Multimillionaire: 2 ಕಂಪನಿಗಳ ಒಡತಿಯಂತೆ 10 ವರ್ಷದ ಆಸ್ಟ್ರೇಲಿಯಾದ ಹುಡುಗಿ! ಆಕೆ ಕೋಟ್ಯಧಿಪತಿಯಾದ ಸ್ಟೋರಿ ಇಲ್ಲಿದೆ..

10 ವರ್ಷದ ಆಸ್ಟ್ರೇಲಿಯಾದ ಈ ಮಲ್ಟಿಮಿಲಿಯನೇರ್ ಹುಡುಗಿ ತನ್ನ ಹಣವನ್ನು ಶಾಪಿಂಗ್ ಮಾಡುವುದಕ್ಕಾಗಿ ಮತ್ತು ತನ್ನ ತಾಯಿಯ ಐಷಾರಾಮಿ ರಜೆಗಾಗಿ ಖರ್ಚು ಮಾಡಲು ಯೋಜಿಸಿದ್ದಾಳೆ

ಪಿಕ್ಸೀ ಕರ್ಟಿಸ್

ಪಿಕ್ಸೀ ಕರ್ಟಿಸ್

  • Share this:
ಪಿಕ್ಸೀ ಕರ್ಟಿಸ್ (Pixie Curtis) ಎಂಬ 10 ವರ್ಷದ ಆಸ್ಟ್ರೇಲಿಯಾದ (Australian Girl) ಹುಡುಗಿ ಮಿಲಿಯನೇರ್ (Millionaire) ಆಗಿ ತನ್ನ 15 ವರುಷದ ವಯಸ್ಸಿನ ಗಡುವಿಗೆ ನಿವೃತ್ತಿಯ (Retirement) ಹಾದಿಯಲ್ಲಿದ್ದಾಳೆ..! ಇದೇನಪ್ಪ ವಿಚಿತ್ರ ಆಡುವ, ಶಾಲೆಗೆ ಹೋಗುವ ವಯಸ್ಸಲ್ಲಿ ಕಂಪನಿಗಳ ಒಡತಿ ಹೇಗಾದ್ಳು..? ಕಂಪನಿಯನ್ನು(Company) ಹೇಗೆಲ್ಲ ನಡೆಸುತ್ತಾಳೆ. ಇನ್ನೈದು ವರ್ಷಕ್ಕೆ ಅಂದ್ರೆ, ಆಕೆಗೆ 15 ವರ್ಷವಾಗುವಷ್ಟರಲ್ಲಿ ನಿವೃತ್ತಿ ಯಾಕಾಗ್ತಾಳೆ ಎಂಬೆಲ್ಲ ಪ್ರಶ್ನೆಗಳು ನಿಮ್ಮ ಮನಸ್ಸಲ್ಲಿ ಮೂಡಿರಬೇಕಲವ್ವ..?

ದೊಡ್ಡ ಲಾಭ ಗಳಿಸಿದೆ
ಇನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 10 ವರ್ಷದ ಬಾಲಕಿ ಕರ್ಟಿಸ್ ಸ್ಥಾಪಿಸಿದ ಆಟಿಕೆ ಕಂಪನಿ ಈಗಾಗಲೇ ದೊಡ್ಡ ಲಾಭವನ್ನು ಗಳಿಸಿದೆ. ಅವಳು ತನ್ನ ತಾಯಿ ರಾಕ್ಸಿ ಜಾಸೆಂಕೊ ಸಹಾಯದಿಂದ ಪಿಕ್ಸೀ ಫಿಡ್ಜೆಟ್ಸ್ ಅನ್ನು ಪ್ರಾರಂಭಿಸಿದಳು. ಕಳೆದ ವರ್ಷ ಈ ಕಂಪನಿ ಆರಂಭವಾದ ಕೇವಲ 48 ಗಂಟೆಗಳಲ್ಲಿ ಕಂಪನಿಯ ಆಟಿಕೆಗಳು ಸಂಪೂರ್ಣವಾಗಿ ಮಾರಾಟವಾದವು.

ಅಷ್ಟು ಮಾತ್ರವಲ್ಲದೆ, ಪಿಕ್ಸೀ , ಮಗುವಾಗಿದ್ದಾಗ ಅವರ ತಾಯಿ "ಪಿಕ್ಸೀ ಬೋವ್ಸ್" ಎಂಬ ವ್ಯಾಪಾರವನ್ನು ಕೂಡಾ ಪ್ರಾರಂಭಿಸಿದರು. ಪಿಕ್ಸೀ ಅದನ್ನು ಇಂದು ನಡೆಸುತ್ತಿದ್ದಾಳೆ. ಈ ಎರಡೂ ಕಂಪನಿಗಳು ಈಗ “ಪಿಕ್ಸೀ ಪಿಕ್ಸ್‌” ನ ಭಾಗವಾಗಿದ್ದು ಮಕ್ಕಳ ಆಟಗಳು ಮತ್ತು ಪರಿಕರಗಳನ್ನು ಮಾರಾಟ ಮಾಡುತ್ತಿವೆ.

ಇದನ್ನೂ ಓದಿ: Viral News: 16ನೇ ವರ್ಷಕ್ಕೆ ಶಾಲೆ ಬಿಟ್ಟ, ಈಗ ಆತ ಕೋಟ್ಯಧಿಪತಿ... ಶ್ರೀಮಂತಿಕೆಯ ಗುಟ್ಟು ಬಿಚ್ಚಿಟ್ಟಿದ್ದಾನೆ!

ಯಶಸ್ವಿ ವ್ಯವಹಾರ
ಬಯಸಿದರೆ ಅವಳು 15 ವರ್ಷಕ್ಕೆ ನಿವೃತ್ತಿ ಹೊಂದಬಹುದು” ಎಂದು ಜಾಸೆಂಕೊ ಅವರು, news.com.au ಗೆ, ಹೇಳಿದರು. "ನಾನು 100 ವರ್ಷ ವಯಸ್ಸಿನವರೆಗೆ ಕೆಲಸ ಮಾಡುತ್ತೇನೆ ಮತ್ತು ಪಿಕ್ಸೀ 15ನೇ ವಯಸ್ಸಿಗೆ ನಿವೃತ್ತಿ ತೆಗೆದುಕೊಳ್ಳುತ್ತಾಳೆ" ಎಂಬುವುದು ನಮ್ಮ ಕುಟುಂಬದ ಜೋಕ್ ಆಗಿದೆ. ಯಾರು ಬುದ್ಧಿವಂತರು ? ಎಂಬುವುದು ಖಂಡಿತಾ ನನಗೆ ತಿಳಿದಿದೆ ಎಂದು ಕೂಡ ಅವರು ಸೇರಿಸಿದರು. ಜೇಸೆಂಕೊ Sweaty Betty PR ಸೇರಿದಂತೆ ಹಲವಾರು ಇತರ ಯಶಸ್ವಿ ವ್ಯವಹಾರಗಳನ್ನು ಹೊಂದಿದ್ದಾರೆ .

ಇನ್ನೂ ಹೇಳುವುದಾದಲ್ಲಿ, ಪಿಕ್ಸೀ ಕಥೆಯು ಸೋಷಿಯಲ್‌ ಮಿಡಿಯಾದಲ್ಲಿ ಆಕೆಗೆ ಹೆಚ್ಚಿನ ಅನುಯಾಯಿಗಳನ್ನು ಗಳಿಸಿಕೊಟ್ಟಿದೆ. ಇನ್ಸ್ಟಾಗ್ರಾಮ್‌ನಲ್ಲಿ ಆಕೆಯ ಅನುಯಾಯಿಗಳ ಸಂಖ್ಯೆ ಬರೋಬ್ಬರಿ 100,000ಕ್ಕೂ ಹೆಚ್ಚು..!. ಪಿಕ್ಸೀ ಚಿಕ್ಕ ವಯಸ್ಸಿಗೇ ಯಶಸ್ಸನ್ನು ಸಾಧಿಸಿದ್ದು, ಅವಳ ತಾಯಿ ಕಂಪನಿಗಾಗಿ ಕಡ್ಡಾಯವಾಗಿ ಕೆಲಸ ಮಾಡುವ ಒತ್ತಡವನ್ನು ಪಿಕ್ಸೀ ತಲೆ ಮೇಲೆ ಹೊರಿಸಲು ಇಷ್ಟ ಪಡುವುದಿಲ್ಲ .

ಮಲ್ಟಿಮಿಲಿಯನೇರ್ ಹುಡುಗಿ
ಪಿಕ್ಸೀ ಮುಂದೆ, ಕಂಪನಿಯ ಮುಖವಾಗಿರಲು ಬಯಸದ ಪಕ್ಷದಲ್ಲಿ ಅಥವಾ ಭವಿಷ್ಯತ್ತಿನಲ್ಲಿ ಪಿಕ್ಸೀ ಪಿಕ್ಸ್ ಮತ್ತು ಪಿಕ್ಸೀ ಬೋವ್ಸ್‌ನಲ್ಲಿ ತೊಡಗಿಸಿಕೊಳ್ಳಲು ಇಷ್ಟ ಪಡದಿದ್ದಲ್ಲಿ ನಾವು ಕಂಪನಿಯ ಮರುಮೌಲ್ಯಮಾಪನ ಮಾಡುತ್ತೇವೆ ಎಂಬುವುದನ್ನು ನಾನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ಆದರೆ, ಸದ್ಯಕ್ಕೆ ಅವಳು ತುಂಬಾ ಕಲಿಯುತ್ತಿದ್ದಾಳೆ ಮತ್ತು ಸಂತೋಷವಾಗಿದ್ದಾಳೆ” ಎಂದು ಜೇಸೆಂಕೊ ತಿಳಿಸಿದರು. ಮತ್ತೊಂದೆಡೆ, 10 ವರ್ಷದ ಆಸ್ಟ್ರೇಲಿಯಾದ ಈ ಮಲ್ಟಿಮಿಲಿಯನೇರ್ ಹುಡುಗಿ ತನ್ನ ಹಣವನ್ನು ಶಾಪಿಂಗ್ ಮಾಡುವುದಕ್ಕಾಗಿ ಮತ್ತು ತನ್ನ ತಾಯಿಯ ಐಷಾರಾಮಿ ರಜೆಗಾಗಿ ಖರ್ಚು ಮಾಡಲು ಯೋಜಿಸಿದ್ದಾಳೆ.

$21 ಮಿಲಿಯನ್ ಮೌಲ್ಯ
ಅವಳ ಬಳಿ ಒಳ್ಳೆಯ ಬಟ್ಟೆಗಳಿಲ್ಲ , ಹಾಗಾಗಿ ನಾನು ಅವಳಿಗಾಗಿ ಹೊಸ ಬಟ್ಟೆಗಳನ್ನು ಖರೀದಿಸುತ್ತೇನೆ, ಇದಲ್ಲದೆ, ನಾನು ಅವಳಿಗೆ ಕೆಲವು ನೈಜ ಕೂದಲಿನ ಎಕ್ಸ್‌ಟೆನ್ಶನ್‌ಗಳನ್ನು ನೀಡಲು ಬಯಸುತ್ತೇನೆ. ಏಕೆಂದರೆ ಅವಳಿಗೆ ಅವುಗಳ ತೀರಾ ಅಗತ್ಯವಾಗಿವೆ," ಎಂದು ಪಿಕ್ಸೀ ಡೈಲಿ ಮೇಲ್‌ಗೆ ತಿಳಿಸಿದಳು. ಸೂರಿ ಕ್ರೂಸ್, ನಾರ್ತ್ ವೆಸ್ಟ್, ಮತ್ತು ಟ್ರೂ ಥಾಂಪ್ಸನ್ ಸೇರಿದಂತೆ ಹಲವು ಪ್ರಸಿದ್ಧ ಮಕ್ಕಳು ಪಿಕ್ಸೀ ಬೋವ್ಸ್ ಅನ್ನು ಧರಿಸಿರುವ ಛಾಯಾಚಿತ್ರಗಳನ್ನು ನೋಡಬಹುದು.

ಇದನ್ನೂ ಓದಿ: Millionaire Story: ಪಾರ್ಕ್​ ಬೆಂಚ್​ಗಳ ಮೇಲೆ ಮಲಗಿ ದಿನಗಳನ್ನು ಕಳೆದಿದ್ದ ವ್ಯಕ್ತಿ ಈಗ ಮಿಲಿಯನೇರ್..!

ಡೈಲಿ ಮೇಲ್ ಆಸ್ಟ್ರೇಲಿಯಾ 2018ರಲ್ಲಿನ ವರದಿ ಪ್ರಕಾರ, ಪಿಕ್ಸೀ ತನ್ನ ಬೋ ವ್ಯವಹಾರದಿಂದ ಗಳಿಸುವ ಹಣದ ಆಧಾರದ ಮೇಲೆ ಲೆಕ್ಕಹಾಕಿದಲ್ಲಿ ಆಕೆಗೆ 18 ವರ್ಷ ತುಂಬುವ ಹೊತ್ತಿಗೆ ಆಕೆಯ ಕಂಪನಿ ಸುಮಾರು $21 ಮಿಲಿಯನ್ ಮೌಲ್ಯದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಜೇಸೆಂಕೊ ಆಗಸ್ಟ್‌ನಲ್ಲಿ ತನ್ನ ಆಗ 9 ವರ್ಷದ ಮಗಳಿಗೆ ಹೊಚ್ಚ ಹೊಸ $270,000 ವೆಚ್ಚದ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಸುದ್ದಿ ಮಾಡಿದ್ದರು .
Published by:vanithasanjevani vanithasanjevani
First published: