Zoom: ಉದ್ಯೋಗಿಗಳು ಕಂಪನಿಗೆ ಮರಳುತ್ತಿದ್ದಂತೆ, ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಿದೆಯಂತೆ ಝೂಮ್!

Zoom: ಇತ್ತೀಚೆಗೆ ಕೆಲವು ಕಂಪನಿಗಳು ತನ್ನ ಉದ್ಯೋಗಿಗಳನ್ನು ಮತ್ತೆ ಕಂಪನಿಗೆ ಬಂದು ಕೆಲಸ ಮಾಡುವಂತೆ ಹೇಳುತ್ತಿದ್ದಾರೆ. ಈಗ ಕೋವಿಡ್ ಪ್ರಕರಣಗಳು ಎಲ್ಲೆಡೆ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿದ್ದು, ಬಹುತೇಕರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದು ಸಹ ಇದಕ್ಕೆ ಮುಖ್ಯವಾದ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೋವಿಡ್-19 (Covid) ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಬಹುತೇಕ ಕಂಪನಿಗಳು (Company) ತನ್ನ ಬಳಿ ಕೆಲಸ ಮಾಡುವ ಉದ್ಯೋಗಿಗಳಿಗೆ (Employee) ಮನೆಯಿಂದ ಕೆಲಸ ಮಾಡಲು (Work From Home) ಹೇಳಿ ಈ ಮಾರ್ಚ್ ಗೆ (March) ಎರಡು ವರ್ಷಗಳೇ ಕಳೆದವು ಎಂದು ಹೇಳಬಹುದು.

  ಇತ್ತೀಚೆಗೆ ಕೆಲವು ಕಂಪನಿಗಳು ತನ್ನ ಉದ್ಯೋಗಿಗಳನ್ನು ಮತ್ತೆ ಕಂಪನಿಗೆ ಬಂದು ಕೆಲಸ ಮಾಡುವಂತೆ ಹೇಳುತ್ತಿದ್ದಾರೆ. ಈಗ ಕೋವಿಡ್ ಪ್ರಕರಣಗಳು ಎಲ್ಲೆಡೆ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿದ್ದು, ಬಹುತೇಕರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದು ಸಹ ಇದಕ್ಕೆ ಮುಖ್ಯವಾದ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ.

  ಈ ಎರಡು ವರ್ಷಗಳಲ್ಲಿ ಜನರು ಇಂಟರ್‌ನೆಟ್ ವರ್ಚುವಲ್ ಕೆಲಸಗಳ ಪ್ರಾಮುಖ್ಯತೆಯನ್ನೂ ಸಹ ಅರಿತು ಕೊಂಡಿದ್ದಾರೆ. ಇದರಲ್ಲಿ ಅನೇಕ ಕಂಪನಿಗಳು ತಮ್ಮ ಮೀಟಿಂಗ್ ಗಳಿಗೆ ಝೂಮ್ ಬಳಸುವವರಿದ್ದಾರೆ ಎಂದು ಹೇಳಬಹುದು.

  ಉದ್ಯೋಗಿಗಳು ತಮ್ಮ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ, ಆಡಿಯೋ ಮೂಲಕ ಸುಲಭ ಸಂವಹನ ನಡೆಸಲು ಇದು ತುಂಬಾನೇ ಜನಪ್ರಿಯವಾಗಿದೆ. ಝೂಮ್ ಅನೇಕ ಕಂಪನಿಗಳಿಗೆ ವರದಾನವಾಗಿದೆ. ಈ ವಿಡಿಯೋ ಕಾನ್ಫೆರೆನ್ಸಿಂಗ್ ಅಪ್ಲಿಕೇಷನ್‌ನ ಜನಪ್ರಿಯತೆ ಕೋವಿಡ್ ಸಂದರ್ಭದಲ್ಲಿ ಏರುಗತಿಯಲ್ಲಿ ಸಾಗಿತು. ಲಾಕ್‌ಡೌನ್ ಆಗುತ್ತಿದ್ದಂತೆ ಝೂಮ್ ಕಂಪನಿಯ ಅದೃಷ್ಟ ಬದಲಾಯಿತು ಎಂದು ಹೇಳಬಹುದು.

  ಈಗ ಈ ಝೂಮ್ ವಿಡಿಯೋ ಕಮ್ಯೂನಿಕೇಷನ್ಸ್ ಹೊಸ ಫೀಚರ್ ಗಳನ್ನು ಮತ್ತೆ ಆಫೀಸಿಗೆ ಬರುತ್ತಿರುವ ಉದ್ಯೋಗಿಗಳಿಗೆ ನೀಡಲು ಪ್ರಯತ್ನಿಸುತ್ತಿದೆಯಂತೆ ಎಂದು ಹೇಳಲಾಗುತ್ತಿದೆ.

  ಭಾರತ ಮತ್ತು ಸಾರ್ಕ್ ಮಾರುಕಟ್ಟೆಗಳ ಮುಖ್ಯಸ್ಥರಾದ ಸಮೀರ್ ರಾಜೆ ಅವರು “ಇದನ್ನು ಬರೀ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಷನ್ ರೀತಿಯಲ್ಲಿ ಬಳಸದೆ, ಇನ್ನಿತರೆ ಬಳಕೆಗಳ ಬಗ್ಗೆ ಯೋಚಿಸಲಾಗುತ್ತಿದೆ” ಎಂದು ಹೇಳಿದರು. ಸುದ್ದಿ ಮಾಧ್ಯಮಕ್ಕೆ ಇವರು “ಝೂಮ್ ಒಂದು ವರ್ಚುವಲ್ ವರ್ಲ್ಡ್ ಇದ್ದಂತೆ, ಈಗಾಗಲೇ ಉದ್ಯೋಗಿಗಳು ಕಂಪನಿಗಳಿಗೆ ಮರಳುತ್ತಿದ್ದಾರೆ. ನಾವು ಈ ಝೂಮ್ ನ ಬಳಕೆಯನ್ನು ಇನ್ನಷ್ಟು ಉತ್ತಮಗೊಳಿಸಲು ಮತ್ತು ಇದರಿಂದ ಇನ್ನ್ಯಾವ ರೀತಿಯ ಉಪಯೋಗಗಳನ್ನು ಪಡೆಯಬಹುದು ಎಂಬುದರ ಬಗ್ಗೆ ಯೋಚನೆ ಮಾಡಲಾಗುವುದು” ಎಂದು ಹೇಳಿದರು.

  ಇದನ್ನೂ ಓದಿ: Iphone: ತಮಿಳುನಾಡಿನ ವಿದ್ಯಾರ್ಥಿಗಳು ಐಫೋನ್​ನಲ್ಲಿ ಕ್ಲಿಕ್ಕಿಸಿದ ಫೋಟೋ ನೋಡಿ ಆ್ಯಪಲ್ ಸಿಇಒ ಏನು ಮಾಡಿದ್ರು ಗೊತ್ತಾ?

  ಕಳೆದ ವಾರವಷ್ಟೆ ಈ ಝೂಮ್ ಅವತಾರ್ಸ್ ಫೀಚರ್ ಅನ್ನು ಪರಿಚಯಿಸಿತು ಮತ್ತು ಇದರಲ್ಲಿ ವೀಡಿಯೋ ಕರೆಗಳಲ್ಲಿ ಒಬ್ಬರ ಮುಖದ ಬದಲಾಗಿ ವರ್ಚುವಲ್ ಮುಖಗಳನ್ನು ಅದರಲ್ಲಿ ಹಾಕಿ, ಅದಕ್ಕೆ ಮುಖದ ಭಾವಗಳನ್ನು ಮತ್ತು ತಲೆಯನ್ನು ಅಲ್ಲಾಡಿಸುವಂತೆ ಮಾಡಲು ಅವಕಾಶವಿದೆಯಂತೆ ಎಂದು ಹೇಳಲಾಗುತ್ತಿದೆ. “ಮಾರುಕಟ್ಟೆ ಬದಲಾದಂತೆ ಬಳಕೆದಾರರ ಅಗತ್ಯತೆಗಳು ಸಹ ಬದಲಾಗುತ್ತಿರುತ್ತವೆ ಮತ್ತು ಅದಕ್ಕೆ ತಕ್ಕಂತೆ ನಾವು ಝೂಮ್ ಅಪ್ಲಿಕೇಷನ್ ಅನ್ನು ಡಿಸೈನ್ ಮಾಡಬೇಕಾಗುತ್ತದೆ” ಎಂದು ರಾಜೆ ಅವರು ಹೇಳಿದರು.

  “ನಾವು ಈಗ ಬರೀ ವೀಡಿಯೋ ಕರೆಗಳನ್ನು ಮಾಡುವುದಲ್ಲದೆ, ಒಂದು ಪರಿಪೂರ್ಣವಾದ ಸಭೆ ಸೇರುವ ವೇದಿಕೆಯನ್ನಾಗಿ ಇದನ್ನು ಬದಲಿಸಲಿದ್ದೇವೆ” ಎಂದು ರಾಜೆ ಹೇಳಿದರು. ಕೋವಿಡ್ ಸಂದರ್ಭದಲ್ಲಿ ತುಂಬಾನೇ ಜನಪ್ರಿಯವಾದ ಝೂಮ್ ಕಳೆದ ಕೆಲವು ತ್ರೈಮಾಸಿಕದಲ್ಲಿ ಅದರಲ್ಲೂ ನವೆಂಬರ್ 2021 ರಿಂದ ಜನವರಿ 2022 ರ ವರೆಗೆ ಇದರ ಆದಾಯವು 1.071 ಬಿಲಿಯನ್ ಡಾಲರ್ ಗೆ ಏರಿದೆಯಂತೆ ಮತ್ತು ಅದಕ್ಕಿಂತ ಹಿಂದಿನ ತ್ರೈಮಾಸಿಕದಲ್ಲಿ 35 ಪ್ರತಿಶತ ಬೆಳವಣಿಗೆಯನ್ನು ಕಂಡಿತ್ತು ಮತ್ತು ಜನವರಿ 2021 ತ್ರೈಮಾಸಿಕದಲ್ಲಿ 367 ಪ್ರತಿಶತವಾಗಿತ್ತು. ಈ ಷೇರು ಸಹ ಕಳೆದ ವರ್ಷಕ್ಕಿಂತಲೂ ಇದುವರೆಗೂ 38 ಪ್ರತಿಶತ ಇಳಿದಿದೆ ಎಂದು ಹೇಳಲಾಗುತ್ತಿದೆ.

  ಇದನ್ನೂ ಓದಿ: Elon Musk: ಡೊನಾಲ್ಡ್​ ಟ್ರಂಪ್​ನಂತೆಯೇ ಸ್ವಂತ ಸಾಮಾಜಿಕ ಮಾಧ್ಯಮವನ್ನು ಪ್ರಾರಂಭಿಸಲು ಮುಂದಾದ ಎಲೋನ್ ಮಸ್ಕ್!

  ರಾಜೆ ಅವರು “ಝೂಮ್ ನಲ್ಲಿ ಇನ್ನಷ್ಟೂ ಹೊಸ ರೀತಿಯ ಫೀಚರ್ ಗಳನ್ನು ಪರಿಚಯಿಸಲು ಯೋಜನೆಯನ್ನು ಹಾಕಿಕೊಂಡಿದೆ” ಎಂದು ಹೇಳಿದರು. “ನೀವು ಕೂತಲ್ಲಿಯೇ ಏರ್ ಕಂಡಿಷ್ನರ್ ಅನ್ನು ಝೂಮ್ ಇಂಟರ್‌ಫೇಸ್ ನಿಂದ ಮತ್ತು ಕಾನ್ಫರೆನ್ಸ್ ಕೊನೆಯ ಬ್ಲೈಂಡ್ಸ್ ಗಳನ್ನು ನಿಯಂತ್ರಿಸುವ ಹಾಗಾದರೆ ಹೇಗಿರುತ್ತದೆ ಎಂಬುದನ್ನು ನೀವು ಒಮ್ಮೆ ಊಹಿಸಿಕೊಳ್ಳಿ. ಈಗ ದೊಡ್ಡ ಕಾನ್ಫರೆನ್ಸ್ ಕೋಣೆಯು ಈಗ ಬದಲಾಗುತ್ತಿದ್ದು, ಅದನ್ನು ನಿಭಾಯಿಸಲು ಅನೇಕ ಬೇರೆ ಬೇರೆ ರೀತಿಯ ಡಿವೈಸ್ ಗಳ ಅಗತ್ಯವಿಲ್ಲ. ಇದೆಲ್ಲವನ್ನು ನೀವು ಝೂಮ್ ಒಂದೇ ಅಪ್ಲಿಕೇಷನ್ ನಿಂದ ಮಾಡಬಹುದು” ಎಂದು ರಾಜೆ ಹೇಳಿದರು.
  Published by:Harshith AS
  First published: