HOME » NEWS » Trend » 10 STOREY BUILDING WAS CONSTRUCTED IN JUST OVER A DAY KVD

ಕೇವಲ ಒಂದೇ ದಿನದಲ್ಲಿ 10 ಅಂತಸ್ತಿನ ಅಪಾರ್ಟ್​​ಮೆಂಟ್​​ ನಿರ್ಮಾಣ: ವಿಡಿಯೋ ನೋಡಿದ್ರೆ ದಂಗಾಗಿ ಹೋಗ್ತಿರ!

ರೆಡಿಮೇಡ್​ ಆಗಿ 10 ಅಂತಸ್ತಿನ ಅಪಾರ್ಟ್​​ಮೆಂಟ್​​ ಕಟ್ಟುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. 28 ಗಂಟೆ 45 ನಿಮಿಷಗಳಲ್ಲಿ ವಸತಿ ಸಂಕೀರ್ಣವನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.


Updated:June 19, 2021, 3:08 PM IST
ಕೇವಲ ಒಂದೇ ದಿನದಲ್ಲಿ 10 ಅಂತಸ್ತಿನ ಅಪಾರ್ಟ್​​ಮೆಂಟ್​​ ನಿರ್ಮಾಣ: ವಿಡಿಯೋ ನೋಡಿದ್ರೆ ದಂಗಾಗಿ ಹೋಗ್ತಿರ!
ಕಟ್ಟಡ ನಿರ್ಮಾಣ ಚಿತ್ರ
  • Share this:
ಅಷ್ಟಿಲ್ಲದೆ ಹಿರಿಯಲು ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅಂತಾರೆಯೇ? ಮದುವೆಯಾಗಲಿ, ಮನೆಯಾಗಲಿ ವಿಧಾನವಾದರೂ ಒಮ್ಮೆಗೆ ಸರಿ ಹೋದರೆ ಚೆಂದ ಅನ್ನೋದು ಹಿಂದಿನಿಂದ ಬಂದಿರುವ ಅನಿಸಿಕೆ. ಅದರಲ್ಲೂ ಮನೆ ಕಟ್ಟೋದು ಅನ್ನೋದು ಸಂಕೀರ್ಣವಾದ ಪ್ರಕ್ರಿಯೆ. ಒಂದು ಅಚ್ಚುಕಟ್ಟಾದ ಮನೆ ಕಟ್ಟಲು ತಿಂಗಳುಗಳೇ ಹಿಡಿಯುತ್ತೆ, ಕೆಲವೊಮ್ಮೆ ವರ್ಷವೂ ಆಗಬಹುದು. ಇನ್ನು ಬಹುಮಹಡಿ ಕಟ್ಟಣಗಳು, ಅಪಾರ್ಟ್​ಮೆಂಟ್​ಗಳ ನಿರ್ಮಾಣಕ್ಕೆ ವರ್ಷಗಳೇ ಬೇಕು. ಸಾವಿರಾರು ಕಾರ್ಮಿಕರ ಶ್ರಮವೂ ಬೇಕು. ಅದರೆ ಒಂದೇ ದಿನದಲ್ಲಿ ಬೃಹತ್​ ಕಟ್ಟಣ ಕಟ್ಟಿದನ್ನು ನೋಡಿದ್ದೀರಾ? ನೋಡಿರಲು ಖಂಡಿತ ಸಾಧ್ಯವಿಲ್ಲ. ಆದರೆ ಅಸಾಧ್ಯವಾದದ್ದನ್ನು ಮಾಡುವುದು ಚೀನಿಯರ ಕೆಲಸ ಅಂದರೆ ಅತಿಶಯೋಕ್ತಿಯಲ್ಲ.

ಕೇವಲ ಒಂದೇ ದಿನ, ಹೀಗೆ ಹೋಗಿ ಆಗೆ ಬರುತ್ತಿದ್ದಂತೆ 10 ಅಂತಸ್ತಿನ ಕಟ್ಟಡ ನಿಮ್ಮ ಕಣ್ಣ ಮುಂದಿದ್ದರೆ ಯಾರಿಗೆ ತಾನೆ ಅಚ್ಚರಿಯಾಗಲ್ಲ. ಇಂತಹ ಅಚ್ಚರಿಯ ಸಾಧನೆ ಮಾಡಿರುವುದು ಚೀನಾದ ಬೋರ್ಡ್​​ ಗ್ರೂಪ್​ ಎಂಬ ಕಂಪನಿ. ಚೀನಾದ ಛಂಗ್ಷಾ ಎಂಬ ಸ್ಥಳದಲ್ಲಿ ರೆಡಿಮೇಡ್​ ಆಗಿ 10 ಅಂತಸ್ತಿನ ಅಪಾರ್ಟ್​​ಮೆಂಟ್​​ ಕಟ್ಟುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. 28 ಗಂಟೆ 45 ನಿಮಿಷಗಳಲ್ಲಿ ವಸತಿ ಸಂಕೀರ್ಣವನ್ನು ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.

ವಿಶೇಷ ತಂತ್ರಜ್ಞಾನದೊಂದಿಗೆ ಈ ಕಟ್ಟಡವನ್ನು ಕಟ್ಟಲಾಗಿದೆ. ಮೊದಲೇ ಪ್ರತಿ ಅಂತಸ್ತನ್ನು ಪ್ರತ್ಯೇಕವಾಗಿ ನಿರ್ಮಿಸಿದ್ದಾರೆ. ಬಳಿಕ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಒಂದರ ಮೇಲೊಂದಂತೆ ಕಟ್ಟಡದ ಅಂತಸ್ತುಗಳನ್ನು ಜೋಡಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಜನ ದಂಗಾಗುವಂತೆ ಒಂದೇ ದಿನದಲ್ಲಿ ತಲೆ ಎತ್ತಿ ನೋಡುವಂತ ಬೃಹತ್​ ಕಟ್ಟವನ್ನು ನಿರ್ಮಿಸಿ ಬಿಟ್ಟಿದ್ದಾರೆ. ಮಕ್ಕಳು ಆಟಿಕೆಗಳನ್ನು ಜೋಡಿಸಿ ಮನೆ ನಿರ್ಮಿಸುವಂತೆ ಚೀನಿಯರು ಮನೆ ಕಟ್ಟಿದ್ದಾರೆ. 10 ಅಂತಸ್ತಿನ ಮನೆಗೆ ವಿದ್ಯುತ್​, ನೀರಿನ ಸಂಪರ್ಕವನ್ನು ನೀಡಿದ್ದಾರೆ.

ಫಟಾಫಟ್​ ಅಂತ ಕಟ್ಟಿರುವ ಕಟ್ಟಡದ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಬೋರ್ಡ್​​ ಗ್ರೂಪ್​ ಕಂಪನಿ ಹಂಚಿಕೊಂಡಿದೆ. 4 ನಿಮಿಷ 52 ಸೆಕೆಂಡ್​ಗಳ ಈ ವಿಡಿಯೋ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತಿದೆ. ಕಟ್ಟಡ ನಿರ್ಮಾಣದ ವಿಡಿಯೋ ಸದ್ಯ ವೈರಲ್​ ಆಗಿದ್ದು, ನೋಡುಗರು ವಾವ್​ ಎಂದು ಉದ್ಘಾರ ತೆಗೆಯುತ್ತಿದ್ದಾರೆ.

Youtube Video


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 19, 2021, 3:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories