11ನೇ ವಯಸ್ಸಿಗೆ ಮಗುವಿಗೆ ಜನ್ಮ ನೀಡಿದ ಬಾಲಕಿ; ಆದರೆ ಇದಕ್ಕೆ ಕಾರಣ ಯಾರು ಗೊತ್ತಾ?

ಕಳೆದ ತಿಂಗಳು ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಆಕೆಗೆ ಗರ್ಭ ಧರಿಸಿರುವ ವಿಚಾರ ಆಕೆಯ ಮನೆಯವರಿಗೆ ತಿಳಿದೇ ಇರಲಿಲ್ಲವಂತೆ. ಆದರೆ ಹೆರಿಗೆ ನಂತರ ಆಕೆ ಗರ್ಭಿಣಿಯಾಗಿದ್ದಳು ಎಂಬುದು ಗೊತ್ತಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  11 ವರ್ಷ ವಯಸ್ಸಿನ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ. ಆಟವಾಡುತ್ತಿದ್ದ ಪುಟ್ಟ ಬಾಲಕಿ ಇಷ್ಟು ಬೇಗ ತಾಯಿಯಾಗಿರುವ ಘಟನೆಯಿಂದ ಬಾಲಕಿ ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ.

  ಕಳೆದ ತಿಂಗಳು ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಆಕೆಗೆ ಗರ್ಭ ಧರಿಸಿರುವ ವಿಚಾರ ಆಕೆಯ ಮನೆಯವರಿಗೆ ತಿಳಿದೇ ಇರಲಿಲ್ಲವಂತೆ. ಆದರೆ ಹೆರಿಗೆ ನಂತರ ಆಕೆ ಗರ್ಭಿಣಿಯಾಗಿದ್ದಳು ಎಂಬುದು ಗೊತ್ತಾಗಿದೆ. ಏಳೂವರೆ ತಿಂಗಳಿಗೆ ಬಾಲಕಿ ಹೆರಿಯಾಗಿದ್ದು, ಆಕೆ ಗರ್ಭ ಧರಿಸಲು ಕಾರಣ ಯಾರು ಎಂಬುದು ಕುರಿತು ಮಾಹಿತಿ ಇಲ್ಲವಾಗಿದೆ. ಇನ್ನು ಬಾಲಕಿ ಮತ್ತು ಮಗುವ ಆರೋಗ್ಯವಾಗಿದ್ದಾರೆಂದು ತಿಳಿದುಬಂದಿದೆ.

  ಬ್ರಿಟನ್​ನಲ್ಲಿ ಈ ರೀತಿ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತದೆ. ಇಂತಹ ಘಟನೆ ಅಲ್ಲಿನ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಅನೇಕರು ಬಹಳ ಆತಂಕಕಾರಿ ಪರಿಸ್ಥಿತಿ ಎನ್ನುತ್ತಿದ್ದಾರೆ.

  2006ರಲ್ಲಿ ತೆರೇಸಾ ಮಿಡಲ್ಟಬ್ ಎಂಬಾಕೆ 12ನೇ ವರ್ಷದಲ್ಲಿ  ಮಗುವಿಗೆ ಜನ್ಮ ನೀಡಿದ್ದರು. ಆಕೆಯ ಸಹೋದರನೇ ಮಗುವಿನ ತಂದೆ ಎಂಬುದು ಗೊತ್ತಾಯಿತು. ಇವರನ್ನು ಕಿರಿಯ ತಾಯಿ ಎಂದು ವೈದ್ಯ ಕರೋಲ್ ಕೂಪರ್​ ಹೇಳಿದ್ದಾರೆ.

  ಆದರೀಗ 10ನೇ ವಯಸ್ಸಿನ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಸಾಮಾನ್ಯವಾಗಿ ಬಾಲಕಿಯರು 11 ವಯಸ್ಸಿಗೆ ಪ್ರೌಢಾವ್ಯವಸ್ಥೆಗೆ ಬರುತ್ತಾರೆ. ಈಗೀನ ವರ್ತಮಾನದಲ್ಲಿ 8 ರಿಂದ 14 ವರ್ಷದಲ್ಲಿ ಪ್ರೌಢಾವ್ಯವಸ್ಥೆಗೆ ಬರುತ್ತಿದ್ದಾರೆ.
  First published: