• Home
 • »
 • News
 • »
 • tech
 • »
 • YouTube: ಯೂಟ್ಯೂಬ್​ ಕ್ರಿಯೇಟರ್ಸ್​​ಗೆ ಸಿಹಿ ಸುದ್ದಿ- ಶೀಘ್ರದಲ್ಲೇ ಬರ್ತಿದೆ ಹೊಸ ಫೀಚರ್ಸ್​ 

YouTube: ಯೂಟ್ಯೂಬ್​ ಕ್ರಿಯೇಟರ್ಸ್​​ಗೆ ಸಿಹಿ ಸುದ್ದಿ- ಶೀಘ್ರದಲ್ಲೇ ಬರ್ತಿದೆ ಹೊಸ ಫೀಚರ್ಸ್​ 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆನ್‌ಲೈನ್ ಆಡಿಯೊ-ವಿಶುವಲ್ ಕಂಟೆಂಟ್ ಪ್ಲಾಟ್‌ಫಾರ್ಮ್ ಆಗಿರುವ ಯೂಟ್ಯೂಬ್, ರಚನೆಕಾರರಿಂದ ಹೆಚ್ಚಿನ ಆರೋಗ್ಯ-ಆಧಾರಿತ ಮತ್ತು ಶೈಕ್ಷಣಿಕ ವಿಷಯವನ್ನು ಪಡೆಯಲು ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಿದೆ.

 • Trending Desk
 • 5-MIN READ
 • Last Updated :
 • New Delhi, India
 • Share this:

ಆಧುನಿಕ ತಂತ್ರಜ್ಞಾನದ(Technology) ಈ ಕಾಲದಲ್ಲಿ ಯುಟ್ಯೂಬ್(YouTube)‌ ಅನೇಕರಿಗೆ ಜೀವನ ನೀಡಿದೆ. ಪೂರ್ಣ ಪ್ರಮಾಣದ ಉದ್ಯೋಗವನ್ನೂ(Job) ನೀಡಿದೆ. ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡ ಅನೇಕರು ಯುಟ್ಯೂಬ್‌ ಚಾನೆಲ್(YouTube Channels)‌ ಗಳಿಂದ ಉತ್ತಮ ಆದಾಯವನ್ನೂ(Income) ಪಡೆಯುತ್ತಿದ್ದಾರೆ.


ತನ್ನ ಬಳಕೆದಾರರಿಗೆ ಹೊಸ ಹೊಸ ಆಯ್ಕೆಗಳನ್ನು ನೀಡುವ ಯುಟ್ಯೂಬ್‌ ಇದೀಗ ಮತ್ತೊಂದಿಷ್ಟು ವಿಶೇಷ ಫೀಚರ್‌ ಅನ್ನು ಬಿಡುಗಡೆಗೊಳಿಸಲು ಯೋಜಿಸಿದೆ.


ಹೌದು, ಆನ್‌ಲೈನ್ ಆಡಿಯೊ-ವಿಶುವಲ್ ಕಂಟೆಂಟ್ ಪ್ಲಾಟ್‌ಫಾರ್ಮ್ ಆಗಿರುವ ಯೂಟ್ಯೂಬ್, ರಚನೆಕಾರರಿಂದ ಹೆಚ್ಚಿನ ಆರೋಗ್ಯ-ಆಧಾರಿತ ಮತ್ತು ಶೈಕ್ಷಣಿಕ ವಿಷಯವನ್ನು ಪಡೆಯಲು ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಿದೆ.


ಇದು ಕೃತಕ ಬುದ್ಧಿಮತ್ತೆ (AI) ಸಕ್ರಿಯಗೊಳಿಸಿದ ಫೀಚರ್‌ ಆಗಿದೆ. ಡಬ್ಬಿಂಗ್‌ ಪ್ರಕ್ರಿಯೆಯನ್ನು ಸರಳಗೊಳಿಸಲು ಆರೋಗ್ಯಕರ ಪೂರೈಕೆದಾರರ ಗುಂಪಿಗೆ ಒಂದಷ್ಟು ಆಪ್ಶನ್‌ ಗಳನ್ನು ನೀಡುತ್ತಿದೆ.


ಇದು ಸ್ಥಳೀಯ ಭಾಷೆಯ ಆರೋಗ್ಯ ವಿಷಯದ ಬಗ್ಗೆ ಬಹು ಆಡಿಯೊ ಟ್ರ್ಯಾಕ್‌ಗಳೊಂದಿಗೆ ಒಂದೇ ವೀಡಿಯೊ ಅಪ್‌ಲೋಡ್ ಮಾಡುವುದನ್ನು ಅನುಮತಿಸುತ್ತದೆ.


ಇದನ್ನೂ ಓದಿ: Redmi Note 12 5G: ರೆಡ್​ಮಿ ಕಂಪನಿಯ ಮತ್ತೊಂದು 5ಜಿ ಸ್ಮಾರ್ಟ್​ಫೋನ್​ ಜನವರಿ 5ಕ್ಕೆ ಬಿಡುಗಡೆ!


ಶಿಕ್ಷಣ-ಕೇಂದ್ರಿತ ಯುಟ್ಯೂಬ್‌ ಕೋರ್ಸ್‌


ಶಿಕ್ಷಣ ಕ್ಷೇತ್ರದಲ್ಲಿ ರಚನೆಕಾರರಿಗೆ ಹಣಗಳಿಸಲು, ಹೊಸ ಮಾರ್ಗವನ್ನು ರಚಿಸಲು ಯುಟ್ಯೂಬ್‌ ಯೋಜಿಸಿದೆ. ಶಿಕ್ಷಣ-ಕೇಂದ್ರಿತ ಉತ್ಪನ್ನಗಳ YouTube ಕೋರ್ಸ್‌ಗಳನ್ನು ಪ್ರಾರಂಭಿಸಲು ಯುಟ್ಯೂಬ್‌ ತಯಾರಿ ನಡೆಸಿದೆ. ಇದು 2023 ರಲ್ಲಿ ಬೀಟಾದಲ್ಲಿ ಪ್ರಾರಂಭವಾಗುತ್ತವೆ.


ಈ ಯುಟ್ಯೂಬ್‌ ಇತ್ತೀಚಿನ ಆಕ್ಸ್‌ಫರ್ಡ್ ಆರ್ಥಿಕ ಅಧ್ಯಯನದ ವರದಿಯನ್ನು ಘೋಷಿಸಿತು. ಈ ವರದಿಯ ಪ್ರಕಾರ, YouTube ಭಾರತೀಯ GDP ಗೆ 10,000 ಕೋಟಿ ರೂಪಾಯಿಗೂ ಹೆಚ್ಚು ಕೊಡುಗೆ ನೀಡಿದೆ ಮತ್ತು 2021 ರಲ್ಲಿ ಭಾರತದಲ್ಲಿ 750,000 ಕ್ಕೂ ಹೆಚ್ಚು ಪೂರ್ಣ ಸಮಯದ ಉದ್ಯೋಗಗಳನ್ನು ಬೆಂಬಲಿಸಿದೆ ಎಂದು ಹೇಳಲಾಗಿದೆ.


"ಆರ್ಥಿಕತೆಗೆ ಸೃಜನಶೀಲ ಪರಿಸರ ವ್ಯವಸ್ಥೆಯ ಕೊಡುಗೆಯನ್ನು ಅರ್ಥಮಾಡಿಕೊಳ್ಳಲು ನಾವು ಸುಮಾರು 5,000 ಭಾರತೀಯ ಕ್ರಿಯೇಟರ್ಸ್‌, 500 ಭಾರತೀಯ ವ್ಯಾಪಾರಗಳು ಮತ್ತು 4,000 ಭಾರತೀಯ ಬಳಕೆದಾರರನ್ನು ಸಮೀಕ್ಷೆ ಮಾಡಿದ್ದೇವೆ" ಎಂದು ಏಷ್ಯಾ, ಆಕ್ಸ್‌ಫರ್ಡ್ ಅರ್ಥಶಾಸ್ತ್ರ ಅಧ್ಯಯನದ ಆರ್ಥಿಕ ಸಲಹಾ ನಿರ್ದೇಶಕ ಜೇಮ್ಸ್ ಲ್ಯಾಂಬರ್ಟ್ ಹೇಳಿದ್ದಾರೆ.


ಉಚಿತ ಹಾಗೂ ಪಾವತಿಸಿದ ಕೋರ್ಸ್ ಪ್ರಾರಂಭಿಸಬಹುದು


ಭಾರತದಲ್ಲಿ ಅರ್ಹ ರಚನೆಕಾರರು ಉಚಿತ ಅಥವಾ ಪಾವತಿಸಿದ ಕೋರ್ಸ್‌ಗಳನ್ನು ಪ್ರಾರಂಭಿಸಬಹುದು. ಕೋರ್ಸ್‌ಗಳು ಈಗಾಗಲೇ ಜನಪ್ರಿಯವಾಗಿರುವ ಎಡ್ಟೆಕ್ ಯುನಿಕಾರ್ನ್‌ಗಳಾದ ಬೈಜುಸ್, ಅನಾಕಾಡೆಮಿ ಮತ್ತು ವೇದಾಂತುಗಳೊಂದಿಗೆ ನೇರ ಸ್ಪರ್ಧೆಯನ್ನು ಹೊಂದಿರುತ್ತವೆ. ಹೊಸ ಉತ್ಪನ್ನದ ಮೂಲಕ ಸುಧಾರಿತ, ಸಮಗ್ರ ಮತ್ತು ರಚನಾತ್ಮಕ ಕಲಿಕೆಯ ಅನುಭವವನ್ನು ನೀಡುವ ಗುರಿಯನ್ನು ಯುಟ್ಯೂಬ್‌ ಹೊಂದಿದೆ.


ಲರ್ನೋ ಹಬ್‌, ಸ್ಪೀಕ್‌ ಇಂಗ್ಲೀಷ್‌ ವಿತ್‌ ಐಶ್ವರ್ಯಾ ಮತ್ತು ತೆಲುಸ್ಕೋ ನಂತಹ ರಚನೆಕಾರರು ಬೀಟಾ ಹಂತದಲ್ಲಿ ವಿವಿಧ ಭಾರತೀಯ ಭಾಷೆಗಳಲ್ಲಿ ಶೈಕ್ಷಣಿಕ ಮತ್ತು ವೃತ್ತಿಪರ ವಿಷಯಗಳ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಲು ತೊಡಗಿಸಿಕೊಂಡಿದ್ದಾರೆ.


ಇನ್ನು, YouTube ಸಹ ಸಕ್ರಿಯವಾಗಿ ಹೂಡಿಕೆಗಳನ್ನು ಕೈಗೊಳ್ಳುತ್ತಿದೆ. ಅದರಲ್ಲಿ ವೀಡಿಯೊ ವಾಣಿಜ್ಯ ಅಪ್ಲಿಕೇಶನ್ ಸಿಮ್‌ಸಿಮ್ ಅನ್ನು ಜೂನ್ 2021 ರಲ್ಲಿ ಸ್ವಾಧೀನಪಡಿಸಿಕೊಂಡಿದೆ.


ಇದನ್ನೂ ಓದಿ: Noise Smartwatches: ಭಾರತಕ್ಕೆ ಲಗ್ಗೆಯಿಟ್ಟಿದೆ ನಾಯ್ಸ್​ನ ಹೊಸ ಸ್ಮಾರ್ಟ್​ವಾಚ್​! ಫೀಚರ್ಸ್​, ಬೆಲೆ ಮಾಹಿತಿ ಇಲ್ಲಿದೆ


ಇದು ಇಂಡಿಯಾ ಡಿಜಿಟೈಸೇಶನ್ ಫಂಡ್‌ನಲ್ಲಿ ಹೂಡಿಕೆ ಮಾಡಿದೆ. ಇದರಲ್ಲಿ ಮಾತೃ ಸಂಸ್ಥೆ ಗೂಗಲ್ ಭಾರತದಲ್ಲಿ $10 ಬಿಲಿಯನ್ ಹೂಡಿಕೆ ಮಾಡುವ ಯೋಜನೆಯನ್ನು ಪ್ರಕಟಿಸಿದೆ.


ಒಟ್ಟಾರೆ, ಯುಟ್ಯೂಬ್‌ ಅನ್ನೋದು ಇಂದು ಚಿರಪರಿಚಿತ. ಇಡೀ ಜಗತ್ತನ್ನೇ ಇದರಲ್ಲಿ ನೋಡಬಹುದು. ಕಲಿಯಬಹುದು. ಹೊಸದನ್ನು ತಿಳಿದುಕೊಳ್ಳಬಹುದು. ದಿನಗಳೆದಂತೆ ಹೊಸ ಹೊಸದು ಸೃಷ್ಟಿಯಾಗುತ್ತಿರುತ್ತವೆ. ಅನೇಕ ಯುಟ್ಯೂಬ್‌ ಕ್ರಿಯೇಟರ್ಸ್‌ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೋವಿಡ್‌ ನಂತರದಲ್ಲಿ ಇಂತಹ ಆನ್‌ ಲೈನ್‌ ವೇದಿಕೆಗಳಿಗೆ ಬೇಡಿಕೆ ಹೆಚ್ಚೇ ಆಗಿದೆ. ಅದಕ್ಕೆಲ್ಲ ತಕ್ಕಂತೆ ನಾವು ಕೂಡ ಅಪ್‌ ಡೇಟ್‌ ಆಗಬೇಕಷ್ಟೇ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು