ನೇಣು ಹಾಕುವ ಹುದ್ದೆಗೆ ಅರ್ಜಿ ಆಹ್ವಾನ: ಅಮೆರಿಕನ್ ಸೇರಿದಂತೆ 102 ಮಂದಿಯಿಂದ ಅರ್ಜಿ ಸಲ್ಲಿಕೆ..!

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 45 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಎಂದು ತಿಳಿಸಲಾಗಿತ್ತು.

zahir | news18
Updated:March 1, 2019, 3:25 PM IST
ನೇಣು ಹಾಕುವ ಹುದ್ದೆಗೆ ಅರ್ಜಿ ಆಹ್ವಾನ: ಅಮೆರಿಕನ್ ಸೇರಿದಂತೆ 102 ಮಂದಿಯಿಂದ ಅರ್ಜಿ ಸಲ್ಲಿಕೆ..!
ಸಾಂದರ್ಭಿಕ ಚಿತ್ರ
  • News18
  • Last Updated: March 1, 2019, 3:25 PM IST
  • Share this:
ದೇಶದ ಅತಿದೊಡ್ಡ ತಿಹಾರ್ ಜೈಲಿನಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕೈದಿಗಳನ್ನು ನೇಣುಗಂಬಕ್ಕೆ ಹಾಕುವ ಸಿಬ್ಬಂದಿ ಇಲ್ಲದೇ  ಹಿಂದೊಮ್ಮೆ ಭಾರೀ ಸುದ್ದಿಯಾಗಿತ್ತು. ಏಕೆಂದರೆ ಹೆಚ್ಚಿನವರು ಈ ಹುದ್ದೆಯನ್ನು ಪಡೆಯಲು ಹಿಂದೇಟು ಹಾಕುತ್ತಾರೆ. ಇಂತಹ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ, ಅಮೆರಿಕದಲ್ಲೂ ಇದೆ ಎನ್ನಲಾಗಿದೆ. ಆದರೆ ಈ ಬಾರಿ ಮಾತ್ರ ತುಸು ಬದಲಾದಂತಿದೆ. ಇತ್ತೀಚೆಗೆ ಅಮೆರಿಕದಲ್ಲಿ ಪಾಶಿದಾರ( ಜೈಲಿನಲ್ಲಿ ನೇಣು ಹಾಕುವವನು) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, 2 ಹುದ್ದೆಗಳಿಗಾಗಿ ಬರೋಬ್ಬರಿ 102 ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು 45 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಎಂದು ತಿಳಿಸಲಾಗಿತ್ತು. ಅದರಂತೆ ಅಮೆರಿಕ ವ್ಯಕ್ತಿ ಸೇರಿದಂತೆ ನೂರಕ್ಕಿಂತ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಇಬ್ಬರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ನ್ಯಾಯಮೂರ್ತಿ ಹಾಗೂ ಜೈಲು ಸುಧಾರಣೆಗಳ ಸಚಿವಾಲಯ ತಿಳಿಸಿದೆ. ಹಾಗೆಯೇ ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮಾಹಿತಿಗಳನ್ನು ಗೌಪ್ಯವಾಗಿರಿಸಲಾಗುತ್ತದೆ ಎಂದು ಜೈಲು ಇಲಾಖೆ ಭರವಸೆ ನೀಡಿದೆ.

ಸಾಮಾನ್ಯವಾಗಿ ಸೌದಿ ಅರೇಬಿಯಾ ಮತ್ತು ಅಮೆರಿಕದಲ್ಲಿ ನೇಣುಗಂಬಕ್ಕೆ ಏರಿಸುವ ಹುದ್ದೆಗೆ ಆಯ್ಕೆಯಾದ ವ್ಯಕ್ತಿಗೆ 3 ಸಾವಿರ ಡಾಲರ್​ನಿಂದ 5 ಸಾವಿರ ಡಾಲರ್​ವರೆಗೆ ವೇತನ ನೀಡಲಾಗುತ್ತದೆ ಎನ್ನಲಾಗಿದೆ. ಅಂದರೆ ಸುಮಾರು 3 ಲಕ್ಷ 50 ಸಾವಿರ ರೂ. ಈ ಹಿನ್ನೆಲೆಯಲ್ಲೇನೋ, ಈ ಬಾರಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.

First published:March 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...