HOME » NEWS » Trend » 10 TYPES OF STANDARD INSURANCE POLICIES SPAWNED BY PANDEMIC STG LG

ಕೊರೋನಾದಿಂದ ತತ್ತರಿಸಿರುವ ಬದುಕಿಗಾಗಿ ಕೈಗೆಟುಕುವ 10 ಸರಳ ವಿಮೆ ಯೋಜನೆಗಳು ಇಲ್ಲಿವೆ..

ಆರೋಗ್ಯ ಸಂಜೀವಿನಿ ಯೋಜನೆ- ಇದು ವೈಯಕ್ತಿವಾಗಿ ಹಾಗೂ ಕುಟುಂಬದವರಿಗೆ ಭದ್ರತೆ ಒದಗಿಸುವ ಯೋಜನೆ. ವ್ಯಕ್ತಿಗೆ ಯಾವುದಾದರೂ ವ್ಯವಹಾರದಲ್ಲಿ ನಷ್ಟ, ಆಕಸ್ಮಿಕ ಘಟನೆಗಳು ಸಂಭವಿಸಿದ್ದಲ್ಲಿ ಇದರ ನಷ್ಟವನ್ನು ತುಂಬಿಕೊಡುತ್ತದೆ. ಈ ಯೋಜನೆಯ ವಿಮಾದಾರರು ಕನಿಷ್ಠ 50, 000 ಹಾಗೂ ಗರಿಷ್ಠ 10 ಲಕ್ಷದವರೆಗೂ ಹಣ ಪಾವತಿ ಮಾಡಬಹುದು.

news18-kannada
Updated:April 8, 2021, 11:04 AM IST
ಕೊರೋನಾದಿಂದ ತತ್ತರಿಸಿರುವ ಬದುಕಿಗಾಗಿ ಕೈಗೆಟುಕುವ 10 ಸರಳ ವಿಮೆ ಯೋಜನೆಗಳು ಇಲ್ಲಿವೆ..
ಪ್ರಾತಿನಿಧಿಕ ಚಿತ್ರ.
  • Share this:
ಕೋವಿಡ್-19 ಇಡೀ ಜಗತ್ತಿನ ನಿದ್ದೆಗೆಡಿಸುತ್ತಿರುವುದು ಗೊತ್ತೇ ಇದೆ. ಇಂತಹ ಸಮಯದಲ್ಲಿ ಜನರ ಭವಿಷ್ಯಕ್ಕಾಗಿ ಭಾರತ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಆರೋಗ್ಯ, ಜೀವನ ಹೀಗೆ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದಂತೆ ವಿಮೆಗಳನ್ನು ಜಾರಿಗೆ ತರಲು ಒತ್ತಾಯಿಸಿತ್ತು. ಈ ಹಿನ್ನೆಲೆ ಜನರು ಆನ್‍ಲೈನ್‍ನಲ್ಲಿ ಕೋವಿಡ್ ವಿಮಾ ಸೌಲಭ್ಯಗಳು ಸೇರಿದಂತೆ ಇನ್ನಿತರೆ ಯೋಜನೆಗಳ ಮೊರೆ ಹೋಗುತ್ತಿದ್ದಾರೆ. ಅಂತಹ ಹತ್ತು ವಿಮೆಗಳನ್ನು ಇಲ್ಲಿ ಪರಿಚಯಿಸಲಾಗುತ್ತಿದೆ.

1. ಸರಳ ಪಿಂಚಣಿ ವಾರ್ಷಿಕ ವೇತನ ಯೋಜನೆ

ಇದು ವಿಮಾದಾರರ ಲಾಭಗಳು ಹಾಗೂ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿರದೆ ಲಾಭದ ಖಾತರಿಯನ್ನು ನೀಡುತ್ತದೆ. ಅಂದರೆ ಒಂದೇ ಜೀವದ ಎರಡು ಆ್ಯನ್ಯುಟಿ ಆಯ್ಕೆಗಳು, ಜಂಟಿ ಜೀವಿತಾವಧಿಯ ವಾರ್ಷಿಕ ಲಾಭವು ವಿಮಾದಾರರಿಗೆ ಸಿಗುತ್ತದೆ. ನಿರ್ದಿಷ್ಟ ಅವಧಿಗೆ ಒಂದು ದೊಡ್ಡ ಮೊತ್ತ ಅಥವಾ ನಿಯಮಿತ ಪಾವತಿ ಮಾಡಿದ ನಂತರ, ಒಬ್ಬ ವ್ಯಕ್ತಿಯು ಜೀವ ವಿಮಾದಾರರಿಂದ ನಿಯಮಿತ ಪಾವತಿಯನ್ನು ಸ್ವೀಕರಿಸಲು ಯೋಜನೆ ಸಹಾಯ ಮಾಡುತ್ತದೆ. ಅಲ್ಲದೇ ಇದು ಗರಿಷ್ಟ ಹೂಡಿಕೆ ಮಿತಿ ಹೊಂದಿಲ್ಲ. ವಿಶೇಷವೇನೆಂದರೆ ಮೊದಲನೆಯದಾಗಿ ಸರಳ ಪಿಂಚಣಿ ಯೋಜನೆ ತೆಗೆದುಕೊಳ್ಳುವ ವ್ಯಕ್ತಿಗೆ ವಾರ್ಷಿಕ ಪಾವತಿ ಮಾಡಲಾಗುತ್ತದೆ. ಎರಡನೆಯದಾಗಿ ವಿಮೆದಾರನ ಮರಣ ನಂತರ, ಅವನ ಸಂಗಾತಿಗೆ ವಾರ್ಷಿಕವಾಗಿ ಒಂದು ವಾರ್ಷಿಕವನ್ನು ಪಡೆಯುವುದಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ.

2. ಕೊರೋನಾ ಕವಚ ಯೋಜನೆ

ಇದು ಕೋವಿಡ್ ಚಿಕಿತ್ಸಾ ವೆಚ್ಚ ಭರಿಸಲು ಜಾರಿಗೆ ತಂದಿರುವ ಕಡಿಮೆ ಅವಧಿಯ ಯೋಜನೆಯಾಗಿದೆ. ಇದು ಪಿಪಿಇ ಕಿಟ್, ವೆಂಟಿಲೇಟರ್, ವೈದ್ಯರ ಭೇಟಿಯ ವೆಚ್ಚ ಸೇರಿದಂತೆ ಒಟ್ಟಿನಲ್ಲಿ ಕೊರೋನಾಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಈ ಯೊಜನೆ ಮೂಲಕ ಮಪರಿಹಾರ ಸಿಗುತ್ತದೆ. ಸೆಪ್ಟೆಂಬರ್ 30ರವರೆಗೆ ಈ ಯೋಜನೆಯ ಲಾಭ ಪಡೆಯಲು ಅವಕಾಶವಿದೆ.

3. ಮಾಷಕ ರಕ್ಷಕ ಆರೋಗ್ಯ ಯೋಜನೆ

ಇದರಲ್ಲಿ ರೋಗಕ್ಕೆ ಒಳಗಾದ ವ್ಯಕ್ತಿ 72 ಗಂಟೆಗಳ ಕಾಲ ರೋಗದ ಕಾರಣ ಆಸ್ಪತ್ರೆಗೆ ದಾಖಲಾಗಿರಬೇಕು. ಡೆಂಗ್ಯೂ, ಮಲೇರಿಯಾ, ಫಿಲೇರಿಯಾ, ಚಿಕುನ್ ಗುನ್ಯಾ, ಜಿಕಾ ವೈರಸ್ ಹೀಗೆ ಈ ರೀತಿಯ ಖಾಯಿಲೆಗಳಿಗೆ ಒಳಗಾದಲ್ಲಿಯೂ ಈ ಯೋಜನೆ ನೆರವಿಗೆ ಬರಲಿದೆ.Coronavirus: ಕೊರೋನಾ ಲಸಿಕೆ ಪಡೆದ ನಂತರ ಆ್ಯಂಟಿಬಾಡಿ ಟೆಸ್ಟ್​ನ ಅಗತ್ಯವಿದೆಯೇ?

4. ಆರೋಗ್ಯ ಸಂಜೀವಿನಿ ಯೋಜನೆ

ಇದು ವೈಯಕ್ತಿವಾಗಿ ಹಾಗೂ ಕುಟುಂಬದವರಿಗೆ ಭದ್ರತೆ ಒದಗಿಸುವ ಯೋಜನೆ. ವ್ಯಕ್ತಿಗೆ ಯಾವುದಾದರೂ ವ್ಯವಹಾರದಲ್ಲಿ ನಷ್ಟ, ಆಕಸ್ಮಿಕ ಘಟನೆಗಳು ಸಂಭವಿಸಿದ್ದಲ್ಲಿ ಇದರ ನಷ್ಟವನ್ನು ತುಂಬಿಕೊಡುತ್ತದೆ. ಈ ಯೋಜನೆಯ ವಿಮಾದಾರರು ಕನಿಷ್ಠ 50, 000 ಹಾಗೂ ಗರಿಷ್ಠ 10 ಲಕ್ಷದವರೆಗೂ ಹಣ ಪಾವತಿ ಮಾಡಬಹುದು.

5. ಭಾರತ್ ಗೃಹ ರಕ್ಷಾ ಯೋಜನೆ

ಇದು ಮನೆ ನಿರ್ಮಾಣ, ಮನೆಯ ಪರಿಕರಗಳು ವೆಚ್ಚ ಭರಿಸಲು ಸಂಬಂಧಿಸಿದ ಯೋಜನೆ. ಇದಲ್ಲದೇ ಇನ್ನಿತರೆ ವಸತಿ ಸೌಲಭ್ಯ ಪಡೆಯುವುದಕ್ಕೂ ಇದು ನೆರವಾಗಲಿದೆ. ಜೊತೆಗೆ ಎಂಜಿಯರಿಂಗ್‍ಗಳ ವೆಚ್ಚ, ಕಟ್ಟಡ ನಿರ್ಮಾಣಕಾರರ ವೆಚ್ಚ ಹೀಗೆ ಇನ್ನಿತರ ವೆಚ್ಚಗಳನ್ನು ಈ ಯೋಜನೆ ಮೂಲಕ ಪೂರೈಸಿಕೊಳ್ಳಬಹುದು.

6. ಭಾರತ ಲಘು ಉದ್ಯಮ ಸುರಕ್ಷಾ ಯೋಜನೆ

ಸಣ್ಣ ಉದ್ಯಮ ಪ್ರಾರಂಭಿಸುವವರು ಈ ಯೋಜನೆಗೆ ಒಳಪಡಲಿದ್ದು, ಈ ಮೂಲಕ 5 ಕೋಟಿಯಿಂದ 50 ಕೋಟಿಯವರೆಗೆ ಪಡೆಯಬಹುದು. ಪ್ರಾರಂಭಿಕ ವೆಚ್ಚಗಳು, ವೃತ್ತಿಪರ ಶುಲ್ಕಗಳು, ಅವಶೇಷಗಳನ್ನು ತೆಗೆದುಹಾಕುವುದು, ಪುರಸಭೆ ವೆಚ್ಚಗಳು ಈ ನೀತಿಗೆ ಒಳಪಡುತ್ತದೆ. ಈ ಪಾಲಿಸಿಯ ಅವಧಿ 12 ತಿಂಗಳು ಮಾತ್ರ.

7. ಕೊರೋನಾ ರಕ್ಷಕ ಆರೋಗ್ಯ ವಿಮಾ ಯೋಜನೆ

ಕೊರೋನಾ ವೆಚ್ಚ ತುಂಬುವ ಯೋಜನೆಯೇ ಕೊರೋನಾ ರಕ್ಷಕ ಆರೋಗ್ಯ ವಿಮಾ ಯೋಜನೆ. ಇದು ಕೊರೋನಾ ಚಿಕಿತ್ಸೆಗೊಳಪಡುವ ವ್ಯಕ್ತಿಯ ವೈದ್ಯಕೀಯ ಸಂಪೂರ್ಣ ಅಗತ್ಯತೆಗಳನ್ನು ಪೂರೈಸುತ್ತದೆ. ಆದರೆ ಕೋವಿಡ್‍ಗೆ ತುತ್ತಾಗುವ ವ್ಯಕ್ತಿ ಕನಿಷ್ಟ 72 ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದರೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು.

8 ವೈಯಕ್ತಿಕ ಅಪಘಾತ ಯೋಜನೆ

ಇದು ಅಪಘಾತಕ್ಕೊಳಗಾದ ವ್ಯಕ್ತಿಯು ವೈಯಕ್ತಿಕವಾಗಿ ಯೋಜನೆ ಲಾಭ ಪಡೆಯಬಹುದು. ಈ ಯೊಜನೆಯಲ್ಲಿನ ಹೂಡಿಕೆಯ ಆಧಾರದ ಮೇಲೆಯೇ ಕುಟುಂಬದ ಪ್ರತಿ ವ್ಯಕ್ತಿಗೂ ಪ್ರತ್ಯೇಕವಾಗಿ ಈ ಯೋಜನೆ ಅನ್ವಯವಾಗುತ್ತದೆ. ಇದಕ್ಕೆ ಕಡಿಮೆ ಎಂದರೆ 25 ಲಕ್ಷ ಗರಿಷ್ಟ 1 ಕೋಟಿಯವರೆಗೂ ಪಾವತಿ ಮಾಡುವ ಸೌಲಭ್ಯವಿದೆ.

9. ಭಾರತ್ ಸೂಕ್ಷ್ಮ ಉದ್ಯಮ ಸುರಕ್ಷಾ ಯೋಜನೆ

ಇದು ಎಂಟರ್‌ಪ್ರೈಸಸ್‌ ನಡೆಸುವ ಉದ್ಯಮಿಗಳು ಸುಮಾರು 5 ಕೋಟಿವರೆಗೂ ಈ ಯೋಜನೆಯಿಂದ ಲಾಭ ಪಡೆಯಬಹುದು. ಎಂಟರ್‌ಪ್ರೈಸಸ್‌ನ ಪ್ರಾರಂಭಿಕ ವೆಚ್ಚಗಳು, ವೃತ್ತಿಪರ ಶುಲ್ಕಗಳು, ಭಗ್ನಾವಶೇಷಗಳನ್ನು ತೆಗೆದುಹಾಕುವುದು, ಪುರಸಭೆಯ ನಿಯಮಗಳಿಂದ ಒತ್ತಾಯಿಸಲ್ಪಟ್ಟ ವೆಚ್ಚಗಳು ಇತ್ಯಾದಿಗಳನ್ನು ಈ ನೀತಿಗೆ ಒಳಗೊಳ್ಳುತ್ತದೆ. ಆದರೆ ಇದು ಒಂದು ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ.
Youtube Video

10. ಸರಳ ಜೀವನ್ ವಿಮಾ ಟರ್ಮ್ ಯೋಜನೆ

ಸ್ಟ್ಯಾಂಡರ್ಡ್ ಟರ್ಮ್ ಲೈಫ್ ಇನ್ಶುರೆನ್ಸ್‌ ಅನ್ನು ಸರಳ ಜೀವನ್ ವಿಮಾ ಎಂದು ಕರೆಯಲಾಗುತ್ತದೆ. ಇದು ಮರಣದ ಬಳಿಕ ಹಣವನ್ನು ದ್ವಿಗುಣ ಮಟ್ಟದಲ್ಲಿ ಪಡೆಯುವ ಯೋಜನೆ. ಜೊತೆಗೆ ಇದೊಂದು ಪ್ರಿಮಿಯಂ ರಿಟರ್ನ್‍ನ ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಯೋಜನೆ ಕೂಡ ಹೌದು. ಇದರಿಂದ ಕಡಿಮೆ ಎಂದರೆ 5 ಲಕ್ಷ, ಹೆಚ್ಚು 25 ಲಕ್ಷ ರೂ. ವರೆಗೂ ಲಾಭ ಪಡೆಯಬಹುದು.

Published by: Latha CG
First published: April 8, 2021, 11:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories