ಬಲೆ ಬೀಸಿದಾಗ ಸಿಕ್ಕಿದ್ದು ಬರೋಬ್ಬರಿ 112 ಕೆ.ಜಿ.ಯ ಮೀನು !

news18
Updated:May 1, 2018, 11:08 AM IST
ಬಲೆ ಬೀಸಿದಾಗ ಸಿಕ್ಕಿದ್ದು ಬರೋಬ್ಬರಿ 112 ಕೆ.ಜಿ.ಯ ಮೀನು !
news18
Updated: May 1, 2018, 11:08 AM IST
ನ್ಯೂಸ್ 18 ಕನ್ನಡ

ಮಾರುಕಟ್ಟೆಯಿಂದ ಹೆಚ್ಚೆಂದರೆ 2 ರಿಂದ 5 ಕೆ.ಜಿ ತೂಕದ ಮೀನನ್ನು ತಂದಿರಬಹುದು. ಆದರೆ ಇಲ್ಲೊಂದು ಮೀನಿನ ವಿಡಿಯೋ ಅದರ ತೂಕದಿಂದಲೇ ಈಗ ವೈರಲ್​ ಆಗಿದೆ. ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಮೀನಿನ ತೂಕ ಬರೋಬ್ಬರಿ 112 ಕೆ.ಜಿ.

ಈ ಬೃಹತ್ ಗಾತ್ರದ ಮೀನನ್ನು ಅಸ್ಸಾಂನ ಮಜ್ಗಾಂವ್ ಪ್ರದೇಶದಲ್ಲಿ ಹಿಡಿಯಲಾಗಿದೆ. ಬ್ರಹ್ಮಪುತ್ರ ನದಿಯಲ್ಲಿ ಮೀನುಗಾರಿಕೆಗೆ ಮಾಡುವಾಗ ಈ ದೊಡ್ಡ ಮೀನು ಬಲೆಗೆ ಬಿದ್ದಿದೆ. ಆದರೆ ಇದನ್ನು ಬಲೆ ಬೀಸಿದ ಇಬ್ಬರಿಂದ ಎತ್ತಿಕೊಳ್ಳಲು ಸಾಧ್ಯವಾಗಿಲ್ಲವಂತೆ. ಹಾಗಾಗಿ ಮೀನನ್ನು ದಡ ಸೇರಿಸಲು ಇತರರ ಸಹಾಯ ಪಡೆಯಲಾಗಿದೆಯಂತೆ. ಅಲ್ಲಿನ ಮೀನುಗಾರರು ಇದೇ ಮೊದಲ ಬಾರಿ ಇಷ್ಟು ದೊಡ್ಡ ಗಾತ್ರದ ಮೀನನ್ನು ನೋಡಿರುವುದಾಗಿ ತಿಳಿಸಿದ್ದಾರೆ.

ಇದೀಗ ಜನರ ಗುಂಪೊಂದು 112 ಕೆ.ಜಿಯ ಮೀನನ್ನು ಎತ್ತಿಕೊಂಡು ಮಾರುಕಟ್ಟೆಗೆ ಹೋಗುವ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಲಖಿಂ​ಪುರ್ ಮಾರುಕಟ್ಟೆಯಲ್ಲಿ ಈ ಬೃಹದಾಕಾರದ ಮೀನನ್ನು ನೋಡಲು ಜನಸಾಗರವೇ ಹರಿದು ಬಂದಿತ್ತಂತೆ.

 
First published:May 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ