Weight Loss Tips: ದಿನಾ ಬೆಳಗ್ಗೆ ಹೀಗೆ ಮಾಡಿದ್ರೆ ದೇಹ ತೂಕ ಇಳಿಯೋದು ಗ್ಯಾರಂಟಿ!

Weight Loss: ದಿನನಿತ್ಯ ಬೆಳಗ್ಗಿನ ಹೊತ್ತು ನಿಮ್ಮ ತೂಕ ಪರೀಕ್ಷಿಸಿಕೊಳ್ಳುವುದು ನಿಮಗೆ ಸ್ಫೂರ್ತಿ ನೀಡುತ್ತದೆ ಮತ್ತು ಸ್ವಯಂ ನಿಯಂತ್ರಣಕ್ಕೆ ಸಹಕರಿಸುತ್ತದೆ. ಅದು ನಿಮಗೆ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೋತ್ಸಾಹ ನೀಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  1. ಬೆಳಗ್ಗೆ ಹೆಚ್ಚು ಪ್ರೋಟೀನ್‌ ಇರುವ ಉಪಾಹಾರ ಸೇವಿಸಿ
  ಬೆಳಗ್ಗಿನ ಉಪಾಹಾರ ನಿಮ್ಮ ದಿನದ ಆರಂಭಕ್ಕೆ ಹೊಸ ಚೈತನ್ಯ ನೀಡುವುದು ಮಾತ್ರವಲ್ಲದೇ ಮಧ್ಯಾಹ್ನ ನೀವು ಆಹಾರ ಸೇವಿಸುವವರೆಗೆ ಶಕ್ತಿ ನೀಡುತ್ತದೆ. ಬೆಳಗ್ಗೆ ಅಧಿಕ ಪ್ರೋಟೀನ್ ಇರುವ ಆಹಾರ ತಿಂದರೆ , ಬೇಗ ಹಸಿವಾಗುವುದಿಲ್ಲ. ಆದ್ದರಿಂದ ಮಧ್ಯಾಹ್ನದ ಊಟಕ್ಕೂ ಮುಂಚೆ ಏನನ್ನಾದರೂ ತಿನ್ನಬೇಕೆಂಬ ನಿಮ್ಮ ಬಯಕೆಯನ್ನು ಹತ್ತಿಕ್ಕಲು ಸಹಾಯವಾಗುತ್ತದೆ. ಬೆಳಗ್ಗೆ ಮೊಟ್ಟೆ, ಗ್ರೀಕ್ ಯೊಗರ್ಟ್ , ಪನ್ನೀರ್ , ನಟ್ಸ್ ಮತ್ತು ಶಿಯಾ ಬೀಜಗಳನ್ನು ತಿನ್ನಿ.


  2. ಸಾಕಷ್ಟು ನೀರು ಕುಡಿಯಿರಿ
  ಒಂದು ಅಥವಾ ಎರಡು ಲೋಟ ನೀರು ಕುಡಿಯುವುದರೊಂದಿಗೆ ದಿನವನ್ನು ಆರಂಭಿಸಿದರೆ ತೂಕ ಇಳಿಸುವಿಕೆಗೆ ಲಾಭದಾಯಕ. ಅದು ದೇಹದಲ್ಲಿನ ಕ್ಯಾಲೋರಿಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ನೀರು ಕುಡಿಯುವುದರಿಂದ ದೇಹದ ಚಯಾಪಚಯ ಕ್ರಿಯೆ ಸರಾಗವಾಗಿ ನಡೆಯುತ್ತದೆ ಎನ್ನುವುದು ಅಧ್ಯಯನಗಳಿಂದ ತಿಳಿದು ಬಂದಿದೆ.


  3. ತೂಕ ನೋಡಿಕೊಳ್ಳಿ
  ದಿನನಿತ್ಯ ಬೆಳಗ್ಗಿನ ಹೊತ್ತು ನಿಮ್ಮ ತೂಕ ಪರೀಕ್ಷಿಸಿಕೊಳ್ಳುವುದು ನಿಮಗೆ ಸ್ಫೂರ್ತಿ ನೀಡುತ್ತದೆ ಮತ್ತು ಸ್ವಯಂ ನಿಯಂತ್ರಣಕ್ಕೆ ಸಹಕರಿಸುತ್ತದೆ. ಅದು ನಿಮಗೆ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೋತ್ಸಾಹ ನೀಡಬಹುದು. ಬೆಳಗ್ಗೆ ಎದ್ದು ಶೌಚಾಲಯಕ್ಕೆ ಹೋದ ಬಳಿಕ ಮತ್ತು ಏನನ್ನಾದರೂ ತಿನ್ನುವ ಅಥವಾ ಕುಡಿಯುವ ಮೊದಲೇ ನೀವು ತೂಕ ನೋಡಿಕೊಳ್ಳುವುದರಿಂದ ಉತ್ತಮ ಫಲಿತಾಂಶ ನೀಡಬಲ್ಲದು.


  ಇದನ್ನೂ ಓದಿ: Covid Vaccine: ಕೋವಿಶೀಲ್ಡ್, ಕೋವ್ಯಾಕ್ಸಿನ್‌ ಲಸಿಕೆಗಳನ್ನು ಮಿಕ್ಸ್‌ ಮಾಡಬಹುದಾ? ಈ ಬಗ್ಗೆ ಪ್ರಯೋಗ ನಡೆಸಲು ತಜ್ಞರ ಸಮಿತಿ ಶಿಫಾರಸು

  4. ಬಿಸಿಲಿಗೆ ನಿಲ್ಲಿ
  ಬೆಳಗ್ಗಿನ ಜಾವ ಸೂರ್ಯನ ಎಳೆ ಬಿಸಿಲಿನಲ್ಲಿ ಸಮಯ ಕಳೆಯುವುದು ತೂಕ ಇಳಿಕೆಗೆ ಸಹಕಾರಿ ಆಗಬಲ್ಲದು. ಅದರಿಂದ ನಿಮ್ಮ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ. ದೇಹದಲ್ಲಿ ವಿಟಮಿನ್ ಡಿ ಸೂಕ್ತ ಪ್ರಮಾಣದಲ್ಲಿ ಇದ್ದರೆ ಬೊಜ್ಜು ಬರುವ ಸಾಧ್ಯತೆ ಕಡಿಮೆ ಎಂಬುವುದು ಅಧ್ಯಯನಗಳಿಂದ ತಿಳಿದುಬಂದಿದೆ. ನೀವು ಎಷ್ಟು ಗಂಟೆ ಸೂರ್ಯನ ಬಿಸಿಲಲ್ಲಿ ನಿಲ್ಲಬೇಕು ಎಂಬುವುದು ನಿಮ್ಮ ಚರ್ಮದ ಬಣ್ಣ, ಋತು ಮತ್ತು ವಾಸಿಸುವ ಸ್ಥಳವನ್ನು ಅವಲಂಬಿಸಿರುತ್ತದೆ. ಆದರೂ ದಿನಕ್ಕೆ 10-15 ನಿಮಿಷ ಸೂರ್ಯನ ಬಿಸಿಲಿಗೆ ದೇಹವನ್ನು ಒಡ್ಡಿಕೊಳ್ಳುವುದು ತೂಕ ಇಳಿಕೆಯಲ್ಲಿ ಸಹಕಾರಿ ಆಗಬಹುದು.


  5. ಸಾವಧಾನತೆಯನ್ನು ಅಭ್ಯಾಸ ಮಾಡಿಸಿಕೊಳ್ಳಿ
  ಸಾವಧಾನತೆ ಎಂದರೆ ವರ್ತಮಾನದ ಕ್ಷಣಗಳ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸುವುದು ಮತ್ತು ಆಲೋಚನೆ ಹಾಗೂ ಭಾವನೆಗಳ ಬಗ್ಗೆ ಎಚ್ಚರಿಕೆಯಿಂದ ಇರುವುದನ್ನು ಒಳಗೊಂಡಿರುವ ಒಂದು ಅಭ್ಯಾಸ. ಅದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಮಾತ್ರವಲ್ಲ, ಆರೋಗ್ಯ ಆಹಾರ ಅಭ್ಯಾಸಗಳನ್ನು ರೂಢಿಸಿಕೊಳ್ಳಲು ಸಹಾಯ ಆಗುತ್ತದೆ ಎಂದು ತಿಳಿದು ಬಂದಿದೆ. ಈ ಅಭ್ಯಾಸ ರೂಢಿಸಿಕೊಳ್ಳುವುದು ತುಂಬಾ ಸುಲಭ. ಪ್ರತಿ ದಿನ ಬೆಳಗ್ಗೆ 5 ನಿಮಿಷ ಒಂದು ಶಾಂತ ಜಾಗದಲ್ಲಿ ಆರಾಮಾಗಿ ಕುಳಿತುಕೊಂಡು ನಿಮ್ಮೊಳಗಿನ ಮನಸ್ಸಿನೊಂದಿಗೆ ಸಮಯ ಕಳೆಯಿರಿ.


  6. ವ್ಯಾಯಾಮ ಮಾಡಿ
  ಬೆಳಗ್ಗೆದ್ದು ಕೆಲವು ದೈಹಿಕ ಚಟುವಟಿಕೆಗಳನ್ನು ಮಾಡುವುದು ತೂಕ ಇಳಿಸಲು ಸಹಕಾರಿ ಆಗಬಹುದು. ಬೆಳಗ್ಗಿನ ವ್ಯಾಯಾಮ ರಕ್ತ ಸಕ್ಕರೆ ಪ್ರಮಾಣವನ್ನು ದಿನವಿಡೀ ನಿಯಂತ್ರಣದಲ್ಲಿಡಲು ಸಹಾಯ ಮಾಡಬಹುದು. ಕಡಿಮೆ ರಕ್ತ ಸಕ್ಕರೆ ಪ್ರಮಾಣ , ಅಧಿಕ ಹಸಿವು ಸೇರಿದಂತೆ ಹಲವಾರು ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತದೆ.


  7. ಮನೆಯ ಊಟ
  ಹೊರಗಡೆ ಊಟ ಮಾಡುವ ಬದಲು ಮನೆಯಿಂದಲೇ ಮಧ್ಯಾಹ್ನದ ಊಟದ ಬುತ್ತಿ ತೆಗೆದುಕೊಂಡು ಹೋಗಿ. ಅದರಿಂದ ನಿರ್ದಿಷ್ಟ ಆಹಾರ ಕ್ರಮವನ್ನು ರೂಪಿಸಿಕೊಳ್ಳಲು ಸಹಾಯ ಆಗುತ್ತದೆ. ವಾರಕ್ಕೆ ಒಂದು ರಾತ್ರಿ ಇಡೀ ವಾರದ ಊಟದ ಬಗ್ಗೆ ಯೋಜನೆ ತಯಾರಿಸಿ ಇಡಿ. ಅದರಿಂದ ನಿತ್ಯ ನೀವು ಯಾವುದೇ ಗೊಂದಲ ಇಲ್ಲದೆ ಬುತ್ತಿ ತೆಗೆದುಕೊಂಡು ಹೋಗಲು ಸುಲಭವಾಗುತ್ತದೆ.


  ಇದನ್ನೂ ಓದಿ: Health Tips: ವಿಟಮಿನ್ ಮಾತ್ರೆಗಳು ನಿಜಕ್ಕೂ ಒಳ್ಳೆಯದಾ? ಲಿವರ್​ಗೆ ಹಾನಿ ಮಾಡೋ ಔಷಧಗಳು ಯಾವುವು?

  8. ಬೇಗ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ.


  ನಿದ್ರಾಹೀನತೆ ಹಸಿವಿನೊಂದಿಗೆ ಸಂಬಂಧ ಹೊಂದಿದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ನಿದ್ರಾಹೀನತೆಯಿಂದ ಕ್ಯಾಲೋರಿ ಸೇವನೆ ಹೆಚ್ಚುತ್ತದೆ. ತೂಕ ಇಳಿಕೆಗೆ ಉತ್ತಮ ಆಹಾರ ಮತ್ತು ವ್ಯಾಯಾಮದ ಜೊತೆಗೆ ಸರಿಯಾದ ನಿದ್ದೆಯೂ ಅಗತ್ಯ. ದಿನಕ್ಕೆ ಕನಿಷ್ಟ 8 ಗಂಟೆಯಾದರೂ ನಿದ್ರಿಸಿ.


  9. ಪ್ರಯಾಣವನ್ನು ಬದಲಿಸಿ
  ನಡೆಯುವುದು, ಬೈಕ್‍ನಲ್ಲಿ ಹೋಗುವುದು ಅಥವಾ ಸಾರ್ವಾಜನಿಕ ಸಾರಿಗೆಯನ್ನು ಬಳಸುವುದರಿಂದ ತೂಕ ಹೆಚ್ಚುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ವಾರಕ್ಕೆ ಕೆಲವೊಂದು ಬಾರಿ ನಿಮ್ಮ ಪ್ರಯಾಣದ ವಿಧಾನವನ್ನು ಬದಲಿಸುವುದು ತೂಕ ಇಳಿಕೆಗೆ ಸಹಾಯ ಮಾಡಬಹುದು.
  10. ಆಹಾರ ಸೇವನೆ ಕಡೆ ಗಮನವಿಡಿ
  ನೀವೇನು ತಿನ್ನುತ್ತಿದ್ದೀರಿ ಎಂಬುದನ್ನು ಡೈರಿಯಲ್ಲಿ ಬರೆದಿಡುವುದು ತೂಕ ಇಳಿಕೆಯ ಪ್ರಕ್ರಿಯೆಯಲ್ಲಿ ಉಪಯೋಗಕ್ಕೆ ಬರಬಹುದು. ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೆ ನೀವೇನು ತಿಂದಿರಿ ಮತ್ತು ಕುಡಿದಿರಿ ಎಂಬುದನ್ನು ಪುಸ್ತಕದಲ್ಲಿ ಬರೆದಿಡಿ.

  Published by:Soumya KN
  First published: