ಕೆಲವೊಬ್ಬರು 150 ಕಿಲೋ ಗ್ರಾಂ ನ ಆಸುಪಾಸಿನ ತೂಕವನ್ನು ಹೊಂದಿದ್ದರೆ, ಕೆಳಗೆ ನೆಲದ ಮೇಲೆ ನೆಟ್ಟಗೆ ಕುಳಿತುಕೊಳ್ಳಲು ಬರುವುದಿಲ್ಲ, ಹಾಗೂ ಒಂದು ವೇಳೆ ಕುಳಿತುಕೊಂಡರೂ, ನಂತರ ಆರಾಮಾಗಿ ಮೇಲಕ್ಕೆ ಎದ್ದೇಳಲು ಬರುವುದಿಲ್ಲ ಎಂದು ಗೋಳಾಡುತ್ತಿರುತ್ತಾರೆ. ಇದರರ್ಥ ಎಲ್ಲಾದಕ್ಕೂ ಕಷ್ಟಪಡಬೇಕಾದ ಸ್ಥಿತಿ ಎದುರಾಗುತ್ತದೆ ಅಂತ ಹೇಳಬಹುದು. ಹೌದು, ದೇಹದಲ್ಲಿನ ಅತಿಯಾದ ತೂಕ (Weight) ಎಂತಹದೇ ಮನುಷ್ಯನನ್ನು ತುಂಬಾನೇ ಜಡತ್ವ ಜೀವನಶೈಲಿಗೆ ದೂಡುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆದ್ದರಿಂದಲೇ ಬಹುತೇಕರು ಬೆಳಗ್ಗೆ ಎದ್ದ ತಕ್ಷಣ ಕೆಲವು ಕಿಲೋ ಮೀಟರ್ ಗಳಷ್ಟು ದೂರ ವಾಕಿಂಗ್ (Walking) ಮಾಡುವುದು, ಜಾಗಿಂಗ್ ಮಾಡುವುದು, ವ್ಯಾಯಾಮ ಮಾಡುವುದು, ಯೋಗ ಮತ್ತು ಧ್ಯಾನ ಮಾಡುವುದೆಲ್ಲವನ್ನು ರೂಢಿಸಿಕೊಂಡಿರುತ್ತಾರೆ ಅಂತ ಹೇಳಬಹುದು.
ಭಾರಿ ತೂಕವನ್ನು ಹೊಂದಿದ್ರಂತೆ ಟ್ಯಾಮಿ ಸ್ಲೇಟನ್
ಇದನ್ನೆಲ್ಲಾ ಈಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಒಂದು ಕ್ಷಣ ಆಶ್ಚರ್ಯವಾಗಬಹುದು. ಇಲ್ಲೊಬ್ಬ ರಿಯಾಲಿಟಿ ಟಿವಿ ಸ್ಟಾರ್ ಇದ್ದಾರೆ ನೋಡಿ. ಅವರ ದೇಹದ ತೂಕವನ್ನು ಕೇಳಿದರೆ ಎಂಥವರಾದರೂ ಬೆಚ್ಚಿ ಬೀಳುವುದು ಗ್ಯಾರೆಂಟಿ. ರಿಯಾಲಿಟಿ ಟಿವಿ ಸ್ಟಾರ್ ಟ್ಯಾಮಿ ಸ್ಲೇಟನ್ ಅವರು ಹಿಂದೆ ತುಂಬಾನೇ ಭಾರಿ ತೂಕವನ್ನು ಹೊಂದಿದ್ದು, ಕಾರಿನಲ್ಲಿ ಕುಳಿತುಕೊಳ್ಳಲು ಕಷ್ಟವಾಗುತಿತ್ತಂತೆ. ಈಗ ತಮ್ಮ ದೇಹದ ತೂಕವನ್ನು ಇಳಿಸಿಕೊಂಡ ನಂತರ ಅಂತಿಮವಾಗಿ ಅವರಿಗೆ ಕಾರಿನಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತಿದೆಯಂತೆ ಎಂದು ಬಹಿರಂಗಪಡಿಸಿದ್ದಾರೆ.
ತನ್ನ ಸಹೋದರಿಯೊಂದಿಗೆ '1,000-ಎಲ್‌ಬಿ ಸಿಸ್ಟರ್ಸ್' ನಲ್ಲಿ ನಟಿಸಿದ್ದರಂತೆ..
ಟ್ಯಾಮಿ ಸ್ಲೇಟನ್ ತನ್ನ ಸಹೋದರಿ ಆಮಿ ಸ್ಲೇಟನ್-ಹಾಲ್ಟರ್ಮನ್ ಅವರೊಂದಿಗೆ ಟಿವಿ ಶೋ '1,000-ಎಲ್‌ಬಿ ಸಿಸ್ಟರ್ಸ್' ನಲ್ಲಿ ನಟಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ.
ಈ ಟಿವಿ ಶೋ ನ ಹಿಂದಿನ ಸಂಚಿಕೆಯಲ್ಲಿ, 36 ವರ್ಷದ ಟ್ಯಾಮಿ ಸ್ಲೇಟನ್ ಅವರು ತಾವು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ ವರ್ಷಗಳ ನಂತರ ತೂಕ ಇಳಿಸುವ ಶಸ್ತ್ರಚಿಕಿತ್ಸೆಗೆ ಅರ್ಹತೆ ಪಡೆದಿದ್ದಾರೆ ಎಂದು ಬಹಿರಂಗಪಡಿಸಿದ್ದರು.
ಇದನ್ನೂ ಓದಿ: ಗೋಮೂತ್ರದ ಪ್ರಯೋಜನ ಗೊತ್ತು, ಆದ್ರೆ ಮಾನವ ಮೂತ್ರದಿಂದ ಏನೆಲ್ಲಾ ಲಾಭವಿದೆ ಗೊತ್ತಾ?
"ಶಸ್ತ್ರಚಿಕಿತ್ಸೆಗೆ ಅನುಮೋದನೆ ಪಡೆಯಲು ನಾನು 550 ಎಲ್‌ಬಿಎಸ್ ತೂಕವನ್ನು ಹೊಂದಬೇಕಾಗಿತ್ತು" ಎಂದು ಟ್ಯಾಮಿ ವೀಡಿಯೋ ಕ್ಲಿಪ್ ನಲ್ಲಿ ಹೇಳಿದ್ದಾರೆ.
View this post on Instagram
81 ಕೆಜಿ ತೂಕ ಇಳಿಸಿಕೊಂಡ ಟ್ಯಾಮಿ
ಪೀಪಲ್ ಪ್ರಕಾರ, ಆಹಾರ ಪುನರ್ವಸತಿ ಸೌಲಭ್ಯದಲ್ಲಿ ಸಮಯ ಕಳೆದ ನಂತರ ಅವರು 180 ಪೌಂಡ್ ಎಂದರೆ 81 ಕೆಜಿ ಗಿಂತಲೂ ಹೆಚ್ಚು ದೇಹದ ತೂಕವನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾದರು. ಪುನರ್ವಸತಿಗೆ ಪ್ರವೇಶಿಸುವ ಮೊದಲು ಅವರು ಸುಮಾರು 717 ಪೌಂಡ್ ಎಂದರೆ 325 ಕೆಜಿ ತೂಕ ಹೊಂದಿದ್ದರು.
ಇದನ್ನೂ ಓದಿ: ರೈಲುಗಳಲ್ಲಿ ಬಣ್ಣ ಬಣ್ಣದ ಬೋಗಿಗಳು ಇರೋದೇಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಫ್ಯಾಕ್ಟ್!
ಇಷ್ಟೊಂದು ದೇಹದ ತೂಕವನ್ನು ಕಡಿಮೆ ಮಾಡಿಕೊಂಡ ನಂತರ ಅಂತಿಮವಾಗಿ ಅವರು ತಮ್ಮ ಕಾರಿನ ಸೀಟಿನಲ್ಲಿ ಆರಾಮಾಗಿ ಕುಳಿತುಕೊಳ್ಳಲು ಸಾಧ್ಯವಾಯಿತು ಎಂದು ಸ್ಲೇಟನ್ ಭಾನುವಾರ ಟಿಕ್ ಟಾಕ್ ವೀಡಿಯೋದಲ್ಲಿ ಬಹಿರಂಗಪಡಿಸಿದ್ದಾರೆ.
ಈ ಸ್ಟಾರ್ ನ ಅಭಿಮಾನಿಗಳು ಆಕೆಯ ಸಾಧನೆಗಾಗಿ ಆಕೆಯನ್ನು ಅಭಿನಂದಿಸಿದರು ಮತ್ತು ತೂಕ ಇಳಿಸಿಕೊಳ್ಳುವ ತಮ್ಮ ಪ್ರಯಾಣವನ್ನು ಹಾಗೆಯೇ ಮುಂದುವರಿಸಲು ಪ್ರೋತ್ಸಾಹಿಸಿದರು.
ತನ್ನ ಅನಿಯಂತ್ರಿತ ತೂಕ ಹೆಚ್ಚಳ ಮತ್ತು ಜೀವನಶೈಲಿಯಿಂದ ಉದ್ಭವಿಸಿದ ಆರೋಗ್ಯ ಸಮಸ್ಯೆಗಳ ನಂತರ, ಟ್ಯಾಮಿ ಸ್ಲೇಟನ್ ಕಳೆದ ವರ್ಷ ಉಸಿರಾಟ ಸಮಸ್ಯೆಯೊಂದಿಗೆ ಹೆಣಗಾಡಲು ಪ್ರಾರಂಭಿಸಿದ ನಂತರ ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ಮಿರರ್ ವರದಿ ಮಾಡಿದೆ. ಅವಳು ತಿಂಗಳುಗಳವರೆಗೆ ಉಸಿರಾಟದ ಟ್ಯೂಬ್ ಅನ್ನು ಹಾಕಿಕೊಂಡು ಇರಬೇಕಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ.
ಸ್ಲೇಟನ್ ಸಹೋದರಿಯರ ಜೀವನ ಪ್ರಯಾಣವನ್ನು ತೋರಿಸುವ '1000-ಎಲ್‌ಬಿ ಸಿಸ್ಟರ್ಸ್' 2020 ರಲ್ಲಿ ಪ್ರಥಮ ಪ್ರದರ್ಶನ ಕಂಡಿತು. ಟಿಎಲ್‌ಸಿ ರಿಯಾಲಿಟಿ ಶೋ ನ ನಾಲ್ಕನೇ ಸೀಸನ್ ಪ್ರಸ್ತುತ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ