Save Trees: ದೀಪದ ಮೂಲಕ 1100 ಆಲದ ಮರಗಳ ರಕ್ಷಣೆ, ವಿಭಿನ್ನ ಪ್ರಯತ್ನಕ್ಕೆ ಭಾರೀ ಬೆಂಬಲ

Reason to Save Trees: ಸರಕಾರ ಹೊಸ ಗಿಡಗಳನ್ನು ನೆಡಲು, ಅಥವಾ ಮರಗಳನ್ನು ಸ್ಥಳಾಂತರಿಸಲು ಮುಂದಾದರೂ, ಅದು ಸರಿ ಎನಿಸುವುದಿಲ್ಲ. ಎಲ್ಲಾ ಹವಾಮಾನ ಪರಿಸ್ಥಿತಿಗಳು ಈಗ ಬದಲಾಗಿವೆ ಮತ್ತು ಹೊಸ ಸಸಿಗಳು ಈ ಮರಗಳ ಸ್ಥಾನ ತುಂಬಬಲ್ಲವೇ ಎಂಬುವುದು ನಮಗೆ ತಿಳಿದಿಲ್ಲ. ನೀವು ಮರಗಳನ್ನು ಸ್ಥಳಾಂತರ ಮಾಡಿದಾಗ, ಅದರ ಕೊಂಬೆಗಳನ್ನು ಮತ್ತು ಬೇರುಗಳನ್ನು ಕತ್ತರಿಸಲಾಗುತ್ತದೆ ಮತ್ತು ಅವು ಹಿಂದಿನಂತೆ ಇರುವುದಿಲ್ಲ

ಆಲದ ಮರಗಳು

ಆಲದ ಮರಗಳು

  • Share this:
ವೃಕ್ಷವು, ಸ್ವತಃ ತಾನೇ ಒಂದು ಪರಿಸರ ವ್ಯವಸ್ಥೆಯಾಗಿದೆ. ಹವಮಾನದಲ್ಲಿನ ಬದಲಾವಣೆಗಳ ಕುರಿತು ಕೇಳಿ ಬರುವ ವರದಿಗಳು, ಮರಗಳನ್ನು ಕಡಿಯುವುದು (Trees Cut), ದುರಸ್ತಿಯನ್ನು ಮೀರಿದ ಪರಿಸರ ಹಾನಿಗಳಿಗೆ (Save Environment) ಹೇಗೆ ಕಾರಣ ಆಗುತ್ತಿದೆ ಎಂಬುದನ್ನು ನಮಗೆ ನೆನಪಿಸುತ್ತವೆ. ಇದೇ ಕಾರಣಕ್ಕಾಗಿ, ತೆಲಂಗಾಣದ ಹೈದರಾಬಾದ್‍ನಿಂದ (Hyderabad, Telangana) 45 ಕಿ.ಮೀ ದೂರದಲ್ಲಿ, 1,100ಕ್ಕೂ ಹೆಚ್ಚಿನ ಆಲದ ಮರಗಳನ್ನು (Ficus Trees) ಕಡಿಯುವುದನ್ನು ಪ್ರತಿಭಟಿಸಲು, 200ಕ್ಕೂ ಹೆಚ್ಚು ಪರಿಸರ – ಯೋಧರು ಒಟ್ಟು ಸೇರಿದ್ದರು. ಚೇವೆಲ್ಲಾ ಬಳಿ, ಹೈದರಾಬಾದ್- ಮಣ್ಣೆಗುಡ ಹೆದ್ದಾರಿಯ ಇಬ್ಬದಿಯಲ್ಲಿ ಈ ಮರಗಳ ಜೊತೆ, ಇನ್ನೂ 9,000 ಮರಗಳಿವೆ. ಆದರೆ, ಕೇಂದ್ರ ಸರಕಾರದಿಂದ ರಸ್ತೆ ಅಗಲೀಕರಣ ಯೋಜನೆಗೆ (Road Widening Project) ಮಂಜೂರಿ ದೊರೆತ ಬಳಿಕ, ಇಂದು ಅವು ಕೊಡಲಿ ಏಟಿಗೆ ಬಲಿಯಾಗುವ ಭೀತಿ ಎದುರಿಸುತ್ತಿವೆ. ಪರಿಸರ ಕಾಳಜಿ ಇರುವ ನಾಗರಿಕರು, ಮರಗಳ ಮುಂದೆ ದೀಪ ಬೆಳಗಿಸಿ (Lighting Lamps), ಅವುಗಳನ್ನು ರಕ್ಷಿಸುವ ಪ್ರತಿಜ್ಞೆ ಮಾಡಿದರು. ಮಕ್ಕಳು ಮತ್ತು ಹಿರಿಯರು ಚೇವೆಲ್ಲಾ ಆಲದ ಮರಗಳನ್ನು ಬೆಂಬಲಿಸುವ ಚಿತ್ರಗಳು ಮತ್ತು ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ಅವಶ್ಯಕತೆ ಬಿದ್ದರೆ, ಮರಗಳ ಸಂರಕ್ಷಕರಾಗುವ ಉದ್ದೇಶದಿಂದ, ಬಹಳಷ್ಟು ಮಂದಿ ಸ್ನೇಹ ಮತ್ತು ಪ್ರೀತಿಯ ಪ್ರತೀಕವಾಗಿ ಅವುಗಳ ಸುತ್ತ ದಾರಗಳನ್ನು ಕಟ್ಟಿದರು. 

ಚೇವೆಲ್ಲಾದ ಆಲದ ಮರಗಳು

ಈ ಆಲದ ಮರಗಳನ್ನು ಸುಮಾರು ಒಂದು ಶತಮಾನದ ಹಿಂದೆ ನಿಜಾಮರು ನೆಡಿಸಿದ್ದರು ಎನ್ನಲಾಗುತ್ತದೆ. “ಅದು ಮರಗಳನ್ನು ಬೇರೇನು ಅಲ್ಲ, ನಾವು ರಕ್ಷಿಸಲೇಬೇಕಾದ ರಾಷ್ಟ್ರೀಯ ಪರಂಪರೆಯನ್ನಾಗಿ ಮಾಡುತ್ತವೆ” ಎನ್ನುತ್ತಾರೆ ‘ನೇಚರ್ ಲವರ್ಸ್ ಹೈದರಾಬಾದ್’ ಗುಂಪಿನ ಸದಸ್ಯೆ ಸಾಧನ ರಾಮಚಂದರ್. ಶತಮಾನಗಳ ಹಿಂದೆ ಭೂಮಿಯಲ್ಲಿ ತಮ್ಮ ಬೇರನ್ನು ಊರಿರುವ ಈ ಬೃಹತ್ ಮರಗಳ ಕಗ್ಗೊಲೆ ತಡೆಯಲು, ಈ ಗುಂಪು ಆನ್‍ಲೈನ್ ಪೆಟಿಶನ್ ಆರಂಭಿಸಿತ್ತು.

ಒಮ್ಮೆ ಕಡಿದರೆ ಮುಗಿಯಿತು

“ಸರಕಾರ ಹೊಸ ಗಿಡಗಳನ್ನು ನೆಡಲು, ಅಥವಾ ಮರಗಳನ್ನು ಸ್ಥಳಾಂತರಿಸಲು ಮುಂದಾದರೂ, ಅದು ಸರಿ ಎನಿಸುವುದಿಲ್ಲ. ಎಲ್ಲಾ ಹವಾಮಾನ ಪರಿಸ್ಥಿತಿಗಳು ಈಗ ಬದಲಾಗಿವೆ ಮತ್ತು ಹೊಸ ಸಸಿಗಳು ಈ ಮರಗಳ ಸ್ಥಾನ ತುಂಬಬಲ್ಲವೇ ಎಂಬುವುದು ನಮಗೆ ತಿಳಿದಿಲ್ಲ. ನೀವು ಮರಗಳನ್ನು ಸ್ಥಳಾಂತರ ಮಾಡಿದಾಗ, ಅದರ ಕೊಂಬೆಗಳನ್ನು ಮತ್ತು ಬೇರುಗಳನ್ನು ಕತ್ತರಿಸಲಾಗುತ್ತದೆ ಮತ್ತು ಅವು ಹಿಂದಿನಂತೆ ಇರುವುದಿಲ್ಲ. ಈ ಯೋಜನೆ ನಿಲ್ಲಿಸುವಂತೆ ನಾವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‍ಹೆಚ್‍ಎಐ) ಮನವಿ ಮಾಡುತ್ತೇವೆ” ಎನ್ನುತ್ತಾರೆ ಸಾಧನ.

ಇದನ್ನೂ ಓದಿ: ಹಕ್ಕಿಗಳ ಹಿಕ್ಕೆ ಕಾಟಕ್ಕೆ ಭಾರತೀಯ ಕುಟುಂಬಕ್ಕೆ ಸೇರಿದ ಮರದ ಅರ್ಧ ಭಾಗಕ್ಕೆ ಕೊಡಲಿ ಹಾಕಿಸಿದ ನೆರೆಮನೆಯವರು..!

‘ಸೇವ್ ಕೆಬಿಆರ್ ಪಾರ್ಕ್’ ಅಭಿಯಾನದಲ್ಲಿ ಸಕ್ರಿಯರಾಗಿರುವ ಕಾಜಲ್ ಮಹೇಶ್ವರಿ ಅವರ ಪ್ರಕಾರ, “ಕೋವಿಡ್ ಒಂದು ಝುನಾಟಿಕ್ ವೈರಸ್ ಆಗಿರುವುದರಿಂದ ಜನರು ಈಗ ಪರಿಸರದ ಅಸಮತೋಲನವು ಉಂಟು ಮಾಡಬಲ್ಲ ಅಪಾಯ ಅರ್ಥ ಮಾಡಿಕೊಳ್ಳಬಲ್ಲರು. ಸರಕಾರಗಳು ಗಿಡ ನೆಡುವ ಕಾರ್ಯಕ್ರಮ, ಸೆಲೆಬ್ರಿಟಿ ಪ್ರಚಾರ ಮತ್ತು ಸುಳ್ಳು ವರದಿಗಳ ಮೂಲಕ ಜನರು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ವಾಸ ಯೋಗ್ಯ ನಗರಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಸರಕಾರ ಅಧಿಕಾರದಲ್ಲಿ ಮುಂದುವರೆಯುತ್ತದೆ.”

ಸಹಿ ಅಭಿಯಾನ

ಅಪಾಯದಲ್ಲಿರುವ ಈ ಪ್ರದೇಶ, ಮುಡಿಮಾಲ್ ಮತ್ತು ಕಂಡ್ಲಪಲ್ಲಿಯ ಅಂತಿಮವಾಗಿ ಉಳಿದಿರುವ ಕುರುಚು ಕಾಡುಗಳನ್ನು ಕೂಡ ಒಳಗೊಂಡಿದ್ದು, ಅದು ವಲಸೆ ಬರುವ ಡೇಗೆಗಳು ಮತ್ತು ಅಪರೂಪದ ಹದ್ದುಗಳು ಸೇರಿದಂತೆ, ಅನೇಕ ಹುಲ್ಲುಗಾವಲು ಪ್ರಾಣಿಗಳಿಗೆ ನೆಲೆಯಾಗಿದೆ. 2019ರಲ್ಲೂ ರಸ್ತೆ ಅಗಲೀಕರಣ ಯೋಜನೆ ಆರಂಭಿಸಲು ಪ್ರಯತ್ನಿಸಲಾಗಿತ್ತು.

ಆದರೆ ಹಣದ ಕೊರತೆ ಮತ್ತು ಆಲದ ಮರಗಳನ್ನು ಉಳಿಸಲು ಪರಿಸರವಾದಿ ಗುಂಪುಗಳು ನೀಡಿದ ಒತ್ತಡದಿಂದಾಗಿ ಅದು ಕಾರ್ಯರೂಪಕ್ಕೆ ಬಂದಿಲ್ಲ. ಇದೀಗ ಕೇಂದ್ರದ ಮಂಜೂರಾತಿಯಿಂದ ಯೋಜನೆ ಚಾಲನೆ ಸಿಕ್ಕಿದೆ. ‘Save Banyans of Chevella’ ಎಂಬ ಟ್ವಿಟ್ಟರ್‌ ಪುಟದಲ್ಲಿನ ಅಭಿಯಾನದಲ್ಲಿ ಈ ದೈತ್ಯ ಮರಗಳ ನೆರಳಿನಲ್ಲಿ ತಂಪಾಗಿರುವ ಹೆದ್ದಾರಿಯ ಕುರಿತು ನಾಗರಿಕರು ನೆನಪುಗಳನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಈ ಅಭಿಯಾನಕ್ಕೆ ಸಂಬಂಧಿಸಿದ ಅರ್ಜಿಯು ಈವರೆಗೆ 43,000 ಸಹಿಗಳನ್ನು ಸಂಗ್ರಹಿಸಿದೆ.
Published by:Soumya KN
First published: