ಎಸ್ಎಸ್ಎಲ್​ಸಿ ಪಾಸಾದವರಿಗೆ ಸರ್ಕಾರಿ ಹುದ್ದೆ; ಅರ್ಜಿ ಆಹ್ವಾನಿಸಿದ ಎಸ್​ಎಸ್​ಸಿ

 ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ ಹುದ್ದೆಗೆ ಆನ್ಲೈನ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಮೊದಲ ಹಂತದ ಪರೀಕ್ಷೆಯು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಇರುತ್ತದೆ. ಈ ಪರೀಕ್ಷೆಯು ವಸ್ತುನಿಷ್ಠ ಮಾದರಿ ಪ್ರಶ್ನೆ ಪತ್ರಿಕೆ ಆಗಿರುತ್ತದೆ.

Jobs

Jobs

 • Share this:
  ಸರ್ಕಾರಿ ಉದ್ಯೋಗವನ್ನು ಪಡೆಯಲು ಕನಿಷ್ಠ ವಿದ್ಯಾಭ್ಯಾಸವು ಅಗತ್ಯ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಆಕಾಂಕ್ಷಿಗಳು ಪದವಿ ನಂತರ ಉದ್ಯೋಗ ಹುಡುಕಾಟ ಶುರು ಮಾಡುತ್ತಾರೆ. ಆದರೆ, ಕೇಂದ್ರ ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತೀರ್ಣರಾದ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸ ನೀಡಲು ಮುಂದಾಗಿದೆ. ಸಿಬ್ಬಂದಿ ನೇಮಕಾತಿ ಆಯೋಗವು (ಎಸ್ಎಸ್ಸಿ) ಗ್ರೂಪ್ ಸಿ ವೃಂದದಲ್ಲಿ ಎಸ್ಎಸ್ಎಲ್ಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲು ಮುಂದಾಗಿದೆ.

  ಸಿಬ್ಬಂದಿ ನೇಮಕಾತಿ ಆಯೋಗವು ಕೇಂದ್ರ ಸರ್ಕಾರದ ವಿವಿಧ ಸಚಿವಾಲಯು, ಇಲಾಖೆ ಮತ್ತು ಸಂಸ್ಥೆಯಲ್ಲಿ ಖಾಲಿ ಇರುವ ಗ್ರೂಪ್‌ 'ಸಿ' ವೃಂದದ 'ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌' (ಎಂಟಿಎಸ್‌) ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. 10ನೇ ತರಗತಿ ಪಾಸ್ ಆದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಕೊರೋನಾ ಸೋಂಕಿನ ಕಾರಣದಿಂದಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ವಿಳಂಬ ಆಗಿದೆ ಎಂದು ಸಿಬ್ಬಂದಿ ನೇಮಕಾತಿ ಆಯೋಗ ತಿಳಿಸಿದೆ.

  ಗುಂಡಾರ್ ನದಿ ಜೊತೆ ಕಾವೇರಿ ನದಿ ಜೋಡಣೆಗೆ ಕನ್ನಡಪರ ಹೋರಾಟಗಾರರ ಆಕ್ರೋಶ; ಗಡಿಯಲ್ಲಿ ರಸ್ತೆ ತಡೆದು ಪ್ರತಿಭಟನೆ

  ಒಟ್ಟು ಹುದ್ದೆಗಳ ಸಂಖ್ಯೆ: ಒಟ್ಟು ಹುದ್ದೆಗಳ ಸಂಖ್ಯೆಯನ್ನು ಇನ್ನು ಘೋಷಣೆ ಮಾಡಿಲ್ಲ. ಈ ಬಗ್ಗೆ ಶೀಘ್ರದಲ್ಲಿ ಆದೇಶ ಹೊರಬೀಳಲಿದೆ.

  ಅರ್ಹತೆ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಾಸ್ ಆಗಿರಬೇಕು. ಕನಿಷ್ಟ ವಯಸ್ಸು 18 ಆಗಿರಬೇಕು. ಗರಿಷ್ಠ ವಯಸ್ಸು 25. ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಲಿಕೆ ನೀಡಲಾಗಿದೆ. ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 30 ವರ್ಷದ ವರಗೆ ಅರ್ಹತೆ ನೀಡಲಾಗಿದೆ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು 28 ವರ್ಷದವರೆಗೆ ಸಡಲಿಕೆ ನೀಡಲಾಗಿದೆ. ಇನ್ನು, ಪಿಡಬ್ಲೂಡಿ ಅಭ್ಯರ್ಥಿಗಳಿಗೂ 5 ವರ್ಷ ವಯೋಮಿತಿ ಸಡಲಿಕೆ ನೀಡಲಾಗಿದೆ.

  ಆಯ್ಕೆ ವಿಧಾನ: ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ ಹುದ್ದೆಗೆ ಆನ್ಲೈನ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಮೊದಲ ಹಂತದ ಪರೀಕ್ಷೆಯು ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಇರುತ್ತದೆ. ಈ ಪರೀಕ್ಷೆಯು ವಸ್ತುನಿಷ್ಠ ಮಾದರಿ ಪ್ರಶ್ನೆ ಪತ್ರಿಕೆ ಆಗಿರುತ್ತದೆ. ಎರಡನೇ ಹಂತದ ಪರೀಕ್ಷೆಯು ಪ್ರಬಂಧ ಮಾದರಿಯಲ್ಲಿ ಅಭ್ಯರ್ಥಿಗಳು ವಿವರಣಾತ್ಮಕ ಉತ್ತರವನ್ನು ಅಭ್ಯರ್ಥಿಗಳು ಬರೆಯಬೇಕಾಗತ್ತದೆ. ಈ ಪರೀಕ್ಷೆಯನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶವಿದೆ.

  ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
  ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ: ಫೆಬ್ರವರಿ 05, 2021
  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 21, 2021
  ಶುಲ್ಕ ಕಟ್ಟಲು ಕೊನೆಯ ದಿನಾಂಕ: ಮಾರ್ಚ್ 23, 2021
  ಮೊದಲ ಹಂತದ ಕಂಪ್ಯೂಟರ್ ಆಧರಿತ ಪರೀಕ್ಷೆ: ಜುಲೈ 1ರಿಂದ ಜುಲೈ 20, 2021
  ಎರಡನೇ ಹಂತದ ಕಂಪ್ಯೂಟರ್ ಆಧರಿತ ಪರೀಕ್ಷೆ: ನವೆಂಬರ್ 21, 2021
  ವೆಬ್​ಸೈಟ್​: https://ssc.nic.in/
  Published by:Latha CG
  First published: