಗಿದೆ. ಆದಾಗ್ಯೂ, ನೆಟ್ಟಿಗರು ಮಾತ್ರ ಹೆಬ್ಬಾವಿನ ಬಗ್ಗೆ ಬಿಟ್ಟು ಬೇರೆ ಯಾವುದರ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುತ್ತಿರುವುದನ್ನು ನಾವು ಇಲ್ಲಿ ನೋಡಬಹುದು.
ಇದನ್ನೂ ಓದಿ: Viral Post: ನಾಯಿಯಂತೆ ಕಾಣಲು 12 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ ಈ ವ್ಯಕ್ತಿ!
ಈ ವೈರಲ್ ವಿಡಿಯೋದಲ್ಲಿ ಏನಿದೆ?
ನೌಸ್ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಹೆಬ್ಬಾವು ಬಾತ್‌ರೂಮ್ ನಿಂದ ಹೊರ ಬರುವ ಮಾರ್ಗವನ್ನು ಕಂಡು ಹಿಡಿಯಲು ಪ್ರಯತ್ನಿಸುವುದನ್ನು ತೋರಿಸುತ್ತದೆ, ಆದರೆ ಅದು ಹೊರಗೆ ಬರದಂತೆ ಅದರ ಮುಂದೆ ಒಂದು ದೊಡ್ಡ ಗಾಜನ್ನು ಹಾಕಲಾಗಿರುವುದನ್ನು ನಾವು ನೋಡಬಹುದು.
View this post on Instagram
ಏತನ್ಮಧ್ಯೆ, ಮನೆಯಲ್ಲಿರುವ ಎರಡು ಬೆಕ್ಕಿನ ಮರಿಗಳು ಕುತೂಹಲದಿಂದ ಆ ಸರೀಸೃಪವನ್ನು ನೋಡುತ್ತ ಅಲ್ಲಿಯೇ ಬಾತ್‌ರೂಮ್ ನಲ್ಲಿ ಅಡ್ಡಾಡುತ್ತಿರುವುದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು. ಪ್ರಾಣಿ ನಿಯಂತ್ರಣ ವಿಭಾಗದ ಇಬ್ಬರು ಪುರುಷರು ಬಂದು ಆ ಉದ್ದನೆಯ ಹಾವನ್ನು ರಕ್ಷಿಸಿ ಮತ್ತು ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಿರುವುದನ್ನು ಸಹ ಈ ವಿಡಿಯೋದಲ್ಲಿ ನಾವು ನೋಡಬಹುದು.
ವಿಡಿಯೋದ ಶೀರ್ಷಿಕೆ ಹೀಗಿತ್ತು
ಈ ವಿಡಿಯೋ ಪೋಸ್ಟ್ ನೊಂದಿಗೆ ಹಾಕಿಕೊಂಡಿರುವ ಶೀರ್ಷಿಕೆಯ ಪ್ರಕಾರ, ಈ ಹೆಬ್ಬಾವು ಶೌಚಾಲಯದಿಂದ ಸ್ನಾನಗೃಹವನ್ನು ಪ್ರವೇಶಿಸಿತ್ತು. "ಈ ವಿಡಿಯೋ ತುಣುಕಿನಲ್ಲಿ 12 ಅಡಿ ಎತ್ತರದ ಹೆಬ್ಬಾವು ಥೈಲ್ಯಾಂಡ್ ನಲ್ಲಿ ಮಹಿಳೆಯೊಬ್ಬಳ ಸ್ನಾನದ ಕೋಣೆಯನ್ನು ಪ್ರವೇಶಿಸಿದ ಕ್ಷಣವನ್ನು ತೋರಿಸುತ್ತದೆ, ನಂತರ ಆಕೆಯ ಹತ್ತಿರವಿರುವ ಎರಡು ಸಾಕು ಬೆಕ್ಕಿನ ಮರಿಗಳಿಗೆ ಇದು ತುಂಬಾನೇ ಭಯಾನಕವಾಗಿತ್ತು. ತುಂಬಾನೇ ಹತ್ತಿರದಲ್ಲಿ ನಿಂತು ಆ ಬೆಕ್ಕುಗಳು ಆ ಹೆಬ್ಬಾವನ್ನು ನೋಡುತ್ತಿದ್ದವು. ಮಹಿಳೆಯ ಶೌಚಾಲಯದ ಮೂಲಕ ನುಸುಳಿದೆ ಎಂದು ನಂಬಲಾದ ಹಾವನ್ನು ಇಬ್ಬರು ಪ್ರಾಣಿ ಹ್ಯಾಂಡ್ಲರ್ ಗಳು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ" ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: Viral: ಒಡೆಯನ ಅಂತ್ಯಸಂಸ್ಕಾರಕ್ಕೆ ಬಂದ ಕರು, ಹಣೆಗೆ ಮುತ್ತಿಕ್ಕಿ ಕಣ್ಣೀರಿನ ವಿದಾಯ: ಭಾವುಕರಾದ ಜನ!
ವಿಡಿಯೋ ನೋಡಿ ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು
ಈ ಕ್ಲಿಪ್ 376 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಟನ್ ಗಟ್ಟಲೆ ಪ್ರತಿಕ್ರಿಯೆಗಳನ್ನು ಗಳಿಸಿದೆ. ಹೆಬ್ಬಾವನ್ನು ನೋಡಿ ಕೆಲವರು ಆಘಾತಕ್ಕೊಳಗಾದರೆ, ಮತ್ತೆ ಕೆಲವರು ತಾವು ತಕ್ಷಣವೇ ಮನೆಯಿಂದ ಹೊರಗೆ ಹೋಗುತ್ತಿದ್ದೆವು ಎಂದು ವ್ಯಕ್ತಪಡಿಸಿದರು. ಆದರೆ, ಅಂತರ್ಜಾಲದಲ್ಲಿ ಅನೇಕರು ಬೆಕ್ಕಿನ ಮರಿಗಳ ಬಗ್ಗೆ ಆತಂಕಗೊಂಡಿದ್ದರು ಮತ್ತು ಅವುಗಳ ಸುರಕ್ಷತೆಯ ಬಗ್ಗೆ ಅಪ್ಡೇಟ್ ಗಳನ್ನು ಕೋರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ