ಝೊಮಾಟೊ ಆಫರ್: ಯಾರಾಗಲಿದ್ದಾರೆ ಮುಂದಿನ ಪ್ರಧಾನಿ? ಈ ಪ್ರಶ್ನೆಗೆ ಉತ್ತರಿಸಿದರೆ ಸಿಗಲಿದೆ ಹಣ..!

ಇದಕ್ಕೂ ಮುನ್ನ ಇಂಡಿಯನ್ ಪ್ರೀಮಿಯರ್ ಲೀಗ್​ ವೇಳೆ ಐಪಿಎಲ್ ಆಫರ್​ ನೀಡಿದ್ದ ಝೊಮಾಟೊ, ತನ್ನ ಗ್ರಾಹಕರು ನೀಡಿದ ಉತ್ತರಕ್ಕೆ ಸರಿಯಾಗಿ ಡಿಸ್ಕೌಂಟ್​ಗಳನ್ನು ನೀಡಿತ್ತು.

zahir | news18
Updated:May 22, 2019, 5:06 PM IST
ಝೊಮಾಟೊ ಆಫರ್: ಯಾರಾಗಲಿದ್ದಾರೆ ಮುಂದಿನ ಪ್ರಧಾನಿ? ಈ ಪ್ರಶ್ನೆಗೆ ಉತ್ತರಿಸಿದರೆ ಸಿಗಲಿದೆ ಹಣ..!
@The Economic Times
  • News18
  • Last Updated: May 22, 2019, 5:06 PM IST
  • Share this:
ದೇಶದ ಸಾರ್ವತ್ರಿಕ ಲೋಕಸಭಾ ಚುನಾವಣಾ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಈಗಾಗಲೇ ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಕೇಂದ್ರದಲ್ಲಿ ಎನ್​ಡಿಎ ಮೈತ್ರಿಕೂಟ ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ಹೇಳಲಾಗಿದೆ. ಆದರೆ ಇಂತಹ ಅಂಕಿ ಅಂಶಗಳ ಲೆಕ್ಕಾಚಾರಗಳು ಈ ಹಿಂದೆ ತಲೆಕೆಳಗಾಗಿರುವ ಹಲವು ನಿದರ್ಶನಗಳು ನಮ್ಮ ಮುಂದಿದೆ. ಹೀಗಾಗಿಯೇ ದೇಶದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಮನೆ ಮಾಡಿದೆ. ಈ ಕುತೂಹಲಕ್ಕೆ ಕಿಚ್ಚು ಹಚ್ಚಲು ಆಹಾರ ಡೆಲಿವರಿ ಸಂಸ್ಥೆ ಝೊಮಾಟೊ ಮುಂದಾಗಿದೆ.

ದೇಶದ ಫುಡ್ ಡೆಲಿವರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಝೊಮಾಟೊ, ಇದೀಗ ದೇಶದ ಚುಕ್ಕಾಣಿ ಹಿಡಿಯುವ ನಾಯಕ ಯಾರೆಂಬ ಪ್ರಶ್ನೆಯನ್ನು ಜನರ ಮುಂದಿಟ್ಟಿದೆ. ಝೊಮಾಟೊ ಎಲೆಕ್ಷನ್ ಲೀಗ್​ ಎಂಬ ಆಫರ್​ನಲ್ಲಿ ದೇಶದ ಪ್ರಧಾನಿ ಯಾರಗಾಗಲಿದ್ದಾರೆ ಎಂಬ ಪ್ರಶ್ನೆ ಕೇಳಿದ್ದು, ಸರಿಯಾದ ಉತ್ತರ ನೀಡಿದವರಿಗೆ ಕಂಪೆನಿ ಕಡೆಯಿಂದ ಕ್ಯಾಶ್​ಬ್ಯಾಕ್ ಸಿಗಲಿದೆ.

ಇದಕ್ಕೂ ಮುನ್ನ ಇಂಡಿಯನ್ ಪ್ರೀಮಿಯರ್ ಲೀಗ್​ ವೇಳೆ ಐಪಿಎಲ್ ಆಫರ್​ ನೀಡಿದ್ದ ಝೊಮಾಟೊ, ತನ್ನ ಗ್ರಾಹಕರು ನೀಡಿದ ಉತ್ತರಕ್ಕೆ ಸರಿಯಾಗಿ ಡಿಸ್ಕೌಂಟ್​ಗಳನ್ನು ನೀಡಿತ್ತು. ಇದೀಗ ಇದೇ ಮಾದರಿಯಲ್ಲಿ ಹೊಸ ಪ್ರಶ್ನೆಯನ್ನು ಮುಂದಿಟ್ಟಿದೆ. ಇಲ್ಲಿ ನೀವು ಫುಡ್ ಆರ್ಡರ್​ ಮಾಡಿ ಉತ್ತರಿಸಬೇಕು. ಈ ಉತ್ತರ ಸರಿಯಾಗಿದ್ದರೆ ನಿಮ್ಮ ಖಾತೆಗೆ ಕ್ಯಾಶ್​ಬ್ಯಾಕ್ ಬಂದು ಸೇರಲಿದೆ.

ಝೊಮಾಟೊ ಸಂಸ್ಥೆಯು ಆಹಾರ ದರಗಳ ಮೇಲೆ ಶೇ.40 ರಷ್ಟು ರಿಯಾಯಿತಿ ನೀಡುತ್ತಿದ್ದು, ಇದಲ್ಲದೆ ನಿಮ್ಮ ಭವಿಷ್ಯವಾಣಿ ಸರಿಯಾದರೆ ನಿಮ್ಮ ಅಕೌಂಟ್​ಗೆ ಶೇ.30 ಕ್ಯಾಶ್ ಬ್ಯಾಕ್ ದೊರೆಯಲಿದೆ. ಈ ಆಫರ್​ ಅನ್ನು ಮೇ 22 ರ ಮಧ್ಯರಾತ್ರಿವರೆಗೆ ಇರಲಿದ್ದು, ಹೊಸ ಪ್ರಧಾನಿ ಘೋಷಣೆಯಾಗುತ್ತಿದ್ದಂತೆ ಝೊಮಾಟೊ ವ್ಯಾಲೆಟ್​ಗೆ ಹಣ ಬರಲಿದೆ. ಝೊಮಾಟೊನ ಪ್ರಧಾನಿ ಯಾರೆಂಬ ಪ್ರಶ್ನೆಗೆ 250 ನಗರಗಳಿಂದ 3,20,000 ಜನರು ಪ್ರತಿಕ್ರಿಯಿಸಿದ್ದಾರೆ ಎಂದು ಝೊಮಾಟೊ ಸಂಸ್ಥೆ ತಿಳಿಸಿದೆ.

ICC World Cup 2019: 27 ವರ್ಷಗಳ ಬಳಿಕ ತಮ್ಮ ಹಿಂದಿನ ಜೆರ್ಸಿಗೆ ಮರಳಿದ ಇಂಗ್ಲೆಂಡ್
First published: May 22, 2019, 5:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading