ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕಾಯಿಲೆಗಳಿಂದ ದೂರವಿರಲು ಮತ್ತು ಉತ್ತಮ, ಆರೋಗ್ಯಕರ ಆರೋಗ್ಯವನ್ನು ಹೊಂದಲು ಫಿಟ್ನೆಸ್ ಅನ್ನು ಮೇಂಟೇನ್ ಮಾಡುತ್ತಿದ್ದಾರೆ. ನಂತರ ಜನರು ಅದನ್ನು ತಮ್ಮ ದೈನಂದಿನ ಜೀವನದಲ್ಲಿ ಜಿಮ್, ಯೋಗ ಅಥವಾ ಆರೋಗ್ಯಕರ (Health) ಆಹಾರದಲ್ಲಿ ಅಳವಡಿಸಿಕೊಳ್ಳುತ್ತಾರೆ. ವಯಸ್ಸಾದಂತೆ ಆಯಾಸ, ಕಾಲು ನೋವು, ಬೆನ್ನು ನೋವು ಹೀಗೆ ಹಲವು ಸಮಸ್ಯೆಗಳು ತಲೆದೋರುತ್ತವೆ. ಯಾವಾಗ ಯಾವ ಕಾಯಿಲೆಗಳು ಅಟ್ಯಾಕ್ (Attack) ಆಗುತ್ತೆ ಅಂತ ಕೂಡ ಹೇಳಲು ಅಸಾಧ್ಯ. ಹೀಗಾಗಿ ಯಾವಾಗ್ಲೂ ಫಿಟ್ ಆಗಿ ಇರಲು ಜನರು ಬಯಸುತ್ತಾರೆ. ಇದೀಗ ಒಂದು ಅಜ್ಜಿಯ ವಿಡಿಯೋ ವೈರಲ್ (Video Viral) ಆಗ್ತಾ ಇದೆ. ನೋಡಿದ್ರೆ ನಿಜಕ್ಕೂ ಶಾಕ್ (Shock) ಆಗ್ತೀರಾ!
ಯಾರಾದ್ರೂ ಒಂದು ಬಾರಿ ಆದ್ರೂ ನಾಚಿ ನೀರಾಗುವ ಸಾಧ್ಯತೆ ಇದೆ. ಯಾಕಂದ್ರೆ ಸಣ್ಣ ವಯಸ್ಸಿಗೆ ಅಯ್ಯೋ ನನಗೆ ಸುಸ್ತು, ಆಗಲ್ಲ ಅನ್ನೋ ಜನ ಸಂಖ್ಯೆಯೇ ಹೆಚ್ಚು. ಆದರೆ ಸದ್ಯ ಅಜ್ಜಿಯ ವಿಡಿಯೋವೊಂದು ಎಲ್ಲರ ಗಮನ ಸೆಳೆಯುತ್ತಿದ್ದು ಆಕೆಯ ಫಿಟ್ನೆಸ್ ನೋಡಿ ಎಲ್ಲರೂ ಮೂಕವಿಸ್ಮಿತರಾಗಿದ್ದಾರೆ.
ಸದ್ಯ ಫಿಟ್ನೆಸ್ ಫ್ರೀಕ್ ಅಜ್ಜಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. 103ನೇ ವಯಸ್ಸಿನಲ್ಲೂ ಆಕೆ ಪ್ರತಿದಿನ ಜಿಮ್‌ಗೆ ಹೋಗುತ್ತಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಸದ್ಯ ಈಕೆಯ ವಿಡಿಯೋ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇದೆ.
ಇದು ಕ್ಯಾಲಿಫೋರ್ನಿಯಾದಲ್ಲಿ ವಾಸಿಸುವ ತೆರೇಸಾ ಮೂರ್ ಅವರ ಕಥೆ.
103 ನೇ ವಯಸ್ಸಿನಲ್ಲಿ, ಅಜ್ಜಿ ವಾರದಲ್ಲಿ ನಾಲ್ಕೈದು ದಿನ ಜಿಮ್‌ಗೆ ಹೋಗುತ್ತಾರೆ. ಅಷ್ಟೇ ಅಲ್ಲ ಆಗಾಗ ಮೇಕಪ್ ಮಾಡಿಕೊಂಡು ಬರುತ್ತಾರೆ. ಅವರು ಯಂತ್ರದಿಂದ ವ್ಯಾಯಾಮ ಮಾಡುತ್ತಾರೆ. ಈಕೆಯ ಮುಖದ ಕಾಂತಿ ನೋಡಿದರೆ ಆಕೆಗೆ 103 ವರ್ಷ ಎಂದರೆ ನೀವು ನಂಬುವುದಿಲ್ಲ. ಜಿಮ್‌ನಲ್ಲಿರುವ ಆಕೆಯ ಫೋಟೋ ಹೊರಬಿದ್ದಿದೆ.
ಇದನ್ನೂ ಓದಿ: ಇದು ಚಿನ್ನದ ಪರ್ವತ, ಇಲ್ಲಿಗೆ ಹೋದ್ರೆ ಸಾವು ಕಟ್ಟಿಟ್ಟ ಬುತ್ತಿ ಅಂತೆ!
ಜಿಮ್‌ನಲ್ಲಿರುವ ಅಜ್ಜಿಯ ಫೋಟೋವನ್ನು @Pubity ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಕೆಲವೇ ಕ್ಷಣಗಳಲ್ಲಿ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಮತ್ತು ಲೈಕ್‌ಗಳು ಕೂಡ ಹರಿದು ಬರುತ್ತಿವೆ.
🚨| NEW: California 103-year-old woman still hits gym regularly: ‘Her happy place’‼️👏 pic.twitter.com/EEZQOe21c8
— Pubity (@Pubity) March 12, 2023
ವ್ಯಾಯಾಮದ ಜೊತೆಗೆ, ತೆರೇಸಾ ಅವರ ನೆಚ್ಚಿನ ಹವ್ಯಾಸಗಳು ಡ್ಯಾನ್ಸ್ ಮಾಡೋದು ಮತ್ತು ಹಾಡು ಹೇಳೋದು ಅಂತಾರೆ. 103ನೇ ವಯಸ್ಸಿಗೆ ಇಷ್ಟೊಂದು ಉತ್ಸಾಹ ಅಂದ್ರೆ ನಿಜಕ್ಕೂ ಆಶ್ಚರ್ಯ ಪಡಬೇಕಾದ ವಿಚಾರವೇ ಹೌದು. ಇವರ ವಿಡಿಯೋ ನೋಡಿದ್ರೆ ಎಂಥವರಿಗಾದ್ರೂ ಮೋಟಿವೇಟ್ ಆಗುತ್ತೆ.
ಹಳೆಯ ಕಾಲದ ಜನರು ಹೀಗೆಯೇ ಅಲ್ವಾ? ಅವರು ಎಷ್ಟೇ ಸುಸ್ತಾದ್ರೂ ಕೂಡ ಹೈಪರ್ ಆಗಿಯೇ ಕೆಲಸ ಮಾಡುತ್ತಾ ಇರ್ತಾರೆ. ಅದಕ್ಕಾಗಿಯೇ ಹೆಚ್ಚು ವರ್ಷಗಳ ಕಾಲ ಬದುಕಿರುತ್ತಾರೆ. ಸದ್ಯಕ್ಕೆ ಈ ಅಜ್ಜಿಯಂತೂ ಫುಲ್ ವೈರಲ್ ಆಗ್ತಾ ಇದ್ದಾರೆ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ