YouTube Stop Working: ಸೆ. 27ರಿಂದ ಈ ಆ್ಯಂಡ್ರಾಯ್ಡ್​ ಫೋನ್​ಗಳಲ್ಲಿ ಯ್ಯುಟೂಬ್​ ಕಾರ್ಯನಿರ್ವಹಿಸುದಿಲ್ಲ!

ಆ್ಯಂಡ್ರಾಯ್ಡ್​ 2.3.7 ಆವೃತ್ತಿಯ ಸ್ಮಾರ್ಟ್​ಫೋನ್​ಗಳು 2011 ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಿವೆ. ಆದ್ದರಿಂದ ಒಂದು ದಶಕದ ಬಿಡುಗಡೆಯ ನಂತರ ಅವುಗಳನ್ನು ಗೂಗಲ್​ ಹಳೆಯದು ಎಂದು ಪರಿಗಣಿಸುತ್ತದೆ.

YouTube

YouTube

 • Share this:
  ಜನಪ್ರಿಯ ವಿಡಿಯೋ ಶೇರಿಂಗ್​ ಕಂಪನಿಗಳಲ್ಲಿ ಯ್ಯುಟೂಬ್​ ಕೂಡ ಒಂದು. ಪ್ರಪಂಚದಾದ್ಯಂತ ಬಹುತೇಕ ಜನರು ಯ್ಯುಟೂಬ್​ ವೀಕ್ಷಿಸುತ್ತಾರೆ. ಅದರ ಮೂಲಕ ಸಿನಿಮಾ ಟ್ರೇಲರ್, ವ್ಲಾಗ್ ಹೀಗೆ ನಾನಾ ತರಹದ ವಿಡಿಯೋ ವೀಕ್ಷಿಸುವುದು ಮಾತ್ರವಲ್ಲದೆ, ಶೇರ್​ ಕೂಡ ಮಾಡುತ್ತಾರೆ. ಹಾಗಾಗಿ ಯ್ಯುಟೂಬ್​ ಬಹುತೇಕರ ನೆಚ್ಚಿನ ತಾಣವಾಗಿದೆ. ಆದರೀಗ ಬಳಕೆದಾರರಿಗೆ ಯ್ಯುಟೂಬ್ ಕುರಿತಾದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಅದೇನು ಗೊತ್ತಾ?

  ಯ್ಯುಟೂಬ್ ​ ಇದೇ ತಿಂಗಳಿನಿಂದ ಕೆಲವು ಆ್ಯಂಡ್ರಾಯ್ಡ್​​ ಮಾದರಿಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಮಾಹಿತಿ ಹೊರಬಿದ್ದಿದೆ. ಗೂಗಲ್​ ಇತ್ತೀಚೆಗೆ ಕೆಲವು ಆ್ಯಂಡ್ರಾಯ್ಡ್​ ಸಾಧನದಲ್ಲಿ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದೆ. ಆ್ಯಂಡ್ರಾಯ್ಡ್​​ 2.3.7 ಅಥವಾ ಅದಕ್ಕಿಂತ ಹಿಂದಿನ ಸಾಧನಗಳಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಮಾತ್ರವಲ್ಲದೆ ಸೆ. 27ರಿಂದ ತಮ್ಮ ಖಾತೆಗೆ ಲಾಗಿನ್​ ಆಗಲು ಆಗುವುದಿಲ್ಲ ಎಂದು ತಿಳಿಸಿದೆ. ಜಿಮೇಲ್ ಸೇರಿದಂತೆ, ಗೂಗಲ್​ ಮ್ಯಾಪ್​ ಮತ್ತು ಪ್ಲೇ ಸ್ಟೋರ್​ಗಳು ಕೆಲಸ ಮಾಡುವುದಿಲ್ಲ ಎಂದಿದೆ. ಅದರ ಸಾಲಿನಲ್ಲಿ ಯ್ಯುಟೂಬ್​ ಕೂಡ ಆ್ಯಂಡ್ರಾಯ್ಡ್​​ 2.3.7 ಅಥವಾ ಅದಕ್ಕಿಂತ ಹಿಂದಿನ ಸಾಧನಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುತ್ತಿದೆ.

  "ನೀವು ಸೆಪ್ಟೆಂಬರ್ 27 ರ ನಂತರ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಲಾಗ್ ಇನ್ ಮಾಡಲು ಬಯಸಿದರೆ. ಜಿಮೇಲ್, ಯೂಟ್ಯೂಬ್ ಮತ್ತು ಮ್ಯಾಪ್ಸ್ ನಂತಹ ಗೂಗಲ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೇವೆಗಳು ಕಾರ್ಯನಿರ್ವಹಿಸುದಿಲ್ಲ. ಒಂದು ವೇಲೆ ಸೇವೆಗಳನ್ನು ಬಳಸಲು ಪ್ರಯತ್ನಿಸಿದಾಗ ಬಳಕೆದಾರರ ಹೆಸರು ಅಥವಾ ಪಾಸ್​​ವರ್ಡ್ ದೋಷಗಳನ್ನು ಕಾಣಬಹುದು‘‘ ಎಂದು ಎಂದು ಗೂಗಲ್ ಸಂಸ್ಥೆಯಲ್ಲಿ ಕಾರ್ಯವನಿರ್ವಹಿಸುವ  ಜಾಕ್​ ಪೊಲಾಕ್ ಹೇಳಿದ್ದಾರೆ.

  ಆ್ಯಂಡ್ರಾಯ್ಡ್​ 2.3.7 ಆವೃತ್ತಿಯ ಸ್ಮಾರ್ಟ್​ಫೋನ್​ಗಳು 2011 ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗಿವೆ. ಆದ್ದರಿಂದ ಒಂದು ದಶಕದ ಬಿಡುಗಡೆಯ ನಂತರ ಅವುಗಳನ್ನು ಗೂಗಲ್​ ಹಳೆಯದು ಎಂದು ಪರಿಗಣಿಸುತ್ತದೆ. ಮಾತ್ರವಲ್ಲದೆ ಕೆಲವು ಸೇವೆಗಳನ್ನು ಸಕ್ರೀಯಗೊಳಿಸಲು ಕಷ್ಟಕರವಾಗುತ್ತದೆ ಈ ಕಾರಣಕ್ಕೆ ಗೂಗಲ್​ ಕೆಲವು ಆ್ಯಪ್​ಗಳು ಮತ್ತೆ ಸೇವೆಗಳನ್ನು ಆ್ಯಂಡ್ರಾಯ್ಡ್​ 2.3.7 ಆವೃತ್ತಿಯ ಕಾರ್ಯನಿರ್ವಹಿಸುದಿಲ್ಲ ಎಂದು ತಿಳಿಸಿದೆ.

  Read Also ⇒ IPL 2021 LIVE Score: ಸ್ಮಾರ್ಟ್​ಫೋನ್ ಮೂಲಕ ಉಚಿತವಾಗಿ ಲೈವ್ ಸ್ಕೋರ್​ ನೋಡಲು ಹೀಗೆ ಮಾಡಿ

  ವಾಟ್ಸ್​ಆ್ಯಪ್​​ ಕಾರ್ಯನಿರ್ವಹಿಸುದಿಲ್ಲ!

  ನವೆಂಬರ್ 1 ರಿಂದ ಹಲವಾರು ಹಳೆಯ ಸ್ಮಾರ್ಟ್​​​ಫೋನ್​​ ಮಾದರಿಗಳೊಂದಿಗಿನ ಸಂಪರ್ಕವನ್ನು ತೆಗೆದುಹಾಕುವುದಾಗಿ ವಾಟ್ಸಾಪ್ ಘೋಷಿಸಿದೆ. ನವೆಂಬರ್ 1 ರಿಂದ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ರೀತಿಯ ಸ್ಮಾರ್ಟ್​​​ಫೋನ್​​​​ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ. ವಾಟ್ಸಪ್​​ ಉಲ್ಲೇಖಿಸಿರುವ ಸ್ಮಾರ್ಟ್‌ಫೋನ್‌ಗಳನ್ನು ಬಳಸುವವರು ನವೆಂಬರ್.1ರ ನಂತರ ಸಂದೇಶಗಳನ್ನು ಕಳುಹಿಸಲು ಅಥವಾ ವಾಟ್ಸಾಪ್ ಬಳಸಿ ವಿಡಿಯೋ ಕರೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

  ಮುಖ್ಯವಾಗಿ ಆಂಡ್ರಾಯ್ಡ್ 4.0.4 ಅಥವಾ ಅದಕ್ಕಿಂತ ಮುಂಚೆ ಇನ್‌ಸ್ಟಾಲ್ ಮಾಡಿದ ಓಎಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ವಾಟ್ಸಾಪ್ ಅನ್ನು ಬೆಂಬಲಿಸಲು ಸಾಧ್ಯವಾಗುವುದಿಲ್ಲ. ಜೊತೆಗೆ ಐಒಎಸ್ 9 ಅಥವಾ ಅದಕ್ಕಿಂತ ಮುಂಚೆ ಇನ್‌ಸ್ಟಾಲ್ ಮಾಡಿದ ಐಫೋನ್‌ಗಳಲ್ಲಿ ಕೂಡ ವಾಟ್ಸಪ್​​​ ಬಂದ್​ ಆಗಲಿದೆ.
  Published by:Harshith AS
  First published: