Zomato Pro: ಅಪ್​ಗ್ರೇಡ್​ ಮಾಡುವ ಮೂಲಕ ಜೊಮ್ಯಾಟೋ ಪ್ರೊ ಲಭ್ಯ; ಏನಿದೆ ಆಫರ್​?

Zomato Pro: ಆಗಸ್ಟ್​ 1ರಿಂದ ಜೊಮ್ಯಾಟೋ ಗೋಲ್ಡ್​​​ ಆ್ಯಪ್​ ಪ್ರೊಗೆ ಅಪ್​​​ಗ್ರೇಡ್​ ಆಗಲಿದೆ. ಹೆಚ್ಚುವರಿ ವೆಚ್ಚವಿಲ್ಲದೆ, ಹೆಚ್ಚಿನ ಸೌಕರ್ಯವನ್ನು ಗ್ರಾಹಕರು ಪಡೆಯಲಿದ್ದಾರೆ ಎಂದು ಜೊಮ್ಯಾಟೋ ತನ್ನ ಬ್ಲಾಗ್​ ಪೋಸ್ಟ್​ನಲ್ಲಿ ತಿಳಿಸಿದೆ.

news18-kannada
Updated:June 30, 2020, 3:50 PM IST
Zomato Pro: ಅಪ್​ಗ್ರೇಡ್​ ಮಾಡುವ ಮೂಲಕ ಜೊಮ್ಯಾಟೋ ಪ್ರೊ ಲಭ್ಯ; ಏನಿದೆ ಆಫರ್​?
ಜೊಮ್ಯಾಟೋ ಪ್ರೊ
  • Share this:
ಆನ್​ಲೈನ್​ ಫುಡ್​ ಡೆಲಿವರಿ ಆ್ಯಪ್​​​  ಜೊಮ್ಯಾಟೋ  ತನ್ನ ಜೊಮ್ಯಾಟೋ ಗೋಲ್ಡ್​​ ಅನ್ನು ನವೀಕರಿಸಿ ಪ್ರೊ ಎಂಬ ಹೊಸ ಪ್ಯಾಕೇಜ್​ ಅನ್ನು ವಿನ್ಯಾಸಗೊಳಿಸಿದೆ. ಆ ಮೂಲಕ ಗ್ರಾಹಕರಿಗೆ ಮತ್ತಷ್ಟು ಆಫರ್​ ಒದಗಿಸಲು ಮುಂದಾಗಿದೆ.

ಈಗಾಗಲೇ 10 ದೇಶದಲ್ಲಿ ಜೊಮ್ಯಾಟೋ ಗೋಲ್ಡ್​ ಸದಸ್ಯತ್ವ  ಪಡೆಯುವ ಗ್ರಾಹಕರು ಅದರ ಆಫರ್​​ಪಡೆಯುತ್ತಿದ್ದಾರೆ. ಇದೀಗ ಜೊಮ್ಯಾಟೋ ಪ್ರೊ ಎಂಬ ಹೊಸ ಅಪ್​ಗ್ರೇಡ್​ ಅನ್ನು ಕಂಪೆನಿ ಪರಿಚಯಿಸಿದೆ. ಆಗಸ್ಟ್​ 1 ರಿಂದ ಜೊಮ್ಯಾಟೋ ಗೋಲ್ಡ್​​​ ಆ್ಯಪ್​ ಪ್ರೊಗೆ ಅಪ್​​​ಗ್ರೇಡ್​ ಆಗಲಿದೆ. ಹೆಚ್ಚುವರಿ ವೆಚ್ಚವಿಲ್ಲದೆ, ಹೆಚ್ಚಿನ ಸೌಕರ್ಯವನ್ನು ಗ್ರಾಹಕರು ಪಡೆಯಲಿದ್ದಾರೆ ಎಂದು ಜೊಮ್ಯಾಟೋ ತನ್ನ ಬ್ಲಾಗ್​ ಪೋಸ್ಟ್​ನಲ್ಲಿ ತಿಳಿಸಿದೆ.

ಇನ್ನು ಜೊಮ್ಯಾಟೋ ಬಳಕೆದಾರರಿಗೆ ಈ ಹೊಸ ಆಫರ್​ನಿಂದಾಗಿ ಹಣ ಹಿಂಪಡೆಯುವ ಖಾತರಿಯು ಸಿಗಲಿದೆ. ಜೊತೆಗೆ ರೆಸ್ಟೋರೆಂಟ್​​, ಕೆಫೆಗಳ ಕೊಡುಗೆಗಳು ಮುಂದುವರಿಯಲಿದೆ. ಜೊಮ್ಯಾಟೋ ಪ್ರೊನಲ್ಲಿ ಶೇ. 50 ರಷ್ಟು ಹೆಚ್ಚಿನ ಪಾಲುದಾರ ರೆಸ್ಟೋರೆಂಟ್​​ಗಳ ಜೊತೆಗೆ ಸೈನ್​ ಅಪ್​ ಮಾಡಿದೆ.

ಮಹಾಮಾರಿ ಕೊರೋನಾದಿಂದಾಗಿ ಆನ್​ಲೈನ್​ ಫುಡ್​ ಡೆಲಿವರಿ ಮಾಡುವ ಜೊಮ್ಯಾಟೋ ಸಂಸ್ಥೆ ಹೊಸ ಆಫರ್​ ಅನ್ನು ನೀಡಲು ಮುಂದಾಗಿದೆ. ಆ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ಕೊರೋನಾದಿಂದಾಗಿ ಮನೆಯಿಂದ ಹೊರಗೆ ಹೋಗದ ಅನೇಕರಿಗೆ ಆನ್​​​ಲೈನ್​ ಫುಡ್​ ಡೆಲಿವರಿ ಸಂಸ್ಥೆಗಳಿಂದ ನೇರವಾಗಿ ಮನೆ ಬಾಗಿಲಿಗೆ ಬಂದು ಆಹಾರ ವಿತರಿಸುತ್ತಿದೆ. ಅದರಂತೆ  ಜೊಮ್ಯಾಟೋ ಕೂಡ ಈ ಸೇವೆಯನ್ನು ಮಾಡುತ್ತಾ ಬಂದಿದೆ.
First published: June 30, 2020, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading