ಅದೆಷ್ಟೋ ಜನರಿಗೆ ಸ್ವೀಟ್ಸ್ ಅಂದ್ರೆ ಪಂಚ ಪ್ರಾಣವಿರುತ್ತೆ. ಇನ್ನು ಕೆಲ ಮಂದಿಗೆ ಖಾರ, ಹುಳಿ ಅಂದ್ರೆ ಇಷ್ಟ ಇರುತ್ತೆ. ಹೀಗೆ ಫುಡ್ಡೀಸ್ (Foodies) ನಡುವೆ ನಾನಾ ರೀತಿಯ ಭಕ್ಷ್ಯ, ಭೋಜನಗಳನ್ನು ಹೇಳುತ್ತಾ ಇದ್ರೆ ಅವರಿಗೆ ಕೇಳಿಸಿಕೊಳ್ಳುವ ಬದಲು ತಿನ್ನುವ ಅಂತ ಅನಿಸುತ್ತದೆ. ಆದರೆ ದಿನೇ ದಿನೇ ಮಾರುಕಟ್ಟೆಗಳಲ್ಲಿ ದಿನಸಿ, ಆಹಾರಗಳ ಬೆಲೆಯು ಏರುತ್ತಾ ಇದೆ. ಅದೇ ಹಿಂದಿನ ಕಾಲದ ಸೈಕಲ್, ಬೈಕ್, ಆಹಾರಗಳ ರೇಟ್ ಎಷ್ಟು ಇತ್ತು ಅಂತ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆದ ಬಿಲ್ಗಳಲ್ಲಿ ಕಾಣಬಹುದಾಗಿದೆ. ಅದ್ರಲ್ಲಿ ಉಲ್ಲೇಖಿಸಲಾದ ರೇಟ್ (Rate) ನೋಡ್ತಾ ಇದ್ರೆ ಅಯ್ಯೋ ನಾವು ಅದೇ ಕಾಲಕ್ಕೆ ಮತ್ತೆ ಹೋಗೋಣ ಅಂತ ಅನಿಸುತ್ತೆ ಅಲ್ವಾ?
ನಿಮಗೆ ಯಾವ ಆಹಾರ ಇಷ್ಟ ಅದನ್ನೆಲ್ಲಾ ತೆಗೆದುಕೊಳ್ಳಲು ಆ ಕಾಲವೇ ಚೆನ್ನಾಗಿತ್ತು ಅನಿಸುತ್ತೆ. ಆದರೆ, ಹಿಂದಿನ ಕಾಲದಲ್ಲಿ ಹತ್ತು ರೂಪಾಯಿ ಕೂಡ ದೊಡ್ಡ ಹಣ ಅಲ್ವಾ? ನಮ್ಮ ತಾತ , ಅಜ್ಜಿಯೆಲ್ಲಾ ಅವರ ಅನುಭವಗಳನ್ನು ಹೇಳಿರುವುದನ್ನು ಕಂಡಿರಬಹುದು. ಜಾತ್ರೆಗೆಲ್ಲ ಹೋಗ್ತ ಕೇವಲ 2 ಅಥವಾ 3 ರುಪಾಯಿಗಳನ್ನು ಕೊಟ್ಟು ಕಳಿಸ್ತಾ ಇದ್ರು, ಅದ್ರಲ್ಲೇ ಎಲ್ಲಾ ತಗೋಬೇಕಿತ್ತು ಎಂದು ಹೇಳಿರುವುದನ್ನು ಕೇಳಿರುತ್ತೇವೆ. ಆದ್ರೆ ಇಂದಿನ ಕಾಲದಲ್ಲಿ 50 ಪೈಸೆಗೆ ಬೆಲೆಯೇ ಇಲ್ಲ.
ಇಷ್ಟೆಲ್ಲಾ ಯಾಕೆ ಹೇಳ್ತಾ ಇರೋದು ಅಂದ್ರೆ ಇದೀಗ ಮತ್ತೊಂದು ಬಿಲ್ ಬೆಳಕಿಗೆ ಬಂದಿದೆ. ಈ ಬಿಲ್ ನೋಡ್ತಾ ಇದ್ರೆ ಕಣ್ಣಲ್ಲಿ ನೀರು ಬರುತ್ತೆ ಹಾಗೆಯೇ ಬೇಜಾರು ಕೂಡ ಆಗುತ್ತೆ. 4 ಹಿಂದಿನ ಮಿಟಾಯಿ ಅಂಗಡಿಯ ಬೆಲೆಪಟ್ಟಿಯನ್ನು ತೋರಿಸುವ ಇತ್ತೀಚಿನ ಫೇಸ್‌ಬುಕ್ ಪೋಸ್ಟ್ ಒಂದು ನೆಟ್ಟಿಗರ ಗಮನ ಸೆಳೆದಿದೆ.
ಆ ಬೆಲೆಗಳನ್ನು ಈಗ ನೋಡಿದಾಗ ಒಮ್ಮೆಗೆ ತಲೆ ಸುತ್ತು ಬರುವುದು ಖಂಡಿತ. ಇದೇ ರೀತಿಯ ನಿಮ್ಮ ಹುಬ್ಬೇರಿಸುವಂತಹ ಹಳೆಯ ಕಾಲದ ಸಿಹಿ ತಿಂಡಿಗಳ ಮೆನುವಿನ ಪೋಸ್ಟ್ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಗ್ಯಾಗ್ರೇಟ್ ಹುಲ್ಚಾಲ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ 4 ದಶಕಗಳ ಹಿಂದಿನ ಮಿಠಾಯಿ ಅಂಗಡಿಯ ಮೆನು ಕಾರ್ಡ್ ಒಂದನ್ನು ಪೋಸ್ಟ್ ಮಾಡಲಾಗಿದೆ. ಇಂದಿನ ದಿನಗಳ ರೇಟ್ಗಳನ್ನು ಹೋಲಿಸಿದರೆ ಅದರಲ್ಲಿದ್ದ ತಿನಿಸುಗಳ ಬೆಲೆ ತುಂಬಾನೇ ಕಡಿಮೆಯಾಗಿದೆ. ವೈರಲ್ ಆಗಿರುವ ಈ ಪೋಸ್ಟ್ ಎಲ್ಲಾ ರೀತಿಯ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.
ಇದನ್ನೂ ಓದಿ: ಈ ಸ್ಥಳಗಳಲ್ಲಿ ಮಹಿಳೆಯರಿಗೆ ನೋ ಎಂಟ್ರೀ, ಕಾರಣ ಮಾತ್ರ ನಿಜಕ್ಕೂ ವಿಚಿತ್ರ!
ಸಿಹಿ ತಿನಿಸುಗಳ ಮೆನುವಿನ ಪೋಸ್ಟ್ ಹಂಚಿಕೊಂಡಿದ್ದಾರೆ. 1980ರ ಫೇಮಸ್ ಲವ್ಲಿ ಸ್ವೀಟ್ ಬೆಲೆ ಪಟ್ಟಿ ಎಂಬ ಶೀರ್ಷಿಕೆಯನ್ನು ಕೊಡಲಾಗಿದೆ. ಅದರ ಪ್ರಕಾರ ಮೋತಿಚೂರು ಲಡ್ಡು, ರಸಗುಲ್ಲಾ, ಗುಲಾಬ್ ಜಾಮೂನ್ ಇತ್ಯಾದಿ ಸಿಹಿತಿಂಡಿಗಳ ಬೆಲೆ ಕೆಜಿಗೆ ರೂ. 10 ರಿಂದ 14 ರೂಪಾಯಿ ಇತ್ತು. ಇಂದು ನಮಗೆ ಮಿಠಾಯಿಯ ಒಂದು ತುಂಡು ಅಷ್ಟು ಬೆಲೆಗೆ ಸಿಗುವುದಿಲ್ಲ. ಚಾಕೋಲೆಟ್ ಬರ್ಫಿ ಮತ್ತು ಪಿಸ್ತಾ ಬರ್ಫಿಯಂತಹ ಸ್ವಲ್ಪ ಪ್ರೀಮಿಯಂ ವಿಧದ ಮಿಠಾಯಿಗಳ ಬೆಲೆ ಪ್ರತಿ ಕೆ.ಜಿಗೆ 18 ರಿಂದ 20 ರೂಪಾಯಿಗಳಿದ್ದವು.
ಸಮೋಸಾ, ಕಚೋರಿ, ಪನೀರ್ ಪಕೋಡಾ ಮುಂತಾದ ತಿಂಡಿಗಳ ಬೆಲೆ ಆ ಕಾಲದಲ್ಲಿ 1 ರೂಪಾಯಿಗಿಂತಲೂ ಕಡಿಮೆ ಇತ್ತು.
ಇಂದು ಅದೇ ತಿಂಡಿಗಳ ಬೆಲೆ ರೂ 10 ರಿಂದ 100 ರೂಪಾಯಿಗಳ ವರೆಗೂ ಇದೆ. ನೆಟ್ಟಿಗರು ಸಹಜವಾಗಿಯೇ ವೈರಲ್ ಆಗಿರುವ ಆ ಮೆನುವನ್ನು ನೋಡಿ ಆಕರ್ಷಿತರಾಗಿದ್ದಾರೆ. ವೈರಲ್ ಆದ ಈ ಪೋಸ್ಟ್ನ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನಾವು ಕರೆನ್ಸಿಯ ಮೌಲ್ಯವನದ್ನು ಸರಿಹೊಂದಿಸಬೇಕಾಗಿರುವುದರಿಂದ ಆ ಅವಧಿಗೆ ಆ ಸಣ್ಣ ಮೊತ್ತವು ಹೆಚ್ಚು ಎಂದು ತೋರುತ್ತದೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಬಳಕೆದಾರರು ಇದು ಪಂಜಾಬ್‌ನ ಅತ್ಯುತ್ತಮ ಸಿಹಿತಿಂಡಿಗಳ ಅಂಗಡಿಗಳಲ್ಲಿ ಒಂದಾಗಿದೆ. ನಾನು 1996-2000 ಇಸವಿಯಲ್ಲಿ ಜಲಂಧರ್‌ನಲ್ಲಿದ್ದಾಗ ಈ ಸಿಹಿ ಅಂಗಡಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದೆ ಎಂದು ಹೇಳಿದ್ದಾರೆ. ಈ ಪೋಸ್ಟ್ ಇದುವರೆಗೆ 28,000 ಲೈಕ್ಸ್ ಮತ್ತು 1,600 ಕಮೆಂಟ್‌ಗಳನ್ನು ಪಡೆದುಕೊಂಡಿದೆ. ಒಟ್ಟಿನಲ್ಲಿ ಆ ಕಾಲಕ್ಕಂತೂ ನಾವು ಹೋಗೋಕೆ ಆಗಲ್ಲ, ಸುಮ್ಮನೆ ಈ ಬಿಲ್ ನೋಡಿ ಆಸೆ ಪಡಬೇಕು ಅಷ್ಟೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ