Exercise: ಹದಿಹರೆಯದವರು ನಾಚುವಂತೆ ಜಿಮ್​ನಲ್ಲಿ 103ರ ಅಜ್ಜಿಯ ವರ್ಕೌಟ್; ವಿಡಿಯೋ ನೋಡಿ

ಅಜ್ಜಿಯ ವರ್ಕೌಟ್

ಅಜ್ಜಿಯ ವರ್ಕೌಟ್

ಜಿಮ್‌ ಮೇಲೆ ತನ್ನ ತಾಯಿಗಿರುವ ಆಸಕ್ತಿ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಾ, ಶೀಲಾ “ಅಲ್ಲಿ ನನ್ನ ತಾಯಿ ಆಕೆಯ ಸ್ನೇಹಿತರನ್ನು ಭೇಟಿಯಾಗುತ್ತಾರೆ. ಅವರು ಎಲ್ಲದರ ಬಗ್ಗೆ ತುಂಬಾನೇ ಕುತೂಹಲ ಹೊಂದಿರುವ ಮಹಿಳೆ” ಎಂದು ಹೇಳಿದರು.

  • Share this:

ಕೆಲವರು ಬೆಳಗ್ಗೆ ಆಯ್ತು ಎಂದರೆ ಸಾಕು ಎದ್ದು ರೆಡಿಯಾಗಿ ಜಿಮ್ ಗೆ (Gym) ಹೋಗಿ ಕಠಿಣವಾದ ತಾಲೀಮು (Exercise) ಮಾಡಿ ಬರುತ್ತಾರೆ. ಹಾಗೆ ಮಾಡಿದರೆನೆ ಅವರಿಗೆ ಬೆಳಗ್ಗೆ ಆದಂತೆ. ಅದೇ ಇನ್ನೂ ಕೆಲವರು ಎಷ್ಟೇ ಎಬ್ಬಿಸಿದರೂ ‘ಯಾಕಪ್ಪಾ ಬೆಳಗ್ಗೆ ಆಗುತ್ತೆ’ ಅಂತ ಹಾಸಿಗೆಯನ್ನು ಪೂರ್ತಿಯಾಗಿ ಹಾಕಿಕೊಂಡು ಮಲಗುತ್ತಾರೆ. ಆದರೆ ದೇಹದ ಆರೋಗ್ಯ (Fitness) ಕಾಪಾಡುವಲ್ಲಿ ಈ ಬೆಳಗ್ಗೆ ಬೇಗನೆ ಏಳುವುದು, ಎದ್ದು ವಾಕಿಂಗ್ (Morning Walking) ಹೋಗುವುದು, ಜಾಗಿಂಗ್ ಮಾಡುವುದು, ಯೋಗ, ಧ್ಯಾನ ಮತ್ತು ಜಿಮ್ ನಲ್ಲಿ ವ್ಯಾಯಾಮ ಅಂತೆಲ್ಲಾ ಮಾಡುವುದು ತುಂಬಾನೇ ಒಳ್ಳೆಯದು, ಆದರೆ ಎಲ್ಲವೂ ನಮ್ಮ ಇತಿ ಮಿತಿಗಳಲ್ಲಿರಬೇಕು ಅಷ್ಟೇ.


ವಾರಕ್ಕೆ 3-4 ಬಾರಿ ಜಿಮ್ ಗೆ ಹೋಗಿ ವರ್ಕೌಟ್ ಮಾಡಿ ಬರ್ತಾರಂತೆ ಅಜ್ಜಿ


ಇಲ್ಲೊಬ್ಬರು ಅಜ್ಜಿ ಇದ್ದಾರೆ ನೋಡಿ, ನಿಮಗೆ ಜಿಮ್ ಗೆ ಹೋಗಲು ಮತ್ತು ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡಲು ನೀವು ಸ್ಫೂರ್ತಿಗಾಗಿ ಹುಡುಕುತ್ತಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.


103 ವರ್ಷ ವಯಸ್ಸಿನ ತೆರೇಸಾ ಮೂರ್ ಕ್ಯಾಲಿಫೋರ್ನಿಯಾದ ಕ್ಯಾಮರಿಲೊ ನಿವಾಸಿಯಾಗಿದ್ದು, ತನ್ನ ಸ್ಥಳೀಯ ಫಿಟ್ನೆಸ್ ಸೆಂಟರ್‌ಗೆ ವಾರಕ್ಕೆ ಕನಿಷ್ಠ ಮೂರರಿಂದ ನಾಲ್ಕು ಬಾರಿ ಹೋಗಿ ವರ್ಕೌಟ್ ಮಾಡಿ ಬರ್ತಾರಂತೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಆಕೆಯ ಮಗಳು ಶೀಲಾ ಮೂರ್, ಜಿಮ್ ಅನ್ನು ತನ್ನ ತಾಯಿಗೆ 'ಸಂತೋಷ ನೀಡುವ ಸ್ಥಳ' ಎಂದು ಹೇಳುತ್ತಾರೆ.


ತೆರೇಸಾ ಇಟಲಿಯಲ್ಲಿ ಜನಿಸಿದರು ಮತ್ತು 1946 ರಲ್ಲಿ ಒಬ್ಬ ವ್ಯಕ್ತಿಯನ್ನು ವಿವಾಹವಾದರು. "ಅವರು ಇಟಲಿಯನ್ನು ತೊರೆದಾಗ, ಅವರು ಅಲೆಮಾರಿ ಜೀವನವನ್ನು ನಡೆಸಿದರು ಎಂದು ನಾನು ಭಾವಿಸುತ್ತೇನೆ" ಎಂದು ಶೀಲಾ ಮಾಧ್ಯಮವೊಂದಕ್ಕೆ ತಿಳಿಸಿದರು.


ಜಿಮ್‌ ಮೇಲೆ ತನ್ನ ತಾಯಿಗಿರುವ ಆಸಕ್ತಿ ಮತ್ತು ಪ್ರೀತಿಯ ಬಗ್ಗೆ ಮಾತನಾಡುತ್ತಾ, ಶೀಲಾ “ಅಲ್ಲಿ ನನ್ನ ತಾಯಿ ಆಕೆಯ ಸ್ನೇಹಿತರನ್ನು ಭೇಟಿಯಾಗುತ್ತಾರೆ. ಅವರು ಎಲ್ಲದರ ಬಗ್ಗೆ ತುಂಬಾನೇ ಕುತೂಹಲ ಹೊಂದಿರುವ ಮಹಿಳೆ” ಎಂದು ಹೇಳಿದರು.


ಜೀವನದಲ್ಲಿ ಸಂತೋಷವಾಗಿರಿ ಅಂತ ಹೇಳ್ತಾರೆ ಈ ಅಜ್ಜಿ..


ದೀರ್ಘ ಮತ್ತು ಸಂತೋಷದ ಜೀವನವನ್ನು ಹೇಗೆ ನಡೆಸುವುದು ಎಂಬುದರ ಕುರಿತು ತೆರೇಸಾ ಇತರರಿಗೆ ಸಲಹೆ ಸಹ ನೀಡುತ್ತಾರೆ.


“ಜೀವನದಲ್ಲಿ ಸದಾ ಸಂತೋಷದಿಂದಿರಲು ಪ್ರಯತ್ನಿಸಿ. ಒಳ್ಳೆಯ ವಿಷಯಗಳ ಬಗ್ಗೆ ಯೋಚಿಸಲು ಪ್ರಯತ್ನಿಸಿ, ಎಲ್ಲವೂ ಸುಂದರವಾಗಿದೆ ಎಂದು ಯೋಚಿಸಲು, ಸುಂದರವಾದ ವಿಷಯಗಳನ್ನು ಯೋಚಿಸಲು ಪ್ರಯತ್ನಿಸಿ" ಎಂದು ಹೇಳುತ್ತಾರೆ.


ಅನೇಕ ಬಾರಿ ಇಂತಹ ನಿಜ ಜೀವನದ ಕತೆಗಳನ್ನು ಓದಿದಾಗ ಅನೇಕರಿಗೆ ಈ ವಯಸ್ಸಾದವರಿಗೆ ವ್ಯಾಯಾಮ ಎಷ್ಟರ ಮಟ್ಟಿಗೆ ಒಳ್ಳೆಯದು ಅನ್ನೋ ವಿಷಯದ ಬಗ್ಗೆ ಗೊಂದಲ ಇರುತ್ತದೆ. ಇಲ್ಲಿ ವೈದ್ಯರೊಬ್ಬರು ಇದರ ಬಗ್ಗೆ ಹೇಳಿದ್ದಾರೆ ನೋಡಿ.


ತುಂಬಾ ವಯಸ್ಸಾದವರಿಗೆ ವ್ಯಾಯಾಮ ಒಳ್ಳೆಯದೇ?


ದೈಹಿಕ ಚಟುವಟಿಕೆ ಅಥವಾ ವ್ಯಾಯಾಮವು ವಯಸ್ಸಾದವರಿಗೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವ್ಯಾಯಾಮವನ್ನು ಪ್ರಾರಂಭಿಸಲು ಮತ್ತು ದೈಹಿಕವಾಗಿ ಸಕ್ರಿಯರಾಗಲು ವಯಸ್ಸು ಎಂದಿಗೂ ಅಡ್ಡಬರುವುದಿಲ್ಲ.


ಮಾಧ್ಯಮದೊಂದಿಗೆ ಮಾತನಾಡುತ್ತಾ, ಹೈದರಾಬಾದಿನ ಯಶೋದಾ ಹಾಸ್ಪಿಟಲ್ ನ ಕನ್ಸಲ್ಟೆಂಟ್ ವೈದ್ಯ ಮತ್ತು ಮಧುಮೇಹ ತಜ್ಞ ಡಾ. ಹರಿ ಕಿಶನ್ ಬೂರುಗು ಅವರು “ಜಡತ್ವದ ಜೀವನಶೈಲಿಯನ್ನು ಅನುಸರಿಸುತ್ತಿರುವ ಜನರು ತಮ್ಮ 80 ವಯಸ್ಸಿನಲ್ಲೂ ವ್ಯಾಯಾಮ ಮಾಡಲು ಶುರು ಮಾಡಬಹುದು ಮತ್ತು ಇವರನ್ನು ಸದಾ ಕುಳಿತುಕೊಂಡು ಕೆಲಸ ಮಾಡುವ ವ್ಯಕ್ತಿಗಳಿಗೆ ಹೋಲಿಸಿದರೆ ದೀರ್ಘಕಾಲದವರೆಗೂ ಬದುಕುಳಿಯುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.
ವ್ಯಾಯಾಮದೊಂದಿಗೆ ಸುಧಾರಿತ ಫಿಟ್ನೆಸ್ ಮತ್ತು ಬಲವು ತುಂಬಾ ದುರ್ಬಲ ವಯಸ್ಸಾದ ವಯಸ್ಕರಲ್ಲಿಯೂ ಸಹ ಗುರುತಿಸಲ್ಪಟ್ಟಿದೆ” ಎಂದು ವೈದ್ಯರು ಹೇಳುತ್ತಾರೆ.


ಯುಎಸ್‌ಎ ಯ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಏನಂತ ಹೇಳುತ್ತೆ ನೋಡಿ


- ವಾರದಲ್ಲಿ ಕನಿಷ್ಠ 150 ನಿಮಿಷಗಳು ವೇಗದ ನಡಿಗೆಯಂತಹ ಮಧ್ಯಮ ತೀವ್ರತೆಯ ಚಟುವಟಿಕೆಯನ್ನು ಮಾಡಬೇಕು.


- ವಾರದಲ್ಲಿ ಕನಿಷ್ಠ 2 ದಿನ ಸ್ನಾಯುಗಳನ್ನು ಬಲಪಡಿಸುವ ಚಟುವಟಿಕೆಗಳನ್ನು ಮಾಡಬೇಕು.


- ಒಂದು ಕಾಲಿನ ಮೇಲೆ ನಿಲ್ಲುವಂತಹ ಸಮತೋಲನವನ್ನು ಸುಧಾರಿಸುವ ಚಟುವಟಿಕೆಗಳನ್ನು ಸಹ ಮಾಡಬೇಕು.


ವಯಸ್ಸಾದವರ ವ್ಯಾಯಾಮದ ಬಗ್ಗೆ ವೈದ್ಯರು ಹೇಳುವುದೇನು?


ವಯಸ್ಸಾದವರಿಗೆ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ಅವರ ವ್ಯಾಯಾಮಕ್ಕಾಗಿ ಮೌಲ್ಯಮಾಪನ ಮತ್ತು ಸ್ಕ್ರೀನಿಂಗ್ ಉಪಕರಣವನ್ನು ಬಳಸಬಹುದು ಎಂದು ಡಾ ಬೂರುಗು ಹೇಳಿದ್ದಾರೆ.


ಇದನ್ನೂ ಓದಿ: Digestion: ಪ್ರತಿದಿನ 5 ಒಣದ್ರಾಕ್ಷಿ ತಿಂದ್ರೆ ಏನೆಲ್ಲಾ ಲಾಭ ಇದೆ ಗೊತ್ತಾ?


"ಈ ಉಪಕರಣವು ವಯಸ್ಸಾದ ವಯಸ್ಕರಿಗೆ ಒಂದು ರೀತಿಯ ಪ್ರಶ್ನಾವಳಿಯಾಗಿದ್ದು, ಆರೋಗ್ಯ ಸಮಸ್ಯೆಗಳು ಮತ್ತು ಕಾಳಜಿಗಳನ್ನು ಪರೀಕ್ಷಿಸಲು ಮತ್ತು ವಿವಿಧ ಆರೋಗ್ಯ ಸಂದರ್ಭಗಳು ಮತ್ತು ಸನ್ನಿವೇಶಗಳಿಗೆ ಸೂಕ್ತವಾದ ದೈಹಿಕ ಚಟುವಟಿಕೆಯ ಕಾರ್ಯಕ್ರಮವನ್ನು ಅಭಿವೃದ್ಧಿಪಡಿಸಲು ಬಳಸಬಹುದು" ಎಂದು ಅವರು ವಿವರಿಸುತ್ತಾರೆ.
"ಹೃದಯ ಸಂಬಂಧಿ ಕಾಯಿಲೆಗಳಿರುವ ವಯಸ್ಸಾದ ಜನರು ತಮ್ಮ ವ್ಯಾಯಾಮದ ಕ್ರಮವನ್ನು ತಮಗೆ ಚಿಕಿತ್ಸೆ ನೀಡುವ ವೈದ್ಯರೊಂದಿಗೆ ಚರ್ಚಿಸಿ ಶುರು ಮಾಡುವುದು ಉತ್ತಮ” ಎಂದು ಡಾ ಬೂರುಗು ಹೇಳುತ್ತಾರೆ.

Published by:Mahmadrafik K
First published: