11 ವರ್ಷ ವಯಸ್ಸಿನ ದೃಷ್ಟಿಹೀನ (Visually impaired) ಬಾಲಕನೊಬ್ಬ (Boy) ಬೋಟ್ ಸಂಸ್ಥೆಯ ಸಿಇಒ (CEO of Boat Company) ಆಗಿ ಕಾರ್ಯನಿರ್ವಹಿಸಿದ್ದಾನೆ. ಇದೇನಪ್ಪ, 11 ವರ್ಷಕ್ಕೆ ಬೋಟ್‌ನಂತಹ ದೊಡ್ಡ ಸಂಸ್ಥೆಯ ಸಿಇಒ ಆಗಿದ್ದಾನಾ ಎಂದು ಆಶ್ಚರ್ಯನಾ..? ಹೌದು, ಪ್ರಥಮೇಶ್ ಸಿನ್ಹಾ (Prathamesh Sinha) ಎಂಬ 11 ವರ್ಷದ ದೃಷ್ಟಿಹೀನ ಬಾಲಕ ಬೋಟ್ ಸಂಸ್ಥೆಗೆ ಒಂದು ದಿನದ ಮಟ್ಟಿಗೆ ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾನೆ. ಈ ವಿಶೇಷ ಚಿಂತನೆಯನ್ನು ಬೋಟ್ ಲೈಫ್‌ಸ್ಟೈಲ್‌ನ ಸಿಇಒ ಅಮನ್ ಗುಪ್ತಾ (Boat's CEO Aman Gupta) ಕಾರ್ಯಗೊತಗೊಳಿಸಿದ್ದು, ಇಂಟರ್‌ನೆಟ್ ಲೋಕದಲ್ಲಿ ಬೋಟ್ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಯಾರೀತ ಪ್ರಥಮೇಶ್ ಸಿನ್ಹಾ
ಯಾರೀತ ಪ್ರಥಮೇಶ್ ಸಿನ್ಹಾ ಎಂದು ತಲೆಕೆಡಿಸಿಕೊಳ್ಳಬೇಡಿ. ಈ ಹಿಂದೆ ಶಾರ್ಕ್ ಟ್ಯಾಂಕ್ ಇಂಡಿಯಾದ ಶೋನಲ್ಲಿ ಬೈಲ್ ಲಿಪಿಯನ್ನು ಕಲಿಯಲು ಸುಲಭವಾಗಿಸುವ ಗುರಿ ಹೊಂದಿರುವ ಗ್ಯಾಜೆಟ್ ಬಗ್ಗೆ ಐಡಿಯಾವೊಂದನ್ನು ನೀಡಿ ಪ್ರಥಮೇಶ್ ಸುದ್ದಿಯಾಗಿದ್ದ. ಈಗ ಅದೇ ಬಾಲಕನನ್ನು ಬೋಟ್ ಸಂಸ್ಥೆಯ ಪ್ರಧಾನ ಕಚೇರಿಗೆ ಬೋಟ್ ಲೈಫ್‌ಸ್ಟೈಲ್‌ನ ಸಿಇಒ ಅಮನ್ ಗುಪ್ತಾ ಕರೆಸಿದ್ದರು. ಬಳಿಕ ಪ್ರಥಮೇಶ್ ಸಿನ್ಹಾನನ್ನು ಒಂದು ದಿನದ ಮಟ್ಟಿಗೆ ಸಂಸ್ಥೆಯ ಸಿಇಒ ಆಗಿ ನೇಮಿಸಿದ್ದರು.
View this post on Instagram
ಈ ವೇಳೆ ನೀವು ಎರಡು ದಿನ ರಜೆ ತಗೋಳಿ ಎಂದು ಅಮನ್ ಗುಪ್ತಾಗೆ ಬಾಲಕ ಹೇಳಿರುವುದು ಎಲ್ಲರ ಗಮನ ಸೆಳೆದಿತ್ತು. ಪ್ರಥಮೇಶ್ ಸಿನ್ಹಾ ಅಲ್ಲಿ ನೆರೆದಿದ್ದ ಎಲ್ಲರ ಹೃದಯ ಗೆದ್ದಿದ್ದ ಎಂದು ಹೇಳುವ ಅವಶ್ಯಕತೆಯೇ ಇಲ್ಲ. ಅಷ್ಟರ ಮಟ್ಟಿಗೆ ಪ್ರಥಮೇಶ್ ಸಿನ್ಹಾ ಬೋಟ್ ಮುಖ್ಯ ಕಚೇರಿಯ ಸಿಬ್ಬಂದಿಗೆ ಅಚ್ಚುಮೆಚ್ಚಾಗಿದ್ದ. ಈ ಬಗೆಗಿನ ವಿಡಿಯೋವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಅಮನ್ ಗುಪ್ತಾ ಹಾಗೂ ಬೋಟ್ ಸಂಸ್ಥೆ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ಪ್ರಥಮೇಶ್ ಹಾಗೂ ಅಮನ್ ಗುಪ್ತಾ ನಡುವಿನ ಸಂವಾದವನ್ನು ನೀವು ನೋಡಬಹುದು.
ಇದನ್ನೂ ಓದಿ: Mercedes-Benz: 1955ರ ಮರ್ಸಿಡಿಸ್-ಬೆಂಜ್ 300 SLR; ಈ ಕಾರು ಮಾರಾಟವಾದ ಮೊತ್ತ ಕೇಳಿದರೆ ನೀವು ಶಾಕ್ ಆಗೋದು ಗ್ಯಾರೆಂಟಿ!
ಪ್ರಥಮೇಶ್ ಸಿನ್ಹಾ ಅವರನ್ನು ತಮ್ಮ ತಂಡಕ್ಕೆ ಪರಿಚಯಿಸುವ ವೇಳೆ ಅಮನ್ ಗುಪ್ತಾ ಮಾಡಿದ ಸ್ಪೂರ್ತಿದಾಯಕ ಭಾಷಣ ಎಲ್ಲರನ್ನೂ ಸೆಳೆದಿತ್ತು. ಈ ವೇಳೆ ಪ್ರಥಮೇಶ್ ತಾನೂ ಬೋಟ್‌ನ “ನಿಮ್ಮ ದೋಣಿಯನ್ನು ತೇಲುವಂತೆ ಇರಲು ಏನನ್ನಾದರೂ ಮಾಡಿ” ಎಂಬ ಟ್ಯಾಗ್‌ಲೈನ್ ಅನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾನೆ. ಆ ಟ್ಯಾಗ್‌ಲೈನ್ ಪ್ರಥಮೇಶ್ ಸಿನ್ಹಾ ಜೀವನದಲ್ಲಿ ಹೊಸ ಭರವಸೆಯನ್ನು ನೀಡಿತ್ತು.
ಜೀವನಕ್ಕೆ ಸವಾಲು ಹಾಕಿದ ಪ್ರಥಮೇಶ್!
ಸಂವಾದದಲ್ಲಿ ಇಬ್ಬರೂ ಅದ್ಭುತ ಸಮಯವನ್ನು ಕಳೆದಿದ್ದರು. ಈ ವೇಳೆ ಅಮನ್ ಗುಪ್ತಾ ಪ್ರಥಮೇಶ್ ಸಿನ್ಹಾಗೆ ವಿಶೇಷವಾದ ವಿದ್ಯಾರ್ಥಿ ವೇತನವನ್ನು ಸಹ ನೀಡಿದರು. 11 ವರ್ಷದ ಪ್ರಥಮೇಶ್ ಸಿನ್ಹಾ ತನ್ನ ಸ್ಫೂರ್ತಿದಾಯಕ ಭಾಷಣದ ಕೊನೆಯಲ್ಲಿ “ಹೇ ಜೀವನ, ನನ್ನನ್ನು ಎಷ್ಟು ದಿನ ಅಂತಾ ಅಳಿಸುವೆ? ನನ್ನ ಧೈರ್ಯ ನೋಡಿ ಒಂದಲ್ಲ ಒಂದು ದಿನ ನೀನು ನಿಲ್ಲುವೆ” ಎಂದು ಹೇಳಿದಾಗ ಎಲ್ಲರೂ ಒಂದು ಕ್ಷಣ ಭಾವುಕರಾದರು.
ಇದನ್ನೂ ಓದಿ: Love Story: ಪುಟಿನ್ ಪುತ್ರಿಯ ಲವ್ ಸ್ಟೋರಿ! ಲವರ್ ನೋಡಲು 50 ಬಾರಿ ಮನೆಯಿಂದ ಓಡಿ ಹೋಗಿದ್ದಾಳೆ ಈಕೆ
ಇನ್ನು, ಬೋಟ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಕೆಳಗಡೆ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ. “ಕೋಟ್ಯಂತರ ಮುಖಗಳಲ್ಲಿ ನಗು ತರಿಸುವವನನ್ನು ನಾವು ಇಲ್ಲಿ ಸಂಭ್ರಮಿಸುತ್ತಿದ್ದೇವೆ. ಅವನ ಮುಖದಲ್ಲಿ ನಗು ತರಿಸುವ ನಮ್ಮ ಪ್ರಯತ್ನಗಳ ಜೊತೆ ಕೈಜೋಡಿಸಿ. ಅವನಿಗೆ ವಿಶೇಷ ವಿದ್ಯಾರ್ಥಿ ವೇತನವ ನೀಡುವ ನಮ್ಮ ಚಿಂತನೆ ಅವನಿಗೆ ಅರ್ಹವಾದ, ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಹೊಂದಿದೆ” ಎಂದು ತಿಳಿಸಿದೆ.
ವೈರಲ್ ಆದ ವಿಡಿಯೋ!
ಇನ್ನು, ಇಲ್ಲಿಯವರೆಗೂ ಆ ವಿಡಿಯೋ 4 ಲಕ್ಷದ 76 ಸಾವಿರ ವೀಕ್ಷಣೆಯನ್ನು ಇನ್‌ಸ್ಟಾಗ್ರಾಂನಲ್ಲಿ ಗಳಿಸಿದೆ. ನೆಟ್ಟಿಗರು ಪ್ರಥಮೇಶ್ ಅವರ ಆಶಾವಾದವನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಅದಲ್ಲದೇ ಇಂತಹ ಉತ್ತಮ ಅವಕಾಶ ನೀಡಿದ ಬೋಟ್ ಸಿಇಒ ಅಮನ್ ಗುಪ್ತಾ ಅವರಿಗೂ ನೆಟ್ಟಿಗರು ಧನ್ಯವಾದ ಅರ್ಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ