Viral Photo| ಕೋಟಿಗೊಂದು ಮೀನು: ಅತೀ ಅಪರೂಪದ ಚಿನ್ನದ ಮೀನನ್ನು ಹಿಡಿದ ವ್ಯಕ್ತಿ!

ಜೋಶ್ ರೋಜರ್ಸ್ ಎಂಬಾತ ಅಮೆರಿಕದ ಅರ್ಕಾನ್ಸಾಸ್‌ನ ಬೀವರ್ ಸರೋವರದಲ್ಲಿ ಮೀನು ಹಿಡಿಯುತ್ತಿದ್ದಾಗ ಗೋಲ್ಡನ್ ಹ್ಯೂಡ್ ಲಾರ್ಜ್‌ಮೌತ್ ಬಾಸ್ ಮೀನು ಆತನ ಬಲೆಗೆ ಸಿಕ್ಕಿದ್ದು, ಆ ಮೀನಿನ ಪೋಟೋ ಇದೀಗ ಸಾಕಷ್ಟು ಜನರಲ್ಲಿ ಕುತೂಹಲ ಮೂಡಿಸಿದೆ.

ಅಪರೂಪದ ಚಿನ್ನದ ಮೀನು.

ಅಪರೂಪದ ಚಿನ್ನದ ಮೀನು.

 • Share this:
  ಹಲವರು ರಜಾ ದಿನಗಳಲ್ಲಿ ಆಟವಾಡುವ, ಓದುವ ಅಥವಾ ಸಿನಿಮಾ ನೋಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ, ಕೆಲವರು ತಮ್ಮ ಹತ್ತಿರದ ಕೆರೆ ಅಥವಾ ನದಿಗಳಿಗೆ ಹೋಗಿ ಮೀನಿನ ಶಿಕಾರಿ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿ ರುತ್ತಾರೆ. ಹೀಗೆ ಓರ್ವಾ ಅಮೆರಿಕಾದಲ್ಲಿ ಭಾನುವಾರ ಮೀನಿನ ಶಿಕಾರಿಗೆ ಹೊರಟಿದ್ದ ವೇಳೆ ಬಲು ಅಪರೂಪದ ದೊಡ್ಡ ಬಾಯಿಯ ಚಿನ್ನದ ಮೀನನ್ನು ಭೇಟೆಯಾಡಿದ್ದು ಆ ಫೊಟೋ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ. ಜೋಶ್ ರೋಜರ್ಸ್ ಎಂಬಾತ ಅಮೆರಿಕದ ಅರ್ಕಾನ್ಸಾಸ್‌ನ ಬೀವರ್ ಸರೋವರದಲ್ಲಿ ಮೀನು ಹಿಡಿಯುತ್ತಿದ್ದಾಗ ಗೋಲ್ಡನ್ ಹ್ಯೂಡ್ ಲಾರ್ಜ್‌ಮೌತ್ ಬಾಸ್ ಮೀನು ಆತನ ಬಲೆಗೆ ಸಿಕ್ಕಿದ್ದು, ಆ ಮೀನಿನ ಪೋಟೋ ಇದೀಗ ಸಾಕಷ್ಟು ಜನರಲ್ಲಿ ಕುತೂಹಲ ಮೂಡಿಸಿದೆ.

  ಈ ಬಗ್ಗೆ ಮಾತನಾಡಿರುವ ಜೋಶ್ ರೋಜರ್ಸ್, "ನಾನು ಈ ಮೀನನ್ನು ಹಿಡಿದಾಗ ನನಗೆ ಎರಡು ಆಲೋಚನೆಗಳು ಇದ್ದವು. ಕೆಳಗಿರುವ ಮಿಡ್‌ಲೇಕ್ ಪ್ರದೇಶದ ಕೆರೆ ಇದೀಗ ಕೆಸರುಮಯವಾಗಿದೆ. ಈ ಮೀನು ಕೆಸರಿನಲ್ಲಿರುವಾದ ತಿಳಿ-ಬಣ್ಣವನ್ನು ಪಡೆಯುತ್ತದೆ ಎಂದು ನನಗೆ ತಿಳಿದಿದೆ. ಆದರೆ ನಾನು ಬಾಯಿ ಮತ್ತು ಕಿವಿರುಗಳನ್ನು ನೋಡಿದಾಗ, ಈ ಮೀನು ಅನಾರೋಗ್ಯದಿಂದ ಬಳಲುತ್ತಿರುವುದು ನನಗೆ ಖಚಿತವಾಗಿತ್ತು. ಹೀಗಾಗಿ ನಾನು ಹಾಗೂ ನನ್ನ ಸ್ನೇಹಿತ ಆ ಮೀನನ್ನು ತಿನ್ನುವ ಯೋಚನೆಯನ್ನು ಕೈಬಿಟ್ಟೆವು.

  ಆದರೆ, ಆ ಮೀನಿನ ಬಣ್ಣ ಮತ್ತೆ ಹಿಂದಿರುಗುವಂತೆ ಮಾಡಲು ಏನು ಮಾಡಬೇಕು ಎಂಬುದು ನಮಗೆ ತಿಳಿದಿರಲಿಲ್ಲ. ಇದೇ ಕಾರಣಕ್ಕೆ ನಾವು ಅದರ ಪೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡೆವು. ಇದನ್ನು ನೀಡಿ ಯಾರಾದರೂ ನಮ್ಮ ಸಹಾಯಕ್ಕೆ ಬರಬಹುದು ಎಂದು ಭಾವಿಸಿ ಅದನ್ನು ಮತ್ತೆ ನೀರಿಗೆ ಬಿಟ್ಟೆವು" ಎಂದು ಜೋಶ್ ಅರ್ಕಾನ್ಸಾಸ್ ವನ್ಯಜೀವಿ ನಿಯತಕಾಲಿಕೆಗೆ ತಿಳಿಸಿದರು.

  ಇದನ್ನೂ ಓದಿ: DK Shivakumar: ಪೆಟ್ರೋಲ್ ಬೆಲೆ ಶತಕ, ಲಸಿಕೆ ಮಂದಗತಿ, ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ; ಡಿ.ಕೆ ಶಿವಕುಮಾರ್ ಕಿಡಿ

  "ನಾನು ಮೀನು ಹಿಡಿಯಲು ಆರಂಭಿಸಿ ಸುಮಾರು ಒಂದೂವರೆ ಗಂಟೆಗಳ ಕಾಲ ಇದರ ಬಗ್ಗೆ ಏನೂ ಯೋಚಿಸಲಿಲ್ಲ. ನಂತರ ನಾನು ಸ್ನೇಹಿತರಿಗೆ ಚಿತ್ರಗಳನ್ನು ಕಳುಹಿಸಲು ಮತ್ತು ಅದನ್ನು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಹಾಕಲು ಪ್ರಾರಂಭಿಸಿದೆ. ನಂತರ ಎಲ್ಲರ ಪ್ರತಿಕ್ರಿಯೆಗಳು ನನನ್ನು ಯೋಚಿಸುವಂತೆ ಮಾಡಿತು. ಅನೇಕರು ನಾನು ಮೀನನ್ನು ಮತ್ತೆ ನೀರಿಗೆ ಬಿಡಬಾರದಿತ್ತು ಎಂದು ಮಾಡಿದ್ದ ಕಮೆಂಟ್​ಗಳು ನನಗೆ ಆಶ್ಚರ್ಯವನ್ನು ಉಂಟು ಮಾಡಿತು" ಎಂದು ಜೋಶ್ ತಿಳಿಸಿದ್ದಾರೆ.

  ಇದನ್ನೂ ಓದಿ: CM BS Yediyurappa: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಖಚಿತ?; ರಾಜೀನಾಮೆಗೆ ಸಿದ್ಧ ಎಂದ ಸಿಎಂ ಯಡಿಯೂರಪ್ಪ!

  ಈ ಮೀನಿನ ಬಗ್ಗೆ ಮಾಹಿತಿ ನೀಡಿರುವ  ಅರ್ಕಾನ್ಸಾಸ್​ ಮೀನು ಆಯೋಗದ ಜೀವಶಾಸ್ತ್ರಜ್ಞ ಜಾನ್ ಸ್ಟೈನ್, "ಇದು ನಿಜಕ್ಕೂ ಕೋಟಿಗೆ ಒಂದು ಮೀನಾಗಿದ್ದು, ಇದು ಬಲೆಗೆ ಸಿಗುವುದು ತೀರಾ ಅಪರೂಪ ಮತ್ತು ವಿರಳ. ಚಿನ್ನದ ಬಣ್ಣದ ಲಾರ್ಜ್‌ಮೌತ್ ಬಾಸ್ ಒಂದು ಆನುವಂಶಿಕ ಅಸಂಗತತೆಯ ಮೀನು" ಎಂದು ತಿಳಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: